ಆಕೃತಿಕನ್ನಡ ಪತ್ರಿಕೆ ಕವಿ ಹಾಗೂ ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಹುಟ್ಟುಹಬ್ಬಕ್ಕೆ ಶುಭಕೋರುವುದರ ಮೂಲಕ ಅವರ ರಚನೆಯ ಒಂದು ಗಜಲ್ ಓದುಗರಿಗಾಗಿ, ತಪ್ಪದೆ ಮುಂದೆ ಓದಿ….
ಶ್ರಾವಣ ಸಂಜೆಯ ಗಾಳಿಯಲಿ ತೇಲಿ ಬರುವ ಗಂಧ ನಿನ್ನ ನೆನಪು
ನಸು ಬೆಳಗು ನಿದ್ರೆಯಲಿ ಹುಡುದಿ ಹಾಕುವ ಸಿಹಿಗನಸು ನಿನ್ನ ನೆನಪು
ಹಾರಿ ಬಂದ ಹಕ್ಕಿಯ ಕೊರಳೊಳಗಿನ ಹಾಡಿನ ಧ್ವನಿ ನಿನ್ನ ನೆನಪು
ಮನೆಯಂಗಳದಿ ಅರಳಿದ ರಂಗೋಲಿಯ ಶ್ವೇತವು ನಿನ್ನ ನೆನಪು
ಮಳೆ ನಿಂತ ಬಾನಲ್ಲಿ ಮೂಡಿದ ಇಂದ್ರಚಾಪದ ವರ್ಣವು ನಿನ್ನ ನೆನಪು
ಮುಂಗಾರು ಮಳೆ ಸೃಜಿಸಿದ ಜೋಗದ ಸಿರಿ ಲಾಸ್ಯ ನಿನ್ನ ನೆನಪು
ಊರಾಚೆಯ ಬೇಲಿಯಲಿ ಅರಳಿದ ಹೂವಿನ ಅಂದ ನಿನ್ನ ನೆನಪು
ಕಾರ್ಗತ್ತಲ ಸೀಳಿ ದಾರಿ ತೋರುವ ಹಣತೆಯ ಬೆಳಕು ನಿನ್ನ
ನೆನಪು
ಮೊಲೆವಾಲ ಕುಡಿಯುವ ಕಂದನ ತುಟಿಯ ಮೃದು ನಿನ್ನ ನೆನಪು
ಚುಮು ಚುಮು ಬೆಳಗಿನಲಿ ಬಿರಿದ ‘ಮಲ್ಲಿಗೆ’ಯ ಕಂಪು ನಿನ್ನ ನೆನಪು
- ಮಲ್ಲಿಕಾರ್ಜುನ ಶೆಲ್ಲಿಕೇರಿ – ಕೆ ಎ ಎಸ್ ಅಧಿಕಾರಿ, ಲೇಖಕರು, ಕವಿಗಳು, ಬಾಗಲಕೋಟೆ
