ಮೊಮ್ಮಗಳಿಗೆ ಪ್ರೀತಿಯ ಅಪ್ಪುಗೆ

ಕವಿ ಶಿವದೇವಿ ಅವನೀಶಚಂದ್ರ ಅವರು ತಮ್ಮ ಮೊಮ್ಮಗಳಿಗೆ ಹುಟ್ಟುಹಬ್ಬಕ್ಕಾಗಿ ಬರೆದ ನಲ್ಮೆಯ ಕವನವನ್ನು ತಪ್ಪದೆ ಮುಂದೆ ಓದಿ…

ನಮ್ಮ ಮನೆಯ ಪುಟ್ಟ ಕಂದ
ನಗುತಲಿರೆ ಸದಾ ಚಂದ
ಆಟ ಕೂಟದಲ್ಲಿ ಇವಳು
ಮೈಮರೆವುದೇ ಆನಂದ

ವರುಷವಾಯ್ತು ಎಂಟು ಈಗ ಕಲಿಯಬೇಕು ಬೇಗಬೇಗ
ಲೆಕ್ಕದೊಡನೆ ಮಗ್ಗಿಯನ್ನೂ
ಹೇಳಬೇಕು ಗುರುಗಳಿಗೀಗ

ಆಟಪಾಠ ನೃತ್ಯಕಲೆ
ಅಭಿನಯ ಸಂಗೀತ ಕಲಿತು
ತಾಳಿ ನೀನು ಖುಷಿಯ ರಂದ
ಎಲ್ಲಿದ್ದರೂ ನೀ.ನೀಡುವೆ ಆನ೦ದ

ಸಿಹಿಯಾಗಲಿ ನಿನ್ನ ಬಾಳು
ಕಾಡದಿರಲಿ ಯಾವ ಗೋಳು
ತಾಗದಿರಲಿ ಜಗದ ಕಣ್ಣು
ಈ ಬೆನ್ನದಂಥ ಬಾಲೆಗೆ

ಯೋಗ ದಿನದಿ ಜನರು ಯೋಗ
ಆಚರಿಸುತಿರೆ ಸಂಭ್ರಮದಿ ಈಗ
ಜಗವೆಲ್ಲವೂ ಸಡಗರಿಸುತಿರೆ
ಅದರ ಮಹಿಮೆ ಜನರೆ ತಿಳಿಯುತಿದೆ

ಹಿರಿಯರೊಲವು ಸಿಗುತಲಿರಲಿ
ದೈವ ಸದಾ ಹರಸುತಿರಲಿ
ಹುಟ್ಟುಹಬ್ಬ ಬರುತಲಿರಲಿ
ಖುಷಿಯ ತುಂಬಿ ಬಾಳಲಿ
*
ನಮ್ಮ ಮುದ್ದು ಪುನರ್ವಿ,
ನಿನ್ನ ಸಂಭ್ರಮದ ಹುಟ್ಟುಹಬ್ಬಕ್ಕೆ
ನಿನ್ನ ಅನು ಪಪ್ಪ ಬಾಬ್ಯವ್ಯ
ಅಪ್ಪುತಾತನ ಹಾರ್ದಿಕ ಶುಭಾಶಯಗಳು… ಹಾಗೂ
ಹೃತ್ಪೂರ್ವಕ ಆಶೀರ್ವಾದಗಳು
*
ನಿನ್ನವರು ಚೆಟ್ಟಿಮಾನಿ


  • ಶಿವದೇವಿ ಅವನೀಶಚಂದ್ರ – ಕವಿಗಳು, ಅಂಕಣಕಾರ್ತಿ, ಕೊಡಗು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading