ಮೊಜಾಜಿ ಅಥವಾ ಜಾಜಿ ಹೂಗಳು ಅತ್ಯಂತ ಹಳೆಕಾಲದಿಂದಲೂ ಗುಡ್ಡ ಮತ್ತು ಹೊಲಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಮೊಜಾಜಿ ಹೂವಿನ ಕುರಿತು ಸವಿತಾ ಮುದ್ಗಲ್ ಅವರು ಬರೆದ ಒಂದು ನೆನಪಿನ ಲೇಖನವನ್ನು ತಪ್ಪದೆ ಮುಂದೆ ಓದಿ…
ಸಣ್ಣ ಸಣ್ಣ ಬಿಳಿ ಬಣ್ಣದ ಮುಳ್ಳೊಂದೆ ಕಾಣುವ ಈ ಗಿಡದಲ್ಲಿ ಹಸಿರಿನ ಮಧ್ಯೆ ಮಧ್ಯೆ ಕಣ್ಸೆಳೆಯುವ ಈ ಹಳದಿ ಮತ್ತು ಸ್ವಲ್ಪ ಕೇಸರಿ ವರ್ಣನೆಯೊಂದಿಗೆ ಕಾಣುವ ಈ ಮೊಜಾಜಿ ಅಥವಾ ಜಾಜಿ ಹೂಗಳು. ಅತ್ಯಂತ ಹಳೆಕಾಲದಿಂದಲೂ ಗುಡ್ಡ ಮತ್ತು ಹೊಲದಲ್ಲಿ, ಊರಲ್ಲಿ ಕೂಡ ಬೆಳೆದು, ಸ್ವಲ್ಪ ನೀರಿನ ಪ್ರಮಾಣದೊಂದಿಗೆ ಹೂ ಬಿಡುವ ಗಿಡಗಳು ಇವು.
ಇವನ್ನ ಎಷ್ಟು ಮಾರಾದ್ರೂ ಕಟ್ಟಿ ಮುಡಿಗೆ ಇಟ್ಟುಕೊಂಡು ಇದ್ರೆ ಭಾರ ಅನ್ನಿಸೊಲ್ಲ ಅಷ್ಟೊಂದು ಇಷ್ಟವಾಗುವ ಈ ಹೂ ಇವತ್ತು ನಾನೇ ಕೈಯಾರ ಗಿಡದಿಂದ ಹೂ ಬಿಡಿಸಿ ಹಳದಿ ದಾರದ ಮೂಲಕ ಎರಡೆರೆಡು ಇಟ್ಟು ಚಿಕ್ಕದಾಗಿ ಕಾಣ್ತಾ ಇರೋದು ನೋಡಿ ಕಣ್ತುಂಬಿತು. ಒಮ್ಮೊಮ್ಮೆ ನೋಡಿ ಹಾಗೆ ಇಡುವ ಮನಸ್ಸು ಮುಡಿಗೆ ಇಟ್ಟು ಸ್ವಲ್ಪ ಸಮಯಕ್ಕೆ ಬಾಡಿದ್ರೆ ಮನಸ್ಸು ಅಯ್ಯೋ ಅನ್ನಿಸುತ್ತೆ.

ಈ ಗಿಡವನ್ನು ನಾನು ಸುಮಾರು 5 ನೇ ತರಗತಿ ಅಥವಾ ಹೈಸ್ಕೂಲ್ ಬಂದಾಗ ಹೊಲಕ್ಕೆ ಹೋದಾಗ ಗುಡ್ಡದಲ್ಲಿ ಸಿಕ್ಕ ಸಣ್ಣ ಸಸಿ ತಂದು ನಾಟಿಸಿ ಅದನ್ನ ಸುಮಾರು 20 ಕ್ಕೂ ಬಾರಿ ಕಿತ್ತಿ ಮತ್ತೊಂದು ಕಡೆ ನಾಟಿಸುತ್ತ ಬಂದರೂ ಅದು ಒಣಗದೆ ಹಾಗೆ ಇನ್ನು ನಮ್ಮ ಜೊತೆಗಿದೆ.ಸರಿಯಾಗಿ ನೋಡಿಕೊಳ್ಳದೆ ಇದ್ರು ತನ್ ಪಾಡಿಗೆ ಬೆಳೆದು ಸದಾ ಹೂ ಬಿಟ್ಟು ಚಂದ ಕಾಣ್ತಾ ಇರುತ್ತದೆ. ಮನೇಲಿ ನಾನು ಮಾತ್ರ ಈ ಗಿಡ ಕಡೆ ಹೋಗೋದು ಯರಿಗೂ ಇಷ್ಟ ಆಗಲ್ಲ ಯಾಕಂದ್ರೆ ಮುಳ್ಳು ಇರೋದು ಮಕ್ಳು ಕೂಡ ಅಯ್ಯೋ ಮುಳ್ಳು ಇದೆ ತೆಗಿದು ಬಿಡು ಅಂತಾರೆ.
ನಿಮಗೆ ಬೇಡ ಅಂದ್ರೆ ಅದರ ಸಮೀಪ ಹೋಗ್ಬೇಡಿ ಅಂತ ಇನ್ನು ವೆರೆಗೂ ಉಳಿಸಿಕೊಂಡು ಇದೀನಿ ಈ ಮೊಜಾಜಿ ಗಿಡವನ್ನು.

ಇನ್ನು ಹೊಲದಲ್ಲಿ ಹೊಡ್ದಿನಲ್ಲಿ ಪೊದೆಗಳಲ್ಲಿ ಇವು ಸಾಮಾನ್ಯ ಬೆಳೆದಿರುತ್ತವೆ. ಮತ್ತು ಬಿಳಿ ಬಣ್ಣದಲ್ಲಿ ಸಿಗೋದು ಅಪರೂಪ. ನಮ್ಮ ಅಜ್ಜ ಹೊಲದಲ್ಲಿ ಕೆಲಸ ಮಾಡ್ತಾ ಇದ್ರೆ ನನಗೆ ಈ ಹೂಗಳ ಬಗ್ಗೆ ಆಸೆ. ಹೊಲದಲ್ಲಿ ಇತ್ತೀಚಿಗೆ ಹೋದಾಗ ಇವುಗಳನ್ನು ನೋಡದೆ ಬೇಸರ ಆಯ್ತು ಆದರೆ ಮನೇಲಿ ಒಂದಾದರೂ ಇದೆ ಅನ್ನುವ ಸಮಾಧಾನ.
ಹಲವು ಬಣ್ಣಗಳಲ್ಲಿ ಅಂದ್ರೆ ಬಿಳಿ, ಹಳದಿ, ನೀಲಿ, ನೀಲಿ ಮತ್ತು ಬಿಳಿ ಮಿಶ್ರಿತ, ಕೆಂಪು ಹೀಗೆ ಈ ಜಾಜಿ ಹೂಗಳು (ಕನಕಾಂಬರಿ ಇದೆ ಹೂವಿನ ವರ್ಗಕ್ಕೆ ಸೇರಬಹುದು )ಸಿಗುತ್ತವೆ ತುಂಬಾ ತೆಳುವಾದ ಪಕಳೆಗಳು, ರೇಷ್ಮೆಯಂತೆ ತುಂಬಾ ಸ್ಪರ್ಶ ಮಾಡಿದಾಗ ಮೆದು ಅನಿಸುವ ಈ ಹೂಗಳು ಹೆಣ್ಣು ಮಕ್ಕಳ ಮನಸ್ಸಿಗೆ ಬೇಗ ಇಷ್ಟವಾಗುತ್ತವೆ. ದೇವರಿಗೂ ಕೂಡ ಶ್ರೇಷ್ಠವಾದ ಈ ಹೂಗಳು ತುಂಬಾ ಸಮಯದ ವರೆಗೆ ಬಾಡದೆ ಇರುತ್ತವೆ.
- ಸವಿತಾ ಮುದ್ಗಲ್
