‘ಪ್ರೇಮ’ ಕವನ – ವಿಮಲಾ ಪದಮಗೊಂಡ

‘ನನ್ನೆದೆಯೊಳಗೆ ಸದಾ ಒದ್ದಾಡುವ ತುಂಟ ಮರಿ ಮೀನು ನೀನು’….ವಿಮಲಾ ಪದಮಗೊಂಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಹೃದಯಕ್ಕೆ ಗಟ್ಟಿಯಾಗಿ ಅಪ್ಪಿಕೊಂಡ
ನಿನ್ನೊಲವ ನಂಟು
ಬಿಡಿಸಲಾಗದ ಗಂಟು ,
ಯಾವ ಜನ್ಮದ ಹರಕೆಯೊ
ನನ್ನೆದೆಯೊಳಗೆ ಸದಾ ಒದ್ದಾಡುವ ತುಂಟ
ಮರಿ ಮೀನು ನೀನು,

ನಿನ್ನ ಕಾಣಲು ಹುಡುಕುತ್ತಿದ್ದ ಕಂಗಳು
ಸುಮ್ಮನೆ ಕಣ್ಮುಚ್ಚಿ ಒರಗಿ ಕೂತಿವೆ
ನೀನೀಗ ಎದೆಯೊಳಗಿದ್ದುದು ನೆನಪಾಗಿ
ಪೆದ್ದುಗಳಂತೆ ನಗುತ್ತಾ ಎದೆ ಬಡಿತ
-ವನ್ನು ಗಮನಿಸುತ್ತವೆ,

ಶ್…. ಈಗ ಮಾತುಗಳು ಕೂಡಾ ವ್ಯರ್ಥ ಅನಿಸುತ್ತೆ
ಹೃದಯಗಳು ಸಂವಹನದ ಸಂಧಾನಕ್ಕೆ
ಸಹಿ ಹಾಕಿವೆ ,
ಏನಾದರು ಷರತ್ತುಗಳಿದ್ದರೆ ಹೇಳಿಬಿಡು
ಅನಿರ್ಧಿಷ್ಟಾವಧಿಗೆ ನಿನ್ನೊಲವ ಸೇವೆಗಾಗಿಯೇ
ಸಿದ್ಧವಾಗಿವೆ ತನು -ಮನ ,

ಯಾವಾಗಲಾದರು ಬಂದು ಸಂದೇಹದಿಂದ ಪ್ರಶ್ನಿಸಬೇಡ
ನನ್ನೊಳಗಿರುವ ನಿನ್ನ ಪ್ರೇಮದ ಅವಸ್ಥೆಯನ್ನು,
ಮನಬಿಚ್ಚಿ ನಗುವ ಈ ಗುಲಾಬಿಗಳೇ
ನನ್ನ ತಾಜಾ ಸ್ನೇಹದ ರಾಯಭಾರಿಗಳು ,
ಈ ಹೂಗಳು ಹೇಳುವ ನೂರಾರು ಕಥೆಗಳನ್ನು ಕೇಳಲು ನಿನ್ನ
ಮನಸ್ಸು ಚಡಪಡಿಸಬಹುದಾ?

ಸ್ನೇಹವೇ ಪ್ರೇಮವಾಯಿತು,
ಪ್ರೇಮವೇ ದೈವವಾಯಿತು
ದೈವದ ಒಂದು ರೂಪ ನೀನೇನಾ.. ??


  • ವಿಮಲಾ ಪದಮಗೊಂಡ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW