ಲೇಖಕರಾದ ಶಶಿಧರ ಹಾಲಾಡಿ ಅವರ ‘ನದಿ ದಾಟಿ ಬಂದವರು’ ಕೃತಿಗಳ ತೌಲನಿಕ ಅಧ್ಯಯನ ಕನ್ನಡದ ಕಾದಂಬರಿ ಸೆರೆಹಿಡಿದ ಆರ್ಥಿಕ ಸಾಮಾಜಿಕ ಪರಂಪರೆಯ ಸಾಹಿತ್ಯದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ. ಈ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ನದಿ ದಾಟಿ ಬಂದವರು
ಲೇಖಕರು : ಶಶಿಧರ ಹಾಲಾಡಿ
ಪ್ರಕಾಶನ : ಅಂಕಿತ ಪ್ರಕಾಶನ
ಬೆಲೆ : ೨೫೦.೦೦
ಸ್ವಾತಂತ್ರ್ಯ ಪೂರ್ವದ ಮತ್ತು ಸ್ವಾತಂತ್ರ್ಯೋತ್ತರದ ಕಾಲಮಾನದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದ ಪಲ್ಲಟಗಳನ್ನು ವಸ್ತುವನ್ನಾಗಿ ಮಾಡಿಕೊಂಡ ಈ ಕಾದಂಬರಿ, ಏಕಕಾಲಕ್ಕೆ ಜಮೀನ್ದಾರಿ ಪದ್ಧತಿಯ ಅವನತಿ ಮತ್ತು ಗೇಣಿದಾರರೆ ಭೂಮಾಲೀಕರಾಗುವ ಅವಸ್ಥಾಂತರವನ್ನು ವಸ್ತುನಿಷ್ಠವಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ಕರ್ನಾಟಕ ಸರ್ಕಾರ ಜಾರಿಗೆ ತಂದ ‘ಉಳುವವನೇ ನೆಲೆದೊಡೆಯ’ ಎಂಬ ಕಾನೂನು ಊರುಗೋಲಾಗಿ ಪರಿಣಮಿಸಿತು. ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸದಿದ್ದರು, ಅದರಿಂದ ಪ್ರಭಾವಿತರಾಗಿ ಗಾಂಧಿಯವರ ವ್ಯಕ್ತಿತ್ವದ ಹಿರಿಮೆಗೆ ಮನಸೋತ ವೆಂಕಣ್ಣಯ್ಯ ನುಡಿದ ತನ್ನ ಮಗನ ಮುಂದೆ ನುಡಿದ ಭವಿಷ್ಯ, ಅವನ ಕಾಲದಲ್ಲಿ ಅವರು ಆಶ್ರಯ ನೀಡಿದ ಗೇಣಿದಾರ ಸಿದ್ದನಾಯಕನಿಂದಾಗಿ ಫಲಿಸುವುದು, ಅವರ ಮುನ್ನೋಟಕ್ಕೆ ಸಾಕ್ಷಿಯಾಗಿದೆ.
ಎರಡು ವಿಭಿನ್ನ ಸಮುದಾಯದ ತಲೆಮಾರಿನಲ್ಲಿ ಉಂಟಾದ ಪಲ್ಲಟವಾಗಿ ಕೂಡಾ ಇದನ್ನು ಗ್ರಹಿಸಲು ಸಾಧ್ಯ. ವೆಂಕಣ್ಣಯ್ಯ ಬ್ರಾಹ್ಮಣ ಜಮೀನ್ದಾರಿ ಸಮುದಾಯದ ಪ್ರತೀಕವಾಗಿ ಬಂದಿದ್ದಾರೆ.

ಅವರಲ್ಲಿ ಆಶ್ರಯ ಬೇಡಿ ಬಂದ ಕುಯಿರ ನಾಯಕ ಶೂದ್ರ ಸಮುದಾಯದ ಪ್ರತೀಕವಾಗಿ ಬಂದಿದ್ದಾರೆ.ಅವರ ನಡುವೆ ಸಾಮರಸ್ಯ ಅವರ ಮುಂದಿನ ತಲೆಮಾರಿಗೆ ಸೇರಿದ ಸತ್ಯನಾರಾಯಣ ಮತ್ತು ಸಿದ್ಧನಾಯಕನ ನಡುವೆ ಇಲ್ಲವಾಗುತ್ತದೆ. ಇದಕ್ಕೆ ಕಾರಣವಾಗುವುದು ಎಪ್ಪತ್ತರ ದಶಕದಲ್ಲಿ ಉಳುವವರ ಪರವಾಗಿ ಬಂದ ಈ ನೆಲದ ಕಾನೂನು.ಎರಡೂ ಸಮುದಾಯದವರು ಎದುರಿಸುವ ತಲ್ಲಣಗಳನ್ನು ಸಮರ್ಥವಾಗಿ ಸೆರೆಹಿಡಿಯಲಾಗಿದೆ. ಅದರ ಪ್ರತೀಕವಾಗಿ ಸಾಕಮ್ಮ ಮತ್ತು ಸಿದ್ದನಾಯಕರು ಬಂದಿದ್ದಾರೆ .
ಇಲ್ಲಿ ನದಿ ಕಾಲಪ್ರವಾಹದ ಪ್ರತೀಕವಾಗಿದೆ. ಇಲ್ಲಿ ಬರುವ ಭವಿಷ್ಯವಾಣಿ ಕೂಡಾ ಕಾದಂಬರಿಯ ಮುಂದಿನ ಗತಿಯನ್ನು ನಿರ್ದೇಶಿಸುತ್ತದೆ. ಕಳೆದ ಶತಮಾನದ ಆರಂಭದಲ್ಲಿ ಬಂದ ಕಾರಂತರ ಚೋಮನ ದುಡಿಯಲ್ಲಿ ಬರುವ ಸಂಕಪ್ಪಯ್ಯ ಮತ್ತು ಚೋಮರ ಮುಂದಿನ ತಲೆಮಾರಿಗೆ ಸೇರಿದ ಇಲ್ಲಿನ ಪಾತ್ರಗಳಾದ ಸಾಕಮ್ಮ ಮತ್ತು ಸಿದ್ದ ನಾಯಕರನ್ನು ಒಳಗೊಂಡ,ಈ ಕೃತಿಗಳ ತೌಲನಿಕ ಅಧ್ಯಯನ ಕನ್ನಡದ ಕಾದಂಬರಿ ಸೆರೆಹಿಡಿದ ಆರ್ಥಿಕ ಸಾಮಾಜಿಕ ಪರಂಪರೆಯ ಸಾತತ್ಯದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ.
ಕೊನೆಗೆ ಪ್ರಾದೇಶಿಕ ಶಬ್ದಗಳ ಕುರಿತು ಟಿಪ್ಪಣಿ ಒದಗಿಸಿರುವುದು ಕಾದಂಬರಿಯ ಗ್ರಹಿಕೆಗೆ ಅನುವು ಮಾಡಿಕೊಡುತ್ತದೆ. ನಾಲ್ಕು ದಶಕಗಳ ಹಿಂದೆ ವಿದ್ಯಾರ್ಥಿಗಳಾಗಿದ್ದಾಗ ನಾವು ಓದಿದ ರಷ್ಯನ್ ಲೇಖಕರಾದ ಚೆಕಾಫ ನ ‘ ಚೆರ್ರಿ ಆರ್ಚರ್ಡ್ ‘ನಾಟಕದ ವಸ್ತು ಕೂಡಾ ಇದೇ ಆಗಿತ್ತು ಎನ್ನುವುದು ಆಕಸ್ಮಿಕ ಅಲ್ಲ.
ಇಂತಹ ಕಾದಂಬರಿಯನ್ನು ಬರೆದ ಲೇಖಕರಾದ ಶಶಿಧರ ಹಾಲಾಡಿ ಮತ್ತು ಇದನ್ನು ಪ್ರಕಟಿಸಿದ ನನ್ನ ಸಹಪಾಠಿ ಅಂಕಿತದ ಪ್ರಕಾಶ್ ಗೆ ಅಭಿನಂದನೆ. ನದಿ ದಾಟಿ ಬಂದವರು, ಶಶಿಧರ ಹಾಲಾಡಿ; ಸ್ವಾತಂತ್ರ್ಯ ಪೂರ್ವದ ಮತ್ತು ಸ್ವಾತಂತ್ರ್ಯೋತ್ತರದ ಕಾಲಮಾನದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದ ಪಲ್ಲಟಗಳನ್ನು ವಸ್ತುವನ್ನಾಗಿ ಮಾಡಿಕೊಂಡ ಈ ಕಾದಂಬರಿ, ಏಕಕಾಲಕ್ಕೆ ಜಮೀನ್ದಾರಿ ಪದ್ಧತಿಯ ಅವನತಿ ಮತ್ತು ಗೇಣಿದಾರರೆ ಭೂಮಾಲೀಕರಾಗುವ ಅವಸ್ಥಾಂತರವನ್ನು ವಸ್ತುನಿಷ್ಠವಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ಕರ್ನಾಟಕ ಸರ್ಕಾರ ಜಾರಿಗೆ ತಂದ ‘ಉಳುವವನೇ ನೆಲೆದೊಡೆಯ’ ಎಂಬ ಕಾನೂನು ಊರುಗೋಲಾಗಿ ಪರಿಣಮಿಸಿತು. ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸದಿದ್ದರು, ಅದರಿಂದ ಪ್ರಭಾವಿತರಾಗಿ ಗಾಂಧಿಯವರ ವ್ಯಕ್ತಿತ್ವದ ಹಿರಿಮೆಗೆ ಮನಸೋತ ವೆಂಕಣ್ಣಯ್ಯ ನುಡಿದ ತನ್ನ ಮಗನ ಮುಂದೆ ನುಡಿದ ಭವಿಷ್ಯ, ಅವನ ಕಾಲದಲ್ಲಿ ಅವರು ಆಶ್ರಯ ನೀಡಿದ ಗೇಣಿದಾರ ಸಿದ್ದನಾಯಕನಿಂದಾಗಿ ಫಲಿಸುವುದು, ಅವರ ಮುನ್ನೋಟಕ್ಕೆ ಸಾಕ್ಷಿಯಾಗಿದೆ.

ಎರಡು ವಿಭಿನ್ನ ಸಮುದಾಯದ ತಲೆಮಾರಿನಲ್ಲಿ ಉಂಟಾದ ಪಲ್ಲಟವಾಗಿ ಕೂಡಾ ಇದನ್ನು ಗ್ರಹಿಸಲು ಸಾಧ್ಯ. ವೆಂಕಣ್ಣಯ್ಯ ಬ್ರಾಹ್ಮಣ ಜಮೀನ್ದಾರಿ ಸಮುದಾಯದ ಪ್ರತೀಕವಾಗಿ ಬಂದಿದ್ದಾರೆ . ಅವರಲ್ಲಿ ಆಶ್ರಯ ಬೇಡಿ ಬಂದ ಕುಯಿರ ನಾಯಕ ಶೂದ್ರ ಸಮುದಾಯದ ಪ್ರತೀಕವಾಗಿ ಬಂದಿದ್ದಾರೆ.ಅವರ ನಡುವೆ ಸಾಮರಸ್ಯ ಅವರ ಮುಂದಿನ ತಲೆಮಾರಿಗೆ ಸೇರಿದ ಸತ್ಯನಾರಾಯಣ ಮತ್ತು ಸಿದ್ಧನಾಯಕನ ನಡುವೆ ಇಲ್ಲವಾಗುತ್ತದೆ. ಇದಕ್ಕೆ ಕಾರಣವಾಗುವುದು ಎಪ್ಪತ್ತರ ದಶಕದಲ್ಲಿ ಉಳುವವರ ಪರವಾಗಿ ಬಂದ ಈ ನೆಲದ ಕಾನೂನು.ಎರಡೂ ಸಮುದಾಯದವರು ಎದುರಿಸುವ ತಲ್ಲಣಗಳನ್ನು ಸಮರ್ಥವಾಗಿ ಸೆರೆಹಿಡಿಯಲಾಗಿದೆ. ಅದರ ಪ್ರತೀಕವಾಗಿ ಸಾಕಮ್ಮ ಮತ್ತು ಸಿದ್ದನಾಯಕರು ಬಂದಿದ್ದಾರೆ.
ಇಲ್ಲಿ ನದಿ ಕಾಲಪ್ರವಾಹದ ಪ್ರತೀಕವಾಗಿದೆ. ಇಲ್ಲಿ ಬರುವ ಭವಿಷ್ಯವಾಣಿ ಕೂಡಾ ಕಾದಂಬರಿಯ ಮುಂದಿನ ಗತಿಯನ್ನು ನಿರ್ದೇಶಿಸುತ್ತದೆ. ಕಳೆದ ಶತಮಾನದ ಆರಂಭದಲ್ಲಿ ಬಂದ ಕಾರಂತರ ಚೋಮನ ದುಡಿಯಲ್ಲಿ ಬರುವ ಸಂಕಪ್ಪಯ್ಯ ಮತ್ತು ಚೋಮರ ಮುಂದಿನ ತಲೆಮಾರಿಗೆ ಸೇರಿದ ಇಲ್ಲಿನ ಪಾತ್ರಗಳಾದ ಸಾಕಮ್ಮ ಮತ್ತು ಸಿದ್ದ ನಾಯಕರನ್ನು ಒಳಗೊಂಡ,ಈ ಕೃತಿಗಳ ತೌಲನಿಕ ಅಧ್ಯಯನ ಕನ್ನಡದ ಕಾದಂಬರಿ ಸೆರೆಹಿಡಿದ ಆರ್ಥಿಕ ಸಾಮಾಜಿಕ ಪರಂಪರೆಯ ಸಾಹಿತ್ಯದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ.
ಕೊನೆಗೆ ಪ್ರಾದೇಶಿಕ ಶಬ್ದಗಳ ಕುರಿತು ಟಿಪ್ಪಣಿ ಒದಗಿಸಿರುವುದು ಕಾದಂಬರಿಯ ಗ್ರಹಿಕೆಗೆ ಅನುವು ಮಾಡಿಕೊಡುತ್ತದೆ. ನಾಲ್ಕು ದಶಕಗಳ ಹಿಂದೆ ವಿದ್ಯಾರ್ಥಿಗಳಾಗಿದ್ದಾಗ ನಾವು ಓದಿದ ರಷ್ಯನ್ ಲೇಖಕರಾದ ಚೆಕಾಫ ನ ‘ ಚೆರ್ರಿ ಆರ್ಚರ್ಡ್ ‘ನಾಟಕದ ವಸ್ತು ಕೂಡಾ ಇದೇ ಆಗಿತ್ತು ಎನ್ನುವುದು ಆಕಸ್ಮಿಕ ಅಲ್ಲ.
ಇಂತಹ ಕಾದಂಬರಿಯನ್ನು ಬರೆದ ಲೇಖಕರಾದ ಶಶಿಧರ ಹಾಲಾಡಿ ಮತ್ತು ಇದನ್ನು ಪ್ರಕಟಿಸಿದ ನನ್ನ ಸಹಪಾಠಿ ಅಂಕಿತದ ಪ್ರಕಾಶ್ ಗೆ ಅಭಿನಂದನೆ.
- ರಘುನಾಥ್ ಕೃಷ್ಣಮಾಚಾರ್
