ಶರಣಗೌಡ ಬಿ ಪಾಟೀಲ ತಿಳಗೂಳ ಅವರು ಮತದಾನದ ಜಾಗೃತಿ ಕವನವನ್ನು ತಪ್ಪದೆ ಮುಂದೆ ಓದಿ…
ನನ್ನಲ್ಲಿದೆ ಅಮೂಲ್ಯ ಮತ
ಕಾಯುವದು ದೇಶದ ಹಿತ!!
ನಾನು ಮಾಡುವೆ
ತಪ್ಪದೇ ಮತದಾನ!
ಆಗಲೇ ಮನಸ್ಸಿಗೆ
ಸಮಾಧಾನ!
ನಾನು ಪ್ರಜಾಪ್ರಭುತ್ವದ
ನಾಗರಿಕ !
ಆರಿಸಬಲ್ಲೇ ದೇಶದ
ಪ್ರಬಲ ನಾಯಕ!!
ಆಸೆ ಆಮಿಷಗಳಿಗೆ
ಬಲಿಯಾಗಿ
ಹೊತ್ತುಕೊಳ್ಳಲಾರೆ
ಎಂದಿಗೂ ಕಳಂಕ!
ಮತದಾನ ಮಾಡುವೆ
ಯೋಚಿಸಿ ನೂರಾರು ಬಾರಿ
ನನ್ನ ಮೇಲಿದೆ
ಗುರುತರ ಜವಾಬ್ದಾರಿ !
ಪ್ರಗತಿ ಪಥದಲಿ
ಸಾಗಬೇಕಾಗಿದೆ ದೇಶ
ಅದುವೇ ನನ್ನ ಉದ್ದೇಶ!!
- ಶರಣಗೌಡ ಬಿ ಪಾಟೀಲ ತಿಳಗೂಳ
