ಯಾವುದೇ ಭಾಷೆಯ ಪುಸ್ತಕವಿರಲಿ ಅದು ಅಂದಂದಿನ ಕಾಲದ ಜನರಿಗೆ ಜ್ಞಾನವನ್ನು ಕೊಡುವುದಲ್ಲದೇ ಓದುಗರ ಆನಂದವನ್ನೂ, ಭಾವತನ್ಮತೆಯನ್ನೂ ನೀಡುತ್ತದೆ. ತಿಂಗಳ ಕವಿ, ಅಂಗಳ ಮಾತು 24ನೇ ಸನ್ಮಾನ ಮತ್ತು ಪುಸ್ತಕಗಳ ಬಿಡುಗಡೆ ಸಮಾರಂಭದ ವರದಿ, ಮುಂದೆ ಓದಿ…
‘ಪುಸ್ತಕಗಳು ಮಾನವ ಸಂಸ್ಕೃತಿಯ ಜೀವಾಳವಿದ್ದಂತೆ’ – ಡಾ. ಸಂಗಮೇಶ ತಮ್ಮನಗೌಡ್ರ

ಯಾವುದೇ ಭಾಷೆಯ ಪುಸ್ತಕವಿರಲಿ ಅದು ಅಂದಂದಿನ ಕಾಲದ ಜನರಿಗೆ ಜ್ಞಾನವನ್ನು ಕೊಡುವುದಲ್ಲದೇ ಓದುಗರ ಆನಂದವನ್ನೂ, ಭಾವತನ್ಮತೆಯನ್ನೂ ನೀಡುತ್ತದೆ. ಪುಸ್ತಕಗಳ ಸಖ್ಯ ಬೆಳೆಸಿದವರು ಸದಾ ಸಂತೃಪ್ತಿಯ ಜೀವನ ನಡೆಸುವರು. ಹೀಗಾಗಿ ಪುಸ್ತಕದ ಓದು ವ್ಯಕ್ತಿಗೆ ನಿರಂತರವಾಗಿ ಬೇಕು, ಪುಸ್ತಕಗಳು ಮಾನವ ಸಂಸ್ಕøತಿಯ ಜೀವಾಳವಿದ್ದಂತೆ ಎಂದು ವರಕವಿ ಡಾ. ದ.ರಾ.ಬೇಂದ್ರೆ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ (ರಿ) ರಾಮಗಿರಿಯ ಸಂಸ್ಥಾಪಕ ಅಧ್ಯಕ್ಷ, ಸಾಹಿತಿ ಡಾ. ಸಂಗಮೇಶ ತಮ್ಮನಗೌಡ್ರ ಹೇಳಿದರು. ಅವರು ಮುಳಗುಂದ ಸಮೀಪದ ಕಲ್ಲೂರಿನಲ್ಲಿ ಸಾಹಿತಿ ಅಲ್ಲಾಸಾಬ ಸೋಮಸಾಬ ನದಾಫ್ ಅವರ ಒಗಡು ಮತ್ತು ಒಡಪುಗಳ ವೈಯಾರ (ಜಾನಪದ ಸಾಹಿತ್ಯ ಕೃತಿ) ಹಾಗೂ ದೀಪ ಬೆಳಗಿದ ಭಾರತ (ಕವನ ಸಂಕಲನ) ಗಳ ಬಿಡಗಡೆ ಹಾಗೂ ತಿಂಗಳ ಕವಿ ಅಂಗಳ ಮಾತು 24ನೇ ಕವಿ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅತಿಥಿಯಾದ ಬಿ.ಎಂ. ಹರಪನಹಳ್ಳಿ ಅವರು ಮಾತನಾಡುತ್ತ ರಾಮಗಿರಿಯ ಬೇಂದ್ರೆ ಸಾಹಿತ್ಯ ವೇದಿಕೆಯು ಕಳೆದ 23 ವರ್ಷಗಳಿಂದ ವೈವಿಧ್ಯಮಯ ಸಾಹಿತ್ಯ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದು ಅದರ ಸಂಸ್ಥಾಪಕ ಅಧ್ಯಕ್ಷ ಡಾ. ಸಂಗಮೇಶ ತಮ್ಮನಗೌಡ್ರ ಅವರು ಪುಸ್ತಕ ಸಂಸ್ಕøತಿ ಬೆಳೆಸುವಲ್ಲಿ ಮನೆಮನೆಗೆ ಅಭಿಯಾನ ರೂಪದಲ್ಲಿ ಓದುಗರನ್ನು ತಲುಪುತ್ತಿದ್ದಾರೆ. ಅವರ ಸೇವೆ ಅನನ್ಯವಾದುದು ಎಂದರು. ಇನ್ನೊಬ್ಬ ಅತಿಥಿಯಾದ ಸಂಶಿಯ ಸಾಹಿತಿಗಳಾದ ಜಿ.ಎಂ.ಉಪ್ಪಿನ ಅವರು ಮಾತನಾಡುತ್ತ, ಅಲ್ಲಾಸಾಬ ನದಾಫ ಅವರು ಶುದ್ಧ ಮನಸ್ಸಿನ ಸಾಹಿತಿಯಾಗಿದ್ದು, ಅವರು ಈಗಾಗಲೇ ನಾಲ್ಕು ಕೃತಿಗಳನ್ನು ರಚಿಸಿದ್ದು ಅವರಿಂದ ಇನ್ನೂ ಉತ್ತಮ ಕೃತಿಗಳು ಹೊರಬರಲಿ ಎಂದು ಆಶಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಲ್ಲಾಸಾಬ ನದಾಫ ಅವರು ತಮ್ಮ ಸಾಹಿತ್ಯ ಬರವಣಿಗೆಯ ಸ್ಪೂರ್ತಿ ಮತ್ತು ಪ್ರೇರಣೆ ಕೊಟ್ಟವರನ್ನು ತಮ್ಮ ಭಾಷಣದಲ್ಲಿ ನೆನದರು. ಕಾರ್ಯಕ್ರಮದ ಸಾನಿಧ್ಯವಹಿಸಿದ ಮುಳಗುಂದದ ವೇ.ಮೂ. ಫಕ್ಕೀರಯ್ಯ ಶಿ. ಅಮೋಘಿಮಠ ಅವರು ಮಾತನಾಡುತ್ತ ಸಾಹಿತ್ಯವು ಸದಾ ಆನಂದ ಕೊಡುವ ಕಾರ್ಯವನ್ನು ಮಾಡುವುದು, ಇಂತಹ ಕಾರ್ಯಕ್ಕೆ ಸಮಾಜದ ಸಹಕಾರ ಅತೀ ಮುಖ್ಯವಾಗಿದೆ.

ನದಾಫ ಅವರ ಸಾಹಿತ್ಯ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಚಿಂಚಲಿ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಫಕ್ಕೀರಪ್ಪ ನೀಲಣ್ಣವರ, ಗ್ರಾ.ಪಂ. ಸದಸ್ಯರುಗಳಾದ ಶ್ರೀ ಚಂದ್ರಶೇಖರ ಆರ್. ಹರಿಜನ, ಶ್ರೀ ಬಸವರಾಜ ಮ. ರಾಮರಡ್ಡಿ, ಶ್ರೀ ಸೋಮಣ್ಣ ನಿಂ ಸೊರಟೂರ, ಶ್ರೀಮತಿ ಶಕುಂತಲಾ ವೀ ಕೆಂಭಾವಿಮಠ ಅಥಿತಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಬೇಂದ್ರೆ ವೇದಿಕೆಯ ಕಾರ್ಯದರ್ಶಿ ಶಂಕರಪ್ಪ ಶಿಳ್ಳಿನ, ಮಲ್ಲಾರೆಪ್ಪ ಸುಲಾಖೆ, ಎಂ.ಎಚ್.ಖುದ್ದುಬಾಯಿ, ಕೆ.ಆರ್.ಮರೆಣ್ಣವರ, ಮರಿತಮ್ಮಪ್ಪ ಸುಂಕದ, ಮುರಿಗೆಪ್ಪ ಪಟ್ಟಣಶೆಟ್ಟಿ, ಬಸವರಾಜ ಯಲ್ಲಪ್ಪ ಕುರಿ, ಸಿದ್ದು ಕಾಡಣ್ಣವರ, ವಿ.ವಿ. ಕಲ್ಯಾಣಮಠ, ಎಫ್.ವಾಯ್.ಹಿರೇಮನಿ ಮುಂತಾದವರು ಪಾಲ್ಗೊಂಡಿದ್ದರು. ಮಕ್ಕಳು ಹಾಡಿದ ಪ್ರಾರ್ಥನೆ ಮತ್ತು ಸ್ವಾಗತಗೀತೆ ಕೇಳುಗರ ಗಮನ ಸೆಳೆದವು. ನಿವೃತ್ತ ಶಿಕ್ಷಕ ಎಚ್. ಎಮ್.ಮುಶೆಣ್ಣವರ ನಿರೂಪಿಸಿ ಸ್ವಾಗತಿಸಿದರು, ಶಂಕ್ರಪ್ಪ ಶಿಳ್ಳಿನ ವಂದನಾರ್ಪಣೆ ಮಾಡಿದರು.
- ಆಕೃತಿ ಕನ್ನಡ ನ್ಯೂಸ್