‘ಹೃದಯ’ ಕವನ – ವಿಮಲಾ ಪದಮಗೊಂಡ

ಯಾವಾಗಲಾದರು ಬಂದು ಸಂದೇಹದಿಂದ ಪ್ರಶ್ನಿಸಬೇಡ. ನನ್ನೊಳಗಿರುವ ನಿನ್ನ ಪ್ರೇಮದ ಅವಸ್ಥೆಯನ್ನು…ವಿಮಲಾ ಪದಮಗೊಂಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಹೃದಯಕ್ಕೆ ಗಟ್ಟಿಯಾಗಿ ಅಪ್ಪಿಕೊಂಡ
ನಿನ್ನೊಲವ ನಂಟು
ಬಿಡಿಸಲಾಗದ ಗಂಟು,
ಯಾವ ಜನ್ಮದ ಹರಕೆಯೊ
ನನ್ನೆದೆಯೊಳಗೆ ಸದಾ ಒದ್ದಾಡುವ ತುಂಟ
ಮರಿ ಮೀನು ನೀನು,

ನಿನ್ನ ಕಾಣಲು ಹುಡುಕುತ್ತಿದ್ದ ಕಂಗಳು
ಸುಮ್ಮನೆ ಕಣ್ಮುಚ್ಚಿ ಒರಗಿ ಕೂತಿವೆ
ನೀನೀಗ ಎದೆಯೊಳಗಿದ್ದುದು ನೆನಪಾಗಿ
ಪೆದ್ದುಗಳಂತೆ ನಗುತ್ತಾ ಎದೆ ಬಡಿತ
-ವನ್ನು ಗಮನಿಸುತ್ತವೆ,

ಶ್…. ಈಗ ಮಾತುಗಳು ಕೂಡಾ ವ್ಯರ್ಥ ಅನಿಸುತ್ತೆ
ಹೃದಯಗಳು ಸಂವಹನದ ಸಂಧಾನಕ್ಕೆ
ಸಹಿ ಹಾಕಿವೆ,
ಏನಾದರು ಷರತ್ತುಗಳಿದ್ದರೆ ಹೇಳಿಬಿಡು
ಅನಿರ್ಧಿಷ್ಟಾವಧಿಗೆ ನಿನ್ನೊಲವ ಸೇವೆಗಾಗಿಯೇ
ಸಿದ್ಧವಾಗಿವೆ ತನು-ಮನ ,

ಯಾವಾಗಲಾದರು ಬಂದು ಸಂದೇಹದಿಂದ ಪ್ರಶ್ನಿಸಬೇಡ
ನನ್ನೊಳಗಿರುವ ನಿನ್ನ ಪ್ರೇಮದ ಅವಸ್ಥೆಯನ್ನು,
ಮನಬಿಚ್ಚಿ ನಗುವ ಈ ಗುಲಾಬಿಗಳೇ
ನನ್ನ ತಾಜಾ ಸ್ನೇಹದ ರಾಯಭಾರಿಗಳು ,
ಈ ಹೂಗಳು ಹೇಳುವ ನೂರಾರು ಕಥೆಗಳನ್ನು ಕೇಳಲು ನಿನ್ನ
ಮನಸ್ಸು ಚಡಪಡಿಸಬಹುದಾ?

ಸ್ನೇಹವೇ ಪ್ರೇಮವಾಯಿತು,
ಪ್ರೇಮವೇ ದೈವವಾಯಿತು
ದೈವದ ಒಂದು ರೂಪ ನೀನೇನಾ.. ??


  • ವಿಮಲಾ ಪದಮಗೊಂಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading