‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೩)

ಅಣ್ಣ ತಮ್ಮಂದಿರಲ್ಲಿ ನಾನು ನನ್ನದೆಂಬುವ ಯಾವಾಗ ಚಿಗುರೊಡೆಯಿತು. ಆಗ ಆಸ್ತಿಗಾಗಿ ಮನಸ್ತಾಪ ಶುರುವಾಗಿ ಕೋರ್ಟ್ ಮೆಟ್ಟಿಲೇರಿದರು ಅಣ್ಣ ತಮ್ಮಂದಿರು. ಮುಂದೇನಾಯಿತು ವಕೀಲರಾದ ಪ್ರಕಾಶ ವಸ್ತ್ರದ ‘ನ್ಯಾಯದ ಕಣ್ಣು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ”ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ”
ಬೆಲೆ : 200/
ಖರೀದಿಗಾಗಿ : 9448015613

ಮನೆಯ ಕಾಲ್ ಬೆಲ್ಲ್ ಕಿರ್ರ ಕಿರ್ರ ಕರ್ಕಶವಾಗಿ ಹೊಡೆದು ಕೊಳ್ಳಲಾರಂಭಿಸಿತು. ಮನೆಯ ಮುಂಬಾಗಿಲು ತೆಗೆಯಲು ನೆಲ ಮಹಡಿಗೆ ಹೋಗಬೇಕು. ಅವ್ವ ಜೋರಾಗಿ ಕುಶಾಲ ಯಾರು ಬಂದಾರ ನೋಡು, ಬಾಗಿಲ ತೆಗಿ”ಎಂದು ಕೂಗಿದಳು. ಕುಶಾಲ (ಎಲ್ಲ ಹೆಸರು ಬದಲಿಸಲಾಗಿದೆ) ಇನ್ನು ನಿದ್ದೆ ಮಂಪರಿನಲ್ಲಿ ಹಾಸಿಗೆಯಲ್ಲಿ ಊರುಳಾಡುತ್ತಿದ್ದ.”ಅವ್ವಳದು ಇದೆ ರಗಳೆ, ಮಲಗಾಕ ಬಿಡೋದಿಲ್ಲ”ಎಂದು ಗೊಣಗಿ ಕೇಳದ ಹಾಗೆ ಕಣ್ಣು ಮುಚ್ಚಿದ. ಮತ್ತೆ ಬೆಲ್ಲ್ ಕಿರರ್ರ ಕಿರ್ರ ಹೊಡೆಯಿತು. ಶೇವಿಂಗ್ ಮಾಡಿಕೊಳ್ಳುತ್ತಿದ್ದ ಅಪ್ಪ “ವಿಶಾಲ ಬಾಗಿಲು ತೆಗಿ ಯಾರು ಬಂದಾರ ನೋಡು” ಎಂದು ಕೂಗಿದನು. ಕುಶಾಲನ ಜೊತೆ ಒಂದೆ ರೂಮಲ್ಲಿ ಮಲಗುತ್ತಿದ್ದ ವಿಶಾಲ ಅಪ್ಪನ ಮಾತನ್ನು ಕಿವಿಗೆ ಹಾಕಿಕೊಳ್ಳದೆ, ಕುಶಾಲನಿಗೆ ಜೋರಾಗಿ ಒದ್ದು” ನಿನ್ನೆ ನಾನೆ ಬಾಗಿಲು ತೆಗೆದಿದ್ದೆ. ಇವತ್ತು ನೀನೆ ಹೋಗಿ ತೆಗಿ” ಎಂದು ಗೊಣಗಿಕೊಂಡು ಬೇಕಾದರೆ ಕುಶಾಲನೆ ತೆಗೆಯಲಿ ಎಂದು ಅಪ್ಪನ ಕೊಗು ಕೇಳದ ಹಾಗೆ ಸುಮ್ಮನೆ ಮಲಗಿಕೊಂಡನು. ಕೊನೆಗೆ ಅಪ್ಪನೋ ಅವ್ವನೋ ಇಬ್ಬರಲ್ಲಿ ಒಬ್ಬರು ಬೆಲ್ಲ್ ಕಿರ್ರಗುಟ್ಟಿದಾಗ ಬಾಗಿಲು ತೆಗೆಯೋದು ದಿನ ನಿತ್ಯದ ಪ್ರಹಸನ. ಅಣ್ಣ ತಮ್ಮಂದಿರಲ್ಲಿ ದಿನ ನಿತ್ಯ ಸಣ್ಣ ಪುಟ್ಟ ವಿಷಯಕ್ಕೆ ನಿಲ್ಲದ ಪ್ರೀತಿಯ ಕದನ. ಅಣ್ಣ ಕುಶಾಲ ಬೇರೆ ಊರಿಗೆ ಕಾಲೇಜ್ ಶಿಕ್ಷಣಕ್ಕೆ ಹೋದರೆ ತಂದೆ ತಾಯಿಗಿಂತ ಮಿಸ್ಸ್ ಮಾಡಿಕೊಂಡವರು, ಕಣ್ಣೀರು ಹಾಕಿದವರು ಅಣ್ಣ ತಮ್ಮಂದಿರು. ಬಾಲ್ಯದ ಪ್ರೀತಿಯ ಕದನ ದೊಡ್ಡ ವರಾದ ನಂತರದ ಮನಸ್ತಾಪ ಬಂದು ತಲುಪಿದ್ದು ಆಸ್ತಿ ಹಂಚಿಕೆ ವ್ಯಾಜ್ಯಕ್ಕೆ.

ತಂದೆ ಸ್ವತಂತ್ರ ವೃತ್ತಿಯಿಂದ ಮನೆ ಕಟ್ಟಿಸಿದ್ದರು. ಜನ ನಿಬೀಡ ಪ್ರದೇಶದಲ್ಲಿ ಶಾಪಿಂಗ್ ಮಳಿಗೆಯನ್ನು ಕುಶಾಲನ ಹೆಸರಲ್ಲಿ ಖರೀದಿಸಿದ್ದರು. ಕುಶಾಲ ವಿದ್ಯಾಭ್ಯಾಸ ಮುಗಿಸಿ ತನ್ನ ಹೆಸರಿನಲ್ಲಿ ಇರುವ ಶಾಪಿಂಗ್ ಮಳಿಗೆಯಲ್ಲಿ ಬ್ಯುಜಿನೆಸ್ ಪ್ರಾರಂಭಿಸಿದ. ಒಳ್ಳೆಯ ವ್ಯಾಪಾರ ಮಾಡಲಾರಂಭಿಸಿದ. ವಿಶಾಲ ಶಿಕ್ಷಣ ಮುಗಿಸಿ ತಂದೆಯ ವೃತ್ತಿಯಲ್ಲಿ ತೊಡಗಿದ. ಇಬ್ಬರ ಮದುವೆಯಾಯಿತು, ಮಕ್ಕಳಾದವು. ತಂದೆ ತಾಯಿ ಮೃತರಾದರು. ತಂದೆಯ ಹೆಸರಲ್ಲಿದ್ದ ಮನೆಯ ದಾಖಲೆಯಲ್ಲಿ ಕುಶಾಲ ಮತ್ತು ವಿಶಾಲನ ಹೆಸರು ವಾರಸುದಾರರೆಂದು ದಾಖಲಾದಾದವು. ಕುಶಾಲನ ಬ್ಯುಜಿನೆಸ್ ಅಭಿವೃದ್ಧಿ ಹೊಂದಿ ಸುಜ್ಜಿತ ಮನೆ ಕಟ್ಟಿಸಿದ. ತಂದೆ ಕಟ್ಟಿಸಿದ ಮನೆಯಲ್ಲಿ ವಿಶಾಲ ಇರಲಾರಂಭಿಸಿದ. ಕುಶಾಲ ತಾನು ಕಟ್ಟಿಸಿದ ಮನೆಯಲ್ಲಿ ಇರಲಾರಂಭಿಸಿದ. ಅಣ್ಣ ತಮ್ಮಂದಿರು ಯಾವುದೆ ಷರತ್ತು, ಒಡಂಬಡಿಕೆಯಿಲ್ಲದೆ ಬೇರೆಯಾಗಿ ಅನ್ಯೋನ್ಯತೆಯಿಂದ ಜೀವನ ಸಾಗಿಸಿದರು. ಅಣ್ಣ ತಮ್ಮಂದಿರು ತಮ್ಮ ಕಷ್ಟ ಸುಖದಲ್ಲಿ ಒಬ್ಬರಿಗೊಬ್ಬರು ಕೈಜೋಡಿಸುತ್ತಿದ್ದರು. ಹೀಗೆ ಸಂತೋಷ ಸುಖದ ಜೀವನ ಹರುಷಮಯವಾಗಿ ಸಾಗಿತು.

ಜೀವನವೆ ಹೀಗೆ ಇಂದು ಇದ್ದದ್ದು ನಾಳೆ, ಮುಂದೆ ಇದೆ ಇರುವುದಿಲ್ಲ . ಕಾಲ ಆರೋಗ್ಯ, ಬಾಂಧವ್ಯ, ಸಂಬಂಧ, ನಿರೀಕ್ಷೆ, ಆರ್ಥಿಕ ಪರಿಸ್ಥಿತಿ ಎಲ್ಲವನ್ನು ಬದಲಿಸಿ ಬಿಡುತ್ತದೆ. ಬದುಕು ಸಾಗಲು ನಾವು ನಮ್ಮದೆಂಬುದು ಮರೆಯಾಗಿ, ನಾನು ನನ್ನದೆಂಬುವ ಭಾವ ಚಿಗುರಿ ಬಿಡುತ್ತದೆ. ವಿಶಾಲನ ವೃತ್ತಿ ಊಟಕ್ಕೆ ಬಟ್ಟೆಗೆ ಅನ್ನುವಂತೆ ಮುಂದುವರೆಯುತ್ತದೆ. ಮಕ್ಕಳ ಶಿಕ್ಷಣ, ದಿನ ನಿತ್ಯ ಜೀವನಕ್ಕೆ ಅಡಚಣೆ ಆಗುತ್ತದೆ. ಕುಶಾಲನ ವ್ಯಾಪಾರಕ್ಕೆ ದುಪ್ಪಟ್ಟು ಬೆಳೆಯುತ್ತ, ಮತ್ತೆ ಆಸ್ತಿಗಳು ಸೇರ್ಪಡೆಯಾಗಿ ಅಭಿವೃದ್ಧಿ ಪಥದತ್ತ ಸಾಗುತ್ತದೆ. ವಿಶಾಲ ಅಣ್ಣನಿಗೆ ಸಂದರ್ಭ ಬಂದಾಗ ತನ್ನ ಆರ್ಥಿಕ ಪರಿಸ್ಥಿತಿ ತೆರೆದಿಟ್ಟು, ವ್ಯಾಪಾರ ಮಳಿಗೆಯಲ್ಲಿ ಒಂದು ಭಾಗ ತನಗೆ ಕೊಟ್ಟರೆ ಅದರ ಬಾಡಿಗೆಯಿಂದ ತನ್ನ ಕಷ್ಟ ಪರಿಹಾರ ಆಗುತ್ತದೆ ಅನ್ನುವ ಬೇಡಿಕೆ ಇಡುತ್ತಾನೆ. ಮಳಿಗೆ ನನ್ನ ಹೆಸರಿಗೆ ಇದೆ, ನೀನೆ ಮನೆಯಲ್ಲಿ ಅರ್ಧ ಭಾಗ ಕೊಡು ಎಂದು ಪ್ರತಿ ಬೇಡಿಕೆ ಇಡುತ್ತಾನೆ. ಮನಸ್ತಾಪ ಎದ್ದು ನಿಂತು, ಇಬ್ಬರ ನಡುವೆ ವ್ಯಾಜವಾಗಿ ಬಿಡುತ್ತದೆ. ವಿಶಾಲಮನೆ, ವ್ಯಾಪಾರ ಮಳಿಗೆ ಕುಶಾಲನ ಹೆಸರಿನಲ್ಲಿ ಇರುವ ಎಲ್ಲ ಆಸ್ತಿಗಳು ಜಂಟಿ ಕುಟುಂಬದ ಆಸ್ತಿಗಳು ಎಂದು ವಾದಿಸಿ ಪಾಲು ಮತ್ತು ಪ್ರತ್ಯೇಕ ಸ್ವಾಧೀನಕ್ಕೆ ಪ್ರಾರ್ಥಿಸಿ ದಾವೆಯನ್ನು ಸಿವಿಲ್ ಕೋರ್ಟಲ್ಲಿ ಸಲ್ಲಿಸುತ್ತಾನೆ. ಅಣ್ಣ ತಮ್ಮಂದಿರ ನ್ಯಾಯ ಮುಂದುವರೆಯುತ್ತದೆ.

ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆ (ಅಲ್ಟರ ನೇಟಿವ್ ಡಿಸ್ಪೂಟ್ ರಿಜೆಲುಷನ್ ಸಿಸ್ಟಮ್) ಇದೊಂದು ಕಾನೂನು ಪರಿಕಲ್ಪನೆ. ಇತ್ತೀಚಿನ ವರ್ಷದಲ್ಲಿ ಯಶಸ್ವಿಯಾಗಿ ಜನಪ್ರಿಯವಾಗಿದೆ. ನ್ಯಾಯಾಲಯ ಯಾವುದೆ ಪ್ರಕರಣದಲ್ಲಿ ರಾಜಿ ಆಗುವ ಅಂಶ ಕಂಡು ಬಂದರೆ ಉಭಯ ಪಾರ್ಟಿಗಳು ಒಪ್ಪಿದರೆ ಅದನ್ನು ಲೋಕ್ ಅದಾಲತ, ಮಧ್ಯಸ್ತಿ ಕೇಂದ್ರ, ಇತರೆ ಪರ್ಯಾಯ ವ್ಯವಸ್ಥೆಗೆ ಶಿಫಾರಸ್ಸು ಮಾಡುತ್ತಾರೆ. ಈ ಪ್ರಕರಣವನ್ನು ಮಧ್ಯಸ್ತಿಕೆ ಕೇಂದ್ರಕ್ಕೆ ಶಿಫಾರಸು ಮಾಡಿದರು. ಮಧ್ಯಸ್ತಿಕೆದಾರ ಎಂದು ನಿಯುಕ್ತಗೊಂಡ ನನ್ನ ಮುಂದೆ ಪ್ರಕರಣ ಬಂದಿತು. ಅಣ್ಣ ತಮ್ಮಂದಿರನ್ನು ಬೇರೆ ಬೇರೆಯಾಗಿ, ಒಟ್ಟಾಗಿ ಅವರ ವಕೀಲರ, ಹಿರಿಯರ ಸಮಕ್ಷಮ ಸಮಾಲೋಚನೆ, ಸಂಧಾನ ಮಾಡಿದೆ. ಅವರಿಬ್ಬರ ಬಾಲ್ಯ, ಯವ್ವನದ, ತಂದೆ ತಾಯಿಯ ಶ್ರಮ ನೆನಪಿಸಿದೆ. ಮನಸ್ತಾಪ ವ್ಯಾಜ್ಯವಾಗಿ ಮುಂದಿನ ಪೀಳಿಗೆಗೆ ಮುಂದುವರೆಯಬಾರದು ಎಂದು ನೆನಪಿಸಿ ಎಚ್ಚರಿಸಿದೆ. ಮನಸು ಪರಿವರ್ತನೆ ಆಯಿತು.

ಮಧ್ಯಸ್ತಿಕೆ ಸಫಲವಾಯಿತು. ಅಣ್ಣ ಕುಶಾಲ ತಂದೆಯ ಮನೆಯನ್ನು ಪೂರ್ತಿ ವಿಶಾಲಾನಿಗೆ ಬಿಟ್ಟುಕೊಟ್ಟ. ಮಳಿಗೆ, ಕುಶಾಲಗಳಿಸಿದ ಸ್ವಂತ ಆಸ್ತಿಯೆಂದು ವಿಶಾಲ ಒಪ್ಪಿ ಕೊಂಡ. ಅಣ್ಣ ತಮ್ಮಂದಿರು ಅಪ್ಪಿಕೊಂಡರು. ಅಣ್ಣ ತಮ್ಮಂದಿರ ಬಾಂಧವ್ಯ ಮೊದಲಿನಂತೆ ಸ್ಥಾಪಿತವಾಯಿತು. ಮನಸು ಒಂದಾದವು, ಹಣ ಸಮಯ ಉಳಿಯಿತು. ಮನಸು ಒಂದು ಗೂಡಿಸಿದ, ವ್ಯಾಜ್ಯ ಅಂತ್ಯಗೊಳಿಸಿದ ಭಾವ ನನ್ನಲ್ಲಿ ಚಿರಸ್ತಾಯಿ ಆಯಿತು.

‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :


  • ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW