ಈ ಹೆಣ್ಣಿಗೆಲ್ಲುಂಟು ಬಿಡುವು….!



ಮಹಿಳೆ ಮನೆ ಒಳಗೂ ಹೊರಗೂ ಎಲ್ಲ ಕೆಲಸವನ್ನು ನಿರ್ವಹಿಸುತ್ತಿದ್ದು, ಆಕೆಯು ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದಾಳೆ, ಮಾಲತೇಶ ಅಂಗೂರ ಅವರ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದ ಸುಂದರ ಚಿತ್ರ ಇದು…

ಈ ಛಾಯಾಚಿತ್ರದಲ್ಲಿ ಕೃಷಿಕ ಮಹಿಳೆಯೊಬ್ಬರು ತಲೆ ಮೇಲೆ ರೊಟ್ಟಿ-ಬುತ್ತಿಯ ಗಂಟನ್ನು ಬುಟ್ಟಿಯಲ್ಲಿ ಹೊತ್ತುಕೊಂಡು, ಕಂಕುಳಲ್ಲಿ ಕೂಸನ್ನು ಬಲಗೈಯಲ್ಲಿ ಹಿಡಿದುಕೊಂಡು, ಎಡಗೈಯಲ್ಲಿ ಬಕೆಟ್ ಹಿಡಿದುಕೊಂಡು ಹೋಗುತ್ತಿರುವ ಈ ಚಿತ್ರ ಮಹಿಳೆಯ ಬವಣೆಯನ್ನು ಸದಾ ದುಡಿಯುವ ಈ ಹೆಣ್ಣಿಗೆಲ್ಲುಂಟು ಬಿಡುವು ಎನ್ನುವುದನ್ನು ಸಾರಿ ಸಾರಿ ಹೇಳುತ್ತದೆ.

ಇಂದಿನ ಸಮಾಜದಲ್ಲಿ ಮತ್ತು ವಿಜ್ಞಾನ ತಂತ್ರಜ್ಞಾನದಲ್ಲಿಯೂ ಮಹಿಳೆಯರು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ.

ಬವಣೆ ಪಡುತ್ತಿದ್ದಾರೆ ಎನ್ನುವುದನ್ನು ಎಲ್ಲರೂ ಮನಗಂಡು, ಆಕೆಗೂ, ಅವಳ ಕನಸುಗಳನ್ನು ನನಸು ಮಾಡುವ ಸಮಯ ಕೊಡಿ.


  • ಕ್ಯಾಮೆರಾ ಹಿಂದಿನ ಕಣ್ಣು: ಮಾಲತೇಶ ಅಂಗೂರ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading