ಕಷ್ಟಕ್ಕೆ ಮಿಡಿಯುವವರೆ ನಿಜವಾದ ಶ್ರೀಮಂತರು



‘ಕಷ್ಟಕ್ಕೆ ಮಿಡಿಯೋಣ, ಒಂದಾಗಿ ಬಾಳೋಣ’ ಅನ್ನುತ್ತಾ…ಕಷ್ಟಕ್ಕೆ ಮಿಡಿದ ಹೃದಯವಂತನ ಬಗ್ಗೆ ಸಣ್ಣ ವರದಿಯಿದು…

ಸಹಾಯ ಮಾಡುವ ಮನಸ್ಸಿದ್ದರೆ ಯಾವುದೇ ಜಾತಿ, ಧರ್ಮ, ಭಾಷೆ, ನೆಲ, ಜಲ ಅಡ್ಡಿಯಾಗದು ಎನ್ನುವುದಕ್ಕೆ ಅಬ್ದುಲ್ ರಝಾಕ್ ಅಲವಾದಿ ಅವರೇ ಉತ್ತಮ ಉದಾಹರಣೆ. ಇತ್ತೀಚಿಗೆ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಬೇರೆ ಭಾಷೆ, ಬೇರೆ ದೇಶ ಎಂದು ಯೋಚಿಸದೆ ಬೆಂಗಳೂರಿನ ಅನಾಥಾಶ್ರಮದ ಮಕ್ಕಳ ಕಲಿಕಾ ವೆಚ್ಚಕ್ಕಾಗಿ ೨೧,೬೦೦ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ.

(ಅಬ್ದುಲ್ ರಝಾಕ್ ಅಲವಾದಿ)

ಅಬ್ದುಲ್ ರಝಾಕ್ ಅಲವಾದಿ ಅವರು UAE ನಿವಾಸಿಗರಾಗಿದ್ದು, ಕರ್ನಾಟಕದ ತೀರ್ಥಹಳ್ಳಿಯ ನೊಣಬೂರು ಎಂಬ ಪುಟ್ಟ ಹಳ್ಳಿಯ ರಾಘವೇಂದ್ರ ಅವರ ಸಹೋದ್ಯೋಗಿಯಾಗಿದ್ದಾರೆ. ಬೆಂಗಳೂರಿನಲ್ಲಿರುವ ಶ್ರೀ ಸಾಯಿ ಸ್ನೇಹ ಫೌಂಡೇಶನ್ ಅನಾಥಾಶ್ರಮದ ಬಗ್ಗೆ ರಾಘವೇಂದ್ರ ಅವರಿಂದ ತಿಳಿದುಕೊಂಡಾಗ ಹಿಂದು ಮುಂದು ನೋಡದೆ ಖುಷಿಯಿಂದ 1000 ದಿರಾಮ್ ದುಬೈ ಹಣವನ್ನ ನೀಡಿದರು. ಈ ಆಶ್ರಮದಲ್ಲಿ 63 ಮಕ್ಕಳು ಹಾಗೂ 14 ಜನ ವೃದ್ಧರಿದ್ದಾರೆ, ಅವರು ನೀಡಿದ ಹಣದಿಂದ ಊಟ, ಮಕ್ಕಳ ಓದಿಗೆ ಬೇಕಾಗುವ ಖರ್ಚು ವೆಚ್ಚಗಳಿಗೆ ಸಹಾಯವಾಗುವುದು.

ಮಾನವೀಯತೆಗೆ ಧರ್ಮ ಅಡ್ಡಿಯಾಗಲಾರದು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಜಾತಿ, ಧರ್ಮದ ಹೆಸರಿನಲ್ಲಿ ಹೊಡೆದಾಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಜಾತಿ ಒಂದೇ ಅದು ಮನುಜ ಜಾತಿ ಎನ್ನುವುದುನ್ನು ಎಲ್ಲರು ಅರಿಯಬೇಕಿರುವುದು ಅನಿವಾರ್ಯವಾಗಿದೆ.

ದೇಶ ಮತ್ತು ಧರ್ಮ ಯಾವುದೇ ಇರಲಿ,  ಕಷ್ಟಕ್ಕೆ ಮಿಡಿದ ಹೃದಯವಂತನಿಗೆ ಆ ಭಗವಂತ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಆಶಿಸೋಣ…


  • ಆಕೃತಿಕನ್ನಡ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading