‘ಸಮರ’ ಕವನ – ರೇಶ್ಮಾ ಗುಳೇದಗುಡ್ಡಾಕರ್



ಯುದ್ಧ ಮುಗಿದರೂ ಅದರ ಕರಾಳ ನೆನಪು ಮಾಸದು, ಕವಿಯತ್ರಿ ರೇಶ್ಮಾ ಗುಳೇದಗುಡ್ಡಾಕರ್ ಲೇಖನಿಯಲ್ಲಿ ಸಮರ. ಮುಂದೆ ಓದಿ…

ದೇಶ ,ದೇಶಗಳ ನಡುವೆ ಸಮರ
ಉರುಳಿಸಿತು ಜನರ ಹೆಣಗಳನ್ನ
ಹರಿಸಿತು ನೆತ್ತರಿನ ಕೋಡಿ , ರಣರಂಗದಲ್ಲಿ

ಅದಕಿದ್ದವು ಅತ್ಯಾಧುನಿಕ ಬಂದೂಕು
ಮತ್ತೆ ಅಣುಬಾಂಬಿನ ಸಾಥು!
ಮಾನವೀಯತೆ ನೆಲಕಚ್ಚಿತು ಮೆರೆಯಿತು
ಅಣುಬಂಬಿನ ಅಟ್ಟಹಾಸ ಇಂದಿಗೂ ಜೀವಂತವಾಗಿ
ಹೀರೋಶಿಮಾ ,ನಾಗಸಾಕಿಯಲ್ಲಿ
ಇತಿಹಾಸಕ್ಕೂ ಸಾಕ್ಷಿಯಾಗಿ!

ಆದರೆ ಕಾಲ ಬದಲಾಯಿತು ಎಂದರೆ
ಯುದ್ಧ ಛಾಯೆ ಉಳಿದಿದೆ ಮನಮನಗಳಲ್ಲಿ
ಸಮರ ಮನೆಯಲ್ಲೂ ,ಸಮಾಜದಲ್ಲೂ
ಹೊಗೆಯಾಡುತ್ತಲೆ ಇದೆ .

ಮಾತು ಎಂಬುದು ಬಂದೂಕಾಗಿ
ಸಹಬಾಳ್ವೆ ಹೆಣವಾಗಿ
ಸೌಹಾರ್ದ ತೆ ಅಳಿದು ಹೋಗಿ
ಅಸಹಿಷ್ಣತೆ ಜೊತೆಯಾಗಿ ,
ಬಹುತ್ವದ ವೈವಿಧ್ಯ ತೆ ಬಿರುಕಾಗಿ, ಬೇಧಭಾವದ
ತೆಡಗೊಡೆಗಳ ನಡುವೆ ಕಾಣುವದೇ ಮಂದಿರ..?!

ಸ್ಥಾವರಕ್ಕಳಿವುಂಟು ಜಂಗಮಕ್ಕಳಿಗಲ್ಲ
ಎಂಬ ಜಗಜ್ಯೋತಿ ಅಣ್ಣನವರ ನುಡಿಮುತ್ತು
ಪ್ರತಿದ್ವನಿಸುತ್ತಲೆ ಇದೆ .ಜಗದಲ್ಲಿ
ಪಂಥಗಳು ಕೇಳುತ್ತಿಲ್ಲ
ಸಮರ ನಗುತ್ತಲೆ ತನ್ನ ಅಸ್ತಿತ್ವ ಸಾಧಿಸುತ್ತಿದೆಯಲ್ಲಾ


  • ರೇಶ್ಮಾ ಗುಳೇದಗುಡ್ಡಾಕರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading