ಓದಿದ್ದು ವಾಣಿಜ್ಯಶಾಸ್ತ್ರ, ಆದರೆ ಕನ್ನಡದ ಸಾಹಿತ್ಯ ಮೇಲಿನ ಗೀಳಿನಿಂದ ಕಾದಂಬರಿ, ಕವಿತೆಗಳನ್ನು ಬರೆಯಲು ಶುರುಮಾಡಿದ ರಂಜಿತಾ ದಶಿ೯ನಿ ಎಸ್ ಆರ್ ಅವರ ಸಾಹಿತ್ಯ ಪ್ರೇಮದ ಕುರಿತು ಲೇಖಕ, ಕವಿ ನಾರಾಯಣಸ್ವಾಮಿ ಮಾಲೂರು ಅವರು ಓದುಗರಿಗೆ ಪರಿಚಯಿಸಿದ್ದಾರೆ. ತಪ್ಪದೆ ಮುಂದೆ ಓದಿ…
ಕನ್ನಡ ಸಾಹಿತ್ಯ ಲೋಕ ಇತ್ತೀಚಿನ ದಿನಗಳಲ್ಲಿ ಶ್ರೀಮಂತವಾಗುತಿದೆ. ಇದಕ್ಕೆ ಕಾರಣ ಬಹುತೇಕ ಕನ್ನಡಿಗ ಮನಸ್ಸುಗಳು ಕನ್ನಡ ಸಾಹಿತ್ಯವನ್ನು ಬರೆಯಲು ಪ್ರಾರಂಭಿಸಿದ್ದಾರೆ. ತಮ್ಮ ವೃತಿಯ ಜೊತೆಯಲ್ಲಿ ಸಾಹಿತ್ಯದ ಬರವಣಿಗೆಯನ್ನು ಪ್ರವೃತ್ತಿಯಾಗಿ ಬಳಸಿಕೊಂಡು, ಕನ್ನಡ ಸಾಹಿತ್ಯದ ಘಮಲನ್ನು ಪಸರಿಸಲು ಹೊರಟಿದ್ದಾರೆ. ತಮ್ಮ ದಿನನಿತ್ಯದ ಬದುಕಿನ ತೊಳಲಾಟದಲ್ಲಿದ್ದರೂ ತಮ್ಮ ನೋವುಗಳನ್ನು ಮರೆಯಲು, ಸಮಾಜದೊಳಗೆ ಸೃಷ್ಟಿಯಾಗಿರುವ ಅಶಾಂತಿಯನ್ನು ಹೊರಗೆಡವಲು, ಜಾತಿ ಮತ ಶೋಷಣೆಯನ್ನು ಖಂಡಿಸುತ್ತಾ ಲೇಖನಿಯನ್ನು ಹಿಡಿದು ಸಮಾಜದ ಬದಲಾವಣೆಗೆ ಬಯಸುತ್ತಿದ್ದಾರೆ.
ತಾನು ಓದಿದ್ದು ವಾಣಿಜ್ಯಶಾಸ್ತ್ರವಾದರೂ ಕೂಡ ಕನ್ನಡದ ಸಾಹಿತ್ಯವನ್ನು ಪ್ರೀತಿಸುವ ಒಲವನ್ನು ಬೆಳಸಿಕೊಂಡು ಇತರರ ಕಾವ್ಯ, ಕಥೆ, ಕಾದಂಬರಿಗಳನ್ನು ಓದುತ್ತಾ ನಾನು ಕೂಡ ಕನ್ನಡ ಸಾಹಿತ್ಯದಲ್ಲಿ ಕಾದಂಬರಿ, ಕವಿತೆಗಳನ್ನು ಬರೆಯಬಲ್ಲೆ ಎಂದು ಯೋಚಿಸುತ್ತಾ ಕವಯಿತ್ರಿಯಾಗಿ ಕಾದಂಬರಿಗಾರ್ತಿಯಾಗಿ ಕನ್ನಡ ಸಾಹಿತ್ಯಲೋಕದಲ್ಲಿ ನಂದಾದೀಪ ಕಾವ್ಯನಾಮದಿಂದ ಗುರುತಿಸಿಕೊಳ್ಳುತ್ತಿರುವ ಪ್ರತಿಭೆಯೇ ಶ್ರೀಮತಿ ರಂಜಿತಾ ದಶಿ೯ನಿ ಎಸ್ ಆರ್.

ಶ್ರೀಮತಿ ರಂಜಿತಾ ದಶಿ೯ನಿ ಎಸ್ ಆರ್.ರವರು ದಿನಾಂಕ 04-06-1991 ರಲ್ಲಿ ರವಿಶಂಕರ್.ಕೆ ಮತ್ತು ಸರಸ್ವತಿ ಆರ್ ರವರ ಮಗಳಾಗಿ ಮಂಡ್ಯದಲ್ಲಿ ಜನಿಸಿದರು. ಮಂಡ್ಯದ ಶ್ರೀ ಗೀತಾ ಕಾನ್ವೆಂಟ್ ನಲ್ಲಿ ಒಂದರಿಂದ ಎಳನೇ ತರಗತಿವರೆಗೂ ಆಭ್ಯಾಸ ಮಾಡಿ ನಂತರ ಅದೇ ಶ್ರೀ ಗೀತಾ ಪ್ರೌಢಶಾಲೆಯಲ್ಲಿ ಮಂಡ್ಯದಲ್ಲಿ ಹತ್ತನೇ ತರಗತವರೆಗೂ ವಿದ್ಯಾಭ್ಯಾಸ ಮಾಡಿದರು.
ಮಾಂಡವ್ಯ ಪದವಿ ಪೂರ್ವ ಕಾಲೇಜು ಮಂಡ್ಯ ಇಲ್ಲಿ ವಾಣಿಜ್ಯ ಶಾಸ್ತ್ರ ವಿಷಯದಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಅದೇ ಮಾಂಡವ್ಯ ಪ್ರಥಮ ದರ್ಜೆ ಕಾಲೇಜನಲ್ಲಿ ಬಿ.ಕಾಂ ಪದವಿಯನ್ನು 2008-2011ರಲ್ಲಿ ಪಡೆದರು.
ನಂತರದಲ್ಲಿ ಕುಟುಂಬದ ಪ್ರೋತ್ಸಾಹ ಮತ್ತು ಉನ್ನತ ಶಿಕ್ಷಣವನ್ನು ಪೂರೈಸಬೇಕೆಂಬ ಮನೋಭಿಲಾಶೆಯಿಂದ ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿ ಮೈಸೂರು ಇಲ್ಲಿ ಸೇರಿ ವಾಣಿಜ್ಯ ವಿಷಯದಲ್ಲಿ (ಎಂ ಕಾಂ) ಸ್ನಾತಕೋತ್ತರ ಪದವಿಯನ್ನು 2011-2013 ಪಡೆದರು. ನಂತರದಲ್ಲಿ ಶ್ರೀಮತಿ ರಂಜಿತಾ ದಶಿ೯ನಿ ಎಸ್ ಆರ್.ರವರು ಪಿ ಜಿ ಡಿಪ್ಲೋಮ in marketing managament ಕೋಸ್೯ನ್ನು – ಮೈಸೂರು ಮುಕ್ತ ವಿಶ್ವವಿದ್ಯಾಲಯ, ಮುಕ್ತ ಗಂಗೋತ್ರಿ, ಮೈಸೂರು ಇಲ್ಲಿ ಮುಗಿಸಿದರು.
ನನ್ನ ಬರಹ ಲೋಕಕ್ಕೆ ಮನೆಯಲ್ಲಿ ಯಾರ ಬೆಂಬಲವು ಇರಲಿಲ್ಲ. ಮನೆಯಲ್ಲಿ ಬರೆಯುವುದು ಯಾರಿಗೂ ಇಷ್ಟವಿರಲಿಲ್ಲ.. ಬರಹ ಹೊಟ್ಟೆ ತುಂಬಿಸುವುದಿಲ್ಲ ಎಂದು ಹೇಳುತ್ತಿದ್ದರು.ಇನ್ನು ಸಂಬಂಧಿಕರು ಮನೆಯವರ ಮಾತಿಗೆ ತುಪ್ಪ ಸುರಿಯುತ್ತಿದ್ದರು. ಯಾರು ಏನೇ ಹೇಳಿದರು ಬರೆಯುವುದನ್ನು ನಿಲ್ಲಿಸಲಿಲ್ಲ. ಅದರ ಪ್ರತಿರೂಪವೆ ನನ್ನ ಮೊದಲ ಕಾದಂಬರಿ ಸ್ಕೆಚ್.
ಪಿ ಯು ಸಿ ಓದುವಾಗ ಆಗೊಮ್ಮೆ ಹೀಗೊಮ್ಮೆ ಕದ್ದು ಮುಚ್ಚಿ ಬರೆಯುತ್ತಿದ್ದೆ.. ನನ್ನ ಸಂಪೂರ್ಣ ವಿಧ್ಯಾಭ್ಯಾಸ ಮುಗಿದ ನಂತರ (M. Com ) ಕನ್ನಡ ಪುಸ್ತಕ ಓದುವ ಗೀಳಿಗೆ ಬಿದ್ದೆ. ರವಿಬೆಳಗೆರೆಯವರು ನನ್ನ ಮಾನಸ ಗುರುಗಳು.. ಅವರ ಪುಸ್ತಕಗಳೆ ನನಗೆ ಬರೆಯಲು ಪ್ರೇರಣೆ. ಮುಂದುವರಿದು ಸಾಯಿಸುತೆ, ಎಂ ಕೆ ಇಂದಿರಾ ಯಂಡಾಮುರಿ ವೀರೇಂದ್ರನಾಥ ಹೀಗೆ ಹಲವಾರು ಲೇಖಕರ ಕೃತಿಗಳು ನನ್ನನ್ನು ಬರೆಯಲು ಪ್ರೇರೇಪಿಸಿದವು ಎನ್ನುತ್ತಾರೆ ನಂದಾದೀಪ..
ಶ್ರೀಮತಿ ರಂಜಿತಾ ದಶಿ೯ನಿ ಎಸ್ ಆರ್.ರವರು ವಿದ್ಯಾಭ್ಯಾಸ ಮುಗಿದ ನಂತರ ವೃತಿ ಜೀವನವನ್ನು ಪ್ರಾರಂಭಿಸಿದರು. ಮೊದಲು ಸರ್ಕಾರಿ ಮಹಿಳಾ ಕಾಲೇಜು(ಸ್ವಾಯತ್ತ), ಮಂಡ್ಯದಲ್ಲಿ ಸುಮಾರು ಎಳು ವರ್ಷ ಅತಿಥಿ ಉಪನ್ಯಾಸಕರಾಗಿ ವಾಣಿಜ್ಯ ಶಾಸ್ತ್ರವನ್ನು ಬೋಧಿಸಿದರು ನಂತರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಿಡದಿಯಲ್ಲಿ ಒಂದು ವರ್ಷ, ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿ ಬೆಂಗಳೂರಿನಲ್ಲಿ ಒಂದು ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿ ಪ್ರಸ್ತುತ ಸರ್ಕಾರಿ ರಾಮನಾರಾಯಣ ಚೆಲ್ಲಾರಾಮ್ ಕಾಲೇಜು ಬೆಂಗಳೂರು ಇಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯವನ್ನು ನಿವ೯ಹಿಸುತ್ತಿದ್ದಾರೆ.

ಶ್ರೀಮತಿ ರಂಜಿತಾ ದಶಿ೯ನಿ ಎಸ್ ಆರ್.ರವರು ತನ್ನ ಬದುಕನ್ನು ಬರೀ ಉಪನ್ಯಾಸಕಿ ವೃತಿಗೆ ಸೀಮಿತವಾಗಿಸಿಕೊಳ್ಳದೇ ಕನ್ನಡ ಸಾಹಿತ್ಯದ ಬರವಣಿಗೆಯನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡು ಸ್ಕೆಚ್ ಕೆಂಪು ಕ್ಯಾನ್ವಾಸ್ ಎಂಬ ಪತ್ತೆದಾರಿ ಕಾದಂಬರಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯವನ್ನು ಪಡೆದು 2020ರಲ್ಲಿ ಲೋಕಾರ್ಪಣೆ ಮಾಡಿ ಕಾದಂಬರಿಗಾರ್ತಿಯಾಗಿ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡರು.
ಮಾಡಿದ್ದುಣ್ಣೋ ಮಹರಾಯ, ಗಿಳಿಶಾಸ್ತ್ರದ ಕಂಟಕ, ಪ್ರೀತಿಯಿಲ್ಲದ ಮೇಲೆ, ಕಲಾತಪಸ್ವಿ, ಪ್ರೀತಿ ಮಾಯೇ ಹುಶಾರ್ ಇನ್ನೂ ಹಲವಾರು ಕಥೆಗಳನ್ನು ಬರೆದಿದ್ದು ಸುಮಾರು ಆರು ನೂರು ಚುಟುಕುಗಳನ್ನು ರಚನೆ ಮಾಡಿದ್ದಾರೆ.
ಶ್ರೀಮತಿ ರಂಜಿತಾ ದಶಿ೯ನಿ ಎಸ್ ಆರ್.ರವರು ವೃತಿ ಮತ್ತು ಸಾಹಿತ್ಯದ ಜೊತೆಯಲ್ಲಿ ಹಲವಾರು ಕ್ಷೇತ್ರದಲ್ಲಿ ತಮ್ಮ ತೊಡಿಸಿಕೊಂಡು ಮಂಡ್ಯದ “ನಮ್ಮ ಕಾವೇರಿ ಟಿವಿ ಚಾನೆಲ್ ” ನಲ್ಲಿ. ಪಬ್ಲಿಕ್ ಟಿವಿ ರಾಮದುರ್ಗ ( ಬೆಳಗಾವಿ ) ಚಾನೆಲ್ ನಲ್ಲಿ SV9 ಟಿವಿ ಚಾನೆಲ್ ಬೆಂಗಳೂರು ಇಲ್ಲಿ ವಾರ್ತಾವಾಚಕಿಯಾಗಿಯೂ, ನಿರೂಪಕಿಯಾಗಿಯೂ, ಹಿನ್ನೆಲೆ ಧ್ವನಿ ನೀಡುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪಂಜು, ಉದಯಕಾಲ, ಬದಲಾವಣೆ ,ವಿನಯವಾಣಿ, ಸಂಜೆ ಎಕ್ಸ್‌ಪ್ರೆಸ್, ಇಂದು ಸಂಜೇ, ರಾಯಚೂರು ಫಾರೆಸ್ಟ್ ರಿಪೋರ್ಟ್ ಇನ್ನೂ ಮುಂತಾದ ಪತ್ರಿಕೆಗಳಲ್ಲಿ ಇವರ ಕಥೆ ಕವಿತೆ ಲೇಖನ ಪುಸ್ತಕ ವಿಮರ್ಶೆಗಳು ಪ್ರಕಟವಾಗಿವೆ.
ಶ್ರೀಮತಿ ರಂಜಿತಾ ದಶಿ೯ನಿ ಎಸ್ ಆರ್ ರವರು ರಾಜ್ಯಮಟ್ಟದ ಹಲವಾರು ಸಂಘಸಂಸ್ಥೆಗಳು ನಡೆಸುವ ವಿವಿಧ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಇವರು ರಾಜ್ಯಮಟ್ಟದ ಹಲವಾರು ಸಾಹಿತ್ಯ ಸ್ವಧೆ೯ಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ. ಮುಖಪುಟದ ಪ್ರಮುಖ ಸಾಹಿತ್ಯವೇದಿಕೆಯಾ ಪ್ರತಿಲಿಪಿಯಲ್ಲಿ ನಿರಂತರವಾಗಿ ಬರೆಯುತ್ತಾ ಗೋಲ್ಡನ್ ಬ್ಯಾಡ್ಜ್ ಕೂಡ ನಂದಾದೀಪರವರು ಪಡೆದಿದ್ದಾರೆ.
ನಂದಾದೀಪ ರವರು ರಾಜ್ಯಮಟ್ಟದ ಹಲವಾರು ಕವಿಗೋಷ್ಠಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ರಾಜ್ಯಮಟ್ಟದ ಹಲವಾರು ಸಂಘಸಂಸ್ಥೆಗಳು ಇವರನ್ನು ಗೌರವಿಸಿವೆ. ಜ್ಞಾನ ಗಂಗಾ ಸಾಂಸ್ಕೃತಿಕ ಸಂಘಟನೆ ಬೆಂಗಳೂರು ಇವರು ರಾಜ್ಯಮಟ್ಟದ ಕರುನಾಡು ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕುವೆಂಪು ಜನಪರ ವೇದಿಕೆಯಿಂದ ಸ್ಕೆಚ್ ಕಾದಂಬರಿ ಕೃತಿಗೆ ತ್ರಿವೇಣಿ ಯುವ ಕಾದಂಬರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮತ್ತು ಇವರು ಜ್ಞಾನ ಗಂಗಾ ಸಾಹಿತ್ಯ ಸಾಂಸ್ಕೃತಿಕ ಸಂಘ ಬೆಂಗಳೂರು ಈ ಸಾಹಿತ್ಯ ಸಂಘಟನೆಯ ಮಂಡ್ಯದ ಜಿಲ್ಲಾಧಕ್ಷೆಯಾಗಿ ಕಾರ್ಯ ನಿವ೯ಹಿಸುತ್ತಿದ್ದಾರೆ.
ಮನಸ್ವಿನಿ ಮತ್ತು ಮಧುಮೋಹನಯೆಂಬ ಕಾದಂಬರಿಗಳು, ಕಾವ್ಯ ದಶಿ೯ನಿ ಕವನಸಂಕಲನ ಈ ಮೂರು ಕೃತಿಗಳ ಲೋಕಾರ್ಪಣೆ ಮಾಡಲು ತಯಾರಿಯಲ್ಲಿರುವ ಶ್ರೀಮತಿ ನಂದಾದೀಪರವನ್ನು. ಅಭಿನಂದಿಸುತ್ತಾ ಮುಂದೆ ಹಲವಾರು ಕೃತಿಯನ್ನು ಹೊರತಂದು ಕನ್ನಡ ಸಾಹಿತ್ಯ ಲೋಕ ಶ್ರೀಮಂತಗೊಳಿಸಲಿ ಆ ಕೃತಿಗಳು ಮನುಜನ ಬದುಕಿನ ತಲ್ಲಣಗಳಾಗಲಿ. ತಮ್ಮ ಬರಹ ವೈಚಾರಿಕತೆ ಪ್ರಬುದ್ದತೆಯಡೆಗೆ ಸಾಗಿ ಸಮಾಜದಲ್ಲಿ ಗೌರವ ಪುರಸ್ಕಾರಗಳು ಸಿಗಲಿ ಎಂದು ಪತ್ರಿಕೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಹಾರೈಸುತ್ತೇನೆ. ಶುಭವಾಗಲಿ..
ಹಿಂದಿನ ಸಂಚಿಕೆಗಳು :
- ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಸುಮಾ
- ಮಾಲೂರಿನ ಉದಯೋನ್ಮುಖ ಲೇಖಕಿ ಸುಮಂಗಳ ಮೂರ್ತಿ
- ಭಾವನೆಗಳ ಮಹಾಪೂರವೇ ಮನೋವಾರಧಿ
- ಕನ್ನಡದ ಸಾಹಿತ್ಯಲೋಕದ ಭಾವಧಾರೆ ವಿದ್ಯಾ ಅರಮನೆ
- ವೃತ್ತಿಯಲ್ಲಿ ಶಿಕ್ಷಕಿ, ಲೇಖಕಿ, ಸಾಮಾಜಿಕ ಹೋರಾಟಗಾತಿ೯
- ಬಹುಮುಖ ಪ್ರತಿಭೆ ಉದಯೋನ್ಮುಖ ಲೇಖಕಿ ಅಭಿಜ್ಞಾ ಪಿ ಎಮ್ ಗೌಡ
- ಅನುವಾದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕವಯಿತ್ರಿ
- ನಾರಾಯಣಸ್ವಾಮಿ ಮಾಲೂರು – ವಕೀಲರು ಮತ್ತು ಲೇಖಕರು, ಕೋಲಾರ ಜಿಲ್ಲೆ.
