ಮಹಾ ತಪಸ್ವಿ: ಮುರಡಿ ಭೀಮಜ್ಜ



ಭೀಮಣ್ಣ ೧೯೪೫ ಡಿಸೆಂಬರ್ ೧೯ ನೇಯ ತಾರೀಖ್ ಬೆಳಿಗ್ಗೆ ಮನೆಯಿಂದ ಎದ್ದು ಹೊರಟಾಗ ಕೈಯಲೊಂದು ಚೀಲ, ಅದರಲ್ಲೊಂದು ತಂಬಿಗೆ ಥಾಲಿ, ಒಂದು ಶಲ್ಯ, ಲುಂಗಿ, ವಸ್ತ್ರ, ಮತ್ತೆ ಪಾಟಿ – ಪೆನ್ಸಿಲ್ ಮಾತ್ರ ಇತ್ತು.ಆಗ ಮಾವಿನ ಬುಡದಲ್ಲಿ ಧ್ಯಾನಸ್ಥರಾಗುತ್ತಾ ಭೀಮಣ್ಣ ಬದಲಾಗಿ ಹೋದರು. ಲೇಖಕ ನಟರಾಜ್ ಸೋನಾರ್ ಅವರ ಲೇಖನಿಯಲ್ಲಿ ಮೂಡಿ ಬಂದ ಮಹಾ ತಪಸ್ವಿ ಮುರಡಿ ಭೀಮಜ್ಜನ ಕತೆ, ಮುಂದೆ ಓದಿ…

( ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಪರಮ ಪೂಜ್ಯ ಮಹಾ ತಪಸ್ವಿ ಮುರಡಿ ಭೀಮಜ್ಜನವರ ೬೬ನೇಯ ಪುಣ್ಯತಿಥಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಾಜಿ ಶಾಸಕರಾದಹ ಭ ಪ ಪುಂಡಲೀಕಪ್ಪ ಜ್ಞಾನ ಮೋಟೆ ಇವರ ೯ ನೇಪುಣ್ಯ ಸ್ಮರಣೆ ಸಮಾರಂಭ ಕುಷ್ಟಗಿಯಬಸವ ಭವನದಲ್ಲಿ ೧೭ನೆ ಜುಲೈ ೨೦೧೯ ಭಾನುವಾರ ನಡೆಯಿತು. ಈ ತನ್ನಿಮಿತ್ಯ ಲೇಖನ.)

ಮುರಡಿ ಭೀಮಜ್ಜ ಎಂದೇ , ಖ್ಯಾತನಾಮರಾದ ಭೀಮಸೇನ ೨೦ ನೆಯ ಜುಲೈ ೧೯೧೫ ರಂದು ಮುರಡಿಯಲ್ಲಿ ಜನಿಸಿದರು. ತಂದೆ ರಾಮಚಂದ್ರ ಗೌಡರು ತಾಯಿ ರಂಗುಬಾಯಿ ಇವರಿಗೆ ಐದು ಜನ
ಮಕ್ಕಳು ನಾಲ್ಕು ಗಂಡು ಕೃಷ್ಣಪ್ಪ, ವೆಂಕಣ್ಣ ,ಭೀಮಣ್ಣ, ವಿಜಯರಾವ್,  ಒಬ್ಬ ಹೆಣ್ಣುಮಗಳು ನರಸಕ್ಕ ಮೂರನೆಯ ಮಗ ಇದೇ ಭೀಮರಾಯ. ಅವರ ಅಜ್ಜನ ಹೆಸರೆ ಭೀಮಜ್ಜ ಎಮನದು ಇದ್ದುದರಿಂದ ಎಲ್ಲರೂ ಅಕ್ಕರೆಯಿಂದ ಭೀಮಜ್ಜ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ತಲೆತಲಾಂತರದಿಂದ ಬಂದ ದ್ಯಾಂಪೂರದ ಮಾಲಿಗೌಡರ ಮನೆತನದ ವತನಗಾರಿಕೆ ಹಾಗೇಯೇ ಮುಂದುವರೆದಿತ್ತು.

ಭೀಮಜ್ಜನವರ ಪ್ರಾಥಮಿಕ ಅಭ್ಯಾಸ ಸ್ಥಳೀಯ ಶಾಲೆಯಲ್ಲಿ ಸಾಗಿ , ಪ್ರೌಢ ಶಿಕ್ಷಣವನ್ನು ಕಲಬುರಗಿಯಲ್ಲಿ ಪೊರೈಸಿ, ಮುಂದೆ ತಿಳುವಳಿಕೆ ಬಂದೆಂತೆಲ್ಲ ಗಾಂಧೀಜೀಯವರ ಅಹಿಂಸಾ ಮಾರ್ಗಕ್ಕೆ, ಚಳುವಳಿಯ ಪ್ರಭಾವಕ್ಕೆ ಮಾರುಹೋದರು.

ನಂತರದಲ್ಲಿ ಹೈದರಾಬಾದಿನ ಕಾಲೇಜು ದಿನಗಳಲ್ಲಿ ೧೯೩೭ರಲ್ಲಿ ನವಾಬನ ” ಬೆಳ್ಳಿ ಹಬ್ಬದ ” ಸಂದರ್ಭದ ವಂದೇಮಾತರಂ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಇವರ ಓದು ಮೊಟಕಾಯಿತು.
ಇತ್ತ ಮುರುಡಿ ಗ್ರಾಮದ ದೇಶಗತಿ ಮನೆತನದ ದೇಸಾಯಿಯವರು ಇವರಾಗಿದ್ದು, ಹತ್ತರಿಂದ ಹನ್ನೆರಡು ಹಳ್ಳಿಗಳ ಹೊಣೆಗಾರಿಕೆ ಇತ್ತು. ಮುರುಡಿ, ಗುತ್ತೂರು, ನರಸಾಪೂರ, ತರಲಕಟ್ಟಿ, ಮಂಡಲಮರಿ, ಹೊಸೂರು.ಮಾಟಲದಿನ್ನಿ, ಬುಡುಕುಂಟಿ, ಜರಕುಂಟಿ, ಬೀರಲದಿನ್ನಿ, ಚಿಕ್ಕ ಬೀರಲದಿನ್ನಿ, ಸಾಲಬಾವಿ ಮಕ್ಕಳ್ಳಿ,ಯಂತಹ ಹಳ್ಳಿಗಳ ಜವಾಬ್ದಾರಿಯೂ ಇತ್ತು.

ಆಗಿನ ಕಾಲದ ಜೀವನ ಪರಿಸ್ಥಿತಿ ಅತ್ಯಂತ ಕಷ್ಟಕರದಿಂದ ಕೂಡಿತ್ತು, ಮನೆತುಂಬಾ ಮಕ್ಕಳು ಮೊಮ್ಮಕ್ಕಳು, ಉಣ್ಣುವವರು ಜಾಸ್ತಿ ದುಡಿಯುವ ಕೈಗಳು ಕಡಿಮೆ ಬಡತನ. ಹಸಿವು, ಬರಗಾಲ, ರೋಗರುಜಿನಗಳು, ಗುಳೆ ಹೋಗಿ ಬದುಕುವುದು, ವಲಸೆ ಹೋಗುವುದು ಸರ್ವೇಸಾಮಾನ್ಯವಾಗಿತ್ತು. ಭೀಮಜ್ಜ ಇದನೆಲ್ಲಾ ಸಮೀಪದಿಂದ ನೋಡುತ್ತಾ ನೊಂದುಕೊಳ್ಳುತ್ತಿದ್ದರು. ನಮ್ಮ ಮನೆಯಲ್ಲಿ ಎಲ್ಲಾಇದೆ ಬಡವರಿಗೆ ಕೊಡಲು ಕೈಯಲ್ಲಿ ಏನು ಇಲ್ಲ ! ಇಲ್ಲಿ ಎಲ್ಲವೂ ಇವರ ತಂದೆಯವರದೆ ಅಡಳಿತ ಮತ್ತು ಅಧಿಕಾರ ಹೀಗಾಗಿ ಮನಸ್ಸಿನಲ್ಲಿ ಮಮ್ಮಲ ಮರುಗಿ , ಇವರ ಪರೋಪಕಾರ ಆಸೆಗೆ ತಣ್ಣೀರು ಬೀಳುತಿತ್ತು.

ಭೀಮಜ್ಜ ಮುಂದೆ ಕುಕನೂರಿನ ವಿದ್ಯಾನಂದ ಗುರುಕುಲದಲ್ಲಿ ಶಿಕ್ಷಕರಾದರು ಇದೇ ಹೊತ್ತಿನಲ್ಲಿ ಈ ಪ್ರದೇಶದಲ್ಲಿ ಚಳುವಳಿ ಹೋರಾಟ ಮುಂತಾದವುಗಳಲ್ಲಿ ಭಾಗಿಯಾಗಿ ಚಲೇಜಾವ್ ಚಳುವಳಿಯಲ್ಲಿ ಧುಮುಕಿ ಬೆಳಗಾವಿಯ ಹಿಂಡಲಗಾ ಜೈಲುಸೇರಿದರು. ಕೆಲ ದಿನಗಳ ‌ಜೈಲಿನಿಂದ ನಂತರ ಬಿಡುಗಡೆಯಾಗಿ ಬಂದನಂತರ ತಮ್ಮ ಆತ್ಮನುಸಂಧಾನ ಮಾರ್ಗದಂತೆ ಸತತ ಮೌನ , ತಪಸ್ಸು, ದೇಶಪ್ರೇಮ , ಸನ್ಯಾಸತ್ವ ಜೀವನ , ಇದುವೆ ಪ್ರತಿದಿನದ ಕೆಲಸವಾಯಿತು ಕುಂತರೂ ನಿಂತರೂ ಇದರ ಚಿಂತನೆಯ ಮಾತಾಯಿತು.

ಮಾತು ಮೌನವಾಯಿತು, ಮೌನ ಹೆಪ್ಪುಗಟ್ಟಿತು, ಮನಸ್ಸು ಪೂರಾ ಕಲ್ಲಾಯಿತು. ಪ್ರತಿದಿನ ಇದನ್ನೇ ಧೇನಿಸುತ್ತಿದ್ದ. ಒಂದು ಮರುದಿನ ಬೇವೂರ ಹಾದಿ ಹಿಡಿದು ಹೊರಟೆ ಬಿಟ್ಟ ಭೀಮಣ್ಣ ಅದೇ ದಾರಿಯಲ್ಲಿ ರೈತನೊಬ್ಬ ಸಿಕ್ಕು.

” ಧಣೇರ ಹೊಲದ ಕಡಿ ಹೊಂಟಿರೇನು?” ಎಂದಾಗ ಹೌದೆಂದು ತಲೆಯಾಡಿಸಿ.

” ಬಿಸಿಲು ಭಾಳೈತ್ತ…ರೀ.. ನಿಮ್ಮ ಹೊಲಕ್ಕೆ ಗಂಟೆಪ್ಪನ ಹೊಲ ಅಂತಾರ ರಸ್ತಾಕ್ಕ ಐತಿ, ಅಲ್ಲಿ ಮಾವಿನ ತೋಪು ಐತಿ. ಜೋಳಾ ಬಿತ್ತಯ್ಯಾರ ಆ ಕಡೆ ಛಲೋ ಬೆಳಿ. ಅದಾವ ನೋಡ್ಕೊಂಡು ಬರ್ರೀ ಅರ್ಧ ಹರದಾರಿ ಆಕೈತಿ” ಎಂದಾಗ ನೋಡೋಣೆಂದು ಮುಂದುವರೆದರು. ಕುಷ್ಟಗಿ, ಕೊಪ್ಪಳ ದಾರಿಯಲ್ಲಿ ಬರುವ ಒಂದು ಮಾವಿನ ತೋಪು.  ಗಿಡಮರ ಸೊಂಪಾದ ಪ್ರಶಾಂತ ಪೂರಕ ವಾತಾವರಣಕ್ಕೆ, ಆ ನಿಸರ್ಗ ರಮಣೀಯವಾದ ಶಾಂತ ವಾತಾವರಣಕ್ಕೆ ಮಾರು ಹೋಗಿ ೧೯೪೫ ಡಿಸೆಂಬರ್ ೧೯ ನೇಯ ತಾರೀಖು ಆ ದಿನ ಬೆಳಿಗ್ಗೆ ಎದ್ದು ಮನೆಯಿಂದ ಹೊರಟ ಭೀಮಣ್ಣ ಕೈಯಲೊಂದು ಚೀಲ, ಅದರಲ್ಲೊಂದು ತಂಬಿಗೆ ಥಾಲಿ ಹಾಗೂ ಒಂದು, ಶಲ್ಯ, ಲುಂಗಿ, ವಸ್ತ್ರ, ಮತ್ತೆ ಪಾಟಿ- ಪೆನ್ಸಿಲ್ ಇಷ್ಟೆ ಆಸ್ತಿ. ಆ ಕತ್ತಲಲ್ಲಿ, ಬಾವಿಯಂತೆ ಇದ್ದ ಆ ಹೊಂಡದಲ್ಲಿ ಸ್ನಾನ ಮಾಡಿ ಹಸಿ ಬಟ್ಟೆಯಲ್ಲಿ ಯೇ ಮಾವಿನ ಬುಡದಲ್ಲಿ ಧ್ಯಾನಸ್ಥರಾಗಿಯೇ ಬಿಟ್ಟರು.

ಅನಂತ ಅಪೂರ್ವವಾದ ಆನಂದವನ್ನು ಅನುಭವಿಸುತ್ತಾ, ಅಲೌಕಿಕ ಶಕ್ತಿ ಆರ್ವಿಭವಿಸಿದಂತೆ ಧ್ಯಾನದಲ್ಲಿ ಅಂತರ್ಮುಖಿಯಾಗಿ ಹಸಿವು , ದಾಹ ನೀರಡಿಕೆ ಎಲ್ಲವನ್ನು ವ್ಯರ್ಜ ಗೊಳಿಸುತ್ತಾ ಹಠ ಸಾಧನೆಯ ಮಾಡುತ್ತಾ ಇರುವಾಗ ಯಾವುದರ ಭಾಧೆಯಾಗಲೇ ಇಲ್ಲ. ವೆಂಕೋಬರಾಯ ಗುರುಗಳ ಸ್ವಪ್ನದ ಧ್ಯಾನದಂತೆ , ಆನಂದದ ಮಾರ್ಗದರ್ಶನದಲ್ಲಿ ಬಿಲ್ವ ಪತ್ರೆ, ಅಮೃತ ಬಳ್ಳಿ ಎಲೆ ತಿಂದು ಸಾಧನೆಯ ಪಥದಲ್ಲಿರುತ್ತಿದ್ದರು.

ಹೀಗೇ ದಿನ ಕಳೆಯುತ್ತಿರಲಾಗಿ ಭೀಮಣ್ಣ ಬದಲಾಗಿಹೋದ. ದಿನಗಳೆದಂತೆ ತಾಯಿ ತಂದೆ ಬಳಗ ಚಿಂತಿತರಾಗಿ ಎಲ್ಲ ಕಡೆ ಹುಡುಕಿಸಿದರು ಸಿಗಲಿಲ್ಲ. ಭೀಮಣ್ಣ ತಮ್ಮೂರಿನ‌ ಲೆಕ್ಕಿ‌ಪೊದೆಯಾಗ ಮಾವಿನ ದಟ್ಟ ತೋಪಿನ್ನಯಾಗ ಹಾವಿನ ಜೊತೆ ಸಲುಗೆಯಿಂದ ಅಖಂಡ ಮೌನಧಾರಿ ಇದ್ದ ಭೀಮಜ್ಜನವರನ್ನು ಗುರುತಿಸಿಲು ಸ್ವತ; ಊರವರಿಗೆ ಅಷ್ಟೇ ಅಲ್ಲ ಹಡೆದ ತಾಯಿತಂದೆಗೆ ಗುರುತಿಸಲು ಆಗದಷ್ಟು ಬದಲಾದ ಚಹರೆ , ನಡೆನುಡಿ ಆಚಾರ ವಿಚಾರ ಕಂಡು ಎಲ್ಕರೂ ದಂಗಾಗಿ ಹೋದರು.

ಹಡೆದ ತಾಯಿ ತಂದೆಯೇ ಯಾರೋ ಸಾಧು ಬಂದಿದ್ದಾರೆ. ನಮ್ಮ ಹೊಲದಲ್ಲಿ ಇದ್ದಾರೆ ಹಾಲು ಬೆಲ್ಲ ಕಳಿಸಿಎಂದರು. ಅಷ್ಟೊಂದು ಅವರ ಚರಣಾರವಿಂದ ಬದಲಾಗಿ ಹೋಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಬರುವುದು ತಮ್ಮ ಬೇಕು ಬೇಡಿಕೆ ಇಡುವುದು ಪರಿಹರಿಸಿಕೊಳ್ಳವ ವೇದಿಕೆಯಾಗಿ ಶಾಂತಿ ನಿಲಯವಾಗಿ ಮಾರ್ಪಾಡಾಗಿ ಹೋಯಿತು. ಒಳಿತು ಕಂಡವರು ಅಜ್ಜನವರ ಸೇವೆ ಮಾಡತೊಡಗಿದರು. ಮುರುಡಿಯ ಸಾಧು ಸ್ವಭಾವದ ಹಳ್ಳದ ಮಲ್ಲಪ್ಪ ನಿಷ್ಕಾಮ ಸೇವಾನಿಷ್ಟನಾಗಿ ಮುರುಡಿ ಭೀಮಜ್ಜನ ಆರೈಕೆಗೆ ತಾನೇ ಮುಂದಾದನು.

ಗುರು ವೆಕೋಂಬರಾಯರು ವಾಲೀಕಾರನ ಮೂಲಕ ಮಾವಿನತೋಪಿಗೆ ಶಿ಼ಷ್ಯನನ್ನು ನೋಡಲು ಬಂದರು ಶಿಷ್ಯನ ಆಕಾರ ಆ ವೇಷ ಕಂಡು ಮಮ್ಮಲಮರುಗಿದರು ಇವರಿರ್ವ ರ ಆನಂದ ವರ್ಣಿಸಲಸದಳವಾಗಿ ಪರಸ್ಪರರು ಸಂಧಿಸಿ ಯಾವಾಗಲೂ ಸಮಾಧಿ ಸ್ಥಿತಿಯಲ್ಲಿರುತ್ತದ್ದ ಬೀಮಸೇನ ಮೌನ ಮುರಿದು ಗುರುಗಳ‌ಜೊತೆ ಸಂವಹಿನಿಸಿದರು. ಮನೆಗೆ ಕರೆದೊಯ್ದು ತಾಯಿ ತಂದೆ ಬಳಗದವರ ಜೊತೆ ಮಾತನಾಡಿಸಿ ಮತ್ತೆ ಗುರುಗಳ ಅಪ್ಪಣೆಯಂತೆ ತಾನು ಆನಂದವಾಗಿ ಆಶ್ರಮದಲ್ಲಿ ವಾಸವಾಸವಾಗುವೆನೆಂದು ಅಲ್ಲಿಂದ ಲೌಕಿಕದ ಹಂಗು ಹರಿದುಕೊಂಡು, ಅನೇಕ ಮಹಾತ್ಮರ, ಸಾತ್ವಿಕರ ಆಧ್ಯಾತ್ಮ ಜೀವಿಗಳ ಸತ್ಸಂಗವಾಯಿತು.

” ದೇವರನ್ನು ದೃಢವಾಗಿ ನಂಬಿದರೆ ಕೈ ಬಿಡಲಾರನು: ಮಾನವರ ರಾಜ್ಯಗಳಲ್ಲಿ ದೇವರ ಸಾಮ್ರಾಜ್ಯ ವು ಬೆಳಗಲಿ “ ಎನ್ನುವ ಮಾತೇ ವೇದವಾಕ್ಯವಾಯಿತು.



ಅಗಾಗಲೆ,ಈ ಪ್ರದೇಶದಲ್ಲಿ ಹೈದರಾಬಾದ್ ನಿಜಾಮ್ ಸಂಸ್ಥಾನದಲ್ಲಿ ರಜಾಕಾರರ ಹಾವಳಿಮೀತಿಮೀರಿತ್ತು, ಪುಂಡಲೀಕಪ್ಪ ಜ್ನಾನಮೋಟೆ ಅವರು ಅಜ್ಜನವರ ಸಂಪರ್ಕವಾಗಿ, ಸ್ವಾತಂತ್ರ್ಯ ಹೋರಾಟಕ್ಕೆ ಅಣಿಯಾಗುವ ಹೊತ್ತಲ್ಲಿ ತಮ್ಮ ಖಾದಿ ಬಟ್ಟೆಅಂಗಡಿಗೆ ಕರೆದೊಯ್ದು ಇವರ ಆಶ್ರಮದಲ್ಲಿ ಖಾದಿ ನೂಲುವುದು ಮೊದಲಾಯಿತು.

ಮುರುಡಿ ಭೀಮಜ್ಜ ಅವರು #ಪುಂಡಲೀಕಪ್ಪನವರನ್ನು ಹುರಿದುಂಬಿಸಿ ಮಾನಸಿಕ ತರಬೇತಿಗೊಳಿಸಿ ,ಮಾರ್ಗದರ್ಶನ ಮಾಡಿ ಗಜೇಂದ್ರಗಡ , ಶಿಬಿರಗಳ ಸ್ಥಾಪನೆ ಮಾಡಿಸಿದರು. ೧೯೪೮ ಪೆಬ್ರವರಿ ೧೫ ರಂದು ಭೀಮಜ್ಜನವರ ಸತ್ಯಾಗ್ರಹ ರಾಯಚೂರು ಮುರಡಿಯಲ್ಲಿ ನಡೆಯಿತು.ತದನಂತರದ ಹಲವಾರು ಬೆಳವಣಿಗೆಯಲ್ಲಿ ದೇಶಕ್ಕೆ ೨೯೪೭ ಅಗಸ್ಟ್ ೧೫ ರಂದು ರಾತ್ರಿ ೧೨ ಗಂಟೆಗೆ ಮುರುಡಿ ಆಶ್ರಮದಲ್ಲಿ ತಮ್ಮ ಸಂಗಡಿಗರ ಜೊತೆ ದೇವಿ ಪೂಜೆಯ ದೀಪೋತ್ಸವ ಆಚರಿಸಿದರು.

ಎಲ್ಲಲ್ಲೂ ಸ್ವಾತಂತ್ರ್ಯದ ದೀಪಬೆಳಗಿತು ಆದರೆ ಹೈದರಾಬಾದ್ ಕರ್ನಾಟಕ ಪ್ರದೇಶಗಳಿಗೆ, ತುಸು ತಡವಾಗಿ ಆಪರೇಷನ್ ಪೋಲೊ ಸೈನಿಕ ಕಾರ್ಯಾಚರಣೆ ಮೂಲಕ, ನಿಜಾಮ್ ಸರಕಾರ ಕಿತ್ತುಹೋಗಿ ನಾಡಿಗೆ ೧೯೪೮ ಸಪ್ಟಂಬರ ೧೭ ರಹೊತ್ತಿಗೆ, ಸ್ವಾತಂತ್ರ್ಯ ಬಂತು ಕಾಂಗ್ರೇಸ್ ಸರಕಾರ ನಂತರ ಅಸ್ತಿತ್ವಕ್ಕೆ ಬಂತು. ಪುಂಡಲೀಕಪ್ಪನವರನ್ನು ಶಾಸನ ಸಭೆಗೆ ಆರ್ಶಿವಾದಿಸಿದರು .

ಹಿಮಾಲಯಕ್ಕೆ ತೆರಳಿ ಕಠಿಣವಾದ ತಪಸ್ಸನಾಚರಿಸಿ, ಬಡವರು ರೈತರು ದೀನದಲಿತರಿಗೆ ,ಆರೋಗ್ಯ, ಸಾಮಾಜಿಕ ಬದುಕಿಗೆ ಭರವಸೆನೀಡಿ ಜನಾನುರಾಗಿಗಳಾದರು. ೨೭/೭/೧೯೫೬ ರ ಬ್ರಾಹ್ಮಿ ಮೂಹೂರ್ತ ದ ಬೆಳಿಗ್ಗೆ ೪ ಗಂಟೆಗೆ ತಿಥಿ ಕೃಷ್ಣ ಪಕ್ಷ ಆಷಾಢಮಾಸ ದಂದು ಅಸ್ತಂಗತರಾದರು. ವೈದಿಕ ಬ್ರಾಹ್ಮಣ ಸಂಪ್ರದಾಯ ಪದ್ದತಿ ಯಂತೆ ಅಗ್ನಿಸಂಸ್ಕಾರ, ಮಾಡಿ ನಂತರ ಚಿತಾಭಸ್ಮದಿಂದ ಗದ್ದುಗೆಯನ್ನು ಆಶ್ರಮದ ಕಟ್ಟೆ ಎದುರಿಗೆ ಮಾಡಿದರು.

ಇಂದಿಗೂ ಪ್ರಶಾಂತ ವಾತಾವರಣ ದಲ್ಲಿರುವ ಅಜ್ಜನವರ ಆನಂದ ಆಶ್ರಮ ನೊಂದ ಮನಸ್ಸಿಗೆ ಸಾಂತ್ವನ ನೀಡುವ ಸಾತ್ವಿಕ , ಶ್ರದ್ದಾ ಕೇಂದ್ರವಾಗಿದೆ. ಪ್ರತಿವರ್ಷ ಮುರುಡಿ ಭೀಮಜ್ಜ ನವರ ಪ್ರತಿಷ್ಠಾನದಿಂದ ಅನೇಕ ರಚನಾತ್ಮಕ , ವಿಧಾಯಕ ಕಾರ್ಯಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಇಂತಹ ಮಹಾತ್ಮರ ನೆಲೆ ನಮ್ಮ ಕೊಪಣನಾಡು, ತಿರುಳ್ಗನ್ನಡನಾಡು ಇದುವೆ ನಮ್ಮ ಹೆಮ್ಮೆ ಮತ್ತು ಅಭಿಮಾನ.

ಚಿತ್ರ ಕೃಪೆ :  ಅಮೃತರಾಜ ಜ್ನಾನಮೋಟೆ


  • ನಟರಾಜ್ ಸೋನಾರ್  (ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ) ಕುಷ್ಟಗಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW