‘ಕನಸು ಮನಸು’ ಕವನ – ನಾಗರಾಜ ಜಿ. ಎನ್. ಬಾಡ

ಇಲ್ಲಿ ಎಲ್ಲವೂ ಸರಾಗ ಹೊಂದಿಸಿಡಲಾಗದು, ಹಗಲು ಕನಸುಗಳ ಕವಿ ನಾಗರಾಜ ಜಿ. ಎನ್. ಬಾಡ ಅವರ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…

ಕಂಡ ಕನಸುಗಳಿಗೆ
ನೂರೆಂಟು ಭಾವ
ಖುಷಿಯ ಕನಸುಳುಗಳಿಗೆ

ಅರಳುವುದು ಜೀವ
ನಕ್ಕು ಹಗುರಾಗಲು
ಮರೆಯುವುದು ನೋವ
ಭವದ ಬಯಕೆಗಳಿಗೆ

ತುಂಬುವುದು ನವ ವೇಗ
ಭಾವನೆಗಳ ಹೂಗೊಂಚಲು
ನುಡಿಸುವುದು ಹೊಸ ರಾಗ ಹೊಸ ರಾಗ
ಕನಸುಗಳು ತುಂಬಿದ ಕಣ್ಣಿಗೆ

ಇಲ್ಲಿ ಎಲ್ಲವೂ ಸರಾಗ
ಹೊಂದಿಸಿಡಲಾಗದು
ಹಗಲು ಕನಸುಗಳ

ಬಂದಿಸಿಡಲು ಆಗದು
ಮನಸಿನ ಬಯಕೆಗಳ
ಮನದೊಳಗೆ ಚಿತ್ರ ವಿಚಿತ್ರ

ಕನಸುಗಳ ಸಂತೆ
ಒಮ್ಮೊಮ್ಮೆ ಅನಿಸುವುದು
ವಾಸ್ತವದಂತೆ
ಕೆಲವೊಮ್ಮೆ ಎಚ್ಚರಿಕೆಯ
ಸಂದೇಶವ ಹೊತ್ತು ಬಂದಂತೆ

ಏನಾದರಾಗಲಿ ಬದುಕಿನಲಿ
ಕಾಡದಿರಲಿ ನಿತ್ಯವೂ ಚಿಂತೆ
ಎತ್ತಿಟ್ಟು ಸಾಗೋಣ ನಾವು
ಅಂತೆ ಕಂತೆಗಳ ಬೊಂತೆ

ಪ್ರಯತ್ನಿಸೋಣ ಕಂಡ
ಕನಸುಗಳ ನನಸಾಗಿಸುವಂತೆ


  • ನಾಗರಾಜ ಜಿ. ಎನ್. ಬಾಡ – ಕಮರ್ಷಿಯಲ್ ಟ್ಯಾಕ್ಸ ಇನ್ಸ್ಪೆಕ್ಟರ್, ವಾಣಿಜ್ಯ ತೆರಿಗೆ ಅಧಿಕಾರಿಗಳ ಕಛೇರಿ, ಕುಮಟ, ಉತ್ತರ ಕನ್ನಡ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading