ನಾನು ಕಾಡು – ಶ್ರೀಧರ್ ಬಿಂದ್ಲಿ

ಮನುಷ್ಯ ಮೊದಮೊದಲು ಕಾಡನ್ನು ದೇವಾನು ದೇವತೆ ತರ ನೋಡುತ್ತಿದ್ದ. ಎಷ್ಟೊಂದು ಪ್ರಾಣಿ ಪಕ್ಷಿಗಳಿಗೆ ಕಾಡು ವಾಸ ನೀಡಿದೆ. ಆದರೆ ಈಗ ಈ ಕಾಡನ್ನು ಕಡೆದು ರೆಸಾರ್ಟ್ ಮಾಡುತ್ತಿದ್ದಾನೆ, ಕಾಡಿನ ನಾಶದಿಂದ ಆಗುತ್ತಿರುವ ನಾಹುತಗಳ ಬಗ್ಗೆ ಕಾಡೇ ತನ್ನ ಅಳಲನ್ನು ಹಂಚಿಕೊಂಡರೆ ಹೇಗಿರುತ್ತೆ?…ಶ್ರೀಧರ್ ಬಿಂದ್ಲಿ ಅವರ ಲೇಖನಿಯಲ್ಲಿ ಕಾಡಿನ ವ್ಯಥೆ, ತಪ್ಪದೆ ಮುಂದೆ ಓದಿ…

ಎಲ್ಲರಿಗೂ ಹೊಟ್ಟೆ ತುಂಬಾ ಅನ್ನ ಹಾಕೋ ಪಾಪ ನನ್ನ ಬಂಧು ರೈತ ಇಂದು ನಂಗೆ ಒಂದು ಮನವಿ ಇಟ್ಟಿದ್ದಾನೆ ಅದೇನೆಂದ್ರೆ. ‘ಮಳೆ ಬಂದು ಎಷ್ಟೋ ಕಾಲ ಆಯ್ತಮ್ಮಾ… ಹೇಗಾದ್ರು ಮಾಡಿ ಮಳೆ ಕೊಡು ಬೆಳೆ ವಣಗತಾ ಇದಾವ… ಹಸು ಕರುಗಳು ಬಾಯಾರಿದ್ದಾವ. ಈ ಭೂತಾಯಿ ತಾಪದಿಂದ ಕೆಂಗೆಟ್ಟಿದ್ದಾಳೆ’ ಹೀಗೆ ಅಂಗಲಾಚಿ ಬೇಡಿಕೊಂಡ ನನ್ನ ಬಂಧು… ಅವನಿಗೆ ಇಲ್ಲವೆಂದರೆ ಅದು ನನ್ನ ಜೀವನದ ಅತಿದೊಡ್ಡ ಪಾಪ. ಹೀಗೆ ಹೇಳ್ತಾ ಇರೋ ನಾನು ಕಾಡು. ಕೋಟ್ಯಾನು ಕೋಟಿ ಜೀವರಾಶಿಗಳಿಗೆ ಸಹಸ್ರಾರು ವರ್ಷಗಳಿಂದ ಅನ್ನ ನೀರು ಗಾಳಿಯನ್ನು ನೀಡುತ್ತಿದ್ದೇನೆ. ಬದಲಾಗಿ ಅವರಿಂದ ಒಂದು ಕವಡೆ ಕಾಸು ಕೂಡ ನಾನು ಏನನ್ನು ಅಪೇಕ್ಷಿಸಿಲ್ಲ… ಮನುಷ್ಯ ಮೊದಮೊದಲು ನನ್ನನ್ನು ದೇವಾನು ದೇವತೆತರ ನೋಡುತ್ತಿದ್ದ.. ನನ್ನಲ್ಲಿ ಬಂದು ತನ್ನ ದಾಹ ಹಸಿವು ಬೇಜಾರನ್ನು ತೀರಿಸಿಕೊಂಡು ಹೋಗುತ್ತಿದ್ದ. ಎಷ್ಟೊಂದು ಪ್ರಾಣಿ ಪಕ್ಷಿಗಳಿಗೆ ನಾನು ಅವಾಸ ನೀಡಿದ್ದೀನಿ.. ನಾವೆಲ್ಲರೂ ಒಂದು ಕುಟುಂಬದಂತೆ ಸಂತೋಷವಾಗಿ ಇದ್ವಿ. ವರ್ಷಗಳು ಕಳೆದಂತೆ ಜೀವನವು ಬದಲಾಯಿತು. ಬಂದು ವಿಶ್ರಾಂತಿ ಪಡೆಯುತ್ತಿದ್ದ ಮಾನವ ಇಂದು ನನ್ನ ಜೀವಕ್ಕೆನೆ ಕುತ್ತಾಗಿದ್ದಾನೆ..ನನ್ನ ಮಡಿಲಲ್ಲಿ ಕೂತಿದ್ದ ಇವನು ಬಂದು ನನ್ನ ಕಾಲಾದ ಮರವನ್ನು ನೋಡಿ ದುರಾಸೆಯಿಂದ ನನ್ನನ್ನ ಕಡಿಯಲು ಆರಂಭಿಸಿದ ನನ್ನ ಕಟ್ಟಿಗೆಯಿಂದ ಅವನು ಕೂತುಕೊಳ್ಳಲು ಆಸನ ಮಾಡಿಕೊಂಡ… ನನ್ನ ಮಡಿಲನ್ನ ಕಡೆದು ತಾನು ಕೂತುಕೊಳ್ಳುವುದು ಎಷ್ಟು ನ್ಯಾಯ ನೀವೇ ಹೇಳಿ?.

ಇದಷ್ಟೇ ಅಲ್ಲದೆ ನನ್ನನು ಹಂತ ಹಂತವಾಗಿ ಕಡಿಯುತ್ತ ಬಂದ.. ನನ್ನೇ ಸರ್ವಸ್ವವೆಂದು ನಂಬಿದ್ದ ನನ್ನ ಕುಟುಂಬಸ್ಥ ಪ್ರಾಣಿಗಳು ಮಾನವರ ಊರಿನ ಕಡೆಗೆ ಹೊರಟವು.. ಅವುಗಳನ್ನು ಮನುಷ್ಯ ಊರಿನ ಮೇಲೆ ಕಾಡು ಪ್ರಾಣಿಗಳ ದಾಳಿ ಹಾಗೆ ಹೀಗೆ ಅಂತ ಅವುಗಳನ್ನು ಸೆರೆಹಿಡಿಸಿದ ಕೆಲವೊಂದನ್ನು ಕೊಂದ… ಆ ಸತ್ತ ಜೀವಿಗಳ ಪರವಾಗಿ ನಿಮ್ಮನ್ನ ಒಂದು ಪ್ರಶ್ನೆ ಮಾಡ್ತೀನಿ ಅಕಸ್ಮಾತ್ ನಿಮ್ಮನ್ನ ಯಾರಾದ್ರೂ ಏಕಾಏಕಿ ನಿಮ್ಮ ಮನೆಯಿಂದ ಹೊರಗೆ ಹಾಕಿದ್ರೆ ಅಥವಾ ನಿಮ್ಮ ಮನೆಯನ್ನ ಕೆಡವಿದ್ರೆ ನೀವೇನ್ರೋ ಮಾಡ್ತೀರಾ??

ನಿಮಗೆಲ್ಲ ಕೈಮುಗ್ದು ಕೇಳ್ಕೊತಿನಿ. ದಯವಿಟ್ಟು ನಮ್ಮನ್ನ ನಮ್ಮ ಪಾಡಿಗೆ ಬಿಡಿ. ನಾನು ನನ್ನ ನಂಬಿರುವ ಅನ್ನದಾತನಿಗೆ ಮಳೆ ನೀಡಬೇಕು.. ನನ್ನ ಕುಟುಂಬಸ್ಥರಿಗೆ ಆಶ್ರಯ ನೀಡಬೇಕು..ಇದು ನನ್ನ ಕೋರಿಕೆ.

‘ಒಂದು ವಾಹನವನ್ನ ನಿಲ್ಲಿಸಲು ನೆರಳನ್ನು ಹುಡುಕೋ ಮನುಷ್ಯ ಒಂದು ಮರವನ್ನ ನೆಡಲು ಹಿಂದೇಟು ಹಾಕ್ತಾ ಇದಾನೆ. ನಿಮ್ಮ ಜನುಮದಿನದಂದು ಇತರರಿಗೆ ಪಾರ್ಟಿ ಕೊಡುವ ಮೂಲಕ ಆಚರಿಸೋ ನೀವು ಒಂದು ಸಸಿಯನ್ನು ನೀಡಿ ಅದನ್ನು ಪೋಶಿಸಿ ಮುಂದಿಂದ ಜನ್ಮದಿನದ ಉಡುಗರಿಯಾಗಿ ಅದು ನಿಮಗೆ ಹಣ್ಣು ನೀಡುತ್ತೆ…

ಅರಣ್ಯ ರಕ್ಷಣೆ ಬರಿ ಅರಣ್ಯ ರಕ್ಷಕರ ಕೆಲಸವಲ್ಲ.. ನಮ್ಮೆಲ್ಲರ ಹೊಣೆ’


  • ಶ್ರೀಧರ್ ಬಿಂದ್ಲಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW