ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಮನುಜ ನೀನು
ನಾನು ಹಕ್ಕಿ
ಎಲ್ಲಿ ಸಾಟಿ ನಮಗೆ
ಪಾಲದಾಟಿ ಹೋಗಲಿಕೆ
ಎಷ್ಟು ಕಷ್ಟ ನಿನಗೆ
ರೆಕ್ಕೆ ಬಿಚ್ಚಿ ಹಾರುವೆ ನಾ
ನೀನು ತೋರೀಗ ಪ್ರತಾಪ
ಬಾನು ಭುವಿಯ ಮೇಲೆಲ್ಲಾ
ನನ್ನದೇ ವಿಹಾರದ ನೋಟ
ಸುತ್ತ ನೋಟ ಹರಿಸಿ ನಾ
ವೀಕ್ಷಿಸಬಲ್ಲೆ ಜಗವ
ಜಾರಿ ಬೀಳ್ವ ಭಯದಿ ನೀನು
ಅಳುಕುತಿರುವೆ ಇಡಲು
ಮುನ್ನಡಿಯ…
ಅವರವರ ಮಿತಿಯೊಳಗೂ
ಜೀಸೆಲೆಯಿದೆ ಒಳಗೆ
ಪರಿಪೂರ್ಣತೆ ಯಾರಿಗಿದೆ
ಎಲ್ಲವೂ ಒಂದು ಮಿತಿಯೊಳಗೆ
ಬದುಕಿ ಬಿಡಬೇಕು ಗೌರವಿಸಿ
ಇತರ ಸಾಮರ್ಥ್ಯವನಡಿಗಡಿಗೆ
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಕವಿಯತ್ರಿ, ಲೇಖಕರು , ಕೊಡಗು.
