ಬಾಯಿ ಇರೋದೇ ತಿನ್ನೋಕೆ, ಮಾತಾಡೋಕೆ…ಚನ್ನಾಗಿ ಅಡುಗೆ ಮಾಡುವ ಜೊತೆಗೆ ಹೀಗೆ ಪಟ್ ಪಟ್ ಅಂತ ಮಾತಾಡ್ಕೊಂಡು ಅಡುಗೆ ಮಾಡಿದ್ರೆ ಯಾವುದೇ ಸುಸ್ತಾಗಲಿ ಇರೋಲ್ಲ ಅಂತಾರೆ ರಾಜು ಅವರು. ಅವರ ಕೈರುಚಿಯ ಸೌತೆಕಾಯಿ ಹುಳಿ ಮಾಡೋದು ಹೀಗೆ…
ಕಟಾಕಟ್ ಮೂಲಂಗಿ ಕತ್ತರಿಸ್ಕೊಂಡು ಪಕ್ಕಕ್ಕೋ ಅಥವಾ ಮುಂದೇನೋ ಇಡ್ಕೊಂಡು ಅದಕ್ಕೆ ಒಂದೋ ಎರಡೋ ಹಸಿಮೆಣಸಿನಕಾಯಿ, ಜೀರಿಗೆ, ಒಂದೆರಡು ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿಕೊಳ್ಳಿ.

ಹಸಿಮೆಣಸಿನಕಾಯಿ ಜಾಸ್ತಿ ಬೇಡ, ಮೂಲಂಗಿಯಲ್ಲಿಯೇ ಖಾರದ ಗುಣ ಇರುವುದರಿಂದ ಹೆಚ್ಚು ಖಾರ ಹಾಕಿದ್ರೆ ಬೆಳಗ್ಗೆ ನರಕವಾಗುತ್ತೆ. ಒಂದೋ ಎರಡೋ ಅಂತ ಮೀನ ಮೇಷ ಮಾಡದೇ ಒಂದೇ ಉಳ್ಲಾಗಡ್ಡಿ ಉದ್ದೂದ್ದಕ್ಕೆಕ್ಕೆ ಸೀಳಿಬಿಡಿ, ಕಣ್ಣೀರು ತರಿಸೋ ಮೊದಲೇ ಬಾಂಡಲೆಯೊಳಗಾಕಿ ಬೇಯಿಸಿ ಬಿಡಿ. ಮದುಮಗಳು ಮುಖಕ್ಕೆ ಅರಶಿಣ ಮೆತ್ತೋಹಾಗೆ ಬಾಂಡಲೆಗೆ ಸ್ವಲ್ಪ ಅರಿಷಿಣ ಹಾಕಿ. ಆಮೇಲೆ ಕರಿಬೇವು ಸಿಟ್ ಪಟ್ ಅಂತ ಸಿಟ್ಟು ತೋರ್ಸೋ ಮೊದ್ಲು ಮೂಲಂಗೀನೂ ಹಾಕ್ಬುಡಿ, ಎಲ್ಲರೊಳಗೊಂದಾಗು ಮಂಕುತಿಮ್ಮ ಅಂತ ಸೌಟ್ ತಗೊಂಡೊಂದೆರಡು ಸಲ ಗೂರಾಡಿ ಬಿಡಿ,
ರುಬ್ಬಿದ ಹಸಿಮೆಣಸಿನ ಫ್ರೆಂಡ್ ಮೀಟ್ ಮಾಡೋಕೆ ಬಂದ ಹಾಗೆ ಒಟ್ಟಿಗೆ ಎಲ್ಲವನ್ನು ಸೇರಿಸಿ ಬಿಡಿ…ಮತ್ತೊಂದ್ಸಲ ಕಲಕಿ, ಸ್ಟವ್ ಆಫ್ ಮಾಡಿ. ಕರೆಂಟ್ ಹೆಂಗಿದ್ರೂ ಫ್ರೀ ಫ್ಯಾನ್ ಆನ್ ಮಾಡಿ ಬಾಣಲೇನ ತಣ್ಣಗೆ ಆಗೋವರೆಗೂ ಪ್ಯಾನ್ ಕೆಳಗಿಟ್ಟು ಮೊಸರಿನ ರೇಟ್ ನೋಡ್ಕೊಂಡು ಸುರಿದು ಬಿಡಿ. ತಟ್ಟೆಗಾಕ್ಕೊಂಡು ತದುಕಿ ಬಿಡಿ ಆಮೇಲೇ. ಇಷ್ಟವಾದ್ರೇ ಕ್ರೆಡಿಟ್ ನನಗಿರಲಿ. ಕೆಟ್ಟೋದ್ರೇ ಬೈಕೋಳದೇ ಹೊಟ್ಟೇಗಾಕ್ಕೊಳಿ.
- ರಾಜು