ಶ್ರೀ ಶ್ರೀಧರ ಪಣಿಕ್ಕರ್ ನೇತೃತ್ವದಲ್ಲಿ ಪೊಟ್ಟ ಭೂತ, ರಕ್ತೇಶ್ವರೀ, ಗುಳಿಗ ದೈವಾರಾಧನೆಯಲ್ಲಿ ತೊಡಗಿ ಅರ್ಧ ಶತಮಾನಗಳತ್ತ ಮುನ್ನಡೆದಿದ್ದು, ಈ ಕುರಿತು ಬಾಲು ದೇರಾಜೆ ಅವರ ಕ್ಯಾಮೆರಾ ಕಣ್ಣುಗಳಿಂದ ಸುಂದರ ಫೋಟೋಗಳ ಜೊತೆಗೆ ವಿಶೇಷತೆಯನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಹಚ್ಚ ಹಸಿರಿನ ನಿಸರ್ಗ ರಮಣೀಯ ಪ್ರಕೃತಿ ಮಡಿಲಿನ ನಡುವೆ ಮಿಂಚಿನಡ್ಕ- ಕಾಸರಗೋಡಿನ ನೀರ್ಚಾಲು ಗ್ರಾಮದ ಕನ್ನೆಪ್ಪಾಡಿ ಸನಿಯಕ್ಕೊಳ ಪಟ್ಟಿದೆ. ಇಲ್ಲೊಂದು ಭಾಗದಲ್ಲಿ ಹಳೆಯ ಹಿರೀತನದ ಆದಿ ಮನೆಯಲ್ಲಿ ವಾಸವಾಗಿದ್ದು, ತಮ್ಮಷ್ಟಕ್ಕೇ ಮಿಂಚುತ್ತಿರುವ (ವೇದಿಕೆಯೊಂದು ಅಗತ್ಯವಾಗಿದೆ) ಮಿ.ಕು.ಮಾ. ಕಾವ್ಯನಾಮದಿಂದ ತಮ್ಮ ಇಳೀ ವಯಸ್ಸಿನಲ್ಲೂ ಲವಲವಿಕೆ ಯಿಂದಿರುವ ಶ್ರೀ ಮಿಂಚಿನಡ್ಕ ಕೃಷ್ಣ ಭಟ್ಟರು.
ಮಿಂಚಿನಡ್ಕವು ಅಣಬಯಲು – ಕುಂಟಿಕಾನ ಗಳನ್ನೊಳಗೊಂಡ ಕೂಡು ಕುಟುಂಬವು ಶ್ರೀ ಶ್ರೀಧರ ಪಣಿಕ್ಕರ್ ನೇತೃತ್ವದಲ್ಲಿ ಪೊಟ್ಟ ಭೂತ, ರಕ್ತೇಶ್ವರೀ, ಗುಳಿಗ ದೈವಾರಾಧನೆಯಲ್ಲಿ ತೊಡಗಿ ಅರ್ಧ ಶತಮಾನಗಳತ್ತ ಮುನ್ನಡೆದಿದೆ. ಮನೆಯ ಹಿರಿಯವರಾದ ಶ್ರೀ ಗೋವಿಂದ ಭಟ್ಟರ ಆಶೀರ್ವಾದದೊಂದಿಗೆ ಶ್ರೀ ಮಿಂಚಿನಡ್ಕ ಕೃಷ್ಣ ಭಟ್ಟರ ಸಾರಥ್ಯದಲ್ಲಿ ಮನೆಯವರು, ಕುಟುಂಬಸ್ಥರು, ಜೊತೆಗೆ ಊರವರ ಸಹಕಾರದಿಂದ ತಂಬಿಲಗಳು, ಭೂತ ಕೋಲ ವರ್ಷಂಪ್ರತಿ ನೆರವೇರುತ್ತಿದೆ.
ಈ ವರ್ಷದ ದೈವಾರಾಧನೆಯು ಕಳೆದ ದಿನಾಂಕ ಮೇ 7, 2024 ರ ಮಂಗಳವಾರ ಸಂಜೆ ಶ್ರೀ ಭಟ್ಟರು ಪೂಜಾಕಾರ್ಯ ನೆರವೇರಿಸಿ, ದೈವ ಭಂಡಾರ ವು ತೆಗೆಯಲ್ಲಪಟ್ಟು, ಆದಿ ಮನೆಯಿಂದ ದೈವಸ್ಥಾನಕ್ಕೆ ಘಂಟೆ-ಶಂಖನಾದ, ವಾದ್ಯಗೋಷ್ಠಿಯಲ್ಲಿ ಮೆರವಣಿಗೆ ಮೂಲಕ ಬಂದು, ಬದಿಲಿ ದುರ್ಗಾಪೂಜೆಯನ್ನು ಶ್ರೀ ವಿಷ್ಣು ಶರ್ಮ ಮಿಂಚಿನಡ್ಕರ ನೇತೃತ್ವದಲ್ಲಿ ಶ್ರೀ ಭೀಮೇಶ್ ಮಿಂಚಿನಡ್ಕರು ನೆರವೇರಿಸಿ ಕೊಟ್ಟು, ಶ್ರೀ ಅಣಬೈಲು ಪುರಶೋತ್ತಮ ಭಟ್ಟರು ಸೇವಾ ರಶೀದಿ ಯಲ್ಲಿ ತೊಡಗಿದ್ದು, ಶ್ರೀ ರವೀಂದ್ರನಾಥ ಭಟ್ – ಪುರುಷೋತ್ತಮ ಭಟ್ ಮಿಂಚಿನಡ್ಕ ಪ್ರಸಾದ ವಿತಕರಾಗಿದ್ದು, ಶ್ರೀಮತಿ ವಿದ್ಯಾರವಿ – ಮಮತಾ ಎಸ್. ಮಿಂಚಿನಡ್ಕ ಮುಂತಾದವರು (ಹೆಸರು ತಿಳಿದಿಲ್ಲ) ಕೈ-ಬಾಯಿ ಕಟ್ಟದೆ ಪ್ರಸಾದ ಕಟ್ಟುಗಳನ್ನಾಗಿಸುವಲ್ಲಿ ಕೈ ಜೋಡಿಸಿದವರು ಶ್ವೇತಾ-ಅರವಿಂದ ರ ಜೊತೆಗೆ ಉತ್ತಮ ಛಾಯಾ ಗ್ರಾಹಕರ ಹಾದಿಯಲ್ಲಿರುವ ಅನಘ ಶರ್ಮ ಮಿಂಚಿನಡ್ಕ. ಶ್ರೀ ಶ್ಯಾಮಭಟ್ ಮಿಂಚಿನಡ್ಕ ಬಳಗದ ಪಾಕತಜ್ನರ ಊಟೋಪಚಾರದಲ್ಲಿ ಸಿಹಿ ಭೋಜನ – ಸೌಹಾರ್ದಯುತ ಮಾತುಕತೆ.
ಮುಂದಿನ ಭಾಗವಾಗಿ ಮೇ 8, 2024 ರ ಬುಧವಾರ ಬೆಳಿಗ್ಗೆ ಉಪಹಾರ ಜೊತೆಗೆ ವಾದ್ಯಗೋಷ್ಠಿ-ಚೆಂಡೆ ವಾದನ ದೊಂದಿಗೆ ರಕ್ತೇಶ್ವರೀ- ಗುಳಿಗ ದೈವದ ನರ್ತನ ಸೇವೆ ಬಳಿಕ ಕಾಣಿಕೆ, ಹರಿಶಿನ ಹುಡಿ ಪ್ರಸಾದವಾಗಿ, ಅಲ್ಲದೆ ಮನೆಯವರಿಂದ 50 ನೇ ವರ್ಷ ಗಳನ್ನು ಪೂರೈಸಿದ ಖುಷಿಯಲ್ಲಿ ಸಿಹಿ ಹಂಚುವುದರ ಜೊತೆಗೆ, ಈ ಸಂದರ್ಭದಲ್ಲಿ ಮನೆಯವರ ಜೊತೆ ಕುಟುಂಬಸ್ಥರು ಊರ-ಪರವೂರ ದಾನಿಗಳು, ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ದೈವ ಕೃಪೆಗೆ ಪಾತ್ರರಾದರು.
- ಕ್ಯಾಮೆರಾ ಹಿಂದಿನ ಕಣ್ಣು ಮತ್ತು ಬರಹ : ಬಾಲು ದೇರಾಜೆ
