ಪುಸ್ತಕ ಓದುವ ಗೀಳು ಹಚ್ಚಿಸಿದರು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು. ಅವರ ನರಭಕ್ಷಕ ಪುಸ್ತಕದ ಕುರಿತು ಯುವ ಪತ್ರಿಕೋದ್ಯಮ ವಿದ್ಯಾರ್ಥಿ ವಿನಯ್ ಮುಂಗ್ರಾಣಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಮಧ್ಯಾಹ್ನದ ಉರಿ ಬಿಸಿಲು. ಮಾಡಲು ಬೇರೆನೂ ಕೆಲಸವಿಲ್ಲವಾಗಿತ್ತು, ಕಾಲೇಜಿನಲ್ಲಿ ಬೆಳಗ್ಗಿನ ತರಗತಿಗಳು ಮುಗಿದಿದ್ದವು ಹೀಗೆ ದಾರಿಯಲ್ಲಿ ಅಲೆದಾಡಿಕೊಂಡು ನಿಧಾನವಾಗಿ ಕಾಲೇಜಿನ ಲೈಬ್ರೆರಿಗೆ ಬಂದೆ. ಏನು ಮಾಡಲಿ ಇಲ್ಲಿ ಬಂದು ಎಂದು ಒಂದೆರಡು ಬಾರಿ ಅನ್ನಿಸಿತು, ಆದರೆ ಈ ಹಾಳಾದ ಶೆಕೆಗೆ ಒಂದು ತಂಪಾದ ಸೂರಿನ ಅವಶ್ಯಕತೆ ಇದ್ದಿದ್ದರಿಂದ ಲೈಬ್ರೆರಿಗೆ ಹೋಗ- -ಬೇಕಾಯಿತು. ಆದರೆ ನನಗಲ್ಲಿ
ಪುಸ್ತಕಗಳನ್ನೋದಲು ಬೇಜಾರು ಆದ್ದರಿಂದ ನಾನು ಮೊದಲ ಅರ್ಧ ಘಂಟೆಯವರೆಗೆ ಪೇಪರ್ ಅನ್ನು ಓದಿ ಮುಗಿಸಿದೆ, ಆದರೆ ಇನ್ನೂ ಒಂದುವರೆ ಘಂಟೆ ಕಳೆಯಬೇಕಿತ್ತು. ಇದು ನನ್ನ ಪಾಲಿಕೆ ತುಂಬಾ ಕಳೆಯಲು ಕಷ್ಟದಾಯಕ ವಾದ ಸಮಯವಾಗಿತ್ತು.
ಏನಾದರಾಗಲಿ ನಾನು ಇನ್ನೂ ಒಂದುವರೆ ಘಂಟೆಯನ್ನು ಕಳೆದೇ ತೀರುತ್ತೇನೆಂದು ಗಟ್ಟಿ ಮನಸ್ಸನ್ನು ಮಾಡಿ ಅಲ್ಲೇ ಕುಳಿತು ಪುಸ್ತಕವನ್ನು ಓದಲು ನಿರ್ಧಾರ ಮಾಡಿದೆ. ನಂತರ ಹೀಗೆ ಪುಸ್ತಕಗಳನ್ನು ನೋಡುತ್ತಿರುವಾಗ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ರೂಪಾಂತರಿಸಿದ ಪುಸ್ತಕವಾದ ಬೇಳ್ಳಂದೂರಿನ ನರಭಕ್ಷಕ ಎಂಬ ಪುಸ್ತಕ ಕಣ್ನಿಗೆ ಬಿದ್ದಿತು. ಆ ಪುಸ್ತಕದ ಹೆಸರನ್ನು ನೋಡಿದಾಗ ನನಗೆ ಏನೊ ಒಂದು ತರಹದ ಕುತೂಹಲ ಮೂಡಿತು.

ನಾನು ಆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓದಲು ಕುಳಿತೆ. ಮೊದ ಮೊದಲು ಕಥೆಯನ್ನು ಆರಂಭಿಸಿದಾಗ ಏನೂ ಅನುಭವ ಆಗುವುದಿಲ್ಲ. ಆದರೆ ನಂತರ ಕಥೆಯ ಎರಡನೇ ಭಾಗಕ್ಕೆ ನಾವು ಬಂದಹಾಗೆ ನಿಧಾನವಾಗಿ ನಾವು ಪುಸ್ತಕದವೊಳಗೆ ಆಳದಲ್ಲಿ ಮುಳುಗಿ ಹೋಗುತ್ತೇವೆ.ಈ ಪುಸ್ತಕದಲ್ಲಿ ತೇಜಸ್ವಿಯವರು ಒಂದು ಹುಲಿ ಹೇಗೆ ಒಂದು ಊರಿನ ಪ್ರಾಣಿ ಮತ್ತು ಮನುಷ್ಯರನ್ನು ಬಲಿ ತೆಗೆದುಕೊಳ್ಳುತ್ತದೆ ಹಾಗೇ ಆ ಹುಲಿಯನ್ನು ಸಾಯಿಸಲು ಊರಿನ ಜನರು ಹಾಗೆ ಬೇರೆಯವರು ಮಾಡುವ ಹರಸಾಹಸದ ಬಗ್ಗೆ ತುಂಬಾ ಅಚ್ಚುಕಟ್ಟಾಗಿ ಹೇಳಿದ್ದಾರೆ.
ಇದನ್ನು ಓದಿ ಮುಗಿಸುವಷ್ಟರಲ್ಲಿ ಸುಮಾರು ಮೂರು ಘಂಟೆ ಸಮಯ ತೆಗೆದುಕೊಂಡಿತ್ತು. ಇದನ್ನು ಓದಿ ಮುಗಿಸಿದ ನಂತರ ನನ್ನ ಮನದಲ್ಲಿ ನನಗೆ ಇನ್ನು ಯಾವುದಾದರೊಂದು ಇವರದ್ದೇ ಲೇಖನದ ಪುಸ್ತಕವನ್ನು ಓದೋಣ ಎಂದು ನನಗನ್ನಿಸಿತು. ಹೀಗೆ ಮತ್ತೆ ಪುಸ್ತಕದ ಸಾಲುಗಳನ್ನು ನೋಡುತ್ತಿರುವಾಗ ನನಗೆ ಇವರ ಪಾಕಕ್ರಾಂತಿಯು ಕಂಡಿತು. ಈ ಪುಸ್ತಕದ ಬಗ್ಗೆ ನನ್ನ ಸ್ನೇಹಿತ ನನಗೋಮ್ಮೆ ಹೇಳಿದ್ದ. ತೇಜಸ್ವಿಯವರು ಹೆಂಡತಿ ಮನೆಯಲ್ಲಿ ಇಲ್ಲದೇ ಇದ್ದಾಗ ಇವರು ಅಡುಗೆ ಮನೆಯಲ್ಲಿ ಪಾಕ ಪ್ರಯೋಗ ಮಾಡಿರುವುದರ ಬಗ್ಗೆ, ಆಗ ನನಗೆ ಆ ವಿಷಯ ನೆನಪಾಗಿ ಅದನ್ನು ಓದಲು ಶುರುಮಾಡಿದೆ. ಅದನ್ನು ಓದುತ್ತಾ ಓದುತ್ತಾ ನನಗೆ ಕಾಲೇಜಿನ ಸಮಯ ಮುಗಿದಿದ್ದೇ ಗೊತ್ತಾಗಲಿಲ್ಲ, ನಂತರ ನಾನು ಈ ಪುಸ್ತಕವನ್ನು ಮನೆಗೆ ತೆಗೆದುಕೊಂಡು ಹೋಗಿ ಓದಿದೆ. ಅಂದಿನಿಂದ ನಾನು ತೇಜಸ್ವಿಯವರ ಬರವಣಿಗೆಗೆ ಅಭಿಮಾನಿಯಾದೆ.
ಇಲ್ಲಿ ನಾವು ಗಮನಿಸ ಬಹುದಾದ ಅಂಶಗಳು ಬಹಳ ಇದೆ. ಕೇವಲ ಮಧ್ಯಾಹ್ನದ ಉರಿ ಬಿಸಿಲನ್ನು ತಪ್ಪಿಸಿಕೊಳ್ಳಲು ಲೈಬ್ರೆರಿಗೆ ಹೋದ ನನಗೆ ಒಂದು ಪುಸ್ತಕ ಓದಿದ್ದರಿಂದ ನಾನು ಪುಸ್ತಕದ ಅಭಿಮಾನಿ ಯಾದೆ. ಇದೆಲ್ಲಾ ಕೆಲವು ಸಮಯಗಳಿಂದ ಮಾತ್ರ ಸಾಧ್ಯ. ನಾವು ಆ ಸಮಯವನ್ನು ಸರಿಯಾಗಿ ಬಳಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ…
- ವಿನಯ್ ಮುಂಗ್ರಾಣಿ – ಎಸ್.ಡಿ.ಎಂ. ಕಾಲೇಜು ಉಜಿರೆ.
