ರೇವ್ ಪಾರ್ಟಿ ಅಂದರೆ ಒಂದು ಪ್ರತ್ಯೆಕ ಕತ್ತಲು ಸ್ಥಳದಲ್ಲಿ, ಕಣ್ಣುಕೊರೈಸುವ ಬಣ್ಣಬಣ್ಣದ ಲೇಸರ್ ಲೈಟು ಮತ್ತು ಕಿವಿಗಡಚಿಕ್ಕುವಂತ ವಾಕರಿಕೆ ಭಾಷೆಯಲ್ಲಿ, ಕರ್ಣಕಠೋರ ಹಾಡಿನಲ್ಲಿ ಮೈ ಮರೆತು ಅರೆಬರೆ ಬಟ್ಟೆಯಲ್ಲಿ ದೆವ್ವ ಬಂದವರಂತೆ ಕುಣಿಯುವುದು. ಇಲ್ಲಿ ಹೆಣ್ಣುಗಂಡೆಂಬ ಭೇದಭಾವವಿಲ್ಲ.
ಕುಡಿಯಲು ಬಾಟಲುಗಟ್ಟಲೆ ಸಾರಾಯಿ, ಮತ್ತೇರಿ ಮೈಮರೆಯಲು “ಡ್ರಗ್ಸ್”, ಮಾಂಸದ ದಂಧೆ ಜೋರು. ಇಲ್ಲಿ ಮದವೇರಿಸಿಕೋಂಡು ಮೈ ಮರೆತ ಅಷ್ಟೂ ಪಿಡುಗುಗಳು ಶ್ರೀಮಂತರೆ. ರೇವ್ ಪಾರ್ಟಿ ಎಂಬ ಸಾಮಾಜಿಕ ರೋಗ ಶುರುವಾಗಿದ್ದೆ ೧೯೮೦ ರಿಂದ ಈಚೆಗೆ. ಎಕ್ಸಟಸಿ (MDMA), ಗಾಮಾಹೈಡ್ರಾಕ್ಸಿಬ್ಯುಟೈರೇಟ್(GHB), ಕೆಟಮೈನ್(Ketamine), ರೈಪ್ನಾಲ್(Rohypnol) ಎಂಬುವ ಡ್ರಗ್ಸಗಳೇ ರೇವ್ ಪಾರ್ಟಿಗಳಲ್ಲಿ ಲೀಲಾಜಾಲವಾಗಿ ಬಳಕುವವು. ಇವುಗಳಿಗೆ “ಪಾರ್ಟಿ ಡ್ರಗ್ಸ”, “ಡೇಟ್ ರೇಪ್ ಡ್ರಗ್ಸ್” ಅಂತಲೂ ಹೆಸರಿದೆ. ಇವುಗಳು ಅರ್ಧರ್ಧ ಕೆ.ಜಿ ಸಿಕ್ಕರೂ ಸಾಕು ರಾತ್ರೋರಾತ್ರಿ ಕೋಟಿಗಟ್ಟಲೆ ಬಾಚಿಕೊಳ್ಳಬಹುದು. ಇದಕ್ಕಲ್ಲವೆ ರಾತ್ರೋರಾತ್ರಿ ಶ್ರೀಮಂತರಾಗಲು ಹಂಬಲಿಸುವ ಅದೇಷ್ಟೋ ಜನ ಡ್ರಗ್ಸ್ ದಂಧೆಗೆ ಇಳಿಯುವುದು.
ಇನ್ನೂ… ಈ ಮೇಲೆ ಹೇಳಿದಂತೆ ನಾಮಕರಣಗೊಂಡ ಹೆಸರಿನಿಂದಲೇ ಡ್ರಗ್ಸ್ ಹುಡುಕಲು ನೀವು ಹೊರಟರೆ ತದುಕಿಸಿಕೊಳ್ಳುವುದು ಗ್ಯಾರಂಟಿ. ಎಲ್ಲವಕ್ಕೂ ನಂಟಿರುವ ನೆಂಟರೆ ಕೆಲವು ಗುಪ್ತನಾಮ ಇಡುವುದುಂಟು.
ಅದು ಸಂಪೂರ್ಣ ಇಂಟರ್ನೇಟ್ ಮೆಸೇಜ್’ಮಯ. ಜಾಲ ಭೇದಿಸಿ ನಿಜವಾದ ಅಪರಾಧಿ ಪತ್ತೇ ಹಚ್ಚಲು “ಚಕ್ರವ್ಯೂಹ” ಭೇದಿಸಿ ಹೊರಬಂದಷ್ಟೇ ಪರಾಕ್ರಮ, ಕೌಶಲ್ಯತೆ ಬೇಕು. ಎಷ್ಟೋ ಸಾರೆ ಅಸಾಧ್ಯವೂ ಕೂಡ.

ಫೋಟೋ ಕೃಪೆ : wallpaperaccess
- ಎಕ್ಸಟಸಿ ( Methylenedioxymethamphetamine) MDMA ಅಂತ ಶಾರ್ಟ್ ನೇಮ್. ಆಡ್ಂ, ಬೀನ್ಸ್, ಕ್ಲಾರಿಟಿ, ಲವ್ ಡ್ರಗ್ಗ, ಮೊಲ್ಲಿ, ರೋಲ್, ಸ್ಕೂಬಿ ಸ್ನ್ಯಾಕ್ಸ್, ಸ್ನೋ ಬಾಲ್, ಎಕ್ಸ್ ಮುಂತಾದ ಹೆಸರುಗಳಿಂದ ನುಲಿದರೆ ಮಾತ್ರ ಇದರ ಪತ್ತೆಯಾಗಿರುವುದು.”ಲವ್ ಫೇಲ್ಯೂರ್” ಆದಂತ ಭಗ್ನರ ಆಪ್ತ ಡ್ರಗ್ಗ ಇದು. ಹೊಟ್ಟೆಗಿಳಿಸಿಕೊಂಡ ಕೆಲ ಗಂಟೆಗಳಲ್ಲಿ ಮೆದುಳಿನಲ್ಲಿ ರುದ್ರ ನರ್ತನ ಶುರುಮಾಡತ್ತೆ. ಕೈ ಕೊಟ್ಟು ಹೋದ ಗೆಳತಿಯ ಮಧುರ ಕ್ಷಣಗಳು ಕಿಲುಬುಗಟ್ಟಿದ ನೆನಪಿನಂಗಳದಲ್ಲಿ ತೆವಳಲು ಶುರು ಮಾಡುತ್ತವೆ. ಅದೊಂದು ತೆರನಾದ ಅಲೆಯ ಮಧುರ ಭಾವೋತ್ಕರ್ಷಕ್ಕೆ, ಭಾವಾವೇಶಕ್ಕೆ ಒಳಗಾಗುತ್ತಾರೆ. ನಿಧಾನ ಮಂಪರುಕವಿದು ಚಿಂತೆ ಇಲ್ಲದಂತಾಗಿ ಮೈ ಮೂಳೆಗಳಲ್ಲಿ ಕಸುವು ತುಂಬಿಕೊಳ್ಳತ್ತೆ. ಕಾಮಾಸಕ್ತಿ ಒಮ್ಮೇಲೆ ಚಿಮ್ಮಿ, ಇದೇ ಸ್ಥಿತಿಯ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧವೂ ನಡೆದುಬಿಡತ್ತೆ. ಕೊನೆಗೆ ಗಾಢ ನಿದ್ರೆ. ಎಚ್ಚರವಾದಾಗ ಅದ್ಯಾರಿದ್ದರು? ಯಾರೂ ಜೊತೆ ಮಲಗೆದ್ದೆ? ಎಂಬುದೆ ನೆನಪಿರುವುದಿಲ್ಲ.ಮೆದುಳಿನಲ್ಲಿ ಹೆಚ್ಚು ಸ್ರವಿಸುವ ಡೋಪಮೈನ್ (Dopamine), ಸೆರಟೋನಿನ್(Seratonin), ನಾರಎಫಿನೆಪ್ರಿನ್(Norepinephrine) ರಾಸಾಯನಿಕಗಳ ಚೆಲ್ಲಾಟವಿದು.
- ಗಾಮಾಹೈಡ್ರಾಕ್ಸಿಬ್ಯುಟೈರೇಟ್(GHB) ಎಂಬುದು ವಾಸನೆ, ರುಚಿ ಇಲ್ಲದ ಡ್ರಗ್ಗು. ಇದು ಬೇಕೆಂದರೆ ‘ಲಿಕ್ವಿಡ್ ಎಕ್ಸ್’ ಎಂದೇ ಕುಲುಕಬೇಕು. ಇದು ದೇಹಕ್ಕೆ ಹೀರಿಕೊಂಡ ವ್ಯಕ್ತಿಯನ್ನು ಐದಾರು ಜನ ಸೇರಿಕೊಂಡರೂ ಕೂಡ ತದುಕಲಾಗದು ಏಕೆಂದರೆ ಈ ಡ್ರಗ್ಸ್ ಯಾವುದೇ ನೋವಿನ ಸಂವೇದನೆಯನ್ನು ಮೆದುಳಿಗೆ ತಲುಪಿಸುವುದೇ ಇಲ್ಲ. ಅನಾಮತ್ತು ಕಲ್ಲನ್ನೇ ಪುಡಿಗಟ್ಟಿಬಿಡುವ ಉತ್ಸಾಹದಲ್ಲಿ ಇವರಿರುತ್ತಾರೆ ಇದೂ ಕೂಡ ಸೆಕ್ಸ್ ಓರಿಯಂಟೆಡ್ ಡ್ರಗ್ಗು. ಇಂಥವನ ಜೊತೆ ಇದೇ ಡ್ರಗ್ಗ ಸುರುವಿ ಕೊಂಡವಳು ಒಂದಾಗಿ ಬಿಟ್ಟರೆ ಮುಗೀತು “ಪಲ್ಲಂಗ್ ತೋಡ” ಪಕ್ಕಾ. ಮತ್ತೊಮ್ಮೇ ಮಂಚದತ್ತ ತಿರುಗಿ ನೋಡದಂತೆ ಮೈ ಮುರಿದುಕೊಳ್ಳುವರು. ಪರಾಕಾಷ್ಠೇ ತಲುಪಿಸುವ ಭೀಕರ ಡ್ರಗ್ಗಿದು.
“ಲಿಕ್ವಿಡ್ ಜಿ”, “ಗೂಪ್”, “ಹೋಮ್ ಬಾಯ್”, “ಈಜಿ ಲೇ” ಮುಂತಾದ ಅಡ್ಡನಾಮಗಳಿಂದ ದಕ್ಕಿಸಿಕೊಳ್ಳಬಹುದು. - ಕೆಟಾಮೈನ್ (ketamine) ನ್ನು “ಬೇಬಿ ಫುಡ್”, “ಸ್ಪೇಸಿಯಲ್ ಕೆ”, “ವಿಟಾಮಿನ್ ಕೆ”, “ಕಿಟ್ಕ್ಯಾಟ್” ಇನ್ನೀತರ ಹೆಸರುಗಳನ್ನ ಉಸುರಿದರೆ ಮಾತ್ರ ದಕ್ಕುವಂತದ್ದು
“ಲವ್ ಫೇಲ್ಯೂರ್ಗಿಂತ ಮುಂದೆ ಸಾಗಿದವರು, “ಲೈಫ್ ಎಂಜಾಯ್” ಮಾಡಬೆಕೆನ್ನುವ ಹಂಬಲದವರ ಆಯ್ಕೆಯಿದು.ರೇವ್ ಪಾರ್ಟಿ ಹೊಕ್ಕು ಅತ್ತಿತ್ತ ಸುತ್ತಾಡಿ, ಕೆಟಾಮೈನ್ ದೇಹಕ್ಕೀಳಿಸಿಕೊಂಡು ಕರ್ಣ ಕೊರೆಯುವ ತಾಳಕ್ಕೆ ಮೈ ಖಬರಿಲ್ಲದೆ ತೂಗಾಡುತ್ತಿರುತ್ತಾರೆ. ಕೆಲವರಂತೂ ಬಟ್ಟೆ ನೆಲಕ್ಕೆ ಕೆಡುಹಿ “ನಂಗಾನಾಚ್” ಪ್ರದರ್ಶಿಸಿ, ಮತ್ತೊಬ್ಬರ ಜೊತೆ ರೂಮು ಹೊಕ್ಕು ಬಿಡುತ್ತಾರೆ. ಕೊನೆಗೆ ಗಂಟೆಗಟ್ಟಲೆ ವಿಜೃಂಭಿಸುವುದು ಕೊಳಕು ಕಾಮ. - ರೈಪ್ನಾಲ್(Flunitrazepam) ಸೇವಿಸಲು ಸಮಿಪಸಬೇಕಾದರೆ “ರೂಫಿ”, “ಫಾರ್ಗೇಟ್ ಮಿ ಪಿಲ್” “ವೇಲಿಯಂ” ಮುಂತಾದ ಹೆಸರು ಉಸರಬೇಕಷ್ಟೇ. ಈ ಡ್ರಗ್ಗಿನ ಹಿಂದೆ ಬೀಳುವುದು ಹರೆಯದ ಯುವಕ ಯುವತಿಯರೇ ಹೆಚ್ಚು. “ರೈಪ್ನಾಲ್” ಸೇವಿಸಿದ ಅರ್ಧ ಗಂಟೆಯಿಂದ ಎರಡ್ಮೂರು ತಾಸು ಹುದುಗಿ ಹೋದ ಹಳೆಯ ನೆನಪುಗಳನ್ನು ಕೆದರಿ ಕನಲಿಸಿಬಿಡತ್ತೆ. ಭಾವನಾತ್ಮಕ ಜಗತ್ತಿಗೆ ನುಗ್ಗಿ ನೀರಾಗುವರು. ಇದೇ ಕಾರಣದಿಂದ ಲವ್ ಫೇಲ್ಯೂರ್ ಆತ್ಮಗಳ ಫೇವರೀಟಿದು. ನಡೆದ ಘಟನೆ, ಘಟಿಸಿದ ಕಾಮಕೇಳಿ ನೆನಪಿನಲ್ಲುಳಿಯದೆ ಮರುಗುಳಿತನ ತುಂಬುವ ಡ್ರಗ್ಗಿದು.
ಎಲ್ಲ ಡ್ರಗ್ಗುಗಳ ಕೊನೆಯ ಡೆಸ್ಟಿನೆಷನ್ನು ಮರೆಗುಳಿತನ, ಭಾವಾವೇಶ, ಹೆಚ್ಚಿದ ಕೊಳಕು ಕಾಮಸಕ್ತಿ ಮಾತ್ರ.

ಫೋಟೋ ಕೃಪೆ : DW
ಬಾಟಲು ಶರಾಯಿ ನಶೆಗಿಂತ ವಿಪರೀತ ನಶೆ ಬಯಸುವವರು,ಎಕ್ಕುಟ್ಟಿ ಹೋದ ಪ್ರೇಮಕ್ಕೊಂದು ವಿದಾಯ ಹೇಳಲು, ಮೈತುಂಬಿದ ಸುರಸುಂದರಿಯನ್ನ ತೆಕ್ಕೆಗೆಳೆದುಕೊಳ್ಳಲು, ಮಾಂಸದ ದಂಧೆಯ ವಾಸನೆ ಬೆನ್ನುಬಿದ್ದವರು, ಜಗತ್ತನ್ನೆ ಮೈ ಮರೆತು ಆನಂದಿಸುವ ಕೆಲ ಗಂಟೆಗಳ ರಿಲಾಕ್ಸ್ ಹುಡುಕುವವರು , ಕೋಟಿ ಹಣವಿದ್ದರೂ ಚಡಪಡಿಸುವ ಅಂತರ್ ಪಿಶಾಚಿಗಳ ಕೊನೆಯ ಆಯ್ಕೆಯೇ “ರೇವ್ ಪಾರ್ಟಿ”.
ರೇವ್ ಪಾರ್ಟಿಗಳ ಒಳಹೊಕ್ಕಲು ಕನಿಷ್ಟ ಫೀಜು “ಇಪ್ಪತ್ತು ಲಕ್ಷಕ್ಕಿಂತ ಹೆಚ್ಚಂತೆ. ಈ ಪಾರ್ಟಿ ಅರೇಂಜ್ ಮಾಡುವವರು ಮೊದಲು ಗಾಳ ಹಾಕುವುದೇ “ಹೈ ಪ್ರೋಫೈಲ್”ನ ಮನಮೋಹಕ ಮೈ ಮಾಟದ “ಟಾಪ್” ಹುಡುಗಿಯರಿಗೆ. ಅಂತಾ ಹುಡುಗಿಯರ “ಜಾತ್ರೆಯನ್ನ ಒಂದೆಡೆ ಸೇರಿಸಿ ಪಾರ್ಟಿ ಅರೆಂಜ್ ಮಾಡುತ್ತಾರೆ. ಒಮ್ಮೇ ಅಲ್ಲಿಗೆ ಎಂಟ್ರಿಯಾಗಿಬಿಟ್ಟರೆ ಸಾಕು, ಸಾಕುಸಾಕಾಗುವಷ್ಟು ಡ್ರಗ್ಗು, ಮೈಮರೆತ ಮೋಹಕ ಹುಡುಗಿಯರ ಸಾಂಗತ್ಯ, ಪಾರ್ಟಿಯ “ಖಾಯಂ ಸದಸ್ಯತ್ವ” ಸಿಗತ್ತಂತೆ.
ಮತ್ತೊಮ್ಮೇ ಪಾರ್ಟಿ ಮಾಡುವಾಗ “ಆಮಂತ್ರಣ” ನೀಡುತ್ತಾರೆ, ನೀವು ಹೊಗಲಾಗದಿದ್ದಲ್ಲಿ ಮನೆಗೆ ನೀವು ಬಯಸಿದ “ಡ್ರಗ್ಗು” ಸೇರಿಸುವರಂತೆ. ಒಂದು ರಾತ್ರಿಯ ಪಾರ್ಟಿಯಲ್ಲಿ ಆರೆಂಜರ್ಸ ಕೋಟಿ ಕೋಟಿ ಹಣ ಬಳಿದುಕೊಂಡುಬಿಡುವರು. ಇನ್ನೂ ಮಾಟದ ಯುವತಿಯರ ಅಕೌಂಟ್ಗೆ “ಒಂದಷ್ಟು ಕೋಟಿ” ಬಂದು ಬೀಳತ್ತಂತೆ. ಇದಕ್ಕೆ ನೋಡಿ ಕೆಲವು ಸಿನಿಮಾ ನಟಿಯರು, ಧೀಡಿರ್ ಶ್ರೀಮಂತರಾಗಿ, ಹೈಫೈ ಲೈಫ್ ನಡೆಸಿ “ಡ್ರಗ್ಗ್” ಖೆಡ್ಡಾಕ್ಕೆ ಬಿದ್ದು ನರಳಾಡುವುದು. ಇದಿಷ್ಟು ರೇವ್ ಪಾರ್ಟಿ ಕಥನ.
ಹ್ಞಾಂ..!!! ನೀವು ಕೇಳಬಹುದು “ಗಾಂಜಾ”?? ಅಂತ. ಗಾಂಜಾ ಭಾವೂನ್ಮಾದ ಪುಟಿದೆಳಿಸುವ ಡ್ರಗ್ಗು. ಈ ಮೇಲೆ ಬರೆದ ಅಷ್ಟು ಡ್ರಗ್ಗುಗಳು “ಟಾಪ್”. ಇವುಗಳನ್ನು ದಕ್ಕಿಸಿಕೊಳ್ಳಲಾಗದವರು ನೂರು- ಸಾವಿರ ರೂಪಾಯಿಯ “ಗಾಂಜಾ” ದಕ್ಕಿಸಿಕೊಂಡು. ಕೊನೆಗೆ ಪೋಲಿಸರಿಂದ ಇಕ್ಕಿಸಿಕೊಳ್ಳುವುದು.
ಕಾನೂನು, ಬಿಗಿ ರಕ್ಷಣೆಗಳಿದ್ದರೂ ಇವುಗಳ ಭದ್ರಮುಷ್ಟಿಯನ್ನು ದಾಟಿ “ಡ್ರಗ್ಗು” ಅದ್ಹೇಗೆ ನಮ್ಮ ನೆಲಕ್ಕೆ ಕಾಲಿಡುವುದೋ? ಇವುಗಳನ್ನು ಸಂಪೂರ್ಣ ಭೇದಿಸಿ ಅಪರಾಧಿಗಳನ್ನ ಜೈಲಿಗಟ್ಟಲಾಗದೆ ?
ಮಧ್ಯವರ್ತಿಗಳು ಮಾತ್ರ ಸಿಕ್ಕಿಬೀಳುವ ಆದರೆ ಮೂಲ ಕಾರಣ “ಕಾಣದ ಕೈಗಳ” ಹುಡುಕಾಟ ಮುಂದುವರಿಯುತ್ತದೆ.
“ಡಾರ್ಕ ವೆಬ್” ಮೂಲಕ ಮತ್ತು “ಬಿಟ್ ಕ್ವಾಯಿನ್”ಗಳಲ್ಲಿ ನಡೆಯುವ ವ್ಯವಹಾರವಿದು, ಅಂತ್ಯಹಾಡುವುದು ಸುಲಭವಲ್ಲವಂತೆ.
ಓದುತ್ತಾ ನಡೆದಂತೆ ಈ ಡ್ರಗ್ಗುಗಳು ಮತ್ತು “ರೇವ್ ಪಾರ್ಟಿ” ಕಥೆ ಎದೆಯಲ್ಲಿ ನಡುಕ ಹುಟ್ಟಿಸುವುದು ನಿಜ. ನಮ್ಮ ನೆಲಕ್ಕೆ ವಕ್ಕರಿಸಿ ಆವಾಗಾವಾಗ ಸುದ್ದಿಯಾಗುವ ಈ ಪಾರ್ಟಿ ಸಂಪೂರ್ಣ ನಿಷೇಧವಾಗದಿದ್ದರೆ ದುಡ್ಡುಳ್ಳ, ಅತೃಪ್ತ ಜನಗಳು ಊರು, ಕೇರಿ, ಪರಿಸರ ಕುಲಗೇಡಿಸಿ ಎಕ್ಕುಟಿಸುವರು.
“ಡ್ರಗ್ಗು”ಗಳ ಸೇವನೆಯು ಅಪಾಯಕಾರಿ ಮತ್ತು ಆತಂಕಕಾರಿಯಾಗಿದೆ. ಯುವ ಜನಾಂಗ “ಡ್ರಗ್ ಅಡಿಕ್ಷನ್” ಬಿದ್ಧರೆ ಮನೆ ಮುರಿಯುವುದರಲ್ಲಿ ನಿಸ್ಸಂದೇಹವಿಲ್ಲ. ದೈಹಿಕ, ಸಾಮಾಜಿಕ ಅಡ್ಡ ಪರಿಣಾಮಗಳು ಒಂದೇರಡಲ್ಲ. “ಅಡಿಕ್ಷನ್”. ಒಮ್ಮೇ ಸೇವಿಸಿದ ಡ್ರಗ್ಗನ್ನ ಮೈ ಮನಸು ಪದೇ ಪದೇ ಬಯಸುತ್ತೆ.
- ಮಾರಣಾಂತಿಕವಾಗಿ ಜಖಂಗೊಳ್ಳುವ ನರವ್ಯೂಹ.
- ಹಾಳಾಗುವ ವಿದ್ಯಾಭ್ಯಾಸ.
- ಮಾನಸಿಕ ಚಂಚಲತೆ, ಭ್ರಮೆ, ಕೊರಗುವಿಕೆ.
- ಮೆದುಳಿನಲ್ಲಿ ಏರುಪೇರಾಗುವ ಕೆಮಿಕಲ್ಸ್ ಸ್ರವಿಕೆ.
- ಹೆಚ್ಚುವ ಲೈಂಗಿಕ ಕಾಯಿಲೆಗಳು.
- ಚಟಕ್ಕೆ ಬಿದ್ದವರು ಹಣಕ್ಕಾಗಿ ಮಾಡುವ ಕಳ್ಳತನ, ಕೊಲೆ, ಸುಲಿಗೆ, ದರೋಡೆ
- ನಶೆಯಲ್ಲಾಗುವ ರಸ್ತೆ ಅಪಘಾತಗಳು.
- ನಶೆಯಲ್ಲಿ ಹೆಚ್ಚುವ ಮೂರ್ಛೆ ರೋಗ. ಶಾಶ್ವತ ಪ್ರಜ್ಞಾಹೀನ ಸ್ಥಿತಿ.
- ಕೊನಗೆ ಸಾವು
ಬರೆದರೆ ಪೇಜುಗಟ್ಟಲೆ ಬರೆಯಬೇಕಾದೀತು. ಅನಿಷ್ಠ ವಿದೇಶಿ ಪಾರ್ಟಿಗಳು, ಹಣದ ಅತೀ ಆಸೆ, ಡ್ರಗ್ಗುಗಳ ಅಪಾಯಕಾರಿ ಪರಿಣಾಮಗಳ ಬಗ್ಗೆ. ಇದೊಂದು ಅನಿಷ್ಟ ಪದ್ಧತಿಗೆ ಯಾರು ಬಲಿಯಾಗದಿದ್ದರೆ ಸಾಕು.
- ಡಾ.ಪ್ರಕಾಶ ಬಾರ್ಕಿ, ಕಾಗಿನೆಲೆ
