ಬೆಟ್ಟ ಇಳಿಜಾರು ಬಾಳೆತ್ತರದ ಗಾದೆ…ಅಶ್ವಾಕ್ ಶಾಹ್ ಕನ್ನಡಿಗ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಹರಿಯುವ ನದಿಯಂತೆ ಜೀವನ..
ನಿಲ್ಲದ ಪಯಣ..ನಿಂತರೆ…
ಉಸಿರ ಚೆಲ್ಲಿದಂತೆಯೆ ಸರಿ..!?
ಕಾಯಕದ ಬೆಲೆ ಆರಿವಿನಲ್ಲಿತ್ತು..
ಹಿಂದಿರುವ ಕುಟುಂಬದ ಕಾಲುಗಳ ಸರಮಾಲೆ.,
ನಡೆಯಬೇಕಲ್ಲ ಜವಾಬ್ದಾರಿಗಳತ್ತ..!?
ಚಳಿ ಕೊಡುವ ಕಾಟ, ಬಿಸಿಲಿನ ತಾಪ..
ಮಳೆಯೇ ಜರಿ ಜರಿಯಾಗಿ ಮುನ್ನುಗ್ಗಿದರೂ.,
ಬದುಕು ಸಾಗುತ್ತಲೇ ಇರಬೇಕು..!?
ಚುರುಮುರಿ ಮಿಶ್ರಣದ ಸ್ವಾದ..
ಸುಖ ದುಃಖಗಳೆರೆಡು ಅನಿವಾರ್ಯ.,
ಬದುಕಿನ ಆಟ ದೌಡಾಯಿಸಿದೆ..!?
ಬೆಟ್ಟ ಇಳಿಜಾರು ಬಾಳೆತ್ತರದ ಗಾದೆ..
ಒಗಟಿನ ಹಗ್ಗ ಜಗ್ಗಾಟ ಬಾದೆ.,
ಬದುಕು ನಿಲ್ಲದ ಪಯಣ..!?
ಗುರಿ ಯಶಸ್ಸಿನ ಕಡೆಗಿದ್ದರು..
ಸಮುದ್ರ ತಲುಪುವ ಗುರಿ…
ಅದೇ ಕೊನೆ..ಅದೇ ಸಾವು.. ಅದೇ ಸತ್ಯ.!?
- ಅಶ್ವಾಕ್ ಶಾಹ್ ಕನ್ನಡಿಗ
