ಮೂಲವ್ಯಾಧಿಗೆ ಸರಳ ಮನೆಮದ್ದು

ಮೂಲವ್ಯಾಧಿ ಗೆ ಸರಳ ಮನೆಮದ್ದು ಮತ್ತು ಅಹಾರ ನಿಯಮಗಳನ್ನು ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಮೂಲವ್ಯಾಧಿಗೆ ಸರಳ ಮನೆಮದ್ದು ಮತ್ತು ಆಹಾರ ನಿಯಮಗಳು :

  • ಹಸಿರು ತರಕಾರಿ, ಹಣ್ಣು, ಮೆಂತೆ ಸೊಪ್ಪು, ಸೌತೆಕಾಯಿ, ಪಪ್ಪಾಯಿ ಹೆಚ್ಚಿಸಿಕೊಳ್ಳಿ.
  • ಗೋಧಿ ಹಿಟ್ಟು, ಮೆದುಬಿದ್ದ ಅಕ್ಕಿ, ಹೆಚ್ಚು ಮಸಾಲೆ, ಎಣ್ಣೆ–ಕರಿದ ಪದಾರ್ಥ, ಉಪ್ಪು–ಮೆಣಸು, ಮಾಂಸಾಹಾರ ತಪ್ಪಿಸಿ.
  • ದಿನಕ್ಕೆ ಕನಿಷ್ಠ 2–3 ಲೀಟರ್ ಬಿಸಿ ನೀರು ಕುಡಿಯಿರಿ.
  • ಮಲಬದ್ಧತೆ ಬಾರದಂತೆ ನೋಡಿಕೊಳ್ಳಿ – ಹೊಟ್ಟೆ ಸ್ವಚ್ಛವಾಗಿರಲಿ.
  • ಬಿಸಿ ನೀರಿನಲ್ಲಿ ಕುಳಿತ ಸ್ನಾನ (ಸಿಟ್ಜ್ ಬಾತ್) ದಿನಕ್ಕೆ 2–3 ಬಾರಿ ಮಾಡಿ.
  • ಹಗುರವಾಗಿ ನಡೆದು ವ್ಯಾಯಾಮ ಮಾಡಿ, ದೀರ್ಘಕಾಲ ಕುಳಿತುಕೊಳ್ಳುವುದನ್ನು ತಪ್ಪಿಸಿ.

ಗಮನಿಸಿ:
ಅಪಥ್ಯ ಪಾಲಿಸದೆ, ದೇವರು ಕೊಟ್ಟ ಒಂದು ಗುದದ್ವಾರದ ಜೊತೆ ತಾವೇ ಮತ್ತೊಂದು ದ್ವಾರವನ್ನು ಸೃಷ್ಟಿಸಿಕೊಂಡು ನೋವು ಅನುಭವಿಸಿದವರು ಸಾಕಷ್ಟು ನಮ್ಮಲ್ಲಿ ಬಂದು ಗುಣವಾದ ಉದಾಹರಣೆಗಳಿವೆ. ಆದ್ದರಿಂದ ಪಥ್ಯ ಪಾಲನೆ ಬಹಳ ಮುಖ್ಯ.

ಮೂಲವ್ಯಾಧಿಗೆ ಸುಲಭವಾಗಿ ಮನೆಯಲ್ಲೇ ಪ್ರಯತ್ನಿಸಬಹುದಾದ ಒಂದು ಸರಳ ಔಷಧಿ:

  • ಹರಿತಕಿ ಚೂರ್ಣ – ರಾತ್ರಿ ಮಲಗುವ ಮುನ್ನ 1 ಟೀ ಚಮಚ ಹರಿತಕಿ ಚೂರ್ಣವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ. ಮಲ ಸೌಕರ್ಯವಾಗುತ್ತದೆ, ಉರಿ ಮತ್ತು ನೋವು ಕಡಿಮೆಯಾಗಲು ಸಹಾಯವಾಗುತ್ತದೆ.

(ಇದು ಸಾಮಾನ್ಯ ಮತ್ತು ಸುರಕ್ಷಿತ ಉಪಾಯ.ಆದರೆ ತೀವ್ರ ರಕ್ತಸ್ರಾವ ಅಥವಾ ತುಂಬಾ ನೋವು ಇದ್ದರೆ ವೈದ್ಯಕೀಯ ಚಿಕಿತ್ಸೆ ಅಗತ್ಯ).


  •  ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW