ಹೂಗಳಲು ಪುಳಕ ವಿರಹ ತಾಳದ ನಡುಕ ಪ್ರಣಯದಾಟಕೆ ಕರೆವ ತವಕ…ಅಪ್ಪಯ್ಯ ಯು ಯಾದವ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಓದಿ…
ಮೋಡದೆಡೆಯಿಂದ
ಪನ್ನೀರ ಹನಿಯು
ಚಿಮ್ಮುತ್ತಬಂತು
ಧರೆಗೆ
ಕುಳಿರ್ಗಾಳಿ ಬೀಸೆ
ಮೈಎಲ್ಲ ನಡುಕ
ಭೂತಾಯಿಗಾಯ್ತು
ಪುಳಕ
ಎಲೆಎಲೆಯ ಮೇಲೆ
ಪನಿಯುದುರಿದಾಗ
ಮುತ್ತಪೋಣಿಸಿದಾಂಗೆ
ಧರೆಯು
ಹೂಗಳಲು ಪುಳಕ
ವಿರಹ ತಾಳದ ನಡುಕ
ಪ್ರಣಯದಾಟಕೆ ಕರೆವ
ತವಕ
ಕರಿಮೋಡವಿಳಿದು
ಬೆಟ್ಟ ಸಾಲುಗಳಲ್ಲಿ
ಹಾಯಾಗಿ ಕುಳಿತುವಕಟ
ಎಂತ ಸುಂದರ ನೋಟ
ಬೆಳ್ಳಕ್ಕಿಗಳ ಕೂಟ
ಸ್ಪರ್ಧೆಗಿಳಿದಂತೆ
ಹಾರಾಟ
ಗಿರಿಶಿಖರಗಳಮೇಲೆ
ಕರಿಮೋಡ
ಚುಂಬಿಸಲು
ಮಳೆಯಾಗಿ
ಸುರಿಯಿತಕಟ
- ಅಪ್ಪಯ್ಯ ಯು ಯಾದವ್
