ಒಲುಮೆಯ ರಾಗದಲ್ಲಿ ಬಂಧಿ ನಾ

ಕವಿಯತ್ರಿ ಸ್ಮಿತಾ ಬಲ್ಲಾಳ್ (ಅಸ್ಮಿತೆ) ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಮೌನದಲ್ಲೂ ಕೂಡಾ ಕಾಣುತ್ತಿದೆ
ನಿನ್ನ ಪ್ರೀತಿಯಲ್ಲಿ ನನಗೇನೋ
ಸಂಭ್ರಮದ ಸಲ್ಲಾಪ !
ನಿನ್ನಿಂದ ತಿರಸ್ಕೃತಳಾಗುವೆನೆನ್ನುವ
ಭಯ ಇಲ್ಲ ಎನಗೆ!!

ಒಂಟಿತನದಲ್ಲೂ ಸಹಾ ಖುಷಿಯಿದೆ
ನಿನ್ನನ್ನಾಳಲು ನನ್ನದೇನೋ
ಒಬ್ಬಳದೇ ಕಲಾಪ !
ನಿನ್ನನ್ನು ಬೇರಾರೂ ಮುತ್ತಲಾರರೆನ್ನುವ
ತುಂಬು ಧೈರ್ಯ ನನಗೆ!!

ದೂರದಲ್ಲೇ ಆರಾಧಿಸುವಲ್ಲಿ ಹಿತವಿದೆ
ನನ್ನ ದೇವ ನೀ ಬೇಡವೆನ್ನಲಾರನೇನೋ
ಸುಂದರ ಸಂಬಂಧ ಬೆಳಗುವ ದೀಪ!
ನನ್ನೀ ಆರಾಧನೆಗೆ ತಡೆಯೊಡ್ಡುವವ
ನೀನಲ್ಲ ಗೊತ್ತು ನನಗೆ!!

ಗಾಳಿಯಲ್ಲೇ ಮುದ್ದಿಸಲು ತವಕವಿದೆ
ನೀ ನಿರಾಕರಿಸಲಾರನೇನೋ
ಆಸ್ವಾದಿಸು ತುಂಟಗಾಳಿಯ ತಂಪ!
ಗಾಳಿಯೊಂದಿಗೇ ಗುದ್ದಾಡುವ
ಸ್ಪರ್ಶದ ಅನುಭವ ನಿನಗೆ!!

ಚಿಟಪಟ ಮಳೆ ಹನಿಯಲ್ಲಿದೆ
ನನ್ನ-ನಿನ್ನ ನಡುವಣ ಏನೋ
ಅದ್ಭುತ ಸಂಗೀತದ ಆಲಾಪ!
ಒಲುಮೆಯ ರಾಗದಲ್ಲಿ ಬಂಧಿಸುವ
ಚಿಲುಮೆಯ ಆಗರ ನೀನೆನಗೆ!!

ಕನಸಲ್ಲೇ ನಿನ್ನ ನನ್ನವನಾಗಿಸಿದೆ
ಕನಸಿಂದ ನೀ ದೂರವಾಗಲಾರೆಯೇನೋ
ಸಂಧಿಸು ನನ್ನೊಲವ ಕಂಪ!
ಹಾಗೇ ತೇಲಾಡುತಾ ಓಲಾಡುವ
ಮನವೆನ್ನ ಕನಸುಗಾರನ ಜೊತೆಗೆ!!


  • ಸ್ಮಿತಾಬಲ್ಲಾಳ್ (ಅಸ್ಮಿತೆ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading