ಡಾಕ್ಟರೇಟ್ ಪಡೆದ ರಾಜ್ಯದ ಮೊದಲ ರೈತ

ರೋವೂಪ್ ಸಾಹೇಬರಿಗೆ ಅವರಿಗೆ ೨೦೦೬ ರಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿತು. ಅವರು ಅನಾನಸ್ ಬೆಳೆದ ಸಾಧನೆಯ ಬಗ್ಗೆ ಅರುಣ್ ಪ್ರಸಾದ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ….

ರೋವೂಪ್ ಸಾಹೇಬರಿಗೆ ಡಾಕ್ಟರೇಟ್ ಅವರಿಗೆ ಕನಾ೯ಟಕದ ಫೈನಾಪಲ್ ಕಿಂಗ್ ಎಂಬ ಅನ್ವಥ೯ ನಾಮವೂ ಇದೆ, ಇವರ ಸಾಧನೆ  ಆ ಮಟ್ಟದ್ದು. ಉ.ಕ.ಜಿಲ್ಲೆಯ ಬನವಾಸಿಯ ಇವರಿಗೆ 2006ರಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದ್ದು, ದೊಡ್ಡ ಸುದ್ದಿ ಆಗಿತ್ತು. ಈಗೆಲ್ಲ ಡಾಕ್ಟರೇಟ್ ಅಗ್ಗ ಆದರೆ ಅವಾಗ ಅದಕ್ಕೆ ಘನತೆ ಇತ್ತು.

ರೋವೂಪ್ ಸಾಹೇಬರಿಗೆ ಡಾಕ್ಟರೇಟ್ ಕೊಟ್ಟ ಬಗ್ಗೆ ಅಪಸ್ವರವೂ ಇತ್ತು. ಕಾರಣ ಇವರು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆ ವಿಪರೀತ ಅಂತ. ಇವರನ್ನ ಭೇಟಿ ಮಾಡಲೇ ಬೇಕೆಂದು ಯೋಚಿಸುವಾಗಲೇ ಸೊರಬ ಮೂಲದ ಸಾಗರ ತಾಲ್ಲೂಕಿನ ಭೂ ಅಭಿವೃದ್ದಿ ಬ್ಯಾಂಕಿನ ಉದ್ಯೋಗಿ ಆಗಿದ್ದ ಜಾನಕಪ್ಪನವರು ಡಾಕ್ಟರ್ ರೋವೂಪ್ ಸಾಹೇಬರ ಸಾಧನೆ ಬಗ್ಗೆ ಹೇಳಿದಾಗ ನನಗೆ ಅವರ ಹತ್ತಿರ ಕರೆದೊಯ್ದು ಪರಿಚಯಿಸಲು ವಿನಂತಿಸಿದ್ದೆ.

ನಿಗದಿತ ಬೆಳಿಗ್ಗೆ ಸೊರಬ ಮಾಗ೯ವಾಗಿ ಬನವಾಸಿ ತಲುಪಿ ಅವರ ಮನೆಯಲ್ಲಿ ಅವರ ಅಗಮನಕ್ಕೆ ಕಾಯುವಾಗ ಮುಂಬೈನ ನನ್ನ ಗೆಳೆಯ ವಿಜಯ್ ಗಡ್ಕರ್ ಅವರ ಮನೆಯ ಡೈನಿಂಗ್ ಹಾಲ್ ನಿಂದ ಬಂದಾಗ ಇಬ್ಬರಿಗೂ ಆಶ್ಚಯ೯. ಹಿಂದೆಯೇ ಬಂದ ರೋವೂಪ್ ಸಾಹೇಬರಿಗೂ…ನನ್ನ ಗೆಳೆಯ ಅವರ ಅನಾನಸ್ ಹಣ್ಣಿನ ಸಂಸ್ಕರಣ ಘಟಕದ ಯಂತ್ರೋಪಕರಣ ಸರಬರಾಜು ಮಾಡಿದ್ದ ಕಾರಣ ಅವರ ಅತಿಥಿ ಆಗಿದ್ದರು ಇದರಿಂದ ರೋವೂಪ್ ಸಾಹೇಬರ ನನ್ನ ಪರಿಚಯ, ಚಚೆ೯ ಸರಾಗವಾಯಿತು.

ಎಕರೆ ಒ0ದರಲ್ಲಿ ಸರಾಸರಿ 30 ಟನ್ ಅನಾನಸ್ ಬೆಳೆ ತೆಗೆಯುವ ಇವರ ವಿಧಾನವೇ ಭಿನ್ನ, ಇವರಿಂದ ಅನಾನಸ್ ಬೆಳೆಯ ಹಬ್ ಆಗಿದೆ ಬನವಾಸಿ. ಅನಾನಸ್ ಒಯ್ಯಲು ದೂರದ ದೆಹಲಿ, ಪಂಜಾಬಿನಿಂದ ಖರೀದಿದಾರರು ಬರುತ್ತಾರೆ. ಇವರದ್ದೇ ಸ್ವಂತ ಅನಾನಸ್ ಹಣ್ಣು ಸಂಸ್ಕರಣ ಘಟಕ ಸ್ಥಾಪಿಸಿದ್ದಾರೆ. ದಿನಕ್ಕೆ 10 ರಿಂದ 20 ಟನ್ ಸಂಸ್ಕರಣ ಮಾಡುತ್ತದೆ. ಇವರ ಪುತ್ರ ಸಿರಸಿ ರಸ್ತೆಯಲ್ಲಿ ಇನ್ನೊಂದು ಸಂಸ್ಕರಣ ಘಟಕ ಸ್ಥಾಪಿಸಿದ್ದಾರೆ.

ಇವರ ಕೃಷಿ ವಿಧಾನ ವಿಭಿನ್ನ ನೂರಾರು ಎಕರೆ ಕುಷ್ಕಿ ಜಮೀನು ಅನಾನಸ್ ಬೆಳೆಯಲು ಗುತ್ತಿಗೆಗೆ ಪಡೆಯುತ್ತಾರೆ. ಅಲ್ಲಿ ನೀರಿಗಾಗಿ ಬೋರ್ ವೆಲ್ ತೆಗೆಸುತ್ತಾರೆ. ನಂತರ ದೊಡ್ಡ ಮಟ್ಟದ ಅನಾನಸ್ ಕೃಷಿ ಪ್ರಾರಂಭಿಸುತ್ತಾರೆ. ಅನಾನಸ್ ಬೆಳೆ ತೆಗೆದು ಲಾಭದಿಂದ ಅದೇ ಜಮೀನು ಖರೀದಿಸಿ ಬಾಳೆ ಹಾಕಿ ಅದರ ಮಧ್ಯ ಅಡಿಕೆ ಹಾಕುತ್ತಾರೆ. ಆರೇಳು ವರ್ಷದಲ್ಲಿ ಅದನ್ನು ಅತ್ಯುತ್ತಮ ಅಡಿಕೆ ತೋಟವಾಗಿ ಬದಲಿಸಿ ಬಿಡುವ ಕುಶಾಗ್ರಮತಿ ಅವರು.

2007 ರಲ್ಲಿ ಅವರ ಹಿಡಿತದಲ್ಲಿ 2000 ಎಕರೆಗೂ ಹೆಚ್ಚಿನ ಜಮೀನು ಅನಾನಸ್, ಬಾಳೆ ಮತ್ತು ಅಡಿಕೆ ಬೆಳೆ ಇತ್ತು. ಅವರ ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬಂದದ್ದು, ಸುರಿಗಿ ಹೂವಿನ ದಂಡೆ ಮಾರಿ ಜೀವನ ಮಾಡಿದ್ದು ನೆನಪಿಸಿಕೊಂಡಾಗ ಅವರ ಕಣ್ಣು ತೇವ ಆಗಿತ್ತು.

ಪ್ರಾಥಮಿಕ ಶಿಕ್ಷಣವೂ ಪೂಣ೯ ಮಾಡಲಾಗದ ಬಡತನ ಈಗಿನ ಕೃಷಿ ಸಾಹಸದಿಂದ ಕೃಷಿ ವಿಶ್ವವಿದ್ಯಾಲಯ ಒ೦ದು ಗೌರವ ಡಾಕ್ಟರೇಟ್ ಕೊಡುವ ಮಟ್ಟಕ್ಕೆ ಬೆಳೆದಿದ್ದನ್ನ ಸ್ವತಃ ಅವರೇ ಅವರು 1972 ರಲ್ಲಿ ಖರೀದಿಸಿದ ಹಳ್ಳಿ ಕೊಪ್ಪದ ತೋಟದಲ್ಲಿ ವಿವರಿಸಿ ನಮಗೆಲ್ಲ ಎಳನೀರು ಕುಡಿಸಿ, ತಿನ್ನಲು ಅನಾನಾಸ್ ಕೊಟ್ಟು ಜೊತೆಗೆ ಸಂಸ್ಕರಿಸಿದ ಅನಾನಸ್ ಟಿನ್ ಗಳನ್ನ ಕೊಟ್ಟಿದ್ದು ಮೊನ್ನೆ 16 ಅಕ್ಟೋಬರ್ 2020 ರಂದು ಡಾಕ್ಟರ್ ರೋವೂಪ್ ಸಾಹೇಬರು ಇಹ ಲೋಕ ತ್ಯಜಿಸಿದ ಸುದ್ದಿ ತಿಳಿದಾಗ ನೆನಪಾಯಿತು.

ಇವರ ಹತ್ತಿರ ಅವತ್ತು ದಾಸ್ತಾನಿದ್ದ ಕಾಳು ಮೆಣಸು ಒ0ದು ಸಾವಿರ ಕ್ವಿಂಟಾಲ್ ಗೂ ಹೆಚ್ಚು. ಕೃಷಿ ಒಂದನ್ನ ಕೈಗಾರಿಕೆ ಮಾಡಿ ಯಶಸ್ವಿ ಆದ ಡಾಕ್ಟರ್ ಅಬ್ದುಲ್ ರೋವೂಪ್ ಅಬ್ದುಲ್ ಕರೀಂ ಶೇಖ್ ಬನವಾಸಿ ಇನ್ನು ನೆನಪು ಮಾತ್ರ ಆದರೆ ಅವರ ಕೃಷಿ ಸಾಧನೆ ಮುಂದಿನ ತಲೆಮಾರಿಗೂ ಒಂದು ಸಾಧನೆಯ ಕೈಪಿಡಿ ಆಗಿದೆ. ರಾಜ್ಯದ ಅನಾನಸ್ ಹಣ್ಣಿನ ಕಿಂಗ್ ರ ಸಾಧನೆ ಸಣ್ಣದಲ್ಲ.


  • ಅರುಣ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW