ಈ ನೀರು veg ಅನ್ನಲೇ… Non-veg ಅನ್ನಲೇ…



ನನ್ನ ಗೆಳೆಯ ಅಸ್ವಸ್ಥನಾದಾಗ ಡಾಕ್ಟ್ರು ಕೊಟ್ಟ ಆ ಮಾತ್ರೆಯಿಂದ ಗುಣಮುಖನಾದ, ಆದರೆ ಅವನ ಬಾಯಿಂದ ಬರುತ್ತಿದ್ದ ಕೆಟ್ಟು ದುರ್ನಾತ ಇಂದಿಗೂ ಮರೆಯಲು ಸಾಧ್ಯವಿಲ್ಲ. ಆ ಮಾತ್ರೆ ಯಾವುದರಿಂದ ತಯಾರಾಗಿದ್ದು ಗೊತ್ತೇ?…ಪ್ರೊ.ರೂಪೇಶ್ ಅವರ ಕುತೂಹಲಕಾರಿ ಲೇಖನವನ್ನು ಮುಂದೆ ಓದಿ …

(ಹಿನ್ನೋಟ ಕಥನ flash back)

ಜಿನಸು ಅಂಗಡಿ ನಡೆಸುತ್ತಿದ್ದ ನನ್ನ ಮಿತ್ರನೊಬ್ಬನಿಗೆ ತುಂಬಾ ವರುಷದಿಂದ ದೇಹ ಅಸ್ವಸ್ಥ ಆಗುತ್ತಿತ್ತು. ಶೀಘ್ರ ಗುಣಮುಖನಾಗಲು ಆಹಾರ ನಿಯಂತ್ರಣ ಮಾಡಿ, ಮಾಂಸಾಹಾರ ತ್ಯಜಿಸಿದ. ನಂತರ ನೋಡಿದರೆ ಆ ರೋಗ ದ್ವಿಮುಖ ಉಲ್ಬಣಗೊಂಡು ನಡೆದಾಡಲು ಅಸಾಧ್ಯತೆ ತಲೆದೋರಿತು.

ಅಂದು ನಾನು ಮಂಗಳೂರಿನಲ್ಲಿ ಕೆಲಸಮಾಡುತ್ತಿದ್ದ ಸಮಯ. ಊರಲ್ಲಿ ಸರಿಯಾದ ಚಿಕಿತ್ಸೆ ಇಲ್ಲದೆ, ಮಂಗಳೂರಿನ ಪ್ರಸಿದ್ಧ ಆಸ್ಪತ್ರೆಗೆ ನನ್ನನ್ನೂ ಜೊತೆಗೆ ಕರೆದುಕೊಂಡು ಹೋದ. ಡಾಕ್ಟರ್ ಅವನನ್ನು ಸುಧೀರ್ಘವಾಗಿ ಪರೀಕ್ಷಿಸಿದರು. ಅವನ ಮಲ- ಮೂತ್ರ-ರಕ್ತ ಪರಿಶೀಲನೆಗಿತ್ತರು. ಎರಡು ದಿನ ಬಳಿಕ ಹೋದಾಗ ಬೆಳಿಗ್ಗೆ – ರಾತ್ರಿ ತಿನ್ನಲು ಒಂದು ಅಂತಾರಾಷ್ಟ್ರೀಯ ದುಬಾರಿ ಮಾತ್ರೆ ಬರೆದು, ಎರಡು ಮಾತ್ರೆ ಆಸ್ಪತ್ರೆಯಿಂದ ಉಚಿತ ಕೊಟ್ಟು ” ಈವತ್ತು ಇಲ್ಲೇ ಇದ್ದು ಈ ಮಾತ್ರೆಯಿಂದ ಏನಾದರೂ ಅನಾನುಕೂಲವಾದರೆ ನಮಗೆ ಮರುಪರಿಶೀಲಿಸಬೇಕು” ಎಂದರು. ನಾನು ರಾತ್ರಿ ಪಾಳಿ ಕೆಲಸಕ್ಕೆ ಹೋದೆ. ಅವನು ರಾತ್ರಿ ಆ ಮಾತ್ರೆ ನುಂಗಿ ಆಸ್ಪತ್ರೆಯಲ್ಲೇ ಮಲಗಿದ. ಬೆಳಿಗ್ಗೆ ನಾನು ಮರಳಿ ಆಸ್ಪತ್ರೆ ಬಂದಾಗ ಅವನ ಮುಖ ಒಂತರಾ ಇತ್ತು ” ಆ ಮಾತ್ರೆಯಿಂದ ಒಂದು ದುರ್ವಾಸನೆ ತೇಗು ಮಾರೆಯಾ” ಎಂದ , ಹೇಗಾದರೂ ಸರಿ ಈ ರೋಗ ವಾಸಿಯಾದರೆ ಸಾಕು ಎಂದು ಬೆಳಗ್ಗಿನ ಮಾತ್ರೆಯೂ ನುಂಗಿದ.

ಫೋಟೋ ಕೃಪೆ : arstechnica

ಡಾಕ್ಟರ್ ಬಂದಾಗ ಸಮಸ್ಯೆ ತೋಡಿಕೊಂಡಾಗ

” ಅದೆಲ್ಲಾ ಮಾಮೂಲಿ…. ಬೇರೇನೂ ಸಮಸ್ಯೆ ಇಲ್ಲವಲ್ಲ. . ಇನ್ನು ಮನೆಗೆ ಮರಳಿ, ನಾಲ್ಕು ದಿನ ಉಳಿದ #ಕ್ಯಾಪ್ಸೂಲ್ ಮಾತ್ರೆ ಸೇವಿಸಿ” ಎಂದು ಉಳಿದ ನಾಲ್ಕು ದಿನದ ಮಾತ್ರೆ ತಿಂದು ಬರಲು ಹೇಳಿದರು.

ಅಂದು ಅವನನ್ನು ಬಸ್ಸ್ ಹತ್ತಿಸುವಾಗ, ಅವನ ಬಾಯಿಯಿಂದ ಬಂದ ತೇಗಿನ ಅನಿಲ ನನಗೇ ಬಹಳ ಕೆಟ್ಟ ವಾಸನೆಯ ಅನುಭವವಾಯಿತು. ಆದರೆ ನಂತರ ಇಂದಿನವರೆಗೂ ಅವನಿಗೆ ಆ ರೋಗ ಮರುಕಳಿಸಲಿಲ್ಲ ಎಂಬುವುದೇ ಸೋಜಿಗ.

ಕೆಲ ವಾರದ ನಂತರ ನಾನು ನಮ್ಮ ಕಾರ್ಖಾನೆಯ ಒಬ್ಬ ಕಾರ್ಮಿಕನನ್ನು ಸುಶ್ರೂಶೆಗೆ ಅದೇ ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದೆ. ರಾಸಾಯನ ಶಾಸ್ತ್ರದ ವಿದ್ಯಾರ್ಥಿಯಾದ ನಾನು, ಕಾರ್ಮಿಕನ ಪರೀಕ್ಷೆಯ ಸಮಯದಲ್ಲಿ ಅವನನ್ನು ಅಲ್ಲೇ ಬಿಟ್ಟು, ಮಿತ್ರನ ಡಾಕ್ಟರನ್ನು ಹುಡುಕಿಕೊಂಡು , ಆ ಮಾತ್ರೆಯಲ್ಲಿದ್ದ ರಾಸಾಯನಿಕ ವಸ್ತು ಏನಾಗಿರಬಹುದು ಎಂದು ವಿಚಾರಿಸಿದಾಗ ” #ವಿದೇಶಿ_ಮಾನವ_ಮಲ” ಎಂದರು. ನಾನು ಅಂದು ದಿಗ್ಭ್ರಾಂತನಾದೆ. ಈ ಕೆಲ ದಿನಗಳ ಹಿಂದೆ Dr. B M Hegde ಯವರ ವಿಡಿಯೋದಲ್ಲಿ ಅವರೂ ದೇಹಾಸ್ವಸ್ಥ್ಯಕ್ಕೆ “ಮಲದ ಕ್ಯಾಪ್ಸೂಲ್ ಮಾತ್ರೆ” ಯ ವಿವರಣೆ ಕೊಟ್ಟಿದ್ದು ನೋಡಿದೆ – ಕೇಳಿದೆ.

ಈ ಮಾತ್ರೆಯ capsule ಪೊರೆ/ಕವಚ ಕೂಡಾ ಒಂದು ಪ್ರಾಣಿಯ ಚರ್ಮದಿಂದ ಮಾಡಿದ್ದೂ ಹೌದು.

ಫೋಟೋ ಕೃಪೆ : discover magazine

ಯಾವುದೇ ಪ್ರಾಣಿ ತಿನ್ನುವ ಆಹಾರದಲ್ಲಿ ಅದು #ಸಸ್ಯಾಹಾರ_ಮಾಂಸಹಾರವಾಗಲೀ ಇರುವುದು ಪ್ರೋಟೀನುಗಳು, ವಿಟಾಮಿನುಗಳು, ಖನಿಜ…ಮುಂತಾದ ದೇಹಕ್ಕೆ ಊರ್ಜ/ ಶಕ್ತಿ ಕೊಡುವ ಮೂಲ ಅಷ್ಟೇ. ಅವನವನ ನಿಸರ್ಗದಲ್ಲಿ ದೊರೆಯುವ, ರುಚಿಗೆ , ದೇಹಾಗತ್ಯತೆ , ಆರೋಗ್ಯ ಪೋಷಣೆಗೆ…. ಮುಂತಾದ ಪರಿಸ್ಥಿತಿಗಣುಗುಣವಾಗಿ ಏನೇನೋ ತಿನ್ನುತ್ತಾರೆ.



ಕಾವೇರಿ ನದಿ…..,

▪️ತಾನು ಹರಿವ ತೀರದಲ್ಲಿ ಯಾವುದೇ ಮನುಷ್ಯ ಮುಟ್ಟದೆ , ಜಲಚರಗಳಿಲ್ಲದೆ KRS ಅಣೆಕಟ್ಟಿಗೆ ಬಂದು ನಿಲ್ಲುತ್ತದೋ?
▪️ನಿಂತ ಈ ಕಾವೇರಿ ನೀರು ತುಂಬಾ ಸ್ವಚ್ಛವಾಗಿರುತ್ತದೆಯೋ ?
▪️ನಂತರ ಆ ಕಾವೇರಿ ನೀರನ್ನು ದೊಡ್ಡ ಪಟ್ಟಣದ ಕಡೆ (ಪೈಪಿನಲ್ಲಿ)ಹರಿಸಿ, ಆ ಪಟ್ಟಣದ ಹೊರ ಆವರಣದಲ್ಲಿ ಶೇಖರಿಸಿದ ತೊಟ್ಟಿಯಲ್ಲಿ (tank) , ಒಂದೊಂದು ಬಡಾವಣೆಯಲ್ಲಿ ಶೇಖರಿಸಿದ ತೊಟ್ಟಿಯಲ್ಲಿ, ಹಕ್ಕಿ, ಪಾರಿವಾಳಗಳು ಎಂಬ ಪಕ್ಷಿಯಾಗಲೀ, ಹಲ್ಲಿ, ಹಾತೆ , ಜಿರಳೆ…..ಮುಂತಾದ ಚರಗಳಿಂದ ಸಂರಕ್ಷಿಸುವ ಕವಚ ಹಾಕುತ್ತಾರೆಯೇ?
▪️ನಂತರ ನಮ್ಮಂಗಳು ವಾಸಿಸುವ ಮನೆಯ ಸಂಪಿನಲ್ಲೂ ಈ ಚರಗಳಿಂದ 24 ಗಂಟೆ ಸಂರಕ್ಷಿಸಿದ ನೀರೇ? ಈ ನೀರನ್ನು veg ಅನ್ನಲೇ…… Non-veg ಅನ್ನಲೇ…..
unknown veg ಅನ್ನಲೇ…..

ಭಾಗ್ಯ ಅನ್ನಲೇ ಪುಣ್ಯ ಅನ್ನಲೇ …. #ಡಾ_ರಾಜ್ ಹಾಡು ನೆನಪಾಯಿತು.

ಎಲ್ಲರ ಆಹಾರವನ್ನು ಗೌರವಿಸೋಣ
ಇದೇ ತಿನ್ನಿ ಎಂಬ ಒತ್ತಡ ಮಾಡದಿರೋಣ
ಏನೇ ತಿಂದರೂ ಮನಸ್ಸು ಸ್ವಚ್ಛವಾಗಿರಿಸೋಣ….
ಬೇಡರ ಕಣ್ಣಪ್ಪನ ಅಭಿಮಾನಿ.

ನಿಮ್ಮವ ನಲ್ಲ
*ರೂಪು*


  • ಪ್ರೊ.ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading