‘ನನ್ನವ್ವ’ ಕವನ – ಶಾಂತು ತೋಟಗೇರ

ಬೆರಳತುದಿಯಲ್ಲೇ ರುಚಿಯ ತೂಗಿದವಳು…ಕಣ್ಣಸನ್ನೆಯಲ್ಲೇ ಶಿಸ್ತು ಕಲಿಸಿದವಳು ನನ್ನವ್ವ….ಅವ್ವನ ಕುರಿತು ಶಾಂತು ತೋಟಗೇರ ಅವರು ಬರೆದ ಭಾವನಾತ್ಮಕ ಕವನವನ್ನು ತಪ್ಪದೆ ಮುಂದೆ ಓದಿ…

ಅವಳು ನವಮಾಸಗಳ ಕಾಲ ಭ್ರೂಣದಲ್ಲೇ ಬರೆದು ಭೂಮಿಗೆ ಪ್ರಕಟಗೊಳಿಸಿದ
ಕವಿತೆಯೇ ನಾನು…..

ತವರು ಸುಖದೊಳಗೆ ಮೆರೆದವಳು
ಅಪ್ಪನ ಕಷ್ಟಕಾಲದಲ್ಲಿ ಹೆಗಲಾಗಿ ಧೈರ್ಯ ತುಂಬಿದವಳು
ಇದ್ದವರು ಬಂದಾಗ ಇದ್ದಂತೆ ನಟಿಸಿದಳೇ ಹೊರತು ತವರು ಬೇಡದ ಸ್ವಾಭಿಮಾನಿ ನನ್ನವ್ವ…..

ಚೌಕಾಸಿ ಮಾಡಿ ಸಂಸಾರ ನೆಡಿಸಿ ಬೆರಳತುದಿಯಲ್ಲೇ ರುಚಿಯ
ತೂಗಿದವಳು
ಕಣ್ಣಸನ್ನೆಯಲ್ಲೇ ಶಿಸ್ತು
ಕಲಿಸಿದವಳು ನನ್ನವ್ವ….

ದವಡೆಯಲ್ಲೇ ದು:ಖ ತುರಿಕಿಟ್ಟುಕೊಂಡು
ನಗು ಹೊತ್ತು ತಿರುಗಿದವಳು
ಮಾಸಿದ ಸೀರೆಯ ಸೆರಗಲ್ಲಿ ಹಲವು ನೋವ ಕವನಸಂಕಲನ ರಚಿಸಿದವಳು ನನ್ನವ್ವ…

ಹೆಚ್ಚೇನೂ ಹೇಳಲಾರೆ ಅಮ್ಮಾ ನಿನ್ನ ಮರೆತ ದಿನ ನನ್ನ ಮರಣವಾಗಲಿ


  • ಶಾಂತು ತೋಟಗೇರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading