‘ಮೈಗ್ರೇನ್’ ಬಗ್ಗೆ ಮಾಹಿತಿ ಇಲ್ಲಿದೆ…



ಮೈಗ್ರೇನ್ ತಲೆನೋವು ಕಾಡಲು ನಿರ್ದಿಷ್ಟ ಕಾರಣಗಳಿಲ್ಲ. ಕೆಲವು ಆಹಾರ ಪದ್ದತಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದರಿಂದ ಮೈಗೇನ್ ನ್ನು ತಡೆಗಟ್ಟಬಹುದು, ಅದು ಹೇಗೆ ಎನ್ನುವುದನ್ನು ಡಾ.ರಾಜೇಂದ್ರ ಸ್ವಾಮಿ ಅವರು ಓದುಗರಿಗೆ ಆರೋಗ್ಯದ ಬಗ್ಗೆ ಕೆಲವು ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಕೆಲವರಿಗೆ ಮಾನಸಿಕ ಒತ್ತಡದಿಂದ, ಭಯದಿಂದ, ಜೀರ್ಣಶಕ್ತಿಯ ಕೊರತೆಯಿಂದ, ಅಮ್ಲಪಿತ್ತ ( ಅತಿ ಹೆಚ್ಚು ಹುಳಿ ಆಹಾರ ಸೇವನೆಯಿಂದ) ಅಪೌಷ್ಟಿಕತೆಯಿಂದ , ದೊಡ್ಡಕರುಳಿನ ಸಮಸ್ಯೆ ಉಂಟಾದಾಗ ಅದು ನಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ ಹಾಗೂ ಮನಸ್ಸಿನಲ್ಲಿ ಭಯದ ಮತ್ತು ದ್ವಂದ್ವ ವಾತಾವರಣವನ್ನು ನಿರ್ಮಿಸುತ್ತದೆ. ಇನ್ನು ಹಲವು ಕಾರಣಗಳನ್ನು ಗಮನಿಸಿ ವ್ಯಕ್ತಿಯಿಂದ ವ್ಯಕ್ತಿಗೆ ಅವರವರ ರೋಗನಿರೋಧಕ ಶಕ್ತಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಮೈಗ್ರೇನ್ ಅನ್ನು ಚಿಕಿತ್ಸಿಸಬಹುದು ಅದಕ್ಕಾಗಿ ವೈಯಕ್ತಿಕವಾಗಿ ಉತ್ತರಿಸಲು ಬಯಸುತ್ತೇನೆ.

ಎಲ್ಲರೂ ಅನುಸರಿಸಬಹುದಾದ ಆಹಾರ ಪದ್ಧತಿ ಗಳೆಂದರೆ :

  • ಚಹಾ, ಕಾಫಿ ಸೇವನೆ ಗಳನ್ನು ಸಂಪೂರ್ಣ ನಿಲ್ಲಿಸುವುದು.
  • ಗೋಧಿ ಮತ್ತು ಮೈದಾ ಪದಾರ್ಥಗಳಾದ ಚಪಾತಿ, ಬ್ರೆಡ್, ಬಿಸ್ಕೆಟ್ ಹಾಗೂ ಬೇಕರಿಯ ಪದಾರ್ಥಗಳು ಇವುಗಳನ್ನು ತ್ಯಜಿಸುವುದು.
  • ಬಾಹ್ಯವಾಗಿ ಹುಳಿ ಬರಿಸಿ ತಯಾರಿಸುವ ದೋಸೆ, ಇಡ್ಲಿ, ಪಡ್ಡು ಮುಂತಾದ ಖಾಧ್ಯಗಳ ಸೇವನೆಯನ್ನು ನಿಲ್ಲಿಸುವುದು.
  • ಪ್ರತಿ ಊಟದ ನಂತರ ತಕ್ಷಣವೇ ಬಿಸಿ ಮಾಡಿದ ನೀರನ್ನು ಕುಡಿಯುವುದು ಉತ್ತಮವಾಗಿದೆ.
  • ಮನಸಿನಲ್ಲಿ ಪ್ರಶಾಂತತೆ ಹಾಗೂ ಮಾನಸಿಕ ಸ್ಥೈರ್ಯವು ದೇಹಕ್ಕೆ ಶಕ್ತಿಯನ್ನು ನೀಡಿ ಸದೃಢರನ್ನಾಗಿ ಮಾಡುತ್ತದೆ.



ಇನ್ನೂ ಅನೇಕ ಆಹಾರ ಪದ್ಧತಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ

ಮೈಗ್ರೇನ್ ನಿಂದ ಬಳಲುತ್ತಿರುವವರು ಹತ್ತಿರದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಂಡು ಆರೋಗ್ಯದಿಂದಿರಿ. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ವೈಯಕ್ತಿಕವಾಗಿ ಕೂಡ ಸಂಪರ್ಕಿಸಿ


  • ಡಾ.ರಾಜೇಂದ್ರ ಸ್ವಾಮಿ (ಆಯುರ್ವೇದ ತಜ್ಞರು, ಅವರನ್ನು ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ : 97389 33566)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading