‘ಬನ್ನಿ’ ಗಿಡದ ಮಹತ್ವ – ಮಂಜುನಾಥ್ ಪ್ರಸಾದ್

ಬನ್ನಿಯ ಸಸ್ಯ ಶಾಸ್ತ್ರೀಯ ಹೆಸರು Prosopis cineraria, ಕುಟುಂಬ – Fabaceae. ಮುಳ್ಳುಗಳಿಂದ ಕೂಡಿದ 25 – 30 ಅಡಿಯವರೆಗೂ ಬೆಳೆಯುವ ಮರ.  ಬನ್ನಿ ಗಿಡದ ಮಹತ್ವದ ಕುರಿತು ಮಂಜುನಾಥ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಔಷಧೀಯ ಗುಣಗಳು :

  • ಕುಷ್ಟ ರೋಗ (ಚರ್ಮ ರೋಗಗಳು), ಗ್ರಂಥಿಗಳು (ಗೆಡ್ಡೆಗಳು), ಬಾಲ ರೋಗಗಳು (ಮಕ್ಕಳ ರೋಗಗಳು), ವಾತ, ಪಿತ್ತ, ಕಫ, ಕೆಮ್ಮು, ಅತಿಸಾರ ಮತ್ತು ಶ್ವಾಸ ಸಂಬಂಧಿ ರೋಗಗಳ ಚಿಕಿತ್ಸೆಗಾಗಿ ಈ ಮರದ ಸಾರವನ್ನು ಬಳಸಲಾಗುತ್ತದೆ.
  • ಧನ್ವಂತರಿ ನಿಘಂಟಿನ ಪ್ರಕಾರ, ‘ಪಂಚಭೃಂಗ’ ಎಂಬ 5 ಮರಗಳಲ್ಲಿ ಶಮೀ ವೃಕ್ಷವೂ ಒಂದು. ಯಾವುದೇ ವ್ಯಕ್ತಿಯ ರೋಗ ಗುಣಪಡಿಸಿದ ನಂತರ ಸ್ನಾನ ಮಾಡಲು ಈ ಐದು ಮೂಲಿಕೆಗಳನ್ನು ಬಳಸಲಾಗುತ್ತದೆ. ಇದು ರೋಗದ ಸೋಂಕನ್ನು ನಿವಾರಿಸುವುದಲ್ಲದೇ ಶಕ್ತಿಯನ್ನು ಉತ್ತೇಜಿಸುತ್ತದೆ.

ಫೋಟೋ ಕೃಪೆ : google

  • ಅನಿರೀಕ್ಷಿತ ಗರ್ಭಪಾತವನ್ನು ತಪ್ಪಿಸಲು ಇದರ ಹೂವುಗಳನ್ನು ಸಕ್ಕರೆ ಕ್ಯಾಂಡಿಯೊಂದಿಗೆ ಮಿಶ್ರಣ ಮಾಡಿ ಕೊಡಲಾಗುತ್ತದೆ.
  • ಈ ಮರದ ತೊಗಟೆಯನನ್ನು ಸಂಧಿವಾತದ ಚಿಕಿತ್ಸೆಯಲ್ಲಿ ಮುಖ್ಯವಾಗಿ ಬಳಸಲಾಗುತ್ತದೆ.
  • ಔದುಂಬರದ ಹಣ್ಣನ್ನು ಎದೆ ಹಾಲಿನೊಂದಿಗೆ ತಾಮ್ರದ ಪಾತ್ರೆಯಲ್ಲಿ ಉಜ್ಜಿ ಅದನ್ನು ತುಪ್ಪದಲ್ಲಿ ಅದ್ದಿದ ಶಮಿಯ ಎಲೆಗಳಿಂದ ಸುಟ್ಟ ಗಾಯದ ಮೇಲೆ ಲೇಪನ ಮಾಡಿದರೆ ಉರಿ, ತುರಿಕೆ, ಕಿರಿಕಿರಿ ಎಲ್ಲವೂ ಕಡಿಮೆಯಾಗುತ್ತದೆ.
  • ಶುಂಠಿಯೊಂದಿಗೆ ಬೆರೆಸಿ ತಯಾರಿಸಿದ ಇದರ ತೊಗಟೆಯ ಕಷಾಯವನ್ನು ಹಲ್ಲುಗಳ ಸಂಕುಚತತೆಯನ್ನು ಹೋಗಲಾಡಿಸಲು ಸೇವಿಸಲಾಗುತ್ತದೆ.
  • ಬೇಧಿಯಂಥಹ ಸಮಸ್ಯೆಗಳ ಚಿಕಿತ್ಸೆಗಾಗಿಯೂ ಇದರ ಬಳಕೆಯಾಗುತ್ತದೆ.
  • ಈ ಮರದ ತೊಗಟೆಯನ್ನು ಮದ್ಯ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಕೃಷಿಯಲ್ಲಿ ಬೆಳೆಗಳಿಗೆ ಸುಗಮವಾಗಲೆಂದು, ಬೆಳೆಗಳ ಮಧ್ಯ ಈ ಮರವನ್ನು ಬೆಳೆಸಲಾಗುತ್ತದೆ.
  • ಈ ಮರ ಉತ್ಪಾದಿಸುವ ಅಂಟು ಪದಾರ್ಥವನ್ನು ಮಸಿ(ಇಂಕ್)ತಯಾರಿಕೆಯಲ್ಲಿ, ಮೂಲಿಕಾ ಪದಾರ್ಥವಾಗಿಯೂ ಬಳಸಲಾಗುತ್ತದೆ.

  • ಮಂಜುನಾಥ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW