ಮನಸ್ಸು ಶಾಂತವಾಗಿದ್ದರೇ ಇಡೀ ಜಗತ್ತನ್ನೇ ಗೆಲ್ಲಬಹುದು. ಆದರೆ ಆ ಮನಸ್ಸನ್ನು ಸೀಮಿತದಲ್ಲಿ ಹಿಡಿದುಕೊಳ್ಳುವುದು ಹೇಗೆ ಎನ್ನುವುದನ್ನು ಅರಿಯಬೇಕು. ಇದು ಮನಸ್ಸಿನ ಮಾತು, ವಾಣಿ ಕನ್ನಡತಿ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ ಓದಿ…
ಮನಸು ಮೌನವೇ..? ಒಳಗೊಳಗೇ ಪಿಸುಗುಡುವ ಆಲಪನೆಯೇ..? ಮನಸಿನ ಅಂತರಾಳ ಅರಿಯುವ ಗೋಜಿಗೆ ಹೋದಷ್ಟು ಕಗ್ಗಂಟ..? ಮನಸ್ಸನ್ನು ಅರ್ಥ ಮಾಡಿಕೊಳ್ಳುವುದೇ ದೊಡ್ಡ ಸಾಹಸವೇ ಮನಸೆ ಹೀಗೆ ಏಕೆಂದರೆ ಮನಸ್ಸಲ್ಲವೇ ಅದು.
ಮನಸು ಅತಿ ಸೂಕ್ಷ್ಮ ಮನಸ್ಸು ಚಿತ್ತ ಚಂಚಲ. ಒಂದು ಸಾರಿ ಇದ್ದ ಹಾಗೆ ಇನ್ನೊಮ್ಮೆ ಇರದು ಮನಸ್ಸಿಗೆ ಅಚ್ಚಿಕೊಂಡ ಸಂಕಟದ ಭಾವ ನೋವಾಗಿ ಪರಿವರ್ತನೆ ಆಗುತ್ತದೆ.
ಪ್ರತಿಯೊಂದು ನೋವು ಮರೆಯಲು ಸ್ವಲ್ಪ ಕಾಲ ಬೇಕು ಹೃದಯಕ್ಕೆ ಅದ ದುಃಖ ಅಷ್ಟು ಸುಲಭವಾಗಿ ಮರೆಯುವಂತದ್ದಲ್ಲ. ಹೇಳಿದಷ್ಟು ಕೇಳಿದಷ್ಟು ಗೀಚಿದಷ್ಟು ನೋವ ಮರೆತು ನೆಮ್ಮದಿಯಾಗಿ ಬದುಕುವುದೇ ಅಸಾಧ್ಯ ಪದೇ ಪದೇ ಕಾಡುವ ನೋವು ನಂಜಂತೆ ಪ್ರತಿಯೊಂದು ಕ್ಷಣ ನೋಯಿಸುತ್ತದೆ ಪೂರ್ತಿ ದೇಹವನ್ನು ದಂಡಿಸುತ್ತದೆ ಬದುಕನ್ನು ಕೂಡ, ಅದಕ್ಕೆ ಮರೆತು ಮುಂದೆ ಸಾಗಲೇಬೇಕು ಹಿಂದಿನ ದಿನಗಳ ನೋವುಗಳ ಜೊತೆ ಬದುಕಿದರೆ ಇವತ್ತಿನ ಖುಷಿ ಕೈ ಜಾರಿ ಹೋಗುತ್ತದೆ ಬದುಕು ಬೊಗಸೆ ಯಲ್ಲಿ ಹಿಡಿದ ನೀರಂತೆ ಯಾವ ಕ್ಷಣ ಏನಾದರೂ ಆಗುವ ಸಾಧ್ಯತೆಗಳಿದೆ ಇರುವಷ್ಟು ದಿವಸ ಎಲ್ಲವ ತೊರೆದು ನೆಮ್ಮದಿಯಾಗಿ ಬಾಳಿದರೆ ಮಾತ್ರ ಬದುಕ ಅರ್ಥ ಪೂರ್ಣವಾಗುವುದರಲ್ಲಿ ಸಂದೇಹವೇ ಇಲ್ಲ. ಇಲ್ಲದೆ ಹೋದರೆ ಬದುಕೇ ಖಾಲಿ ಭಾವ, ಬದುಕು ನೋವುಗಳ ಕಡಲು ಮತ್ತು ಬದುಕೇ ಬೆಂಕಿಯ ಕಿಡಿಯಂತೆ ಸುಡುವ ನರ್ತನವೆಂದು ವೈರಾಗ್ಯ ತಾಳಿ ಬದುಕಿನ ಮೇಲೆ ನಂಬಿಕೆ ಆತ್ಮವಿಶ್ವಾಸಗಳೇ ಕಳೆದು ಹೋಗುತ್ತದೆ. ಬದುಕು ಸುಂದರವಾಗಿ ಕಾಣಲು ಬದುಕು ಏನೆಂದು ಅರ್ಥ ಮಾಡಿಕೊಳ್ಳುವುದು ಮುಖ್ಯ. ನೋವೇ ಬದುಕಲ್ಲ ನೋವು ಬದುಕಿನ ಒಂದು ಸ್ಥಿತಿ. ಆ ಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ನೋವುಗಳ ಮರೆತು ಬದುಕು ಸಾಧಿಸುವುದು ಕ್ಲಿಷ್ಟಕರವೇ ? ನೋವ ಮರೆತು ಬದುಕಿದರೆ ತಾನೇ ಪ್ರತಿಯೊಂದು ನೋವನ್ನು ಗೆಲ್ಲುವ ಭರವಸೆ ಮೂಡುವುದು. ನಮ್ಮೊಳಗಿನ ನೋವು ದೊಡ್ಡದೇ ಅಂದುಕೊಂಡರೆ ಹೆಮ್ಮರವಾಗಿ ಬೆಳೆದು ನೋವು ನೀಡುತ್ತಾ ನೋವೇ ಮನಸೊಳಗೆ ಜೀವಿಸುವಂತಾಗಿ ಬಿಡುತ್ತದೆ ಅದಕ್ಕೆ ಗಿಡವಾಗಿ ಇದ್ದಾಗಲೇ ಬೇರು ಸಮೇತ ಕಿತ್ತು ಮುಂದಿನ ನೋವ ಯುದ್ಧಕ್ಕೆ ತಯಾರಿ ಮಾಡಲೇಬೇಕು? ಏಕೆಂದರೆ ಬದುಕಿನ ಹಂತ ಹಂತಗಳಲ್ಲಿ ನೋವು ಅನೇಕ ತಿರುವುಗಳಲ್ಲಿ ಎದುರಾಗುತ್ತದೆ. ಸಾವಿನ ರೂಪ, ಜೊತೆಗೆ ಇದ್ದು ಕಾರಣಾಂತರಗಳಿಂದ ತೊರೆದು ಹೋದವರು, ಮನಸಿಗೆ ನೋವು ಉಂಟು ಮಾಡುವ ಚುಚ್ಚು ಮಾತು ನಮ್ಮವರೇ ನಮಗೆ ಮಾಡುವ ಮೋಸ, ಹಿಂಸೆ ಕ್ರೌರ್ಯಗಳು ಹೀಗೆ ನೋವು ಬರುತ್ತಲೇ ಇರುತ್ತದೆ ಎದುರಿಸುವ ಸಾಮರ್ಥ್ಯ ಹೆಚ್ಚಾಗಲೇಬೇಕು. ಆತ್ಮಸ್ಥೈರ್ಯದಲ್ಲಿ ಜೀವ ತುಂಬಾ ಬೇಕಾದರೆ ಮರೆತು ಬಾಳಲು ಸ್ವಲ್ಪ ಕಾಲ ಬೇಕೇ ಬೇಕು. ಅದು ತೀರ ಉದ್ದವಾಗಿರದೆ ಆ ಕಾಲ ಸ್ವಲ್ಪ ಸಮಯ ತೆಗೆದುಕೊಂಡು ಅಳಿಸಲು ಪ್ರಯತ್ನ ಪಡಲೇಬೇಕು. ಮನಸು ಖುಷಿಯಾಗಿ ಇದಷ್ಟು ಬದುಕು ಹರ್ಷೋಲ್ಲಾಸ.

ಫೋಟೋ ಕೃಪೆ : google
ಮನಸೇ ನೀನೇಕೆ ಹೀಗೆ? ಸ್ವಲ್ಪ ರಿಲ್ಯಾಕ್ಸ್
- ಆದಷ್ಟು ನೋವು ಕೊಡುವ ವಿಷಯಗಳಿಂದ ದೂರ ಇರುವುದು ಒಳಿತು.
- ನೋವು ಕೊಡುವ ವ್ಯಕ್ತಿ ಗಳ ಜೊತೆಗೆ ವಾದ ವಿವಾದ ಕಡಿಮೆ ಮಾಡಿದರೆ ನಮಗೆ ನಮ್ಮ ಮನಸಿಗೆ ನೆಮ್ಮದಿಯ ದಿವ್ಯ ಔಷಧಿ .
- ಮನಸು ಅಗುರವಾಗಲು ಪ್ರವಾಸದ ಅವಶ್ಯಕತೆ ಹೆಚ್ಚು ಪ್ರಶಾಂತವಾದ ವಾತಾವರಣ ಮನಸ್ಸನ್ನು ಪ್ರಫುಲ ಗೊಳಿಸುತ್ತದೆ ಮತ್ತು ತಿಳಿಯಾಗಿಸುತ್ತದೆ.
- ಮೋಹ ಎನ್ನುವ ಭಾವದಲ್ಲೇ ನೋವು ಅವಿತುಕೊಂಡಿದೆ ಯಾವುದು ಸ್ಥಿರವಲ್ಲ ಎಲ್ಲವು ಕ್ಷಣಿಕ ಎನ್ನುವದು ಮನಸಿಗೆ ಮನದಟ್ಟು ಮಾಡುವುದು.
- ಕಾಲ ಬದಲಾದಂತೆ ನಾವು ಪರಿಸ್ಥಿತಿ ಗೆ ತಕ್ಕಂತೆ ಬದಲಾಗಿ ಮುಂದೆ ಸಾಗುತ್ತಿರಬೇಕು.
- ಮನಸು ಶಾಂತವಾಗಿದ್ದರೆ ಎಲ್ಲವು ಸುಂದರ ಶಾಂತವಾಗಿರಲು ಅದಕ್ಕೆ ಯೋಗ ಧ್ಯಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.
- ವಾಣಿ ಕನ್ನಡತಿ – ಮೈಸೂರು.
