‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೪)

ಬಿಕಾಂ ಡಿಗ್ರಿ ಮುಗಿಸಿ ನಿರುದ್ಯೋಗಿಯಾಗಿ ಅಲೆಯುತಿದ್ದ ಸಿದ್ದೇಶನನ್ನು (ಹೆಸರು ಬದಲಿಸಿದೆ) ತಾಯಿ ಕರೆದುಕೊಂಡು ಹೋಗಿ ಆಡಳಿತ ಮಂಡಳಿಗೆ ಕೈ ಮುಗಿದು ಸಣ್ಣ ನೌಕರಿ ಕೊಡಿಸಿದಳು. ಅಟೆಂಡರ್ ಹುದ್ದೆ ಪ್ರಾರಂಭವಾಗಿ ಕಿರಿಯ ಸಹಾಯಕ ಹುದ್ದೆಗೆ ಬಡತಿ ಪಡೆದ. ಗಂಡ, ಹೆಂಡತಿ, ತಾಯಿ ಇಬ್ಬರು ಮಕ್ಕಳು ಸುಖಿ ಕುಟುಂಬವಾಗಿತ್ತು. ಅವನಿಗೆ ಶ್ರೀಮಂತನಾಗಬೇಕು ಅನ್ನುವ ದುರಾಸೆ ಶುರುವಾಯಿತು. ಮುಂದೇನಾಯಿತು ವಕೀಲರಾದ ಪ್ರಕಾಶ ವಸ್ತ್ರದ ‘ನ್ಯಾಯದ ಕಣ್ಣು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ‘ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ’
ಬೆಲೆ : 200/
ಖರೀದಿಗಾಗಿ : 9448015613

ಅದು ಹಳ್ಳಿಯು ಅಲ್ಲದ ಪಟ್ಟಣವೂ ಅಲ್ಲದ ಊರು. ಊರಿನ ಜನರು ಕಷ್ಟ ಪಟ್ಟು ಶೇರ್ ಹಣ ಕೂಡಿಸಿ ಬ್ಯಾಂಕ್ ಒಂದನ್ನು ಸ್ಥಾಪಿಸಿದರು. ನಮ್ಮ ಊರಿನ ಬ್ಯಾಂಕ ಅನ್ನುವ ನಂಬಿಕೆ ಜನರಿಗೆ. ಕಷ್ಟಪಟ್ಟು ಉಳಿಸಿದ ಹಣ ಉಳಿತಾಯ ಖಾತೆ, ಫಿಕ್ಸ್ಡ್ ಡೆಪಾಸಿಟ್ ಖಾತೆಯಲ್ಲಿ ಸುರಕ್ಷಿತವಾಗಿ ಇರುತ್ತದೆ ಅನ್ನುವ ಭರವಸೆ. ಜನ ಸಾಮಾನ್ಯರಿಗೆ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ತಮಗೆ ಬೇಕಾದಾಗ ಅನುಕೂಲಕ್ಕೆ ಸುಲಭವಾಗಿ ಸಾಲ ಸಿಗುತ್ತದೆ ಅನ್ನುವ ವಿಶ್ವಾಸ. ಹಣದ ವಹಿವಾಟು ಸಮೃದ್ಧವಾಗಿ ಬೆಳೆಯಿತು. ಊರಿನ ಯುವಕರಿಗೆ ಉದ್ಯೋಗ ಅವಕಾಶ ನೀಡಿದರು.

ಬಿಕಾಂ ಡಿಗ್ರಿ ಮುಗಿಸಿ ನಿರುದ್ಯೋಗಿಯಾಗಿ ಅಲೆಯುತಿದ್ದ ಸಿದ್ದೇಶನನ್ನು (ಹೆಸರು ಬದಲಿಸಿದೆ) ತಾಯಿ ಕರೆದುಕೊಂಡು ಹೋಗಿ ಆಡಳಿತ ಮಂಡಳಿಗೆ ಕೈ ಮುಗಿದು ವಿನಂತಿಸಿ ಸಣ್ಣ ನೌಕರಿ ಕೊಡಿಸಿದಳು. ಅಟೆಂಡರ್ ಹುದ್ದೆ ಪ್ರಾರಂಭವಾಗಿ ಕಿರಿಯ ಸಹಾಯಕ ಹುದ್ದೆಗೆ ಬಡತಿ ಹೊಂದಿದ. ಗಂಡ, ಹೆಂಡತಿ, ತಾಯಿ ಇಬ್ಬರು ಮಕ್ಕಳು ಸುಖಿ ಕುಟುಂಬ. ಸಹವಾಸ ದೋಷದಿಂದ ಅನ್ನುವುದಕ್ಕಿಂತ ಶ್ರೀಮಂತನಾಗಬೇಕು ಅನ್ನುವ ಅತಿಯಾಸೆಗೆ ಬಲಿಯಾದ. ಚಟಗಳಿಗೆ ಅಂಟಿಕೊಂಡನು. ತಾಯಿ ಕೊರಗಿ ಮೃತಳಾದಳು. ಹೆಂಡತಿ ಇವನನ್ನು ಸಹಿಸಿಕೊಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದಳು.

ಹೀಗಿರುವಾಗ ಒಂದು ದಿನ ಸಿದ್ದೇಶ ಜೋಲು ಮುಖ ಹಾಕಿಕೊಂಡು ಮನೆಗೆ ಬಂದನು. ಹೆಂಡತಿ ವಿಚಾರಿಸಲಾಗಿ ತಾನು ಬ್ಯಾಂಕಲ್ಲಿ ಹಣ ದುರುಪಯೋಗ ಪಡಿಸಿದ್ದು ನಾಳೆಯಿಂದ ನೌಕರಿಗೆ ಬರದಂತೆ ಸಸ್ಪೆಂಡ್ ಮಾಡಿದ್ದಾರೆ. ತಾನು ಈಗಾಗಲೇ 2 ಲಕ್ಷ ಹಣ ಬ್ಯಾಂಕಿಗೆ ತುಂಬಿರುವೆ. ಇನ್ನೂ 1 ಲಕ್ಷ ಹಣ ತುಂಬ ಬೇಕಿದೆ ಎಂದು ತಿಳಿಸಿದ. ಹೆಂಡತಿ ತನ್ನ ಅಣ್ಣನ ಕಡೆಯಿಂದ ಹಣ ಪಡೆದು ಬ್ಯಾಂಕಿಗೆ ತುಂಬಿ ಮತ್ತೆ ನೌಕರಿಯಲ್ಲಿ ಮುಂದುವರೆಯುವಂತೆ ವ್ಯವಸ್ಥೆ ಮಾಡಿದಳು. ಹೀಗೆ ಒಂದು ವರ್ಷ ಗತಿಸಿದವು. ಬ್ಯಾಂಕ ಲೆಕ್ಕ ಪತ್ರ ಆಡಿಟ್ ಆಯಿತು. ಆಡಿಟ್ ಅಧಿಕಾರಿ ಸಿದ್ದೇಶ ಹಣ ದುರುಪಯೋಗ ಪಡಿಸಿಕೊಂಡು ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡಿದ್ದಾನೆ. ಹಣ ತುಂಬಿದರೂ ಅಪರಾಧ ಅಪರಾಧವೆ, ಆತನ ಮೇಲೆ ಕ್ರಿಮಿನಲ್ ಕಂಪ್ಲೇಂಟ್ ದಾಖಲಿಸುವಂತೆ ಆದೇಶಿಸಿದರು. ಬ್ಯಾಂಕ್ ಮ್ಯಾನೇಜರ್ ಅನಿವಾರ್ಯವಾಗಿ ಸಿದ್ದೇಶನ ಮೇಲೆ ಹಣ ದುರುಪಯೋಗ ಪಡಿಸಿ, ವಿಶ್ವಾಸ ದ್ರೋಹ ಎಸಗಿರುತ್ತಾನೆ. ಆಯ್ ಪಿ ಸಿ ಕಲಂ 408 ಅಡಿಯಲ್ಲಿ ಅಪರಾಧ ಮಾಡಿದ್ದು ಶಿಕ್ಷೆ ಆಗುವಂತೆ ಕ್ರಮ ಕೈಕೊಳ್ಳಲು ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ದಾಖಲಿಸಿದನು. ಮ್ಯಾನೇಜರ್ ಕೂಡಲೆ ಸಿದ್ದೇಶನನ್ನು ನೌಕರಿಯಿಂದ ಸಸ್ಪೆಂಡ್ ಮಾಡಿದನು. ತನಿಖಾಧಿಕಾರಿ, ತನಿಖೆ ಪೊರೈಸಿ, ಕೋರ್ಟಿಗೆ ಚಾರ್ಜಶೀಟ್ ಸಲ್ಲಿಸಿದನು.

ನ್ಯಾಯಾಲಯದಿಂದ ಆರೋಪಿ ಸಿದ್ದೇಶನಿಗೆ ಸಮನ್ಸ್ ಜಾರಿ ಆಯಿತು. ವಕಾಲತ್ತ ಪತ್ರ ಸಲ್ಲಿಸಿ ಜಾಮೀನು ಆದೇಶ ಪಡೆದುಕೊಂಡೆನು. ಚಾರ್ಜ್ ಶೀಟದಲ್ಲಿ, ಆರೋಪಿ ಸಿದ್ದೇಶ ಬ್ಯಾಂಕಲ್ಲಿ ಕಿರಿಯ ಸಹಾಯಕ ಎಂದು ಸೇವೆ ಸಲ್ಲಿಸುತ್ತಿದ್ದನು. ಬ್ಯಾಂಕ್ ಹಣವನ್ನು ರಾಷ್ಟ್ರೀಕೃತ ಬ್ಯಾಂಕಲ್ಲಿ ತುಂಬುವ ಕೆಲಸವನ್ನು ವಹಿಸಲಾಗಿತ್ತು. ದಿ 5 ರಂದು1 ಲಕ್ಷ ಹಣವನ್ನು ಬ್ಯಾಂಕನಿಂದ ಪಡೆದು ಅದನ್ನು ರಾ.ಬ್ಯಾಂಕಗೆ ತುಂಬದೆ ನಕಲಿ 1 ಲಕ್ಷ ಹಣದ ಕೌಂಟರ್ ಫಾಯ್ಲ್ ಸೃಷ್ಟಿಸಿದನು. ದಿ 10 ರಂದು ಬ್ಯಾಂಕನಿಂದ 2 ಲಕ್ಷ ಹಣ ಪಡೆದು 1 ಲಕ್ಷ ರಾ. ಬ್ಯಾಂಕಗೆ ತುಂಬಿ 2 ಲಕ್ಷದ ನಕಲಿ ಕೌಂಟರ್ ಫಾಯ್ಲ್ ಸೃಷ್ಟಿಸಿದನು. ದಿ 25 ರಂದು ಬ್ಯಾಂಕನಿಂದ 1.5 ಲಕ್ಷ ಪಡೆದುಕೊಂಡು ರಾ.ಬ್ಯಾಂಕಿಗೆ ತುಂಬದೆ ನಕಲಿ 1 ಲಕ್ಷದ ಕೌಂಟರ್ ಫಾಯ್ಲ್ ಸೃಷ್ಟಿಸಿದ. ಹೀಗೆ ಒಟ್ಟು 3 ಲಕ್ಷ ಹಣವನ್ನು ದುರುಪಯೋಗ ಪಡಿಸಿಕೊಂಡು ವಿಶ್ವಾಸದ್ರೋಹ ಎಸಗಿರುತ್ತಾನೆ ಎನ್ನುವ ಆರೋಪ ಮಾಡಿದ್ದರು.

ನ್ಯಾಯಾಲಯವು ಆತನ ಮೇಲೆ ಆರೋಪಗಳನ್ನು ರೂಪಿಸಿತು ( ಫ್ರೆಮ್ಡ್ ಚಾರ್ಜಸ್). ಆರೋಪಿಗೆ ಮೇಲೆ ಯಾವ ಆರೋಪವನ್ನು ಆರೋಪಿಸಲ್ಪಟ್ಟಿದೆ. ಅದನ್ನು ಅವನು ಒಪ್ಪಿಕೊಳ್ಳುವನೋ? ಇಲ್ಲವೆ ವಿಚಾರಣೆಗೆ ಒಳಪಡುವನೋ? ಅನ್ನುವ ವಿಚಾರಣೆ ಪ್ರಕ್ರಿಯೆ. ಆರೋಪಿಗೆ, ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕಗೆ ಹಣ ತುಂಬುವ ಕೆಲಸ ನಿಯಮಾವಳಿಯಂತೆ ನಿರ್ವ ಹಿಸಿರಲಿಲ್ಲ. ಕೌಂಟರ್ ಫಾಯ್ಲ್ ಆರೋಪಿ ಸೃಷ್ಟಿಸಿಲ್ಲ, ತಾಂತ್ರಿಕ ಪರೀಕ್ಷೆ ಆಗಿಲ್ಲ. ಪೂರ್ತಿ ಹಣ ಆರೋಪಿ ಬ್ಯಾಂಕಿಗೆ ತುಂಬಿರುತ್ತಾನೆ. ಇದು ಆರೋಪಿ ಪರ ಪ್ರತಿರೋಧದ ಅಂಶಗಳು.

ಫಿರ್ಯಾದಿ ಪರ ಅಸಿಸ್ಟೆಂಟ್ ಪಬ್ಲಿಕ್ ಪ್ರೋಸಿ ಕ್ಯುಟ ರ್ ಸಾಕ್ಸಿದಾರನ್ನು ವಿಚಾರಣೆಗೆ ಒಳಪಡಿಸಿದರು.ಸಾ ಕ್ಷಿದಾರರು ಪಾಟಿ ಸವಾಲಿಗೆ ಒಳಪಟ್ಟರು. ವಾದ ಪ್ರತಿ ವಾದ ಮಂಡಿಸಲ್ಪಟ್ಟವು. ಅಂತಿಮವಾಗಿ ಕೋರ್ಟ್ ಆರೋಪಿಯನ್ನು ತಪ್ಪಿಸ್ತ ಎಂದು ಘೋಷಿಸಿ,ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿತು.ಸಿದ್ದೇಶ ಪೂರ್ತಿ ಹಣ ಬ್ಯಾಂಕಿಗೆತುಂಬಿದ್ದರೂ ಮಾಡಿದ್ದು ಹ ಣ ದುರ್ಭಳಕೆ, ವಿಶ್ವಾಸದ್ರೋಹ ಎಂದು ಅಭಿಪ್ರಾಯ ಪಟ್ಟಿತು. ಈ ಹಂತದಲ್ಲಿ ಆರೋಪಿ ಸಿದ್ದೇಶನ ಆರೋಗ್ಯವು ಹದಗೆಟ್ಟಿತ್ತು.

ತೀರ್ಪಿನ ಮೇಲೆ ಸಿದ್ದೇಶ ಮೆಲ್ಮನವಿಯನ್ನು ಸಲ್ಲಿಸಿದನು. ಮೆಲ್ಮನವಿ ನ್ಯಾಯಾಲಯ ಕೆಳ ನ್ಯಾಯಾಲಯದ ಶಿಕ್ಷೆ ತೀರ್ಪನ್ನು ಎತ್ತಿ  ಹಿಡಿದು ಮೇಲನ್ಮನವಿಯನ್ನು ವಜಾಗೋಳಿಸಿತು. ಈ ಪ್ರಕ್ರಿಯೆಗೆ ಹಲವು ವರ್ಷಗಳು ಗತಿಸಿದವು.

ಇಷ್ಟು ಕ್ರಿಮಿನಲ್ ವಿಚಾರಣೆ ನಡೆಯುವಷ್ಟರಲ್ಲಿ ಸಿದ್ದೇಶನ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿತು. ನ್ಯಾಯಾಲಯ ಶಿಕ್ಷೆ ವಾರಂಟ್ ಹೊರಡಿಸಿ ಸಿದ್ದೇಶನನ್ನು ಬಂಧಿಸಲು ಆದೇಶಿಸಿತು. ಆದರೆ ಸಿದ್ದೇಶ ಈ ಲೋಕವನ್ನೇ ತೊರೆದು ಹೋಗಿ ಬಿಟ್ಟಿದ್ದನು.

‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :


  • ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW