ನೀ ಪಡಬೇಡ ಬೇಸರ ಬರುವೆ ಇರೋಣ ಆಗಿ ಒಂದೇ ಉಸಿರು…ಕವಿ ಶಿವಾ ಮದಭಾಂವಿ ಅವರ ಲೇಖನಿಯಲ್ಲಿ ಮೂಡಿದ ಕವನಗಳು. ತಪ್ಪದೆ ಮುಂದೆ ಓದಿ…
ಸಿರಿ
ಚೆಂದುಳ್ಳಿ ಚೆಲುವೆ ನನ್ನಾಕೆ
ಚೆಂದನೆಯ ಚೆಲುವೆಲ್ಲಾ ಇವಳೇ ತುಂಬಿಕೊಂಡಾಕೆ
ಸೌಂದರ್ಯ ಸಿರಿಯಲ್ಲಿ ಹೊಳೆಯುವಾಕೆ
ಚೆಲುವಿನ ಸಿರಿಯಲ್ಲಿ ತುಂಬಿ ತುಳುಕುವ ಬೆಳದಿಂಗಳಾಕೆ
ಚೆಂದುಳ್ಳಿ ಚೆಲುವೆ ನನ್ನಾಕೆ
ಚೆಂದನೆಯ ಚೆಲುವೆಲ್ಲಾ ಇವಳೇ ತುಂಬಿಕೊಂಡಾಕೆ
ಸೌಂದರ್ಯ ಸಿರಿಯಲ್ಲಿ ಹೊಳೆಯುವಾಕೆ
ಚೆಲುವಿನ ಸಿರಿಯಲ್ಲಿ ತುಂಬಿ ತುಳುಕುವ ಬೆಳದಿಂಗಳಾಕೆ
ಸೌಂದರ್ಯ ಶಿಖರ
ಕುತೂಹಲ ಕಾಡುತ್ತಿದೆ ಚೆಲುವೆ ನಿನ್ನ ಸೌಂದರ್ಯ ಸಿರಿಯಿಂದ
ನಿನ್ನ ಸೃಷ್ಟಿಸಲು ಆ ಸೃಷ್ಟಿಕರ್ತ್ ನಿಗೆ ಹಿಡಿದ ಸಮಯವೇಷ್ಟೇoದು
ಕೇಳಬೇಕಿದೆ ಅವನನ್ನ ಇಷ್ಟೊಂದು ಸೌಂದರ್ಯ ತುಂಬಲು ಕಾರಣವೇನೆಂದು
ಕೇಳಲೇಬೇಕಿದೆ ಸೃಷ್ಟಿಕರ್ತನು ಸಹ ಯಾವ ದೇವಿಯ ಆರಾಧಕನಗಿದ್ದನೆಂದು
ದೋಣಿಯಲಿ ಪ್ರೇಮದ ವಾಣಿ
ಕಾಗದದ ದೋಣಿಯ ಮೇಲೆ ಬರೆದು ಕಳಿಸುತ್ತಿರುವೇ ನಿನ್ನದೆ ಹೆಸರು
ನಿನಗೆ ಬಂದು ತಲುಪಿತೆನ್ನುವ ಭಾವದಿ ಹಿಡಿದು ಉಸಿರು
ಕಲ್ಪನೆಗಳ ಬೆನ್ನೇರಿ ಪದಗಳ ಬೆಸೆದು ನಿನಗಾಗಿ ಅಕ್ಷರವ ಹೊಸೆದು
ದೋಣಿಗೊಂದರಂತೆ ಹರಿಯ ಬಿಡುತಾ ಕುಳಿತಿರುವೇ ಮನದಲಿ ನಲಿದು
ಕ್ಷಣವೂ ನಿನ್ನದೆ ಧ್ಯಾನ ಗೀಚುವೆ ನಿನಗಾಗಿ ಕವನಗಳ ಸಾಲು
ಆಗಿಹೇ ನೀ ನನ್ನ ಪ್ರಾಣ ಮನದ ಮಾತುಗಳು ಮೂಡಿವೆ ಸಾಲು ಸಾಲು
ಎನ್ನೊಡತಿ ಕೇಳು ನಾನೊಂದು ತೀರ ನೀನೊಂದು ತೀರ
ನೀ ಪಡಬೇಡ ಬೇಸರ ಬರುವೆ
ಇರೋಣ ಆಗಿ ಒಂದೇ ಉಸಿರು
- ಶಿವಾ ಮದಭಾಂವಿ – ಗೋಕಾಕ
