ನೆನಪುಗಳ ಒಲುಮೆ

ವಯಸ್ಸೆಂಬ ಆಯಸ್ಸು ಕೂಡಾ ಹಿಂದೆ ಸರಿದಿದೆ ಇದಕೆ ಲಿಂಗ ಬೇಧವಿಲ್ಲ… ಕವಿಯತ್ರಿ ಡಾ.ಕೃಷ್ಣವೇಣಿ.ಆರ್.ಗೌಡ ಅವರ ಸುಂದರ ಲೇಖನವನ್ನು ತಪ್ಪದೆ ಮುಂದೆ ಓದಿ…

ಅರುಚಾಟ ಕಿರುಚಾಟಕೆ
ಸೆಡುವಾಗಿದೆ ಮೌನದ ನೆನಪ ಒಲುಮೆ
ಇದು ಸಿರಿಯ ಸ್ವತ್ತಲ್ಲ
ಇದಕೆ ತಂಗಾಳಿಯ ಹಸಿರು ನೆಲ
ಕೈ ಬೀಸಿ ಕರೆಯುತ್ತಿದೆ

ಆದರೂ ಜಾಡಿರದ
ಪ್ರೀತಿ ಒಲುಮೆಗೆ
ಕಬ್ಬಿಣದ ಕುಲುಮೆ ಬಗ್ಗು ಬಡಿಯುತ್ತಿದೆ

ಬ್ಯಾಸರದ ಉಸಿರು ನಗೆ ಹನಿಯೊಳು
ಕೆರೆಯ ತುದಿಯ ಅಲೆಯ ಗಮನಿಸುತ
ಗಟ್ಟಿಗೊಂಡಿದೆ

ಯಾರ ಹಂಗು ಇದಕೆ ಇಲ್ಲ
ಮರದ ಮರೆಯ ಪೊಟರೆಯ ಚಿತ್ರ
ನೆನಪ ಆ ದಿನದ ಸವಿಯುತ
ಮೆಲ್ಲುಸಿರಲಿ ನಗುತಿದೆ

ಇದೇ ಅಲ್ಲವೇ ಎತ್ತ ಸುಳಿದರೂ
ಬೆಂಬಿಡದ ಸವಿಯೂಟದ ನೆನಪು
ಭಾವನೆಗಳಿಗೂ ನಿಲುಕದ
ಮನಸು ಕನಸುಗಳ ಏರಿಳಿತ

ಅದರ ಶಕ್ತಿ ಗೆ ನಿಜಕ್ಕೂ ಸಲಾಂ
ನೆನಪುಗಳ ಹರಿಗೋಲಿಗೆ
ನೆನಪೇ ತಿರುವುತ್ತಿರುವ ಕೈಯ್ಯ ಚಾಪು
ಹೇಗಿದೆಯಲ್ಲ ನೆನಪ ಕನ್ನಡಿ

ತಳ್ಳಿದಷ್ಟು ದೂರ ನೆನಪುಗಳ ಭಾರ
ಕೊನೆಗೂ ಸಿಗಲಾರದಷ್ಟು ಚೌಕಟ್ಟು
ಇದಕೆ ಅಂತ್ಯ ಎಲ್ಲಿ. .

ಮರೆತರೂ ಮತ್ತೆ ಮತ್ತೆ ಮೆಲಕು
ಹಾಕುವ ಮರ್ಕಟದ ಮನಕೆ ಮನದ ಬಿಂಬ ಚಿತ್ತಾರದ ರಂಗೋಲಿಯಲಿ
ಬೆಂದರೂ ಕೊನೆಯಿಲ್ಲ. .

ಏನ ಹೇಳಲಿ ನೆನಪುಗಳ ಆಗರ?
ಬುತ್ತಿ ಬಿಚ್ಚಿದಷ್ಟು ರುಚಿಎಂಬ
ನೆನಪಾಧಾರ. .

ಬಿಗಿದಬ್ಬರಿಸಿ ಬೊಬ್ಬೆ ಹಾಕಿದ
ಮನದ ಕಡಿವಾಣಕೆ ಪ್ರೀತಿಯ
ನೆನಪು ಚೈತನ್ಯ ತಂದಿದೆ. .

ಇದಕೆ ವಯಸ್ಸೆಂಬ ಆಯಸ್ಸು ಕೂಡಾ
ಹಿಂದೆ ಸರಿದಿದೆ
ಇದಕೆ ಲಿಂಗ ಬೇಧವಿಲ್ಲ
ಪತದಷ್ಟು ಎತ್ತರ ಹಾರುವ ಶಕ್ತಿ

ಏನ ಬಣ್ಣಿಸಲಿ ನೆನಪುಗಳ
ಬಣ್ಣಚಾಪಿಗೆ
ಅಂತಸ್ತುಗಳ ನೆಲೆಯಿಲ್ಲ
ಆದರೂ ನೆನಪು ಒಮ್ಮೊಮ್ಮೆ
ನೆಪಗಳಿಲ್ಲದೆ ನೆನಪದೋಕುಳಿಯಲಿ
ತೇಲಿಸುವುದು

ನೆನಪ ಮಧುರ ಆಹಲಾದಕೆ
ಈ ಜಗದ ವಿಶ್ವಪಥ ಶ್ರಮ ಕೊಟ್ಟು
ಪ್ರೀತಿಯ ನೆನಪಿನತ್ತ ಇಂದಿಗೂ
ಅಜರಾಮರ

ನೆನಪುಗಳ ಕರೆಯೋಲೆಗೆ
ಎಡ ಬಲ ನೀರ ಹರಿವು
ಸ್ದದಾಗುತ ಖುಷಿಯೊಳು
ಜಾರುತ್ತಿದೆ ಆಳವಿಲ್ಲದ ಅಂತ್ಯಕೆ

ಇದಕೆ ನೆನಪ ದೇಹ
ಕುಪ್ಪಳಿಸಿ ಕುಣಿಯುತಿದೆ
ಒಲುಮೆಯ ಹಸಿವು
ಈ ನೆನಪಿಗೆ ಪನ್ನೀರ ಬಿಂದು
ಹಾಕುತಿದೆ
ಇದೇ ನೆನಪ ಭಾವುಕತೆಯ
ಮೆಲುಕು. ..


  • ಡಾ. ಕೃಷ್ಣವೇಣಿ. ಆರ್. ಗೌಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading