ಪೈಸಾ ವಸೂಲ್ ಸಿನಿಮಾ ‘ಫೊಟಗ್ರಾಫರ್’ – ರಾಜಾರಾಂ ತಲ್ಲೂರ್



ಈಗಾಗಲೇ ನೋಡಿರದಿದ್ದರೆ, ದಯವಿಟ್ಟು ಎಲ್ಲರೂ ನೋಡಿ. ನನ್ನ ಮಟ್ಟಿಗೆ ಹೇಳುವುದಿದ್ದರೆ, ಗಾಢ ಅನುಭವ ಕೊಡಬಲ್ಲ ಪೈಸಾ ವಸೂಲ್ ಸಿನಿಮಾ. ಇದು ಲಾಕ್‌ಡೌನ್ ಅವಧಿಯಲ್ಲಿ ಇಲ್ಲಿಯ ತನಕ ನಾನು ಕಂಡ ಸಿನಿಮಾಗಳಲ್ಲೇ ತೀರಾ ಖುಷಿಕೊಟ್ಟದ್ದು. ಹಾಗಾಗಿ ಸ್ಪೆಷಲ್ ಮೆನ್ಶನ್.

ನವಿರಾದ ಆದರೆ ಅಷ್ಟೇ ವಿಲಕ್ಷಣವಾದ ಪ್ರೇಮಕತೆ ಇದು. ಇಷ್ಟು ಒಳ್ಳೆಯ ಸಿನಿಮಾ ಯಾಕೆ ಚರ್ಚೆಗೆ ಬರಲಿಲ್ಲವೋ ಗೊತ್ತಾಗಲಿಲ್ಲ. ಈವತ್ತಿನ ಡಿಜಿಟಲ್ ಜಗತ್ತಿನಲ್ಲಿ ದೊಡ್ಡ ಬಜೆಟಿನ, ದೊಡ್ಡ ಗಾತ್ರದ ಸಿನಿಮಾಗಳ ನಡುವೆ, ಇಂತಹ ಸಿನಿಮಾಗಳು ಅಡಿಬಿದ್ದು ಮುಳುಗಿ ಹೋಗುವುದೇ ಹೆಚ್ಚು ಅನ್ನಿಸುತ್ತದೆ. ಅದಲ್ಲವಾದರೆ, ಈ ಸಿನಿಮಾ ಸುದ್ದಿ ಮಾಡದಿರುವುದಕ್ಕೆ ಯಾವುದೇ ಕಾರಣ ಕಾಣಿಸಲಿಲ್ಲ.
ಓಪನ್ ಎಂಡೆಡ್ ಆಗಿರುವ, ಪೋಸ್ಟ್ ಮಾಡರ್ನ್ ಆಗಿರುವ ಇಂತಹ ಭಾರತೀಯ ಭಾಷೆಯ ಬೇರೆ ಸಿನಿಮಾ ಇತ್ತೀಚೆಗೆ ನನ್ನ ಗಮನಕ್ಕೆ ಬಂದಿಲ್ಲ (ನಾನು ನೋಡುವುದೂ ಕಡಿಮೆ ಬಿಡಿ). ಹಾಗಾಗಿ ಇಷ್ಟ ಆಯಿತು. ನಿಧಾನ ಚಲನೆಯ, ಕ್ಲೋಸ್‌ಅಪ್‌ಗಳ ಮೂಲಕ ಮುಖದ ಅಭಿವ್ಯಕ್ತಿಗಳಿಗೇ ಹೆಚ್ಚಿನ ಆದ್ಯತೆ ಕೊಡುವ, “ಆಬಿವಿಯಸ್” ಅನ್ನಿಸುವ ಯಾವುದನ್ನೂ ಹೇಳದೆ ಮುಂದುವರಿಯುವ ಈ ಸಿನಿಮಾ ಅವುಗಳನ್ನು ಹೇಳದೇ ಬಿಟ್ಟರೆ ಕತೆಗೆ ಏನೂ ಹಾನಿ ಆಗುವುದಿಲ್ಲ ಎಂಬುದನ್ನು ಸಾಬೀತು ಮಾಡುತ್ತದೆ. ಅಂತಹ ಎರಡು ಸನ್ನಿವೇಶಗಳನ್ನು ನಾನು ಗಮನಿಸಿದೆ.

ಫೋಟೋ ಕೃಪೆ : rediff

ಕತೆಯ ಕೊನೆಗೂ, ಈ ಕತೆ ಸಿನಿಮಾದೊಳಗಿನ ಸಿನಿಮಾವೋ/ಕನಸೋ ಎಂಬ ಗೊಂದಲ ಉಳಿಯುವ ಜೊತೆಗೆ, ಮುಂದೇನಾಗಬಹುದು ಎಂದು ಕಾಡುತ್ತಿರುತ್ತದೆ. ಆ ಓಪನ್ ಎಂಡೆಡ್ ಅಂತ್ಯ ಇದ್ದೂ ಸಿನಿಮಾ ಅಪೂರ್ಣ ಅನ್ನಿಸುವುದಿಲ್ಲ.



ಸಿನಿಮಾ ಕತೆ ಹೇಳುವ ಪದರಗಳೂ ಹಂತಹಂತವಾಗಿ ಆಳಕ್ಕಿಳಿಯುವುದು ವಿಶಿಷ್ಟ. ಒಬ್ಬಳು ವಿದ್ಯಾರ್ಥಿ ಮತ್ತು ಒಬ್ಬ ನಡು ವಯಸ್ಸಿನ ಬೀದಿ ಫೊಟಗ್ರಾಫರ್ ನಡುವಿನ ಪ್ರೀತಿ, ಒಬ್ಬಳು ಗುಜರಾತಿ ಸಿ.ಎ. ವಿದ್ಯಾರ್ಥಿನಿ ಮತ್ತು ಯುಪಿಯ ಮುಸ್ಲಿಂ ಸಮುದಾಯದ ಫೊಟೋಗ್ರಾಫರ್ ನಡುವಿನ ಪ್ರೀತಿ ಮತ್ತು ಮೇಲು ಮಧ್ಯಮವರ್ಗದ-ಬಡವರ ನಡುವಿನ ಪ್ರೀತಿ… ಹೀಗೆ ಸಿನಿಮಾ ಮುಂದುವರಿಯುತ್ತಾ ಹೋದಂತೆ ಆಳಕ್ಕಿಳಿಯುತ್ತದೆ; ಯಾವ ಹಂತದಲ್ಲೂ ಅಪೂರ್ಣ ಅನ್ನಿಸುವುದಿಲ್ಲ.

ರಾಕ್ಷಸ ನಟ ನವಾಜುದ್ದೀನ್ ಸಿದ್ದಿಕಿ ತಾನು ಯಾಕೆ ಸದ್ಯ ದೇಶದ ಅತ್ಯುತ್ತಮ ನಟ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸಾನ್ಯಾ ಮಲೋತ್ರಾ ವಿದ್ಯಾರ್ಥಿನಿಯಾಗಿ ಬಹಳ ಮಚೂರ್ಡ್ ನಟನೆ ತೋರಿಸಿದ್ದಾರೆ. ಆದರೆ, ಸಿನಿಮಾದ ರಿಯಲ್ ಹೀರೋ “ಫಾರುಕ್ ಜಾಫರ್” ಎಂಬ ಹಣ್ಣು ಹಣ್ಣು ಮುದುಕಿ. ಈ ಸಿನಿಮಾದ ಬಳಿಕ, ಕಳೆದ ವರ್ಷ ಬಂದ “ಗುಲಾಬೊ ಸಿತಾಬೊ” ಸಿನಿಮಾದ ಅಮಿತಾಬ್ “ನಾಯಕಿ” ಫಾರುಕ್ ನಟನೆಗಾಗಿಯಾದರೂ ಈ ಸಿನಿಮಾ ನೋಡಬೇಕು.


  • ರಾಜಾರಾಂ ತಲ್ಲೂರ್ (ಸಾಹಿತಿಗಳು, ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW