ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೋಮೋ ಕೋರ್ಸ್ ಗೆ ಅರ್ಜಿ ಆಹ್ವಾನ

ಭಾರತೀಯ ವಿದ್ಯಾ ಭವನದ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ ಗೆ ಅರ್ಜಿ ಆಹ್ವಾನ…

ಬೆಂಗಳೂರು: ಭಾರತೀಯ ವಿದ್ಯಾ ಭವನದ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೋಮೋ ಕೋರ್ಸ್ ಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ. ಇದು ದೇಶದ ಅತ್ಯಂತ ಹಳೆಯ ಪತ್ರಿಕೋದ್ಯಮ ಕಾಲೇಜಾಗಿದ್ದು ಅರವತ್ತು ವರ್ಷಗಳಿಂದ ನಿರಂತರವಾಗಿ ನಡೆದು ಕೊಂಡು ಬರುತ್ತಿರುವ ಹೆಗ್ಗಳಿಕೆ ಇದಕ್ಕಿದೆ.

ಇಲ್ಲಿ ತರಬೇತಿ ಪಡೆದ ಪತ್ರಕರ್ತರು ದೇಶಾದ್ಯಂತ ಅನೇಕ ಪತ್ರಿಕೆ, ವಾಹಿನಿಗಳ ಪ್ರಮುಖ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ, ನಿರ್ವಹಿಸುತ್ತಲೂ ಇದ್ದಾರೆ. ಒಂದು ವರ್ಷ ಅವಧಿಯ ಈ ಕೋರ್ಸ್ ನಲ್ಲಿ ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ, ಕಾರ್ಪೋರೇಟ್ ಮಾಧ್ಯಮ ಹೀಗೆ ಮೂರೂ ವಿಭಾಗಗಳಲ್ಲಿಯೂ ತರಬೇತಿ ನೀಡಲಾಗುವುದು. ಇಲ್ಲಿ ಅಯಾ ಕ್ಷೇತ್ರದ ಪರಿಣಿತರೇ ತರಬೇತಿ ನೀಡಲಿದ್ದು, ಪತ್ರಿಕೋದ್ಯಮದ ಇತ್ತೀಚಿನ ಬೆಳವಣಿಗೆಗಳ ಕುರಿತೂ ಪರಿಣಿತಿ ಮೂಡಿಸಲಾಗುತ್ತದೆ.

ಹೆಚ್ಚಿನ ವಿವರಗಳಿಗೆ ಬೆಂಗಳೂರು ಭಾರತೀಯ ವಿದ್ಯಾ ಭವನದ ಕೇಂದ್ರ ಕಚೇರಿಯಲ್ಲಿ ಬೆಳಗಿನ 10ರಿಂದ ಸಂಜೆ ಆರರವರೆಗೆ ವಿವರಗಳನ್ನು ಪಡೆಯ ಬಹುದು, ಇಲ್ಲವೆ ಮೊಬೈಲ್ ಸಂಖ್ಯೆ 9538181140 ಇಲ್ಲಿಗೆ ಸಂಪರ್ಕಿಸ ಬಹುದು ಎಂದು ಭಾರತೀಯ ವಿದ್ಯಾ ಭವನದ ನಿರ್ದೇಶಕ ಎಚ್.ಎನ್.ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


  • ಎನ್.ಎಸ್.ಶ್ರೀಧರ ಮೂರ್ತಿ – ನಿರ್ದೇಶಕರು, ಮಾಧ್ಯಮ ಭಾರತಿ, ಭಾರತೀಯ ವಿದ್ಯಾ ಭವನ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading