ಗಿರೀಶ, ಚಿದಾನಂದನ ಮನೆಗೆ ಅಡ್ಡಾಡಿ ಚಪ್ಪಲಿ ಸವೆದವು. ಕೊನೆಗೆ ಹತ್ತು ಲಕ್ಷ ಹಣದ ಚೆಕ್ಕ್ ನೀಡಿದನು. ಮುಂದೇನಾಯಿತು ವಕೀಲರಾದ ಪ್ರಕಾಶ ವಸ್ತ್ರದ ‘ನ್ಯಾಯದ ಕಣ್ಣು’ ಅಂಕಣದಲ್ಲಿ ‘ಸ್ಟಾಪ್ ಪೇಮೆಂಟ್ ಮಾಡಿಸಿದ್ದರೂ ಚೆಕ್ಕ್ ಬೌನ್ಸ್’ ತಪ್ಪದೆ ಮುಂದೆ ಓದಿ…
ಪುಸ್ತಕ : ‘ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ’
ಬೆಲೆ : 200/
ಖರೀದಿಗಾಗಿ : 9448015613
” ನಾನು ಬಿ ಕಾಂ ಪದವೀಧರ. ಕೋರ್ಟ್ ಜಾಮೀನು ಪಡೆದಿದ್ದೇನೆ. ಕೋರ್ಟನಿಂದ ಬಂದ ಸುಮನ್ಸ್ ಪಡೆದಿರುವೆ. ನ್ಯಾಯಾಲಯಕ್ಕೆ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿರುವೆ. ನೀವು ತೋರಿಸುತ್ತಿರುವ ಈ ಎಲ್ಲ ಕಾಗದ ಪತ್ರದ ಮೇಲೆ ಇರುವ ಸಹಿಗಳನ್ನು ನಾನೆ ಮಾಡಿರುವೆ. ನಾನು ಯಾವುದೆ ಪತ್ರಕ್ಕೆ ಸಹಿ ಮಾಡಬೇಕೆಂದರೆ, ಎಲ್ಲವನ್ನು ಓದಿ ಅರ್ಥೈಸಿ, ತಿಳಿದುಕೊಂಡು ಸಹಿ ಮಾಡುತ್ತೇನೆ. ಫಿರ್ಯಾದಿದಾರ ನನಗೆ ಪರಿಚಯದವನು. ಈಗ ನೀವು ತೋರಿಸುತ್ತಿರುವ ಹ್ಯಾಂಡ್ ಲೋನ್ ಚಿಟ್ (ಕೈಗಡ ಪತ್ರ), ಚೆಕ್ಕ್ ಮೇಲಿರುವ ಸಹಿ ನನ್ನ ಸಹಿಯಂತೆ ಕಾಣುತ್ತವೆ (ಜಾಣತನದಿಂದ ನುಣು ಚಿಕೊಳ್ಳುವ ಉತ್ತರ). ಹ್ಯಾಂಡ್ ಲೋನ್ ಪತ್ರದ ತಾರೀಕಿನ ನಂತರ ಸ್ಟಾಪ್ ಪೇಮೆಂಟ್ ಮಾಡಲು ಅರ್ಜಿ ನೀಡಿದ್ದೇನೆ. ಅಂದರೆ ಸರಿ. ಸ್ಟಾಪ್ ಪೇಮೆಂಟ್ ಅರ್ಜಿ ಕೊಟ್ಟ ದಿನಾಂಕದ ನಂತರ ಚೆಕ್ಕ್ ಕೊಟ್ಟಿದ್ದೀರಿ ಅಂದರೆ ಸುಳ್ಳು. ಸಹಿ ಮಾಡಿ ಇಟ್ಟಿಚೆಕ್ಕ್ ಕಳೆದಿದೆ ಎಂದು ಪಿರ್ಯಾದಿ ಕೊಟ್ಟಿದ್ದೀರಾ ಅನ್ನುವ ಪ್ರಶ್ನೆಗೆ ಇಲ್ಲ ಅನ್ನುವ ಉತ್ತರ. ಚೆಕ್ಕ್ ಮೇಲೆ ಇರುವ ಸಹಿ ನನ್ನದು ಹೌದೋ ಅಲ್ಲೋ ಅನ್ನುವ ಉತ್ತರ ಸರಿಯೋ?. ನೀವು ಸಹಿ ಮಾಡಿ ಇಟ್ಟ ಚೆಕ್ಕ್ ಕಳೆದಿದೆ ಅನ್ನುವ ಉತ್ತರ ಸರಿಯೋ? ಪ್ರಶ್ನೆಗೆ ಆರೋಪಿ ಯಾವುದೆ ಉತ್ತರ ಕೊಡದೆ ಸುಮ್ಮನೆ ನಿಂತಿರುತ್ತಾನೆ”. ಹೀಗೆ ಆರೋಪಿಯು ಪಾಟಿ ಸವಾಲಿನ ಪ್ರಶ್ನೆಗಳಿಗೆ ಒಂದೊಕ್ಕೊಂದು ತಾಳೆಯಾಗದ ಉತ್ತರ ನೀಡುತ್ತಲಿದ್ದನು.
ನ್ಯಾಯಾಧೀಶರು ತಾಳ್ಮೆಯಿಂದ ಅವನ ಹಾವಭಾವವನ್ನು ವೀಕ್ಷಿಸುತ್ತ ಕೇಳುವ ಪ್ರಶ್ನೆಗೆ ಕೊಡುವ ಉತ್ತರಗಳನ್ನು ಟೈಪಿಸ್ಟ್ ಗೆ ಹೇಳಿ ಬರೆಸುತ್ತಿದ್ದರು.
ಇದೊಂದು ನೆಗೊಶಿಬಲ್ ಇನಸ್ಟ್ರುಮೆಂಟ್ ಆಕ್ಟ್ (ಎನ್ ಆಯ್ ಆಕ್ಟ್ ) ಅಡಿಯಲ್ಲಿ ಅಪರಾಧದ ಕೇಸು. ಫಿರ್ಯಾದಿದಾರನು. ಆರೋಪಿಯು ಎನ್ ಆಯ್ ಆಕ್ಟ್ ಅಡಿಯಲ್ಲಿ ಅಪರಾಧ ಮಾಡಿದ್ದು ಅವನಿಗೆ ಶಿಕ್ಷೆ ವಿಧಿಸಬೇಕು ಮತ್ತು ಚೆಕ್ಕ್ ಹಣ ರೂ 10 ಲಕ್ಷಕ್ಕೆ ದ್ವಿಗುಣ ಹಣವನ್ನು ತನಗೆ ಕೊಡಿಸುವಂತೆ ಪ್ರಾರ್ಥಿಸಿಕೊಂಡು ಮ್ಯಾಜಿಸ್ಟ್ರೇಟ್ ಕೋರ್ಟಲ್ಲಿ ಪ್ರೈವೇಟ್ ಕಂಪ್ಲೇಂಟ್ ದಾಖಲಿಸಿದ್ದನು. ನ್ಯಾಯಾಲಯವು, ಫಿರ್ಯಾದಿದಾರ ಚೆಕ್ಕ್ ದಿನಾಂಕದ ಮೂರು ತಿಂಗಳಲ್ಲಿ ನಗದಿಕರಣಕ್ಕೆ (ಎನಕ್ಯಾಷಮೆಂಟ್ ) ತನ್ನ ಬ್ಯಾಂಕ್ ಅಕೌಂಟಗೆ ಹಾಜರು ಪಡಿಸಿದ್ದಾನೆಯೆ?, ಸುಸಂಬದ್ದವಾಗಿ ಚೆಕ್ಕ ಡಿಸ್ಸಆನರ್(ಅಮಾನ್ಯ ) ಆಗಿದೆಯೋ?. ಬೌನ್ಸ್ ಆದ ಒಂದು ತಿಂಗಳಲ್ಲಿ ಪಿರ್ಯಾದಿ ಆರೋಪಿಗೆ ನೋಟಿಸು ನೀಡಿದ್ದಾನೆಯೆ?. ನೋಟಿಸು ಜಾರಿ ಆದ ಹದಿನೈದು ದಿನದ ಅವಧಿ ಮುಗಿದ ಒಂದು ತಿಂಗಳೊಳಗೆ ಕಂಪ್ಲೇಂಟ್ ದಾಖಲಿಸಿದ್ದಾನೆಯೆ?. ಈ ಎಲ್ಲ ಪ್ರಾರ್ಥಮಿಕ, ತಾಂತ್ರಿಕ ಅಂಶಗಳನ್ನು ಗಮನಿಸಿ, ಗಣನೆಗೆ ತೆಗೆದುಕೊಂಡು (ಕಾಗ್ನಿಝ ನ್ಸ್), ಫಿರ್ಯಾದಾರನಿಂದ ಸ್ವ ಹೇಳಿಕೆ ಪಡೆದು, ಆರೋಪಿತನ ಮೇಲೆ ವಿಚಾರಣೆ ಮಾಡುವುದು ಸೂಕ್ತ ಅನ್ನುವ ವಿವೇಚಣೆಗೆ ಬಂದು ನಂತರ ಆರೋಪಿಗೆ ವಿಚಾರಣೆಗೆ ಒಳಪಡಲು ಕೋರ್ಟ್ ಸುಮನ್ಸ್ ಆದೇಶ ಮಾಡಿತು. ಇದಿಷ್ಟು ಎನ್ ಆಯ್ ಆಕ್ಟ್ ಅಡಿಯಲ್ಲಿ ಪ್ರಾರ್ಥಮಿಕ ವಿಚಾರಣೆ ಪ್ರಕ್ರಿಯೆ.
ಆರೋಪಿ ಚಿದಾನಂದ ಮತ್ತು ಫಿರ್ಯಾದಿದಾರ ಗಿರೀಶ ( ಹೆಸರು ಬದಲಿಸಿದೆ ) ಆತ್ಮೀಯ ಗೆಳೆಯರು, ಪರಿಚಯಸ್ಥರು. ಗಿರೀಶ ಸಾಕಷ್ಟು ಅನುಕೂಲಸ್ಥ ಕುಟುಂಬದವನು. ಚಿದಾನಂದ ಬಟ್ಟೆ ವ್ಯಾಪಾರ ಮಾಡುತ್ತಿದ್ದನು. ವ್ಯಾಪಾರದಲ್ಲಿ ಏರುಪೇರಾಗಿ ಹಣದ ಅಡಚಣೆ ಆಯಿತು. ಬ್ಯಾಂಕ್ ಇತರೆ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕೆ ಬೇಡಿಕೆ ಇಟ್ಟನು. ನೂರೆಂಟು ಕಂಡೀಶನ್ ಪೋರೈಸಲು ಆಗಲಿಲ್ಲ. ಕೊನೆಗೆ ಅನಿವಾರ್ಯವಾಗಿ ಸಂಕೋಚದಿಂದ ಗಿರೀಶನ ಮನೆಯ ಬಾಗಿಲು ತಟ್ಟಿದ. ಗಿರೀಶ ಬಡ್ಡಿ ವ್ಯವಹಾರ ಮಾಡುತ್ತಿರಲಿಲ್ಲ. ಇಬ್ಬರ ಗೆಳೆತನ ಮೀರಿ ಹಣದ ವಿಷಯಕ್ಕೆ ಮುಟ್ಟಿರಲಿಲ್ಲ. ಹಲವಾರು ಸ್ನೇಹಿತರಿಗೆ, ಸಂಬಂಧಿಗಳಿಗೆ ಹಣ ಸಹಾಯ ಮಾಡಿ, ಸ್ನೇಹ ಸಂಬಂಧ, ಹಣ ಕಳೆದುಕೊಂಡಿದ್ದನು. ಹೀಗೇಂದು ಸ್ನೇಹಿತನಿಗೆ ಒಮ್ಮೆಲೆ ಇಲ್ಲವೆನ್ನಲು ಆಗಲಿಲ್ಲ. ಮರುದಿವಸ ಬರಲು ತಿಳಿಸಿದನು. ಮರುದಿನ ಬಂದ ಸ್ನೇಹಿತನಿಗೆ ಹತ್ತು ಲಕ್ಷ ಹಣ ಸಣ್ಣದಲ್ಲ. ಸ್ನೇಹ ಸ್ನೇಹವಾಗಿ ಉಳಿಯಬೇಕು. ಅದಕ್ಕೆ ಬಾಂಡ್ ಪೇಪರಲ್ಲಿ ಹ್ಯಾಂಡ್ ಲೋನ್ ಪತ್ರ ಬರೆದು ಕೊಟ್ಟು, ಆರು ತಿಂಗಳಲ್ಲಿ ಹಣ ಮರಳಿ ನೀಡಬೇಕು ಎಂಬ ಷರತ್ತು ವಿಧಿಸಿದ. ಎಲ್ಲದಕ್ಕೂ ಸೈ ಎಂದು ಹತ್ತು ಲಕ್ಷ ಹಣ ಪಡೆದನು. ಆರು ತಿಂಗಳು ಕಳೆದರು ಹಣ ಮರಳಿ ನೀಡಲಿಲ್ಲ. ಗಿರೀಶ, ಚಿದಾನಂದನ ಮನೆಗೆ ಅಡ್ಡಾಡಿ ಚಪ್ಪಲಿ ಸವೆದವು. ಕೊನೆಗೆ ಹತ್ತು ಲಕ್ಷ ಹಣದ ಚೆಕ್ಕ್ ನೀಡಿದನು. ಗಿರೀಶ ಚೆಕ್ಕನ್ನು ನಗದಿಕಾರಣಕ್ಕಾಗಿ ತನ್ನ ಅಕೌಂಟ್ ಇರುವ ಬ್ಯಾಂಕಗೆ ಹಾಜರ ಪಡಿಸಿದ. ಆದರೆ ಚಿದಾನಂದನ ಅಕೌಂಟ್ ಬ್ಯಾಂಕನವರು, ಸ್ಟಾಪ್ ಪೇಮೆಂಟ್ ಕಾರಣ ಮೆಮೊ ನೀಡಿ ಚೆಕ್ಕ್ ಹಿಂದಿರುಗಿಸಿದರು.
ಗಿರೀಶ ಕಾನೂನು ಹೋರಾಟಕ್ಕೆ ಸಜ್ಜಾದನು. ವಕೀಲರ ಮೂಲಕ ನೋಟಿಸ್ ನೀಡಿದನು. ನೋಟಿಸ್ ಸ್ವೀಕರಿಸಿ ಉತ್ತರಿಸಲಿಲ್ಲ. ಅನಿವಾರ್ಯವಾಗಿ ಮ್ಯಾಜಿಸ್ಟ್ರೇಟ್ ಕೋರ್ಟಲ್ಲಿ ಪ್ರೈವೇಟ್ ಕಂಪ್ಲೇಂಟ್ ದಾಖಲಿಸಿದನು. ಚಿದಾನಂದ ಕೋರ್ಟಿಗೆ ಹಾಜರಾಗಿ ಬೇಲ ಪಡೆದನು. ಆರೋಪ ನಿರಾಕರಿಸಿ, ವಿಚಾರಣೆ ಎದುರಿಸುವುದಾಗಿ ಹೇಳಿಕೆ ನೀಡಿದನು. ವಿಚಾರಣೆ ಶುರುವಾಯಿತು. ಫಿರ್ಯಾ ದಿದಾರ, ಹ್ಯಾಂಡ್ ಲೋನ್ ಚಿಟ್, ಚೆಕ್ಕ್ ಗುರುತಿಸಿ, ತನ್ನ ಸಾಕ್ಷಿದಾರರ ಮುಖ್ಯ ವಿಚಾರಣೆ ಪ್ರಮಾಣಪತ್ರ ಹಾಜರು ಪಡಿಸಿದ. ಆರೋಪಿ ಪರ ವಕೀಲರು ಪಾಟಿ ಸವಾಲು ಮಾಡಿದರು. ಆದರೆ ಆರೋಪಿಗೆ ಅನುಕೂಲಕರ ವಾದ ಅಂಶ ದೊರಕಲಿಲ್ಲ. ಆರೋಪಿ ತನ್ನ ಪರವಾಗಿ ಸಾಕ್ಷಿ ಹೇಳಿಕೆ ನೀಡಿದ. ಪಾಟಿ ಸವಾಲಿನಲ್ಲಿ ಅವನ ಬಣ್ಣ ಬಯಲಾಯಿತು.ನಿಜ ಹೊರಬಂದಿತು.
ನ್ಯಾಯಾಲಯ ಆರೋಪತನಿಗೆ ಶಿಕ್ಷೆ ನೀಡಿ ತೀರ್ಪು ನೀಡಿ,ಆರೋಪಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು, ಹ್ಯಾಂಡ್ ಲೋನ್ ಚಿಟ್ ಬರೆದುಕೊಟ್ಟಿಲ್ಲ. ಚೆಕ್ಕ್ ನೀಡಿಲ್ಲ ಎಂದು ವಾದಿಸಿದ್ದಾನೆ. ಉದ್ದೇಶ ಪೂರ್ವಕವಾಗಿ ಚೆ ಕ್ಕ್ ಕಳೆದಿದೆ ಎಂದು ಚೆಕ್ಕ್ ಕೊಟ್ಟ ನಂತರ ಅಕೌಂಟ್ ಸ್ಟಾಪ್ ಪೇಮೆಂಟ್ ಮಾಡಿಸಿದ್ದಾನೆ. ಆರೋಪಿ ಹಣ ಪಡೆದು ಮರಳಿ ಕೊಡುವ ಕಾನೂನು ಬದ್ದ ಹೊಣೆಗಾರಿಕೆ ಇದೆ ಎಂದು ಪಿರ್ಯಾದಿ ರುಜುವಾತು ಪಡಿಸಿದ್ದಾನೆ ಎಂದು ಅಭಿಪ್ರಾಯ ಪಟ್ಟಿತು.
‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೨)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೩)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೪)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೫)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೬)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೭)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೮)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೯)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೦)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೧)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೨)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೩)
- ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ.
