ನೆಲನೆಲ್ಲಿ ಸೊಪ್ಪಿನ ತಂಬುಳಿ



ಬಹುಪಯೋಗಿ ನೆಲನಲ್ಲಿ ಸೊಪ್ಪಿನ  ತಂಬುಳಿ ತಯಾರಿಸುವ ವಿಧಾನ ಮತ್ತು ಅತ್ಯುತ್ತಮ ಔಷಧಿ ಗುಣದ ಬಗ್ಗೆ ತಿಳಿಯೋಣ.

ಮಲೆನಾಡಿನ ಭಾಗಗಳಲ್ಲಿ ಹೆಚ್ಚಾಗಿ ಬಳಸಲ್ಪಡುವ ಸಸ್ಯದ ಹೆಸರು ನೆಲನೆಲ್ಲಿ. ನೆಲದ ಮೇಲೆ ಬೆಳೆಯುವ ಪುಟ್ಟ ಗಿಡ. ಬೆಟ್ಟದಷ್ಟು ಔಷಧೀಯ ಗುಣಗಳನ್ನು ಒಳಗೊಂಡಿದೆ. ಕಾಮಾಲೆ, ಗಾಯ, ಕೆರೆಯುವಿಕೆ ಮತ್ತು ಜಂತುಹುಳುಗಳ ನಿವಾರಣೆಗೆ ನೆಲನೆಲ್ಲಿಯನ್ನು ಬಳಸುತ್ತಾರೆ. ನೆಲನೆಲ್ಲಿಯ ಎಳೆಯ ಕಾಂಡವನ್ನು ಜಜ್ಜಿ ರಸ ತೆಗೆದು ನಾಲ್ಕು ಗಂಟೆಗಳಿಗೊಂದು ಬಾರಿ ಕುಡಿದರೆ ಬೇಧಿ ನಿಲ್ಲುವುದು. ಗಾಯಗಳಿಗೆ ಬೇರು ಸಹಿತ ಜಜ್ಜಿ ಗಾಯಕ್ಕೆ ಲೇಪಿಸಬೇಕು. ಚರ್ಮರೋಗಗಳಿಗೂ ಕೂಡಾ ನೆಲನೆಲ್ಲಿ ಉತ್ತಮ ಮದ್ದು. ನೆಲನೆಲ್ಲಿ ಎಲೆಗಳನ್ನು ಉಪ್ಪಿನೊಂದಿಗೆ ಅರೆದು ಲೇಪಿಸುವುದರಿಂದ ಚರ್ಮದಲ್ಲಿ ಆಗಿರುವ ನವೆ ಕಡಿಮೆಯಾಗುತ್ತದೆ.

ನೆಲನೆಲ್ಲಿ ಸೊಪ್ಪನ್ನು ತುಪ್ಪದಲ್ಲಿ ಹುರಿದ ಇಂಗಿನ ಪುಡಿಯನ್ನು ಒಂದು ಚಿಟಿಕೆ ಸೇರಿಸಿ ಕುಡಿದರೆ ಅಜೀರ್ಣ ಕಡಿಮೆಯಾಗುತ್ತದೆ. ಅಜೀರ್ಣದಿಂದ ಉಂಟಾಗುವ ಹೊಟ್ಟೆನೋವು ಕೂಡಾ ಕಮ್ಮಿಯಾಗುವುದು. ಅತಿಯಾದ ಖುತುಸ್ರಾವ ತಡೆಯುವಲ್ಲಿ ಸಹಾಯವಾಗುವುದು.

ಫೋಟೋ ಕೃಪೆ : Kannada Travel

ಇದರ ತಂಬುಳಿ ಮಾಡುವ ವಿಧಾನ : 

  • ನೆಲನೆಲ್ಲಿ ಸೊಪ್ಪು- ಒಂದು ಬೌಲ್
  • ಜೀರಿಗೆ- ಒಂದು ಸ್ಪೂನ್
  • ಒಣಮೆಣಸಿನಕಾಯ
  • ಉಪ್ಪು- ರುಚಿಗೆ ತಕ್ಕಷ್ಟು
  • ಸಾಸಿವೆ- ಅರ್ಧ ಸ್ಪೂನ್
  • ತುಪ್ಪ- ಎರಡು ಸ್ಪೂನ್
  • ಮಜ್ಜಿಗೆ- ಕಾಲ್‌ಲೀಟರ್
  • ಬೆಲ್ಲ – ಒಂದೆರಡು ಗೋಲಿ ಗಾತ್ರ
  • ಬ್ಯಾಡಗಿ ಮೆಣಸು
  • ಒಂದುಕಾಯಿತುರಿ- ಅರ್ಧ ಬೌಲ್.

ಫೋಟೋ ಕೃಪೆ : wikipedia

ಮಾಡುವ ವಿಧಾನ :

ನೆಲನೆಲ್ಲಿ ಸೊಪ್ಪನ್ನು ಬಾಣಲೆಯಲ್ಲಿ ಹಾಕಿ ಹುರಿದುಕೊಳ್ಳಬೇಕು. ಕಾಯಿತುರಿ, ಅರ್ಧ ಸ್ಪೂನ್ ಜೀರಿಗೆ, ಒಣಮೆಣಸಿನಕಾಯಿ ಸೇರಿಸಿ ರುಬ್ಬಿಕೊಳ್ಳಬೇಕು. ಅದಕ್ಕೆ ಉಪ್ಪು,ಬೆಲ್ಲ, ಮಜ್ಜಿಗೆ ಸೇರಿಸಬೇಕು. ನಂತರ ಸಾಸಿವೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಕೊಡಬೇಕು. ನೆಲನೆಲ್ಲಿ ತಂಬಳಿ ಸವಿಯಲು ಸಿದ್ಧ.

ನಿಮ್ಮ ಮನೆಯ ಸುತ್ತಲೇ ಇರುವ ಇಂತಹ ಅದೆಷ್ಟೋ ಔಷಧೀಯ ಗುಣಗಳನ್ನು ಹೊಂದಿರುವ ಇಂತಹ ಸಸ್ಯಗಳನ್ನು ಕಾಯಬೇಕಿದೆ.


  • ಶಾಲಿನಿ ಹೂಲಿ ಪ್ರದೀಪ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading