ನಿಮ್ಮ ಅಕೌಂಟ್ ಲ್ಲಿ ಮೂರು ಕೋಟಿ ಐವತ್ತಾರು ಸಾವಿರ ರೂಪಾಯಿಗಳಿವೆ, ಈಗ ನಮ್ಮ ಬ್ರಾಂಚ್ ನಲ್ಲಿ 30 ಲಕ್ಷ ಮಾತ್ರ ಇರೋದು’… ಆತನ ಕೈಗಳು ನಡುಗುತ್ತಿರುವುದನ್ನು ನಾನು ನೋಡಿದೆ. ಮುಂದೇನಾಯಿತು ತಪ್ಪ ಓದಿ…
ನಿನ್ನೆ ನಾನು ಬ್ಯಾಂಕ್ ಗೆ ಹೋಗಿದ್ದೆ. ನನ್ನ ಪಾಸ್ ಬುಕ್ಕನ್ನು ಕೌಂಟರ್ ನಲ್ಲಿ ಇದ್ದ ಸಿಬ್ಬಂದಿಯ ಕೈಗೆ ಕೊಡುತ್ತಾ ನಾನು ಹೇಳಿದೆ –
‘ಇದರಿಂದ ಒಂದು ಐನೂರು ರುಪಾಯಿಗಳನ್ನು ಕೊಡಿ’…
ಅದಕ್ಕೆ ಆತ ಪಾಸ್ ಬುಕ್ಕನ್ನು ನನಗೆ ವಾಪಾಸ್ ಕೊಡುತ್ತಾ –
‘20000 ಕಿಂತ ಕಡಿಮೆ ಬೇಕಾಗುವ ಹಣವನ್ನು ಪಡೆಯಲು ATM ನ್ನು ಉಪಯೋಗಿಸಬೇಕು’..
ಆತನ ಮಾತಲ್ಲಿ ಸ್ವಲ್ಪ ಅಹಂಕಾರ ಇದ್ದ ಹಾಗೆ ನನಗನಿಸಿತು…. ನನಗೆ ಸ್ವಲ್ಪ ಬೇಸರವೂ ಆಯಿತು.. ಎಟಿಎಂ ಹತ್ತಿರ ಇರಲಿಲ್ಲ. ನಾನು ಏನು ಮಾಡುವುದು ಅಂತ ಯೋಚಿಸುತ್ತಿರುವಾಗ
ಆತ – ಸ್ವಲ್ಪ ಸಿಟ್ಟಲ್ಲಿ
‘ಸ್ವಲ್ಪ ಬದಿಗೆ ಸರಿಯಿರಿ ನಿಮ್ಮ ಹಿಂದೆ ಜನ ನಿಂತಿರುವುದು ಕಾಣಿಸುತ್ತಿಲ್ಲವೇ?’ ಅಂತ ಕೇಳಿದ. ನಾನು ಸರಿಯದೆ ಅಲ್ಲೇ ನಿಂತೆ…
ನಾನು ಹೇಳಿದೆ – ‘ಒಂದು ಕೆಲಸ ಮಾಡಿ . ನನ್ನ ಅಕೌಂಟನ್ನು ಕ್ಯಾನ್ಸಲ್ ಮಾಡಿ ನನ್ನ ಖಾತೆಯಲ್ಲಿ ಇರುವ ಹಣವನ್ನೆಲ್ಲಾ ಕೊಟ್ಟು ಬಿಡಿ. ನನ್ನ ಅಕೌಂಟಲ್ಲಿ ಎಷ್ಟು ಹಣ ಇದೆ ಅಂತ ನಾನು ಮೆಲ್ಲನೆ ಕೇಳಿದೆ’.
ನನ್ನಿಂದ ಪಾಸ್ ಬುಕ್ಕನ್ನು ಮರಳಿ ಪಡೆದ ಆತ ಕಂಪ್ಯೂಟರನ್ನು ಒತ್ತತೊಡಗಿದ… ಆತ ಸ್ವಲ್ಪ ಬೆವರತೊಡಗಿದ್ದನ್ನು ನಾನು ಗಮನಿಸಿದೆ. ಆತ ಸ್ವಲ್ಪ ಮೆಲ್ಲ ಹೇಳಿದ –
‘ಮೂರು ಕೋಟಿಯ ಐವತ್ತಾರು ಸಾವಿರ ರುಪಾಯಿಗಳಿವೆ. ಆದರೆ ಈಗ ನಮ್ಮ ಬ್ರಾಂಚಲ್ಲಿ ಅಷ್ಟೊಂದು ಮೊತ್ತ ಇಲ್ಲ’. ನಾನು ಕೇಳಿದೆ – ಎಷ್ಟು ಇರಬಹುದು ಈಗ ..?
ಆತ –
‘ಇಲ್ಲಿ ಈಗ 30 ಲಕ್ಷ ಮಾತ್ರ ಇರೋದು’…
ಆತನ ಕೈಗಳು ನಡುಗುತ್ತಿರುವುದನ್ನು ನಾನು ನೋಡಿದೆ…
ನಾನು – ‘ಸರಿ ಆದರೆ ಈಗ ಅಷ್ಟನ್ನು ನನಗೆ ಕೊಟ್ಬಿಡಿ’…..ನಾನು ಸ್ವಲ್ಪ ಜೋರಾಗಿಯೇ ಹೇಳಿದೆ….
ಒಂದು WITHDRAWAL ಸ್ಲಿಪ್ಪಲ್ಲಿ ಆತ ನನ್ನಿಂದ ಸಹಿ ಮಾಡಿಸಿದ……
ಮತ್ತೆ ಅಕ್ಕಪಕ್ಕದ ಕೌಂಟರ್ ಗಳಿಂದೆಲ್ಲಾ ಬೇಗ ಬೇಗ ನೋಟಿನ ಬಂಡಲ್ ಗಳನ್ನು ಒಟ್ಟು ಮಾಡಿ ಮುವತ್ತು ಲಕ್ಷಗಳನ್ನು ನನ್ನ ಮುಂದೆ ತಂದು ಇಟ್ಟ……
ನಾನು ಸ್ವಲ್ಪ ವಿನಯದಿಂದ – ‘ನನಗೆ ಒಂದು ಉಪಕಾರವನ್ನು ಕೂಡಾ ಮಾಡಬಹುದಾ ಅಂತ ಕೇಳಿದೆ’..
ಆತ – ‘ಖಂಡಿತವಾಗಿಯೂ ಏನು ಬೇಕಿದ್ದರೂ ಕೇಳಿ ಅಂತ ಹೇಳಿದ’….
ಅಷ್ಟರಲ್ಲಿ ಆತನ ಅಹಂಕಾರ ಕಡಿಮೆಯಾಗಿತ್ತು ಬಹಳ ಗೌರವದಿಂದ ಮಾತನಾಡತೊಡಗಿದ….
ನಾನು ಆ ಬಂಡಲ್ ಗಳಿಂದ ಒಂದು ಐನೂರು ರುಪಾಯಿಯನ್ನು ತೆಗೆಯುತ್ತಾ ಹೇಳಿದೆ – ‘ನನಗೆ ಇಷ್ಟೇ ಸಾಕು ಬಾಕಿ ನನ್ನ ಅಕೌಂಟಿನಲ್ಲೇ ಜಮಾ ಮಾಡಿ ರಶೀದಿಯನ್ನು ಕೊಡಿ.
ನನ್ನ ಮಾತನ್ನು ಕೇಳಿ ಆತ ನನ್ನನ್ನು ಹಸಿಯಾಗಿ ತಿನ್ನುವ ಹಾಗೆ ದುರುಗುಟ್ಟಿ ನೋಡಿದ. ನಾನು ನಗುತ್ತಾ ಹೇಳಿದೆ- *ಬೇಗ ಬೇಗ ನನ್ನ ಹಿಂದೆ ಬಹಳ ಜನ ಕಾಯುತ್ತಿದ್ದಾರೆ. ರಶೀದಿಯನ್ನು ಪಡೆದು ನಾನು ಹೊರ ನಡೆಯುವಾಗ ನನ್ನ ಹಿಂದೆ ನಿಂತಿದ್ದವರು ನನ್ನನ್ನೇ ಆಶ್ಚರ್ಯದಿಂದ ನೋಡುತ್ತಿದ್ದರು. ಆದರೆ ನಾನು ಯಾರನ್ನೂ ಹೆಚ್ಚಾಗಿ ಗಮನಿಸದೆ ಮತ್ತೆ ಕಂಬಳಿಯನ್ನು ಹೊದ್ದು ಪುನಃ ಮಲಗಿದೆ.
‘ಇವತ್ತು ರಾತ್ರಿ ಕನಸು ಮತ್ತೆ ಬಿದ್ದರೆ ನಾಳೆ ಮತ್ತೆ ಪೋಸ್ಟ್ ಹಾಕುವೆ’…
- ಅನಾಮಿಕ 💯