ಕಲ್ಪತರು ನಾಡಿನ ಸಾಹಿತ್ಯ ಪ್ರತಿಭೆ: ರಮೇಶ ಗುಬ್ಬಿ

ಕಾರವಾರದ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗ ಮಾಡುತ್ತಾ, ಪ್ರವೃತ್ತಿಯಲ್ಲಿ ಸಾಹಿತಿ, ಲೇಖಕ, ನಾಟಕಕಾರರಾಗಿ ಕನ್ನಡದ ಸಾಹಿತ್ಯ ಲೋಕದಲ್ಲಿ ಗುರುತಿಕೊಳ್ಳುತಿರುವ ಸಾಹಿತ್ಯ ಲೋಕದ ಪ್ರತಿಭೆಯೆ ಶ್ರೀ ರಮೇಶ್ ಗುಬ್ಬಿ. ಅವರ ಸಾಹಿತ್ಯ ಸೇವೆಯ ಕುರಿತು ಕವಿ ನಾರಾಯಣಸ್ವಾಮಿ ಅವರು ಓದುಗರಿಗೆ ಪರಿಚಯಿಸಿದ್ದಾರೆ, ತಪ್ಪದೆ ಮುಂದೆ ಓದಿ…

ತುಮಕೂರು ಜಿಲ್ಲೆಯು ‘ಕಲ್ಪತರು ನಾಡು’ ಎಂಬ ಹೆಸರನ್ನು ಪಡೆದಿದೆ. ನಡೆದಾಡುವ ದೇವರು ನೆಲೆಸಿದಂತಹ ನೆಲ, ಈ ಜಿಲ್ಲೆಯಲ್ಲಿ ಬರುವ ಗುಬ್ಬಿ ತಾಲ್ಲೂಕು ಸಾಂಸ್ಕೃತಿಕ, ಸಾಹಿತ್ಯ, ರಂಗಭೂಮಿಯ ಕ್ಷೇತ್ರದಲ್ಲಿ ವಿಶಿಷ್ಠವಾದ ಕೊಡುಗೆಯನ್ನು ನೀಡಿದೆ. ಗುಬ್ಬಿ ವೀರಣ್ಣ ಈ ನೆಲದಲ್ಲಿ ಜನಿಸಿ ರಂಗಭೂಮಿಯ ಮೊದಲ ನಾಟಕ ಕಂಪನಿಯನ್ನು ಸ್ಥಾಪಿಸಿ, ಕನ್ನಡ ನಾಡಿನ ಹಲವಾರು ರಂಗಭೂಮಿ ಕಲಾವಿದರಿಗೆ ಅವಕಾಶವನ್ನು ಕೊಟ್ಟರು. ಅದೇ ನೆಲದಲ್ಲಿ ಹುಟ್ಟಿ ಕಾರವಾರದ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗ ಮಾಡುತ್ತಾ, ಪ್ರವೃತ್ತಿಯಲ್ಲಿ ಸಾಹಿತಿ, ಲೇಖಕ, ನಾಟಕಕಾರರಾಗಿ ಕನ್ನಡದ ಸಾಹಿತ್ಯ ಲೋಕದಲ್ಲಿ ಗುರುತಿಕೊಳ್ಳುತಿರುವ ಸಾಹಿತ್ಯ ಲೋಕದ ಪ್ರತಿಭೆಯೆ ಶ್ರೀ ರಮೇಶ್ ಗುಬ್ಬಿ, ಲೇಖಕರುಸಾಹಿತ್ಯದ ವಿವಿಧ ಪ್ರಕಾರಗಳಾದ ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ಇವರದು ಪಳಗಿದ ಕೈ. ಜೊತೆಗೆ ನಟನೆ, ನಿರೂಪಣೆ, ನಿರ್ದೇಶನಕ್ಕೂ ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನಗಳ ಸಂಕಲನ, ‘ಭಾವದಂಬಾರಿ’ ಎಂಬ ಕಥಾಸಂಕಲನ. “ಶಕ್ತಿ ಮತ್ತು ಅಂತ” ಎಂಬ ಅವಳಿ ನಾಟಕ ಸಂಕಲನ, “ಕಿಸ್ ಮಾತ್ರೆ” “ಸಂಸಾರವೆಂಬ ಹಾರ(ರ್)ಮೋನಿಯಮ್” ಎನ್ನುವ ಹಾಸ್ಯಗವನ ಸಂಕಲನಗಳು, “ಹೂವಾಡಿಗ” “ಕಾಡುವ ಕವಿತೆಗಳು” “ಮಾತು-ಮೌನಗಳ ನಡುವೆ..” “ಬುದ್ದ ನಗುತ್ತಿದ್ದಾನೆ” ಎಂಬ ಕವನ ಸಂಕಲನಗಳು ಬರೆದು ಲೋಕಾರ್ಪಣೆ ಮಾಡಿರುವ ಇವರು “ಆತ್ಮಾನುಸಂಧಾನ” ಕವನ ಸಂಕಲನ ಬಿಡುಗಡೆಗೆ ಸಿದ್ದವಾಗುತ್ತಿದೆ. ತ್ರಿವಳಿ ನಾಟಕಗಳ ಸಂಕಲನ ತಯಾರಿ ಹಂತದಲ್ಲಿದೆ.

ಇವರ ಸಾಹಿತ್ಯದ ಪ್ರತಿಭೆಯನ್ನು ಕಂಡು ನಾಡಿನ ಹಲವಾರು ಸಂಘಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿವೆ. ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ಎಂಬ ಪ್ರಶಂಸೆ. ‘ಗುಬ್ಬಿಯ ಕಲರವ’ ಕೃತಿಗೆ ‘ಬಿ.ಕೃಷ್ಣ ಪೈ ಬದಿಯಡ್ಕ ಸ್ಮಾರಕ ಪ್ರಶಸ್ತಿ’, 2012ರಲ್ಲಿ ನಡೆದ ಕೇರಳ ರಾಜ್ಯ 5ನೆಯ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದವರಿಂದ ‘ಕಾವ್ಯ ಪ್ರಶಸ್ತಿ’, ಮಂಡ್ಯದ ‘ಅಡ್ವೈಸರ್’ ಪತ್ರಿಕೆಯ 2012 ರ ‘ಅಡ್ವೈಸರ್ ಸಾಹಿತ್ಯ ಪ್ರಶಸ್ತಿ’, ಬೆಂಗಳೂರಿನ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ) ಹಾಗೂ ಸುರ್ವೆ ಪತ್ರಿಕೆವತಿಯಿಂದ “ಎಡನೀರೊಡೆಯನಿಗೆ ಚುಟುಕು-ಪುಷ್ಪಾರ್ಚನೆ” ಕೃತಿಗೆ ರಾಜ್ಯಮಟ್ಟದ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಮತ್ತು ಬೆಳ್ಳಿಪದಕ ಬಹುಮಾನ, ಬಿಜಾಪುರದ ಬಸವಜಯಂತಿ ಶತಮಾನೋತ್ಸವ ಸಂಭ್ರಮ-2013 ಸಮಾರಂಭದಲ್ಲಿ ಪ್ರತಿಷ್ಠಿತ “ಬಸವಜ್ಯೋತಿ” ಪ್ರಶಸ್ತಿ, ಕೆ.ಆರ್.ನಗರದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ “ಕೆ.ಎಸ್.ನ. ರಾಜ್ಯಮಟ್ಟದ ಕಾವ್ಯಪುರಸ್ಕಾರ”, ಅಖಿಲ ಭಾರತ ಅಣುಶಕ್ತಿ ನಿಗಮದ ರಾಷ್ಟ್ರಮಟ್ಟದ 2009, 2013, 2016, 2018, 2020, 2022 ರ ಸಾಂಸ್ಕೃತಿಕ ಸ್ಪರ್ಧಾವಳಿಯಲ್ಲಿ “ಸ್ವರಚಿತ ಕವನ ವಾಚನ” ದಲ್ಲಿ ಪ್ರಥಮ ಬಹುಮಾನ,

ಹುಣಸೂರಿನ ಚುಟುಕು ಸಾಹಿತ್ಯ ಪರಿಷತ್ ಇವರಿಂದ 2014ರ “ಚುಟುಕು ಮುಕುಟ” ರಾಜ್ಯ ಪ್ರಶಸ್ತಿ, ಕೈಗಾದ ಸಹ್ಯಾದ್ರಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಚುಟುಕು ಸ್ಪರ್ಧೆ-2012 ರಲ್ಲಿ ಬಹುಮಾನ ಮತ್ತು 2013 ರ “ಯುವ ಪ್ರತಿಭಾ ಪುರಸ್ಕಾರ” ಪಡೆದಿರುತ್ತಾರೆ. “ಶಕ್ತಿ ಮತ್ತು ಅಂತ” ನಾಟಕ ಸಂಕಲನಕ್ಕೆ ಸಂತೃಪ್ತಿ ಸಾಹಿತ್ಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ (ರಿ) ಇಂದ 2017 ನೇ ಸಾಲಿನ “ನೃಪ ಸಾಹಿತ್ಯ ಪ್ರಶಸ್ತಿ” ಲಭಿಸಿರುತ್ತದೆ. 2019 ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮತ್ತು ಮಾಣಿಕ್ಯ ಪ್ರಕಾಶನ. ಹಾಸನ ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಕವಿ ಕಾವ್ಯಸಮ್ಮೇಳನದಲ್ಲಿ “ಕಾಡುವ ಕವಿತೆಗಳು” ಕವನ ಸಂಕಲನಕ್ಕೆ ರಾಜ್ಯಮಟ್ಟದ ಪ್ರತಿಷ್ಟಿತ “ಜನ್ನ” ಕಾವ್ಯ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇವರ “ಕಾಡುವ ಕವಿತೆಗಳು” ಕೃತಿಗೆ ಬೆಳಗಾವಿಯ ಡಿ.ಎಸ್.ಕರ್ಕಿ ಪ್ರತಿಷ್ಟಾನ ನೀಡುವ 2019 ನೇ ಸಾಲಿನ ಪ್ರತಿಷ್ಟಿತ “ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ” ಲಭಿಸಿದೆ. 2020 ಮಾರ್ಚಿಯಲ್ಲಿ ‘ಲೇಖಿಕಾ ಸಾಹಿತ್ಯ ವೇದಿಕೆ’ ಯವರು ಆಯೋಜಿಸಿದ್ದ ಪುಸ್ತಕ ಪ್ರಶಸ್ತಿ ಕಾರ್ಯಕ್ರಮದಲ್ಲಿ “ಭಾವದ ಅಂಬಾರಿ” ಕಥಾ ಸಂಕಲನಕ್ಕೆ “ಪುಸ್ತಕ ಪ್ರಶಸ್ತಿ”. ಕನಕಶ್ರೀ ಪ್ರಕಾಶನ, ಬ್ಯಾಕೋಡ. ಬೆಳಗಾವಿ. ಇವರಿಂದ 2021 ರ ಮಾರ್ಚಿಯಲ್ಲಿ, ಧಾರವಾಡದ ರಂಗಾಯಣ ಸಭಾಭವನದಲ್ಲಿ ನಡೆದ ಕವಿ ಸಮ್ಮೇಳನದಲ್ಲಿ “ಕಾಡುವ ಕವಿತೆಗಳು” ಕೃತಿಗೆ “ಕನಕಶ್ರೀ ಸಾಹಿತ್ಯ ಪ್ರಶಸ್ತಿ” ಗೌರವ ಪುರಸ್ಕಾರ. ಇವರ “ಸಂಸಾರವೆಂಬ ಹಾರ(ರ್)ಮೋನಿಯಮ್” ಹಾಸ್ಯಗವನ ಸಂಕಲನಕ್ಕೆ ಗುರುಕುಲ ಕಲಾ ಪ್ರತಿಷ್ಟಾನ(ರಿ) ತುಮಕೂರು ಇವರಿಂದ ನೀಡಲಾಗುವ 2021 ನೇ ಸಾಲಿನ ರಾಜ್ಯ ಮಟ್ಟದ “ಗುರುಕುಲ ಸಾಹಿತ್ಯ ಶರಭ” ಪ್ರಶಸ್ತಿ ದೊರಕಿದೆ.

2020 ರಲ್ಲಿ ಕನ್ನಡ ಸಾಹಿತ್ಯ ಸಾಗರ ಸಂಸ್ಥೆ (ರಿ) ಇವರಿಂದ “ಕನ್ನಡ ಸಾಹಿತ್ಯ ಸುರಭಿ” ಎಂಬ ಬಿರುದಿನೊಂದಿಗೆ ಗೌರವ ಪುರಸ್ಕಾರ. 2020 ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನವಪರ್ವ ಫೌಂಡೇಶನ್ (ರಿ) ಬೆಂಗಳೂರು ಇವರಿಂದ ಸಾಹಿತ್ಯ ಸೇವೆಗಾಗಿ ವಿಶೇಷ ಅಭಿನಂದನಾ ಗೌರವ ಪುರಸ್ಕಾರ. ಗದಗದ ವಿಶ್ವವಿಖ್ಯಾತ ಪುಟ್ಟರಾಜಗವಾಯಿಗಳ ಪುಣ್ಯಾಶ್ರಮದಲ್ಲಿ ವಿಶ್ವವಿಜೇತ ಪತ್ರಿಕೆಯ ವಾರ್ಷಿಕೋತ್ಸವದಂದು “ಸಾಹಿತ್ಯ ರತ್ನ. ರಾಷ್ಟ್ರೀಯ ಪ್ರಶಸ್ತಿ-2021” ಪುರಸ್ಕಾರ. ಯಾದಗಿರಿ ಜಿಲ್ಲೆಯ ಸಾಹಿತ್ಯ ಚಿಂತಕರ ಬಳಗ. ಸುರಪುರ ಮತ್ತು ಶ್ರೀ ಸಿದ್ದಿವಿನಾಯಕ ಮಹಿಳಾ ಮಂಡಳಿ (ರಿ) ಬೊಮ್ಮಗುಡ್ಡ. ಇವರ ವತಿಯಿಂದ 2021 ರಲ್ಲಿ ನಡೆದ “ಸಾಹಿತ್ಯ ಚಿಂತಕರ ಬಳಗದ” ದ್ವಿತೀಯ ವಾರ್ಷಿಕೋತ್ಸವದಂದು “ಸಾಹಿತ್ಯ ಸಿರಿ” ಪ್ರಶಸ್ತಿಯನ್ನು ಪಡೆದಿರುತ್ತಾರೆ.

‘ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ, ಗುರುಕುಲ ಕಲಾ ಪ್ರತಿಷ್ಟಾನ(ರಿ) ತುಮಕೂರು ಇವರಿಂದ ನೀಡಲಾಗುವ 2021 ನೇ ಸಾಲಿನ ರಾಜ್ಯ ಮಟ್ಟದ “ಗುರುಕುಲ ಸಾರ್ವಭೌಮ ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿ”. ಮತ್ತು ಬೆಂಗಳೂರಿನ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ(ರಿ) ವತಿಯಿಂದ ನೀಡಲಾಗುವ 2021 ನೇ ಸಾಲಿನ ರಾಜ್ಯಮಟ್ಟದ “ಬಸವೇಶ್ವರ ಪ್ರಶಸ್ತಿಗೆ” ಭಾಜನರಾಗಿರುತ್ತಾರೆ. ಹುಬ್ಬಳ್ಳಿಯ ಚೇತನ ಫೌಂಡೇಶನ್(ರಿ) ಇವರಿಂದ 2021 ನೇ ಧಾರವಾಡ ದಸರಾ ಉತ್ಸವದಲ್ಲಿ “ಹೆಮ್ಮೆಯ ಕನ್ನಡಿಗ ರಾಜ್ಯಪ್ರಶಸ್ತಿಗೆ” ಭಾಜನರಾಗಿರುತ್ತಾರೆ. 2022 ರಲ್ಲಿರಾಜ್ಯ ವಿಸ್ಮಯ ಜಾದೂ, ಪವಾಡ ಹಾಗೂ ಮೋಡಿ ಸಂಶೋಧನಾ ವೇದಿಕೆ (ರಿ) ಇವರು ಆಯೋಜಿಸಿದ್ದ 15 ನೇ ರಾಜ್ಯಮಟ್ಟದ ಸಾಧಕರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವ ಪುರಸ್ಕೃತರಾಗಿದ್ದರು. ಮತ್ತು ರಾಜ್ಯ ಮಟ್ಟದ ‘ಕನ್ನಡ ಗಾರುಡಿಗ ರತ್ನ’ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ರಾಜ್ಯ ಯುವ ಬರಹಗಾರರ ಒಕ್ಕೂಟ(ರಿ) ಕೇಂದ್ರ ಸಮಿತಿ ಬೆಂಗಳೂರು ಹಾಗೂ ವಿಸ್ಮಯ ಸಾಹಿತ್ಯ ಮತ್ತು ಸಾಂಸ್ಕøತಿಕ ಕಲಾ ವೇದಿಕೆ ಸಹಯೋಗದಲ್ಲಿ ಬೆಳಗಾವಿಯಲ್ಲಿ ಆಯೋಜಿಸಿದ್ದ “ಕಿತ್ತೂರು ಕರ್ನಾಟಕ ಸಂಭ್ರಮೋತ್ಸವ” ಸಮಾರಂಭದಲ್ಲಿ ’ಕುದ್ಮುಲ್ ರಂಗರಾವ್ ರಾಜ್ಯ ಪ್ರಶಸ್ತಿ’ ಗೆ ಭಾಜನರಾಗಿರುತ್ತಾರೆ.

2022 ರ ಮೇ ತಿಂಗಳಿನಲ್ಲಿ ಧಾರವಾಡದ ಸಾಹಿತ್ಯ ಪರಿಷತ್ ಭವನದಲ್ಲಿ ನೆನಪಿನ ನಾವಿಕ ಸಂಸ್ಥೆಯಿಂದ “ಕಲಾ ನಾವಿಕ” ರಾಜ್ಯಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಕರ್ನಾಟಕ ರಾಜ್ಯ ಅನಿಕೇತನ ಸಾಂಸ್ಕೃತಿಕ ವೇದಿಕೆ(ರಿ). ಬೆಂಗಳೂರು ಇವರು 2022 ರಲ್ಲಿ ಮೈಸೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ರಾಜ್ಯ ಅನಿಕೇತನ’ ಪ್ರಶಸ್ತಿ ಪುರಸ್ಕೃತರಾಗಿರುತ್ತಾರೆ. 2022 ರ ಮೇ ತಿಂಗಳಿನಲ್ಲಿ ಧಾರವಾಡದ ಸಾಹಿತ್ಯ ಪರಿಷತ್ ಭವನದಲ್ಲಿ ನೆನಪಿನ ನಾವಿಕ ಸಂಸ್ಥೆಯಿಂದ “ಕಲಾ ನಾವಿಕ” ರಾಜ್ಯಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಕರ್ನಾಟಕ ರಾಜ್ಯ ಅನಿಕೇತನ ಸಾಂಸ್ಕೃತಿಕ ವೇದಿಕೆ(ರಿ). ಬೆಂಗಳೂರು ಇವರು 2022 ರಲ್ಲಿ ಮೈಸೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ರಾಜ್ಯ ಅನಿಕೇತನ’ ಪ್ರಶಸ್ತಿ ಪುರಸ್ಕೃತರಾಗಿರುತ್ತಾರೆ. ಮಂಡ್ಯದ ಸುಮಂಗಲಿ ಸೇವಾ ಟ್ರಸ್ಟ್ (ರಿ) ಇವರು ನೀಡುವ 2022 ನೇ ಸಾಲಿನ ರಾಜ್ಯಮಟ್ಟದ “ಪ್ರಜಾಭೂಷಣ” ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕರಂಗ ಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ (ರಿ) ಕಡಲಬಾಳು, ವಿಜಯನಗರ ಜಿಲ್ಲೆ ಇವರು 2022 ನೇ ಸಾಲಿನ “ಕರ್ನಾಟಕ ಸೇವಾ ರತ್ನ ಪ್ರಶಸ್ತಿ” ನೀಡಿ ಗೌರವಿಸಿರುತ್ತಾರೆ. ಬಸವ ಜನ್ಮಭೂಮಿ ಪ್ರತಿಷ್ಠಾನ. ಬಸವನ ಬಾಗೇವಾಡಿ, ವಿಜಯಪುರ ಇವರು ವಿಜಯಪುರದಲ್ಲಿ ಆಯೋಜಿಸಿದ್ದ 12 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ, ಇವರಿಗೆ 2022 ನೇ ಸಾಲಿನ ರಾಷ್ಟ್ರಮಟ್ಟದ ಪ್ರತಿಷ್ಠಿತ “ಬಸವವಿಭೂಷಣ” ಪ್ರಶಸ್ತಿ ನೀಡಿ ಪುರಸ್ಕರಿಸಿರುತ್ತಾರೆ.

ರಮೇಶ್ ಗುಬ್ಬಿಯವರ ‘ಕಾಡುವ ಕವಿತೆಗಳು’ ಕೃತಿಗೆ ಕಲುಬುರ್ಗಿಯ ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ವತಿಯಿಂದ ನೀಡಲಾಗುವ 2021 ನೇ ಸಾಲಿನ ‘ರಾಜ್ಯ ಬಸವ ಪುರಸ್ಕಾರ’ ಗೌರವ. ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಅಭಿರುಚಿ ಬಳಗ, ಆಸಕ್ತಿ ಪ್ರಕಾಶನ, ಚೈತ್ರ ಫೌಂಡೇಶನ್ (ರಿ ) ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಕಿರುರಂಗಮಂದಿರಲ್ಲಿ ದಿನಾಂಕ 02.01.2022ರಂದು ನಡೆದ ಶ್ರೀ ಎನ್. ಎಸ್. ವಾಮನ್ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಕಾಡುವ ಕವಿತೆಗಳಿಗೆ” ಕೃತಿಗೆ ಎನ್. ಎಸ್. ವಾಮನ್ ಶತಮಾನೋತ್ಸವ ಪುಸ್ತಕ ಪ್ರಶಸ್ತಿಯ ಪ್ರಪ್ರಥಮ ಬಹುಮಾನ. “ಮಾತು ಮೌನಗಳ ನಡುವೆ..” ಕೃತಿಗೆ ಕರ್ನಾಟಕ ಬರಹಗಾರರ ಸಂಘ(ರಿ) ಹೂವಿನ ಹಡಗಲಿ ಇವರು ಕೊಡ ಮಾಡುವ 2021 ಸಾಲಿನ “ವರ್ಷದ ಕವನ ಸಂಕಲನ” ಪ್ರಶಸ್ತಿ ಲಭಿಸಿದೆ.

2023 ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮತ್ತು ಮಾಣಿಕ್ಯ ಪ್ರಕಾಶನ. ಹಾಸನ ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಕವಿ ಕಾವ್ಯಸಮ್ಮೇಳನದಲ್ಲಿ “ಬುದ್ದ ನಗುತ್ತಿದ್ದಾನೆ” ಕವನ ಸಂಕಲನಕ್ಕೆ ರಾಜ್ಯಮಟ್ಟದ ಪ್ರತಿಷ್ಟಿತ “ಕಾವ್ಯ ಮಾಣಿಕ್ಯ” ಕಾವ್ಯ ಪ್ರಶಸ್ತಿಯನ್ನು ಪಡೆದಿರುತ್ತಾರೆ. 2022 ನೇ ಸಾಲಿನ ವನರಾಗ ಶರ್ಮ ಕಾವ್ಯ ಪ್ರಶಸ್ತಿ ಇವರ ‘ಬುದ್ದ ನಗುತ್ತಿದ್ದಾನೆ’ ಕೃತಿಗೆ ಪ್ರಾಪ್ತವಾಗಿದೆ. ‘ಬುದ್ದ ನಗುತ್ತಿದ್ದಾನೆ’ ಕೃತಿಗೆ 2022 ನೇ ಸಾಲಿನ ‘ಉಮಾಶಂಕರ’ ಪುಸ್ತಕ ಪ್ರಶಸ್ತಿ ದೊರಕಿದೆ. ‘ಬುದ್ದ ನಗುತ್ತಿದ್ದಾನೆ’ ಕವನ ಸಂಕಲನಕ್ಕೆ ಸಾಹಿತ್ಯ ಸಂಗಮ(ರಿ). ಹರಿಹರ ಇವರು ಕೊಡ ಮಾಡುವ 2022 ನೇ ಸಾಲಿನ ರಾಜ್ಯಮಟ್ಟದ ಪ್ರತಿಷ್ಟಿತ “ಹರಿಹರ ಶ್ರೀ” ಪ್ರಶಸ್ತಿ ಪುರಸ್ಕಾರ ಲಭಿಸಿದೆ. ಇವರ “ಕಾಡುವ ಕವಿತೆಗಳು” ಕವನ ಸಂಕಲನ, ಬೆಂಗಳೂರಿನ ಭಾವಯಾನ ಪ್ರತಿಷ್ಠಾನ(ರಿ) ಇವರು ನೀಡುವ 2019 ನೇ ಸಾಲಿನ ಪುಸ್ತಕ ಪ್ರಶಸ್ತಿಯ ಪ್ರಪ್ರಥಮ ಬಹುಮಾನಕ್ಕೆ ಬಾಜನವಾಗಿದೆ.

2013 ನೇ ಸಾಲಿನ ಗುಬ್ಬಿ ರಾಜ್ಯೋತ್ಸವ ಪ್ರಶಸ್ತಿ -ಸಾಹಿತ್ಯ ಕ್ಷೇತ್ರದ ಸೇವೆಗಾಗಿ (ತುಮಕೂರು-ಗುಬ್ಬಿ ಜಿಲ್ಲಾ ಆಡಳಿತವತಿಯಿಂದ). 2016 ರಲ್ಲಿ ರಾಜ್ಯ ಮಟ್ಟದ ಕಾವ್ಯ ಕುಟೀರ-ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ “ಸುವಿಚಾರ ಸಾಹಿತ್ಯ ಪ್ರಶಸ್ತಿ-2016” ಹಾಗೂ ಸಾಸ್ತಾನ ಬಳಗದ ರಾಜ್ಯಮಟ್ಟದ ಕನ್ನಡ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿರುತ್ತಾರೆ. ಮೈಸೂರಿನ ಗ್ರಾಮಾಂತರ ಬುದ್ದಿಜೀವಿಗಳ ಬಳಗವು ಏರ್ಪಡಿಸಿದ್ದ ”ರಾಷ್ಟ್ರಕವಿ ಕುವೆಂಪು ನೆನಪಿನ ರಾಜ್ಯಮಟ್ಟದ ಕವನ ಸ್ಪರ್ಧೆ-2016” ಯಲ್ಲಿ ಬಹುಮಾನಗಳಿಸಿರುತ್ತಾರೆ. ಮಂಡ್ಯದಲ್ಲಿ 2017 ರ ಫೆಬ್ರವರಿಯಲ್ಲಿ ನಡೆದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಸ್ಮರಣಾರ್ಥ 20 ವರ್ಷದ ರಾಜ್ಯಮಟ್ಟದ ಕವಿಕಾವ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಯ್ಕೆಯಾಗಿದ್ದರು. 2018 ರಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನಿಂದ “ಚುಟುಕು ಭೂಷಣ” ಪ್ರಶಸ್ತಿಗೆ ಭಾಜನರಾಗಿದ್ದಾರೆ. 2018 ರಲ್ಲಿ ಬೆಳಕು ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ “ಕವಿರತ್ನ” ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ವಿಶ್ವ ವಿನೂತನ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ 2018 ನೇ ಸಾಲಿನ “ಸುವರ್ಣ ಕರ್ನಾಟಕ ಸಮಾಜ ಸೇವಾ ಸಿರಿ” ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಪುಸ್ತಕ ಪರಿಷತ್ತಿನ 2024 ರ ‘ಸಿದ್ದಲಿಂಗ ಶ್ರೀ’ ಪ್ರಶಸ್ತಿ ಪುರಸ್ಕೃತರಾಗಿರುತ್ತಾರೆ.

2019 ಮತ್ತು 2022 ರಲ್ಲಿ ‘ಬೆಂಕಿಯ ಬಲೆ’ ಪತ್ರಿಕೆಯ 15 ಮತ್ತು 18 ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕವಿಕಾವ್ಯಮೇಳದ ಸಮ್ಮೇಳನಾಧ್ಯಕ್ಷರಾಗಿ ಗೌರವಕ್ಕೆ ಪಾತ್ರರಾಗಿದ್ದರು. ಸಿದ್ದಗಂಗಾ ಶ್ರೀಗಳ ಮೇಲೆ ರಚಿಸಿದ ಕವನಕ್ಕಾಗಿ 2019 ರ ‘ಕಾವ್ಯಶ್ರೀ’ ಪುರಸ್ಕಾರ ಲಭಿಸಿರುತ್ತದೆ. ಕಸ್ತೂರಿ ಸಿರಿಗನ್ನಡ ವೇದಿಕೆ.(ರಿ). ಬೆಳಗಾವಿ, ವತಿಯಿಂದ 2019 ರಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಗ್ರಾಮೀಣ ಸಾಹಿತ್ಯ ಸಮ್ಮೇಳನದಲ್ಲಿ’ ಇವರ ಸಾಹಿತ್ಯಸೇವೆಗೆ ರಾಷ್ಟ್ರಮಟ್ಟದ ಗೌರವ “ಸಾಹಿತ್ಯ ವಿಭೂಷಣ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದ್ದಾರೆ. ಮಂಡ್ಯದ ಕರುನಾಡ ಸೇವಾಟ್ರಸ್ಟ್(ರಿ) ವತಿಯಿಂದ 2019 ರ “ಕರುನಾಡ ಸಾಹಿತ್ಯ ಸೇವಾರತ್ನ” ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 2020 ರಲ್ಲಿ ಭತ್ತದ ನಾಡಿನ ಬವಣೆ (ರಿ) ಕೃಷ್ಣರಾಜನಗರ ಇವರು ಸವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ಅಖಿಲ ಭಾರತ ಅಣುಶಕ್ತಿ ನಿಗಮದ ವಿಜಿಲೆನ್ಸ್ ಕಿರುಚಿತ್ರ ಸ್ಪರ್ಧೆಯಲ್ಲಿ ಇವರೇ ಬರೆದು ನಿರ್ದೇಶಿಸಿದ “ಆಪರೇಷನ್ ಖೆಡ್ಡ” ಕಿರುಚಿತ್ರಕ್ಕೆ ಪ್ರಪ್ರಥಮ ಬಹುಮಾನ ದೊರೆತಿರುತ್ತದೆ. 2019 ರಲ್ಲಿ ಇವರು ಬರೆದು ನಿರ್ದೇಶಿಸಿದ “ಬೆಂಕಿ” ನಾಟಕ ಹಲವು ಪ್ರದರ್ಶನಗಳನ್ನು ಕಂಡು, ಅಪಾರ ಪ್ರಶಂಸೆ ಹಾಗೂ ಜನ ಮನ್ನಣೆಗೆ ಪಾತ್ರವಾಗಿದೆ. 2020 ರಲ್ಲಿ ಉತ್ತರಪ್ರದೇಶದ ನರೋರದಲ್ಲಿ “ಬೆಂಕಿ” ನಾಟಕಕ್ಕೆ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಪ್ರಶಸ್ತಿ. 2020 ರಲ್ಲಿ ಇವರು ಬರೆದು ನಿರ್ದೇಶಿಸಿದ “ಕೊರೋನಾ ಸಂಹಾರ” ನಾಟಕಕ್ಕೆ ಅಪಾರ ಜನ ಮನ್ನಣೆ ಪಡೆದಿದ್ದಾರೆ. 2022ರಲ್ಲಿ ಭಾರತೀಯ ಅಣುಶಕ್ತಿ ನಿಗಮದ ಕಿರುಚಿತ್ರ ಸ್ಪರ್ಧೆಯಲ್ಲಿ ಇವರು ಬರೆದು ನಿರ್ದೇಶಿಸಿದ “ಬೇಟೆ” ಕಿರುಚಿತ್ರಕ್ಕೆ ಪ್ರಪ್ರಥಮ ಬಹುಮಾನ ಲಭಿಸಿರುತ್ತದೆ. 2022 ರಲ್ಲಿ ಇವರು ಬರೆದು ನಿರ್ದೇಶಿಸಿದ “ತಟ್ಟೆಇಡ್ಲಿ” ನಾಟಕವು ಹತ್ತಾರು ಕಡೆ ಹಲವಾರು ಪ್ರದರ್ಶನ ಕಂಡು ಅಮೋಘ ಜನಪ್ರಿಯತೆ, ಅಪಾರ ಮನ್ನಣೆ ಪ್ರಶಂಸೆಗಳಿಗೆ ಪಾತ್ರವಾಗಿದೆ.

ದಕ್ಷಿಣ ವಿಭಾಗೀಯ ಮಟ್ಟದಿಂದ “ತಟ್ಟೆಇಡ್ಲಿ” ನಾಟಕ ವಿಜಯಿಯಾಗಿ, 2023 ರಲ್ಲಿ ಮುಂಬೈನಲ್ಲಿ ನಡೆದ ರಾಷ್ಟ್ರಮಟ್ಟದ ಅಣುಶಕ್ತಿ ನಿಗಮದ ನಾಟಕಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿಯ ಜೊತೆಜೊತೆಗೆ ಅತ್ಯುತ್ತಮ ನಟನೆ ಮತ್ತು ಅತ್ಯುತ್ತಮ ರಚನೆ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. 2023 ರಲ್ಲಿ ಭಾರತೀಯ ಅಣುಶಕ್ತಿ ನಿಗಮದ ಕಿರುಚಿತ್ರ ಸ್ಪರ್ಧೆಯಲ್ಲಿ ಇವರು ಬರೆದು ನಿರ್ದೇಶಿಸಿದ “ಆಕ್ಸಿಡೆಂಟ್” ಕಿರುಚಿತ್ರಕ್ಕೆ ದ್ವಿತೀಯ ಬಹುಮಾನ ಲಭಿಸಿರುತ್ತದೆ. 2024 ರ ಫೆಬ್ರವರಿಯಲ್ಲಿ ತೇಲಂಗಾರದ ಮೈತ್ರಿ ಕಲಾ ಬಳಗ(ರಿ) ರಜತ ಮಹೋತ್ಸವದಲ್ಲಿ ಇವರ “ತಟ್ಟೆ ಇಡ್ಲಿ” ನಾಟಕ ಪ್ರದರ್ಶನ ಅಪಾರ ಪ್ರಶಂಸೆ ಹಾಗೂ ಜನಮನ್ನಣೆಗೆ ಪಾತ್ರವಾಗಿದೆ. ಇವರ ‘ಭಾವದ ಅಂಬಾರಿ’ ಕಥಾಸಂಕಲನವು ‘ಕೆಂಪು ದೀಪ’ ಎಂಬ ಚಲನಚಿತ್ರವಾಗಿ ಬೆಳ್ಳಿತೆರೆ ಕಂಡಿದೆ.

ಇವರು ಗೀತ ಸಾಹಿತ್ಯ ನೀಡಿರುವ ‘ಸಮರಸ’ ಚಲನಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ಇವರ ಗೀತಸಾಹಿತ್ಯಕ್ಕೆ ಶ್ರೀ ಆನೂರು ಅನಂತಕೃಷ್ಣಶರ್ಮ ಅವರು ಸಂಗೀತ ಸಂಯೋಜಿಸಿ ಎಂ.ಡಿ. ಪಲ್ಲವಿ, ಹೇಮಂತ್, ಮುಂತಾದ ದಿಗ್ಗಜರು ಹಾಡಿರುವ ‘ಗುರು ಗೀತ ಲಹರಿ’ ಧ್ವನಿಮುದ್ರಿಕೆಯು ಅಪಾರ ಜನ ಮನ್ನಣೆಯನ್ನು ಗಳಿಸಿದೆ. ಇವರ ಕವಿತೆಗಳಿಗೆ ಸುಪ್ರಸಿದ್ದ ಗಾಯಕರಾದ ಶ್ರೀ ಪುತ್ತೂರು ನರಸಿಂಹ ನಾಯಕ್ ಅವರು ರಾಗ ಸಂಯೋಜಿಸಿ, ಪ್ರಖ್ಯಾತ ಸುಗಮ ಸಂಗೀತಗಾರರು ಹಾಡಿರುವ ಧ್ವನಿಮುದ್ರಿಕೆ ಬಿಡುಗಡೆಗೆ ಸಿದ್ದವಾಗಿದೆ.

ಎ.ಎನ್.ರಮೇಶ್. ಗುಬ್ಬಿಯವರು ಇನ್ನಷ್ಟು ಕೃತಿಗಳನ್ನು ಬರೆದು ಲೋಕಾರ್ಪಣೆ ಮಾಡಲಿ. ಇನ್ನಷ್ಟು ಗೌರವ ಪುರಸ್ಕಾರಗಳು ದೊರೆಯಲಿ ಎಂದು ಪತ್ರಿಕೆಯ ಪರವಾಗಿ ವೈಯಕ್ತಿಕವಾಗಿ ಹಾರೈಸುತ್ತೇನೆ.


  • ನಾರಾಯಣಸ್ವಾಮಿ – ಬಂಡಹಟ್ಟಿ, ವಕೀಲರು ಮತ್ತು ಲೇಖಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW