ನ್ಯಾಯಾಲಯಕ್ಕೆ ಪ್ರಕರಣದ ಆಸ್ತಿಗಳ ಬಗ್ಗೆ ನ್ಯಾಯ ನಿರ್ಣಯ ಮಾಡುವ ನ್ಯಾಯಾಧಿಕಾರ ಇರುವುದೋ ಇಲ್ಲವೋ ಅನ್ನುವುವುದು ಕೇಸಿನ ಸಂಗತಿ ಮತ್ತು ಕಾನೂನು ನಿಯಮಾವಳಿಗಳ ಮಿಶ್ರಣ ಆಗಿದೆ ಎಂದು ಪೂರ್ಣ ಪ್ರಮಾಣದ ವಿಚಾರಣೆಗೆ ಕೈಗೊಂಡಿತು. ವಕೀಲರಾದ ಪ್ರಕಾಶ ವಸ್ತ್ರದ ‘ನ್ಯಾಯದ ಕಣ್ಣು’ ಅಂಕಣದಲ್ಲಿ ‘ಯಾವ ವ್ಯಾಜ್ಯ ಎಲ್ಲಿ ವಿಚಾರಣೆ.? ನಿರ್ಧಾರ ಹೇಗೆ? ’ ತಪ್ಪದೆ ಮುಂದೆ ಓದಿ…
ಪುಸ್ತಕ : ‘ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ’
ಬೆಲೆ : 200/
ಖರೀದಿಗಾಗಿ : 9448015613
ಸಿವಿಲ್ ವ್ಯಾಜ್ಯಗಳನ್ನು ನಿರ್ಣಯಿಸಲು, ನ್ಯಾಯಾಲಯ ಮೊದಲು ತನಗೆ ಪ್ರಕರಣವನ್ನು ವಿಚಾರಿಸುವ ಕಾರ್ಯ ವ್ಯಾಪ್ತಿ ಇರುವುದನ್ನು ವಿಚಾರಿಸುತ್ತದೆ. ಆಸ್ತಿಯ ಮಾರುಕಟ್ಟೆಯ ಬೆಲೆ ಮತ್ತು ಆಸ್ತಿ ನೆಲೆಗೊಂಡಿರುವ ಪ್ರದೇಶದ ವಿಚಾರನಾತ್ಮಕ ವ್ಯಾಪ್ತಿ ಇರುತ್ತದೆಯೇ? ಅನ್ನುವುದನ್ನು ಪೂರ್ವ ವಿಚಾರಣೆ ಮಾಡುತ್ತದೆ. ನ್ಯಾಯಾಲಯ ವಾದ ಪತ್ರದ ಸಂಗತಿ ಮತ್ತು ಕಾನೂನು, ನಿಯಮ ವಿಶ್ಲೇಷಣೆ ಮಾಡಿ, ಮಿಶ್ರಣ ಗೊಂದಲಿದೆ ಎಂದಾಗ ಪೂರ್ಣ ಪ್ರಮಾಣದ ವಿಚಾರಣೆ ಕೈಗೆತ್ತಿ ಕೊಳ್ಳುತ್ತದೆ. ದಾವೆ ನ್ಯಾಯಾಲಯದ ಪ್ರಾದೇಶಿಕ ವಿಚಾರ ವ್ಯಾಪ್ತಿಯಲ್ಲಿ ಇರುವುದಿಲ್ಲ ಮತ್ತು ಆಸ್ತಿಯ ಮಾರುಕಟ್ಟೆ ಬೆಲೆ ತನ್ನ ನ್ಯಾಯಾಲಯದ ನಿರ್ಧಿಷ್ಟ ಮೌಲ್ಯದ ಆಸ್ತಿಗಳ ಬಗ್ಗೆ ಇರುವ ಸಿವಿಲ್ ನಿಯಮಾವಳಿಯ ಹೇಳುವ ಪರೀಧಿಯೊಳಗೆ ಇಲ್ಲದಿದ್ದರೆ ವಾದ ಪತ್ರವನ್ನು ಸೂಕ್ತ ನ್ಯಾಯಾಲಯದಲ್ಲಿ ದಾಖಲಿಸುವಂತೆ ಮರಳಿ ಕೊಡಲು ಆದೇಶ ಮಾಡಬೇಕಾಗುತ್ತದೆ.
ಸುಶಾಂತ (ಹೆಸರು ಬದಲಿಸಿದೆ) ನೀಡಿದ ಕಾಗದ ಪತ್ರಗಳನ್ನು ಪರಿಶೀಲಿಸಿದಾಗ ಅವನ ತಂದೆ ತಾಯಿ, ಸಹೋದರ ಸಹೋದರಿಯರ ಮೇಲೆ ಮನೆತನದ ಜಂಟಿ ಕುಟುಂಬದ ಆಸ್ತಿಗಳನ್ನು ವಿಭಜಿಸಿಕೊಡಲು ಪ್ರಾರ್ಥಿಸಿ ದಾವೆ ಸಲ್ಲಿಸಲು ನಿರ್ಧರಿಸಿದೆ. ಸುಶಾಂತನ ತಂದೆಗೆ ವಾರಸುದಾರಿಕೆಯಿಂದ ಬಂದ ಐದು ಜಮೀನು, ಮೂರು ಮನೆಗಳು ಬೇರೆ ತಾಲೂಕಿನ ಗ್ರಾಮಗಳಲ್ಲಿ ಇದ್ದವು. ಸುಶಾಂತ ಈ ನಗರದಲ್ಲಿ ಬಹಳ ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಹೊಲ ಮನೆ ಸ್ವತಂತ್ರವಾಗಿ ಸಂಪಾದನೆ ಮಾಡಿಕೊಂಡಿದ್ದನು. ತಂದೆ ತಾಯಿ, ಸಹೋದರ ಸಹೋದರಿಯರಿಗೆ ಪಿತ್ರಾರ್ಜಿತ ಜಂಟಿ ಮನೆತನ ಆಸ್ತಿಗಳಲ್ಲಿ ಪಾಲು ಕೇಳಿದಾಗ ಸುಶಾಂತ ಸಂಪಾದಿಸಿದ ಆಸ್ತಿಗಳಲ್ಲಿ ಪಾಲು ಕೊಡುವಂತೆ ತಂಟೆ ಮಾಡುತ್ತಿದ್ದರು.

ಸುಶಾಂತ ವ್ಯಾಪಾರದಲ್ಲಿ ಬಿಡುವಿಲ್ಲದೆ ತೊಡಗಿಕೊಂಡಿದ್ದನು. ಬೇರೆ ಕೋರ್ಟಿನ ವ್ಯಾಪ್ತಿಗೆ ಹೋಗಿ ಪ್ರಕರಣನ ಡೆಸುವುದು ಅಸಾಧ್ಯ ಎನಿಸುತ್ತಿತ್ತು. ಜಂಟಿ ಕುಟುಂಬದ ಆಸ್ತಿಗಳು ಬೇರೆ ನ್ಯಾಯಾಲಯ ಕಾರ್ಯವ್ಯಾಪ್ತಿಯಲ್ಲಿ ಇವೆ. ಸುಶಾಂತ ಸಂಪಾಸಿದ ಆಸ್ತಿಗಳು ಈ ನ್ಯಾಯಾಲಯದ ಕಾರ್ಯವ್ಯಾಪ್ತಿಯಲ್ಲಿ ಇವೆ. ಹಾಗೆ ನೋಡಿದರೆ ಪಿತ್ರಾರ್ಜಿತ ಆಸ್ತಿಗಳು ಇರುವ ಕೋರ್ಟಿನ ವ್ಯಾಪ್ತಿಯಲ್ಲಿ ದಾವೆ ದಾಖಲಿಸಬೇಕು. ಸುಶಾಂತ ಇರುವ ನಗರದಿಂದ ಸುಮಾರು ಮೂರು ನೂರು ಕಿಲೋಮೀಟರು ದೂರ ಇವೆ. ಆದರೆ ಸುಶಾಂತನದು ಸ್ವಯಾರ್ಜಿತ ಆಸ್ತಿಗೆ ದಕ್ಕೆ ಆಗಬಾರದು,ಈ ಕೋರ್ಟಿನಲ್ಲಿ ದಾಖಲಿಸುವಒತ್ತಾಯ.
ಒಂದೆ ಸ್ವರೂಪದ ನ್ಯಾಯ ನಿರ್ಣಯಕ್ಕೆ ಒಳಪಡಬೇಕಾದ ಸ್ವತ್ತುಗಳು ಭಾರತದ ಯಾವುದೆ ಬೇರೆ ರಾಜ್ಯದ, ಜಿಲ್ಲೆ, ತಾಲೂಕಿನ ನ್ಯಾಯ ವ್ಯಾಪ್ತಿಯಲ್ಲಿಯ ಯಾವುದೆ ನ್ಯಾಯಾಲಯದಲ್ಲಿ ದಾಖಲಿಸುವ ಆಯ್ಕೆ, ಇಚ್ಛೆ ವಾದಿಯದು ಆಗಿರುತ್ತದೆ. ಸುಶಾಂತನ ಇಚ್ಛೆಯಂತೆ, ಆಯ್ಕೆಯಂತೆ ಇದೆ ನ್ಯಾಯಾಲಯದಲ್ಲಿ ಪಾಲು ಮತ್ತು ಪ್ರತ್ಯೇಕ ಸ್ವಾಧೀನ ದಾವೆಯನ್ನು ಚಾಣಾಕ್ಷತನದಿಂದ ವಾದ ಪತ್ರ ರಚಿಸಿ, ಸುಶಾಂತ ಸಂಪಾದಿಸಿದ ಆಸ್ತಿಗಳನ್ನು ಹೊರತು ಪಡಿಸಿ ಪಾಲು ಕೇಳಿ, ಈ ನ್ಯಾಯಾಲಯದ ವ್ಯಾಪ್ತಿಗೆ ಪ್ರಕರಣ ಬರುತ್ತದೆ ಎಂದು ಸಮರ್ಥ್ಯಸಿ, ಸಮಾಜಾಯಿಸಿ ದಾಖಲಿಸಿದೆ.
ತಂದೆ ತಾಯಿ, ಸಹೋದರಿ ಪ್ರತಿವಾದಿಯರು ನ್ಯಾಯಾಲಯದಲ್ಲಿ ಗೈರು ಉಳಿದರು. ಇಬ್ಬರು ಸಹೋದರ ಪ್ರತಿ ವಾದಿಯರು ಹಾಜರಾಗಿ ಪ್ರತಿ ಹಕ್ಕು ದಾವೆ/ಕೌಂಟರ್ ಕ್ಲೇಮ್ ಬೇಡಿಕೆ, ಕೈಫಿಯತ್ತ / ಲಿಖಿತ ಹೇಳಿಕೆ ಸಲ್ಲಿಸಿ, ಸುಶಾಂತ ತನ್ನ ಹೆಸರಲ್ಲಿ ಸಂಪಾದಿಸಿದ ಅನ್ನುವ ಆಸ್ತಿಗಳಲ್ಲಿ ಪ್ರತಿವಾದಿಗಳಿಗೆ ಹಿಸ್ಸೆ ನೀಡುವಂತೆ ಅವಶ್ಯಕ ಕೋರ್ಟ್ ಫೀ ಕಟ್ಟಿ ಪ್ರತಿ ಬೇಡಿಕೆ ಸಲ್ಲಿಸಿದರು.
ನ್ಯಾಯಾಲಯಕ್ಕೆ ಪ್ರಕರಣದ ಆಸ್ತಿಗಳ ಬಗ್ಗೆ ನ್ಯಾಯ ನಿರ್ಣಯ ಮಾಡುವ ನ್ಯಾಯಾಧಿಕಾರ ಇರುವುದೋ ಇಲ್ಲವೋ ಅನ್ನುವುವುದು ಕೇಸಿನ ಸಂಗತಿ ಮತ್ತು ಕಾನೂನು ನಿಯಮಾವಳಿಗಾಳ ಮಿಶ್ರಣ ಆಗಿದೆ ಎಂದು ಪೂರ್ಣ ಪ್ರಮಾಣದ ವಿಚಾರಣೆಗೆ ಕೈಗೊಂಡಿತು. ವಾದಿ, ಬೇರೆ ಬೇರೆ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಇರುವ ಜಂಟಿ ಕುಟುಂಬದ ಆಸ್ತಿಗಳು ಪಿತ್ರಾರ್ಜಿತ ಆಸ್ತಿಗಳಲ್ಲಿ ತನಗೆ ಹಿಸ್ಸೆ ಇದ್ದು, ತಾನು ಸಂಪಾದಿಸಿದ ಆಸ್ತಿ ಹೊರತು ಪಡಿಸಿ ಪಾಲು ವಿಭಜನೆಗೆ ಕೋರಿ ಕಾಗದ ಪತ್ರಗಳನ್ನು ದಾಖಲಿಸಿ, ಮೌಕಿಕ ಸಾಕ್ಷಿದಾರರನ್ನು ಕೋರ್ಟಿಗೆ ಹಾಜರು ಪಡಿಸಿದನು. ವಾದಿ ಮತ್ತು ಸಾಕ್ಷಿದಾರರನ್ನು ಪ್ರತಿವಾದಿ ಪರ ವಕೀಲರು ಪಾಟಿ ಸವಾಲು ಮಾಡಿದರು.

ಪ್ರತಿವಾದಿಯರು, ವಾದಿ ಸಂಪಾದಿಸಿದ ಆಸ್ತಿಗಳು ತಮ್ಮ ಮನೆತದ ಕುಟುಂಬದ ವ್ಯಾಪಾರದಿಂದ ಸಂಪಾದಿಸಿದ ಆಸ್ತಿಗಳು, ಸುಶಾಂತ ನಡೆಸುತ್ತಿರುವ ವ್ಯಾಪಾರದ ಬಂಡವಾಳ ಜಂಟಿ ಕುಟುಂಬದ ಆಸ್ತಿಗಳ ಉತ್ಪನ್ನದಿಂದ ಪ್ರಾರಂಭಿಸಿದ್ದು ಎಂದು ಸಾಧಿಸಿ ಮೌಕಿಖ ಲಿಖಿತ ಸಾಕ್ಷಾಧಾ ರ ಕೋರ್ಟಿಗೆ ಸಲ್ಲಿಸಿಸಿದರು. ವಾದಿ ಪ್ರತಿವಾದಿ ಪರ ವಕೀಲರಿಂದ ತಮ್ಮ ತಮ್ಮ ಕಕ್ಷಿದಾರರ ಬೇಡಿಕೆ ಸಮರ್ಥಿಸಿ, ಈ ನ್ಯಾಯಾಲಯಕ್ಕೆ ನ್ಯಾಯ ನಿರ್ಣಯ ಮಾಡಲು ಅಧಿಕಾರ ಇರುತ್ತದೆ ಎಂದು ವಾದಿಸಿದರು.
ನ್ಯಾಯಾಲಯ ಅಂತಿಮ ತೀರ್ಪು ನೀಡುತ್ತಾ, ವಾದಿಯು ಈ ದಾವೆಯನ್ನು ಉದ್ದೇಶ ಪೂರ್ವಕ, ಈ ನ್ಯಾಯಾಲಯದ ಕಾರ್ಯ ವ್ಯಾಪ್ತಿಯಲ್ಲಿ ತರುವ ಉದ್ದೇಶದಿಂದ, ತನ್ನ ಸ್ವಸಂಪಾದನೆ ಅನ್ನುವ ಆಸ್ತಿಗಳನ್ನು ದಾವೆ ಆಸ್ತಿಗಳೆಂದು ತೋರಿಸದೆ, ಚಾಣಾಕ್ಷತನದಿಂದ ವಾದಪತ್ರ ತಯಾರಿಸಿದ್ದು ಸ್ಪಷ್ಟವಾಗುತ್ತದೆ. ಆದ್ದರಿಂದ ವಾದಿ ಪ್ರತಿ ವಾದಿಯರ ಜಂಟಿ ಕುಟುಂಬದ ಆಸ್ತಿಗಳು ಈ ನ್ಯಾಯಾಲಯದ ವ್ಯಾಪ್ತಿಯಲ್ಲಿ ಇಲ್ಲ. ಈ ವಿವಾದ ನ್ಯಾಯಾಲಯ ನಿರ್ಣಯಿಸಲಾಗದು. ಅದರಿಂದ ವಾದಿ ಸಂಪಾದಿಸಿದ ಅಸ್ತಿ ಅನ್ನುವುದನ್ನು ನಿರ್ಣಯಿಸಿ ಕೌಂಟರ್ ಕ್ಲೇಮ್ ಆದೇಶ ಮಾಡಿ ಪ್ರತಿವಾದಿಯರಿಗೆ ಪಾಲು ಇದೆ ಅನ್ನುವುದನ್ನು ನಿರ್ಣಯಿಸಲಾಗದು. ವಿವಾದಿತ ದಾವೆ ಆಸ್ತಿಗಳು ಈ ನ್ಯಾಯಾಲಯದ ನ್ಯಾಯ ಕಾರ್ಯವ್ಯಾಪ್ತಿ ಯಲ್ಲಿ ಇರುವುದಿಲ್ಲ ಎಂದು ಅಭಿಪ್ರಾಯ ಪಟ್ಟು ವಾದಿಯ ದಾವೆಯನ್ನು ಮತ್ತು ಪ್ರತಿವಾದಿಯರ ಕೌಂಟರ್ ಕ್ಲೇಮ್ ನ್ನು ಕೂಡ ವಜಾಗೊಳಿಸಿ ಆದೇಶಿಸಿತು.
‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೨)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೩)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೪)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೫)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೬)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೭)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೮)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೯)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೦)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೧)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೨)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೩)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೪)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೫)
- ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ.
