ಇರುವೆಯ ಸಾಲಲ್ಲಿ ಮುಂದೆ ಹೊರಟ ಇರುವೆ…ಕವಿ ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಒಳಗೊಂದು ಕಥೆ
ಓದಿದರೆ ಮತ್ತೆ ಕವಿತೆ
ನಾನೆಂದರೆ ನನ್ನೊಳಗೆ
ಮರೆತು ಹೋದ ಒರತೆ
ಎಚ್ಚರವಿದ್ದರೆ ಮಾತು
ನಿದ್ದೆಗೆ ಮೌನದ ನಸುನಗು
ನಿಂತರೆ ಕಾಣುವ ಹೂ ಎಳೆ
ಸಣ್ಣಗೆ ಹರಿವ ಝರಿ
ಹಾರಲಾರದ ಹಕ್ಕಿಯ
ಹಸಿವೆಯ ನೋಟ
ಇರುವೆಯ ಸಾಲಲ್ಲಿ
ಮುಂದೆ ಹೊರಟ ಇರುವೆ
ಕಡಲ ತೆರೆಯ ಮೇಲೆ
ಎಳೆ ಮೀನ ಬಡಿತ
ಎಲ್ಲವೂ ಸುತ್ತಿಕೊಳ್ಳುವ
ಬದುಕ ಅನಂತತೆ
ನಾನೆಂದರೆ ನನ್ನೊಳಗಿನ
ಶೂನ್ಯತೆ
ಪರಿಶುದ್ಧ ಒಲವಿನ
ಬದುಕೊಲವ ಹಣತೆ
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ
