ಅಳಿವಿನ ಅಂಚಿನಲ್ಲಿರುವ “ಓಝೋನ್” ಪದರ

ಓಝೋನ್ನನ್ನು ಪ್ರಸಿದ್ಧ ಫ್ರೆಂಚ್ ಭೌತಶಾಸ್ತ್ರಜ್ಞರಾದ ಚಾರ್ಲ್ಸ್ ಫ್ಯಾಬ್ರಿ ಮತ್ತು ಹೆನ್ರಿ ಬ್ಯುಸನ್ ರವರು 1913 ರಲ್ಲಿ ಕಂಡುಹಿಡಿದರು. ”ಓಝೋನ್” ಪದರನ್ನು ಮಾನವನಿಂದ ದೂರ ಇದ್ದರೆ ಜೀವ ರಕ್ಷಕ ಹತ್ತಿರ ಬಂದರೆ ವಿಷ, ಹಾಗಾಗಿ ಇದನ್ನು ‘ಜೀವಿಗಳ ದೂರದ ಮಿತ್ರ, ಹತ್ತಿರದ ಶತ್ರು’ ಎಂದು ಕರೆಯಲಾಗುತ್ತದೆ. ಓಝೋನ್ನ ದಿನದಂದು ಅದರ ಮಹತ್ವವನ್ನು ಗೀತಾಂಜಲಿ ಎನ್ ಎಮ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

  •  ಗಾಳಿ, ನೀರು, ಭೂಮಿ ಬೆಳಕಿನಂತೆ ಮನುಕುಲ ಉಳಿಯಬೇಕೆಂದರೆ ಇಡೀ ಮನುಕುಲವೇ ಪ್ರಜ್ಞಾಪೂರ್ವಕವಾಗಿ ಮತ್ತು ಅವಶ್ಯವಾಗಿ ರಕ್ಷಿಸಲೇ ಬೇಕಾಗಿರುವುದು ಓಝೋನ್ ಎಂಬ ಪದರವನ್ನು! ಹಾಗಾದರೆ ಓಝೋನ್ ಎಂದರೆನು? ಎಂಬ ಪ್ರೆಶ್ನೆ ಸಹಜವೇ. ಈ ಓಝೋನ್ ಭೂಮಿಯ ಮೇಲಿನ ಒಂದು ಸೂಕ್ಷ್ಮವಾದ ಪದರವಾಗಿದ್ದು ಇದು ಸೂರ್ಯನು ಹೊರಸೂಸುವ ಹಾನಿಕಾರಕ ನೇರಳಾತೀತ (UV) ವಿಕಿರಣದಿಂದ ಭೂಮಿಯನ್ನು ರಕ್ಷಿಸಲು ಬಹಳ ಅವಶ್ಯಕವಾಗಿದ್ದು ಭೂಮಿಯಲ್ಲಿನ ಸಕಲ ಜೀವರಾಶಿಗಳ ಸಂರಕ್ಷಕ ಎಂದೇ ಕರೆಯಲ್ಪಡುತ್ತದೆ. ಈ ಓಝೋನ್ ಪದರ ಭೂಮಿಯ ಮೇಲ್ಮೈಯಿಂದ 10 ಮತ್ತು 40 ಕಿಲೋಮೀಟರ್‌ಗಳ ನಡುವಿನ ವಾಯುಮಂಡಲದಲ್ಲಿದ್ದು ಭೂಮಿಯ ಮೇಲಿನ ಜೀವಿಗಳಿಗೆ ಅತ್ಯಂತ ಉಪಕಾರಿಯಾಗಿದೆ.
  •  ಈ ಓಝೋನ್ನನ್ನು ಪ್ರಸಿದ್ಧ ಫ್ರೆಂಚ್ ಭೌತಶಾಸ್ತ್ರಜ್ಞರಾದ ಚಾರ್ಲ್ಸ್ ಫ್ಯಾಬ್ರಿ ಮತ್ತು ಹೆನ್ರಿ ಬ್ಯುಸನ್ ರವರು 1913 ರಲ್ಲಿ ಕಂಡುಹಿಡಿದರು! ಭೂಮಿಯ ಮೇಲಿನ ಚರಾಚರ ಜೀವಿಗಳಿಗೂ ಸೂರ್ಯನ ಬೆಳಕು ಬೇಕೇಬೇಕು ಭೂಮಿಯ ಮೇಲಿನ ಜೀವನವು ಸೂರ್ಯನ ಬೆಳಕನ್ನೇ ಅವಲಂಬಿಸಿ ನೆಡೆಯುತ್ತಿರುವುದರಿಂದ ಸೂರ್ಯನ ಬೆಳಕಿಲ್ಲದೆ ಯಾವ ಜೀವಿಯು ಭೂಮಿಯಲ್ಲಿ ಜೀವಿಸಲು ಸಾಧ್ಯವಿಲ್ಲ. ಆದರೆ ಈ ಸೂರ್ಯನಿಂದ ಹೊರಹೊಮ್ಮುವ ಹಾನಿಕಾರಕ ಕಿರಣಗಳು ನಾವು ವಾಸಿಸುತ್ತಿರುವ ಭೂಮಿಗೆ ಕೆಟ್ಟ ಪರಿಣಾಮ ಬೀರಿ ಹಲವು ತೊಂದರೆಗಳನ್ನು ತಂದೊಡ್ಡುತ್ತವೆ ಎಂಬುದೂ ಅಷ್ಟೇ ನಿಜ, ಹಾಗಾಗಿ ಈ ಓಝೋನ್ ಎಂಬ ಪದರ ಭೂಮಿಗೆ ಸನ್ ಸ್ಕ್ರೀನ್ ನಂತೆ ಕೆಲಸ ಮಾಡುವುದರಿಂದ ಸೂರ್ಯನ ಹಾನಿಕಾರಕ ಕಿರಣ ಗಳಿಂದ ಭೂಮಿಯನ್ನು ರಕ್ಷಿಸುತ್ತದೆ ಹೀಗಾಗಿ ಭೂಮಿಯ ಮೇಲಿನ ಜೀವನವು ಸಾಧ್ಯವಾಗಿದೆ.ಈ ಓಝೋನ್ ಆಮ್ಲಜನಕದ ಒಂದು ರೂಪವಾಗಿದೆ ಆದರೆ ಆಮ್ಲಜನಕ ದಂತೆ ಜೀವ ಸ್ನೇಹಿಯಲ್ಲದ ಇದು ತೀಕ್ಷ್ಣ ವಾಸನೆಯುಳ್ಳ ವಿಷಕಾರಿ ಅನಿಲವಾಗಿದ್ದು ತಿಳಿ ನೀಲಿ ಬಣ್ಣ ಹೊಂದಿದೆ, ಇದು ಸ್ಥರಗೊಳದಲ್ಲಿ ಇದ್ದರೆ ಮಾತ್ರ ಅತ್ಯಂತ ಉಪಕಾರಿ ಜೀವಿಗಳ ಸಂಪರ್ಕಕ್ಕೆ ಬಂದರೆ ಮಾತ್ರ ಮಹಾಮಾರಿ ಅಂದರೆ ಇದು ಮಾನವನಿಂದ ದೂರ ಇದ್ದರೆ ಜೀವ ರಕ್ಷಕ ಹತ್ತಿರ ಬಂದರೆ ವಿಷ, ಹಾಗಾಗಿ ಇದನ್ನು ಜೀವಿಗಳ ದೂರದ ಮಿತ್ರ ಹತ್ತಿರದ ಶತ್ರು ಎಂದು ಕರೆಯಲಾಗುತ್ತದೆ. ಈ ಓಝೋನ್ ರಕ್ಷಣಾತ್ಮಕ ಪದರವು ಕಣ್ಣಿನ ಪೊರೆಗಳು ಮತ್ತು ಚರ್ಮದಲ್ಲಿನ ಕ್ಯಾನ್ಸರ್ನಂತಹ ಪ್ರತಿಕೂಲ ಆರೋಗ್ಯ ಪರಿಣಾಮಗಳನ್ನು ತಡೆಯುತ್ತದೆ.

  • ಅಲ್ಲದೆ ಕೃಷಿ, ಅರಣ್ಯ ಮತ್ತು ಸಮುದ್ರಗಳ ಜೊತೆಗೆ ಎಲ್ಲಾ ಜೀವಿಗಳನ್ನು ರಕ್ಷಿಸುತ್ತದೆ. ಅಲ್ಲದೆ ಇದು ಸೂರ್ಯನ ಅನಾಹುತಕಾರಿ ಕಿರಣಗಳಿಂದ ಭೂಮಿಗೆ ಆಗುವ ಕೆಟ್ಟ ಪರಿಣಾಮಗಳನ್ನು ನಿಯಂತ್ರಿಸುತ್ತದೆ. ಹಾಗಾಗಿ ಈ ಓಝೋನ್ ಪದರವನ್ನು ರಕ್ಷಿಸಿದರೆ ಮಾತ್ರ ಮನುಕುಲ ಸುಸೂತ್ರವಾಗಿ ನಡೆಯುತ್ತದೆ. ಇಲ್ಲವೇ ಮನುಕುಲದ ಅವನತಿ ಕಟ್ಟಿಟ್ಟಬುತ್ತಿ.
  • ಇಷ್ಟೆಲ್ಲಾ ಗೊತ್ತಿದ್ದರೂ ಮನುಷ್ಯ ಮಾತ್ರ ಆಧುನಿಕತೆ ತಂತ್ರಜ್ಞಾನದ ಹೆಸರಿನಲ್ಲಿ ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಪ್ರಕೃತಿಯ ಮೇಲೆ ಅತ್ಯಾಚಾರವೆಸಗುತ್ತಾ ತನ್ನನ್ನು ತಾನೇ ಅವನತಿಯ ಅಂಚಿಗೆ ದೂಡಿಕೊಳ್ಳು ತ್ತಿರುವುದು ವಿಪರ್ಯಾಸವೇ ಸರಿ, ಈ ಓಝೋನ್ ಪದರದ ರಕ್ಷಣೆಗೆ ವಿಜ್ಞಾನಿಗಳು ಗಮನ ಹರಿಸಿದ್ದು ಇತ್ತೀಚೆಗಷ್ಟೇ ಅದಕ್ಕೊಂದು ಮಹತ್ತರ ಕಾರಣವಿದ್ದು 20 ನೇ ಶತಮಾನದ ಅಂತ್ಯದ 1985 ಮೇ ನಲ್ಲಿ ಅಂಟಾರ್ಟಿಕ ಖಂಡದ ಆಗಸದಲ್ಲಿ ಓಝೋನ್ ಪದರದಲ್ಲಿ ಒಂದು ವಿಸ್ತಾರವಾದ ರಂಧ್ರ ಕಾಣಿಸಿಕೊಳ್ಳುತ್ತದೆ ಅಂದರೆ ಓಝೋನ್ ಪದರ ಸವೆದು ಹೋಗಿರುವುದು ತಿಳಿಯುತ್ತದೆ ಇದರಿಂದ ವಿಜ್ಞಾನಿಗಳು ಆತಂಕಕ್ಕೆ ಒಳಗಾಗಿ ಕಂಗಾಲಾಗುತ್ತಾರೆ. ಕಾರಣ ಸೂರ್ಯನಿಂದ ಬರುವ ಹಾನಿಕಾರಕ ನೇರಳಾತೀತ ಕಿರಣಗಳನ್ನು ಹೀರಿಕೊಂಡು ಜೀವಸಂಕುಲನಕ್ಕೆ ಉಪಯುಕ್ತವಾದ ಬೆಳಕನ್ನಷ್ಟೇ ಭೂಮಿಗೆ ಬಿಟ್ಟು ಕೊಟ್ಟು ಮಹತ್ತರ ಕೆಲಸ ಮಾಡುವ ಓಝೋನ್ ಪದರದ ಸವಕಳಿಯಿಂದ ಭೂಮಿಗೆ ಅನಾಯಾಸವಾಗಿ ಸೂರ್ಯನ ಅಲ್ಟ್ರಾ ವ್ಯೆಲೇಟ್ ಕಿರಣಗಳು ಪ್ರವೇಶಿಸಿ ಸಾಕಷ್ಟು ಅನಾಹುತಗಳಿಗೆ ಕಾರಣವಾಯಿತು,ಇದು ಎಷ್ಟರ ಮಟ್ಟಿಗೆ ಅನಾಹುತ ಉಂಟುಮಾದುವುದೆಂದರೆ ಮಾನವ ಸೂರ್ಯನ ಆ ನೆರಳಾತೀತ ಕಿರಣಗಳಿಗೆ ತನ್ನ ದೇಹವನ್ನು ಒಡ್ಡಿದರೆ ಚರ್ಮದ ಕ್ಯಾನ್ಸರ್ ಜೊತೆಗೆ ಅಂಗಾಂಶಗಳು ಹಾಳಾಗುತ್ತವೆ ಮತ್ತು ಜೀವಕೋಶದಲ್ಲಿನ ವಂಶವಾಹಿ ನಾಶವಾಗಿ ಮುಂದಿನ ಪೀಳಿಗೆಯ ಜೀವಿಗಳು ವಿಲಕ್ಷಣವಾಗಿ ಹುಟ್ಟುತ್ತವೆ ಎಂಬ ಅತಂಕಕಾರಿ ಮತ್ತು ಕಟು ಸತ್ಯವಾದ ವಿಷಯಗಳು ವಿಜ್ಞಾನಿಗಳಿಗೆ ಗೊತ್ತಾಗುತ್ತದೆ. ಈ ವಿಷಯ ವಿಜ್ಞಾನಿಗಳಲ್ಲಿ ಒಂದು ಆತಂಕವನ್ನು ಉಂಟುಮಾಡುತ್ತದೆ.
  • ಈ ಓಝೋನ್ ಪದರ ಸವೆಯಲು ಕಾರಣ 20 ನೇ ಶತಮಾನದಲ್ಲಿ ಕೈಗಾರೀಕರಣ ಮತ್ತನಗರೀಕರಣಗಳು ಹೆಚ್ಚಾದಾಗ ಪರಿಸರದ ಸಮತೋಲನ ಹದಗೆಟ್ಟು ಕೆಟ್ಟ ಸಂಚಲನ ನಿರ್ಮಾಣವಾಗುತ್ತದೆ, ಮಾನವ ನಿರ್ಮಿತ ರಾಸಾಯನಿಕಗಳಾದ ಮೀಥೈಲ್ ಬ್ರೋಮೈಡ್ ಮೀಥೈಲ್ ಕ್ಲೋರೋಫಾರ್ಮ್ ಕಾರ್ಬನ್ ಟೆಟ್ರಾಕ್ಲೋರೈಡ್ ಮತ್ತು ಹ್ಯಾಲೋನ್‌ಗಳು ಕ್ಲೋರೋಫ್ಲೋರೋ ಕಾರ್ಬನ್‌ಗಳು ಮತ್ತು ಹೈಡ್ರೋಕ್ಲೋ ರೋಫ್ಲೋರೋ ಕಾರ್ಬನ್‌ಗಳು ನೈಟ್ರಿಕ್ ಆಕ್ಸಿಡ್ ನಂತಹ ವಿಷಕಾರಿ ಅನಿಲಗಳು ಓಝೋನ್ ಪದರಕ್ಕೆ ಕಂಟಕ ಪ್ರಾಯವಾಗಿ ಓಝೋನ್ ಪದರ ಸವೆಯಲು ಕಾರಣವಾಗುತ್ತದೆ. ಜೀವ ಸಂಕುಲನವನ್ನು ಚೈತನ್ಯಗೊಳಿಸುತ್ತಿದ್ದ ಸೂರ್ಯನ ಬಿಸಿಲು ಯಾವಾಗ ಮನುಷ್ಯನನ್ನೇ ರೋಗಗಳ ಕೂಪಕ್ಕೆ ತಳ್ಳಲು ಶುರುಮಾಡುತ್ತದೆಯೋ, ಆಗ ಎಚ್ಚೆತ್ತು ಕೊಂಡ ಜಗತ್ತು ಓಝೋನ್ ಪದರದ ಸವಕಳಿಯನ್ನು ರಕ್ಷಿಸಲು ಕ್ರಮ ಕೈಗೊಳ್ಳವ ಕಾರ್ಯವಿಧಾನವನ್ನು ಸ್ಥಾಪಿಸಲು ಅಂತರಾಷ್ಟ್ರೀಯ ಸಮುದಾಯವನ್ನು ಪ್ರೇರೇಪಿಸಿ ಓಝೋನ್ ಪದರದ ರಕ್ಷಣೆಗಾಗಿ ವಿಯೆನ್ನಾದ ಮಾಂಟ್ರಿಯಲ್ ನಲ್ಲಿ 1987 ರಲ್ಲಿ ಜಾಗತಿಕ ಒಪ್ಪಂದವನ್ನು ಏರ್ಪಡಿಸಲಾಗುತ್ತದೆ ಇದರ ಉದ್ದೇಶ ಇನ್ನು ಮುಂದೆ ಓಝೋನ್ಗೆ ಹಾನಿಕಾರಕ ವಾಗುವ ಆನಿಲಗಳ ಉತ್ಪಾದನೆಯನ್ನು ಪೂರ್ತಿಯಾಗಿ ತಗ್ಗಿಸಬೇಕು ಆ ಮೂಲಕ ಓಝೋನ್ ಪದರದ ರಕ್ಷಣೆಗೆ ಮಾಡಬೇಕು ಎಂಬುದನ್ನು ಆ ಒಪ್ಪಂದದಲ್ಲಿ ನಿರ್ಧರಿಸಲಾಗುತ್ತದೆ.
  • ಸವಕಲಾಗಿರುವ ಈ ಓಝೋನ್ ಪದರ ಮೊದಲಿನಂತಾಗಲು ಕನಿಷ್ಠ 60 ವರ್ಷಗಳು ಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ ಅಂದರೆ CFC ಅನಿಲಗಳು ಉತ್ಪಾದನೆಯನ್ನು ತಗ್ಗಿಸಿ ಪರಿಸರ ಮಾಲಿನ್ಯವನ್ನು ಹತೋಟಿಯಲ್ಲಿಟ್ಟರೆ ಮಾತ್ರ ಓಝೋನ್ ಪದರ ಮೊದಲಿ ನಂತಾಗುತ್ತದೆ ಎಂಬುದನ್ನೂ ಸಹ ವಿಜ್ಞಾನಿಗಳು ಹೇಳಿದ್ದಾರೆ, ಓಝೋನ್ ಪದರದ ನಾಶಕ್ಕೆ ಕಾರಣವಾಗಿರುವ ಒಡಿಎಸ್‌ಗಳು ವಾತಾವರಣಕ್ಕೆ ಬಿಡುಗಡೆ ಅಗದಂತೆ ಎಚ್ಚರಿಕೆ ವಹಿಸಲು ವಿಶ್ವರಾಷ್ಟ್ರಗಳು ಪ್ರಯತ್ನಿಸುತ್ತಿವೆ ಮನುಷ್ಯನಿಂದ ಕ್ಲೋರೋಫ್ಲೋರೋ ಕಾರ್ಬನ್‌ಗಳು ಹೇರಳವಾಗಿ ವಾತಾವರಣಕ್ಕೆ ಬಿಡುಗಡೆ ಯಾಗುತ್ತಿದ್ದು. ನಾವು ಬಳಸುವ ಫ್ರಿಡ್ಜ್, ಎಸಿ, ಡ್ರೈಕ್ಲೀನಿಂಗ್ ರಾಸಾಯನಿಕಗಳು ಅಗ್ನಿಶಾಮಕ ಸಲಕರಣೆಗಳು, ಏರೋಸಾಲ್‌ಗಳು ರಾಸಾಯನಿಕಯುಕ್ತ ಗೊಬ್ಬರಗಳು ಇತ್ಯಾಗಳಿಂದ ವಿಷಕಾರಿ ಯಾದ ರಾಸಾಯನಿಕ ಸಂಯುಕ್ತಗಳು ವಾತಾವರಣ ಸೇರುತ್ತಿವೆ.ಆತಂಕದ ಸಂಗತಿ ಎಂದರೆ ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಓಝೋನ್ ಪದರದ ಸವಕಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಪ್ರತೀ ವರ್ಷವೂ ಓಝೋನ್ ಪದರ ಶೇ.4ರಷ್ಟು ತೆಳುವಾಗುತ್ತಿದೆ ಎನ್ನುವುದು ನಿಜಕ್ಕೂ ಮನುಕುಲಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ಇಷ್ಟೆಲ್ಲಾ ಅನಾಹುತಗಳು ಆಗುತ್ತವೆ ಎಂದು ತಿಳಿದುದ್ದರೂ ಮನುಕುಲಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ, ಮಾನವ ಮನಸ್ಸೋ ಇಚ್ಛೆ ಪ್ರಕೃತಿಯ ಮೇಲೆ ನಿತ್ಯವೂ ದೌರ್ಜನ್ಯವೆಸಗುತ್ತಿರುವುದು ಅವನ ಅವಿವೇಕದ ಪರಮಾವಧಿ ಎನ್ನಬಹುದು ಪರಿಸರ ರಕ್ಷಣೆ ಪ್ರತೀಯೊಬ್ಬರ ಆದ್ಯಕರ್ತವ್ಯವಾಗಿದ್ದು ಇನ್ನಾದರೂ ಮನುಕುಲ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಜವಾಬ್ದಾರಿಯನ್ನು ಅರಿತು ಎಚ್ಚೆತ್ತು ಕೊಂಡು ಪ್ರಜ್ಞಾವಂತರಾಗಿ ಬಾಳಬೇಕು. ಗಿಡಮರಗಳನ್ನ ಬೆಳೆಸುವುದು,ಪ್ಲ್ಯಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದರ ಜೊತೆಗೆ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ವಸ್ತುಗಳ ಬಳಕೆಯನ್ನು ಮಾಡಬೇಕು, ಜೊತೆಗೆ ವಿಷಕಾರಿ ಅನಿಲಗಳ ಉತ್ಪಾದನೆ ಯನ್ನು ನಿಲ್ಲಿಸಿ ಪರಿಸರವನ್ನು ಶುಚಿಯಾಗಿಟ್ಟು ಕೊಂಡು ಉಳಿಸಿ ಬೆಳಸಿದರೆ ಮಾತ್ರ ಓಝೋನ್ ಪದರದ ಸವೆಯುವಿಕೆಯನ್ನು ತಪ್ಪಿಸಬಹುದು,ಇಲ್ಲದಿದ್ದರೆ ಮನುಷ್ಯ ತನ್ನ ಅವನತಿಗೆ ತಾನೇ ಮುನ್ನುಡಿ ಬರೆದುಕೊಂಡು ಬಹಳ ಹೀನಾಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.


  • ಗೀತಾಂಜಲಿ ಎನ್ ಎಮ್ – ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW