‘ಧನಾತ್ಮಕ ಚಿಂತನೆ’ –  ಪದ್ಮನಾಭ. ಡಿ.



ಅಸೂಯೆ ಮನುಷ್ಯನನ್ನೇ ತಿಂದು ಹಾಕುತ್ತದೆ. ಬೇರೆಯವರ ಮೇಲೆ ಅಸೂಯೆ ಪಟ್ಟಾಗ ಮೊದಲು ಸುಡುವುದು ನಮ್ಮನ್ನು ಎನ್ನುವುದು ಅರಿತರೆ ಜೀವನ ಸನ್ಮಾರ್ಗದಲ್ಲಿ ಸಾಗುತ್ತದೆ, ಲೇಖಕ ಪದ್ಮನಾಭ. ಡಿ. ಅವರು ಈ ಲೇಖನದ ಮೂಲಕ ಜೀವನಕ್ಕೆ ಒಂದು ಒಳ್ಳೆ ಪಾಠವನ್ನು ಹೇಳಿಕೊಟ್ಟಿದ್ದಾರೆ, ಮುಂದೆ ಓದಿ…

ಮಹಾಭಾರತದಲ್ಲಿ ನಾರದರು ಧರ್ಮರಾಯನಿಗೆ ಹೇಳಿದ ಒಂದು ಶ್ಲೋಕ ಹೀಗಿದೆ.

“ನಿತ್ಯಂ ಶಮಪರಾಯೆ ತಥಾ
ಯೇಚಾನುಸೂಯಕಾಃ
ನಿತ್ಯಸ್ವಾಧ್ಯಾಯಿನೊ ಯೆ ಚ
ದುರ್ಗಾನ್ಯತಿತರಂತಿ ತೇ”

ದಿನವೂ ಯಾರು ತಮ್ಮ ಮನಸನ್ನು ನಿಯಂತ್ರಿಸುವವರೋ ಬೇರೆಯವರ ಪ್ರಗತಿಯನ್ನು ಕಂಡು ಅಸೂಯೆ ಪಡುವುದಿಲ್ಲವೋ, ತಮ್ಮ ಅಧ್ಯಯನದಲ್ಲಿ ಗಮನ ಹರಿಸುವರೋ ಅವರು ಎಲ್ಲ ಅಡೆತಡೆಗಳನ್ನು ಬೇಗನೆ ದಾಟುತ್ತಾರೆ.

ಮನಸು ಒಂದು ಮರ್ಕಟದಂತೆ ಇನ್ನೊಬ್ಬರ ತಪ್ಪುಗಳನ್ನೇ ಹುಡುಕುತ್ತದೆ ಒಬ್ಬನು ನೆಮ್ಮದಿ ಅಥವಾ ಪ್ರಗತಿ ಹೊಂದಿದರೆ ಅವನನ್ನು ಪ್ರಶಂಸಿಸುವ ಬದಲು ಅಸೂಯೆಪಡುವ ಜನಗಳೇ
ಹೆಚ್ಚು. ಯಾರು ಮಾಡದೇ ಇರೋದನ್ನ ಇವನು ಮಾಡಿದ್ದಾನಾ/ಮಾಡಿದ್ದಾಳಾ???….ಎಂದು ಹೇಳುವುದು ಸರ್ವೇಸಾಮಾನ್ಯ. ಇಲ್ಲವೆಂದರೆ ಅವನು ಅದೃಷ್ಟ ಮಾಡಿದ್ದಾನೆ ಅವಕಾಶ ಸಿಕ್ಕಿದೆ ಅಷ್ಟೇ.
ನಮಗೆ ಅದೃಷ್ಟ ಅವಕಾಶ ಇಲ್ಲ, ಇದ್ದಿದ್ದರೆ ನಾವು ಮಾಡಿ ತೋರಿಸ್ತಾ ಇದ್ವಿ ಎಂದು ಹೇಳುವುದನ್ನೂ ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ.

ಇದಕ್ಕೆ ಕಾರಣ ಅಸೂಯೆ. ಇದರಿಂದ ಪ್ರಗತಿ ಹೊಂದಿದ ವ್ಯಕ್ತಿಗೆ ಏನೂ ತೊಂದರೆಯಿಲ್ಲ. ಬೆಂಕಿ ಹುಟ್ಟಿದ ಜಾಗವನ್ನೇ ಮೊದಲು ಸುಟ್ಟು, ನಂತರ ಅಕ್ಕಪಕ್ಕ ಹರಡುತ್ತದೆ. ಅದೇ ರೀತಿ ಅಸೂಯೆ ಇರುವ ವ್ಯಕ್ತಿಗಳು ತಾವು ಕಾರಣವಿಲ್ಲದೇ ಬಹಳ ಸಂಕಟಪಡುತ್ತಾರೆ . ನಂತರ ಇತರರ ಮನಸ್ಸು ಸಹಾ ಕ್ಷೋಭೆಗೊಳಗಾಗಲು ಕಾರಣವಾಗುತ್ತಾರೆ.



ಒಬ್ಬ ವ್ಯಕ್ತಿಯು ಸಾಧನೆ ಮಾಡಲು ಹೋಗಿ ವಿಫಲನಾದರೆ ಅತ್ಯಂತ ಸಂತೋಷ ಪಡುವವರೂ ಇದ್ದೇ ಇರುತ್ತಾರೆ. ಅಂತಹವರು ಅವರ ಜೀವನದಲ್ಲಿ ಏನನ್ನೂ ಸಾಧಿಸುವುದಿಲ್ಲ ಮತ್ತು ಇತರರ ಸಾಧನೆಗೂ ಸಹ ನೆರವಾಗುವುದಿಲ್ಲ. ಇಂತಹ ಋಣಾತ್ಮಕತೆ Negative thought ತೆಗೆದುಹಾಕಿ, ನಮ್ಮ ಮನಸ್ಸನ್ನು ಹತೋಟಿಯಲಿರಿಸಿ ಸ್ವಾಧ್ಯಾಯ ಅಂದರೆ ನಮ್ಮ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಾ ಪ್ರಗತಿ ಹೊಂದಬೇಕೆಂದು.ಈ ಶ್ಲೋಕ ಹೇಳುತ್ತದೆ.


  •  ಪದ್ಮನಾಭ. ಡಿ. ( ನಿವೃತ್ತ ಪೋಸ್ಟ್ ಮಾಸ್ಟರ್,  ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018,  ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ
    – 2022 ಕವಿಗಳು, ಲೇಖಕರು) ಮೈಸೂರು.

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading