ಅಮ್ಮಾ…ನಾನು ತಾನೇ ಹೇಗೆ ಮರೆತೇನು!!

ಮರೆಯದೇ ಕಲಿಸಿದ್ದೆ ಬದುಕ ಪಾಠವನ್ನು ನನ್ನ ಮೊದಲ ಶಿಕ್ಷಕಿ ನೀನೇ ಅಲ್ಲವೇನು ಅಮ್ಮಾ… ಕವಿಯತ್ರಿ ಸ್ಮಿತಾ ಬಲ್ಲಾಳ್ (ಅಸ್ಮಿತೆ) ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಬಣ್ಣ ಬಣ್ಣದ ಕನಸುಗಳೆಲ್ಲವನ್ನು
ಮನಸಲ್ಲಿ ಸೃಷ್ಟಿಸಿದವಳು ನೀನು
ಕನಸು ಕಂಗಳ ಪಡೆದವಳನ್ನು
ಅಂದು ಹೆತ್ತು ಹೊತ್ತವಳು ನೀನು

ಕನ್ನಡದ ಪ್ರೀತಿಯ ಬೀಜವನ್ನು
ನನ್ನೊಳಗೆ ಬಿತ್ತಿದವಳು ನೀನು
ಪುಸ್ತಕ ಓದುವ ಹವ್ಯಾಸವನ್ನು
ಮನದಲ್ಲಿ ಹುಟ್ಟಿಸಿದವಳು ನೀನು

ಪ್ರತೀ ಪ್ರೀತಿಗೂ ಅದರರ್ಥವನ್ನು
ಬಿಡಿಸಿ ಬಿಡಿಸಿ ತಿಳಿಸಿದವಳು ನೀನು
ಪದಗಳರ್ಥವ ತಿಳಿಸಿ ಹಾಡುಗಳನ್ನು
ಆಲಿಸಿ ಕಲಿತುಕೋ ಎಂದಿದ್ದೆ ನೀನು

ನೋವುಂಡು ಎಂದೆಂದೂ ನಗುವುದನ್ನು
ಅರ್ಥವತ್ತಾಗಿ ಹೇಳಿಕೊಟ್ಟವಳು ನೀನು
ಪ್ರತೀ ನಲಿವಿಗೂ ಕಾರಣರಾದವರನ್ನು
ಮರೆಯದಿರು ಎಂದುಲಿದವಳು ನೀನು

ಮರೆಯದೇ ಕಲಿಸಿದ್ದೆ ಬದುಕ ಪಾಠವನ್ನು
ನನ್ನ ಮೊದಲ ಶಿಕ್ಷಕಿ ನೀನೇ ಅಲ್ಲವೇನು!
ಬಾಳ ಪ್ರತೀ ಹೆಜ್ಜೆಯಲ್ಲೂ ನೀ ನೀಡಿದ್ದನ್ನು
ಅಮ್ಮಾ…ನಾನು ತಾನೇ ಹೇಗೆ ಮರೆತೇನು!!


  • ಸ್ಮಿತಾ ಬಲ್ಲಾಳ್ (ಅಸ್ಮಿತೆ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading