‘ಪುಟ್ಟ ಭಯ’ ಸಿನಿಮಾದ ಕತೆ

ಮಕ್ಕಳಲ್ಲಿ ಅನಾವಶ್ಯಕ, ಅನಗತ್ಯ ಭಯಗಳನ್ನು ಹುಟ್ಟಿಸಬಾರದು. ಬದಲಿಗೆ ಮಕ್ಕಳನ್ನು ನಿಮ್ಮ ಪ್ರೀತಿ, ವಿಶ್ವಾಸ, ಭರವಸೆಯಿಂದ ಆತ್ಮವಿಶ್ವಾಸದ ಖಣಿಗಳನ್ನಾಗಿಸಬಹುದು.ಡಾ ವಿರೂಪಾಕ್ಷ ದೇವರಮನೆ ಅವರು ನೋಡಿದ ‘ಪುಟ್ಟ ಭಯ’ ಸಿನಿಮಾದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಒಂದು ವರ್ಷದ ಚಿಕ್ಕ ಮಗುವನ್ನು ಆಡಲು ಬಿಟ್ಟರೆ ತನ್ನಿಷ್ಟದಂತೆ, ತನ್ನಿಷ್ಟ ಬಂದ ಕಡೆ ಆಡುತ್ತಾ ಕುಳಿತು ಕೊಳ್ಳುತ್ತದೆ. ಆಗ ಅಮ್ಮನೋ ಅಜ್ಜಿಯೋ ಹೇಳಬೇಕು “ಆಚೆ ಹೋಗಬೇಡ ಅಲ್ಲಿ ಹಲ್ಲಿ ಇದೆ, ಹಾವು ಇದೆ, ಚೇಳು ಇದೆ, ಕತ್ತಲೆ ಇದೆ , ದೆವ್ವ ಇದೆ, ಭೂತ ಇದೆ ಎಂದು. ಹಾಗೆಂದರೇನು ಎಂದೂ ತಿಳಿಯದ ಮಗು ದೊಡ್ಡವರು ಹೇಳುವ ದಾಟಿಗೆ ಹೆದರಿ ಏನೋ ಅಪಾಯ ಇರಬೇಕೆಂದು ನಂಬುತ್ತದೆ.

ಹೀಗೆ ಭಯಗಳು ಮಕ್ಕಳನ್ನು ಹದ್ದು ಬಸ್ತಿನಲ್ಲಿಡಲು ಬಳಕೆಯಾಗುತ್ತ ಹೋಗುತ್ತವೆ. ಊಟ ಮಾಡಲು ಹಠ ಮಾಡಿದರೆ ಪೊಲೀಸ್ ಕರೀತೇನೆ ಎಂದು, ನಿದ್ದೆ ಮಾಡಲು ತಡಮಾಡಿದರೆ ಗೊಗ್ಗಯ್ಯ ಬರುತ್ತಾನೆಂದು, ಸುಳ್ಳು ಹೇಳಿದರೆ ದೇವರು ಕಣ್ಣು ಕಿತ್ತು ಕೊಳ್ಳುತ್ತಾನೆಂದು, ಹೀಗೆ ಭಯಗಳನ್ನು ಬೆಳೆಸುತ್ತಾ ಹೋಗುತ್ತೇವೆ. ಆ ಕ್ಷಣಕ್ಕೆ ಪೋಷಕರಿಗೆ ತಿಳಿಯದ ಸತ್ಯವೇನೆಂದರೆ, ತಾತ್ಕಾಲಿಕವಾಗಿ ಮಗುವಿಗೆ ಭಯದಿಂದ ಶಿಸ್ತು ಕಲಿಸುವ ಭರದಲ್ಲಿ ಭಯವನ್ನೂ ಶಿಸ್ತಿನಿಂದ ಕಲಿಸಿ ಬಿಟ್ಟಿರುತ್ತೇವೆ.

ಆ ಭಯಗಳ ಪ್ರಭಾವದಿಂದ ಮಗು ಹೊರಗೆ ಬರಲು ವರ್ಷಗಳೇ ತೆಗೆದು ಕೊಳ್ಳಬಹುದು, ಇಲ್ಲವೇ ಇಡೀ ಜೀವನ ಭಯದಲ್ಲಿಯೇ ಕಳೆಯಬೇಕಾಗಿ ಬರಬಹುದು. ಕೆಲವರಿಗೆ ತುಂಬಿದ ಬಸ್ಸಿನಲ್ಲಿ ಹೋಗಲು ಭಯ, ಕೆಲವರಿಗೆ ಕತ್ತಲೆ ಎಂದರೆ ಭಯ, ಕೆಲವರಿಗೆ ವೇದಿಕೆ ಮೇಲೆ ಹೋಗಲು ಭಯವಾದರೆ ಇನ್ನು ಕೆಲವರಿಗೆ ದೇವರ ಕೋಣೆಗೆ ಹೋಗಲು ಭಯ!! ಹೆಜ್ಜೆ ಹೆಜ್ಜೆಗೂ ಭಯದಲ್ಲಿಯೇ ಬದುಕುವುದು ಬದುಕಿದ್ದರೂ ಪ್ರತಿ ದಿನ ಸಾವಿನಂಚಿಗೆ ಹೋಗಿ ಬಂದ ಅನುಭವ. ಪ್ರತಿ ಕ್ಷಣ ಏನಾಗುತ್ತದೋ ಏನೋ ಎನ್ನುವ ಆತಂಕವೂ ಕಾಡುತ್ತದೆ. ಹೆತ್ತವರು, ಪೋಷಕರು, ಶಿಕ್ಷಕರು ಸಾಧ್ಯವಾದಷ್ಟು ಮಕ್ಕಳಲ್ಲಿ ಅನಾವಶ್ಯಕ, ಅನಗತ್ಯ ಭಯಗಳನ್ನು ಹುಟ್ಟಿಸಬಾರದು. ಬದಲಿಗೆ ಮಕ್ಕಳನ್ನು ನಿಮ್ಮ ಪ್ರೀತಿ ವಿಶ್ವಾಸ ಭರವಸೆಯಿಂದ ಆತ್ಮವಿಶ್ವಾಸದ ಖಣಿಗಳನ್ನಾಗಿಸಬಹುದು.

ನವ್ಯಾ ನಾಯಕ್ ನಿರ್ದೇಶನದ, ಜನಾರ್ದನ ನಾಯಕ್ ನಿರ್ಮಾಣದ ” #ಪುಟ್ಟಭಯ” ಸಿನಿಮಾ ನೋಡಿ ಬಂದಮೇಲೆ ಈ ಆಲೋಚನೆಗಳು ಸುಳಿದು ಹೋದವು. ಮಕ್ಕಳಿಗೆ ಮನೆಮಂದಿಯ ಪ್ರೀತಿ, ಸ್ನೇಹಿತರ ಜೊತೆ ಆಟ, ಅಜ್ಜ, ಅಜ್ಜಿಯ ವಾತ್ಸಲ್ಯ ಹಾಗೂ ಅವರೊಡನೆ ಭಜನೆ ಇತ್ಯಾದಿ ಅವರಿಗೆ ಚೆಂದದ ಬಾಲ್ಯ ಕಟ್ಟಿಕೊಂಡು ಬಹುದು ಎಂದು ನಿರೂಪಿಸಿದ್ದಾರೆ. ಚಿತ್ರ ತಂಡಕ್ಕೆ ಶುಭಾಶಯಗಳು.


  • ಡಾ ವಿರೂಪಾಕ್ಷ ದೇವರಮನೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading