ರಾಕ್ ಗಾರ್ಡನ್
ಹೈವೇ-೪ ರ ಶಿಗ್ಗಾವಿ ಬಳಿ ಗೋಟಗೋಡಿ ಯಲ್ಲಿರುವ ಶಿಲ್ಪವನ.
ನಾನು ನೆದರ್‌ಲ್ಯಾಂಡಿನಲ್ಲಿ ರೊಟ್ಟರ್ ಡ್ಯಾಮ್ ಹತ್ತಿರವಿರುವ ಮದುರಾಡ್ಯಾಮ್ ನಲ್ಲಿರುವ ಪ್ರಪಂಚದ ಶ್ರೇಷ್ಠ ತಾಣಗಳ ಪ್ರತಿಕೃತಿಗಳನ್ನು ನೋಡಿ ಬಂದಿದ್ದೆ. ಅದು ಅದ್ಭುತವೆನಿಸಿತ್ತು. ಅಂಥದ್ದೇ ರೀತಿಯಲ್ಲಿ ಕನ್ನಡ ಕಲಾವಿದನೊಬ್ಬ ಕರ್ನಾಟಕ ಗ್ರಾಮ ಜೀವನದ ಪ್ರತಿಕೃತಿಗಳನ್ನು ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ. ಅವುಗಳನ್ನು ನೋಡುತ್ತಿದ್ದರೆ ನಾವು ಮರೆತುಹೋದ ನಮ್ಮ ಹಳ್ಳಿಯ ಜೀವನವನ್ನು ಮತ್ತೆ ಕಣ್ಣೆದುರು ನೋಡುತ್ತಿದ್ದೇವೆ ಅನಿಸುತ್ತದೆ. ಅಷ್ಟು ಜೀವಂತಿಕೆ ಪಡೆದಿರುವ ಈ ಕಲಾಕೃತಿಗಳು ನಮ್ಮನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಒಮ್ಮೆ ಇಲ್ಲಿ ಒಳಹೊಕ್ಕರೆ ಐವತ್ತನೇ ದಶಕದ ಹಳ್ಳಿಗಳನ್ನು ಸುತ್ತಿ ಬಂದ ಅನುಭವ ಆಗದೆ ಇರದು.
ಇದನ್ನು ನಿರ್ಮಿಸಿದ ಕಲಾವಿದ ಹಾವೇರಿ ಜಿಲ್ಲೆಯ ಶಿಗ್ಗಾವಿಯ ಶ್ರೀ ಸೊಲಬಕ್ಕನವರ ಟಿ.ಬಿ ಮತ್ತು ಅವರ ತಂಡದ ಶ್ರಮ ಸಾರ್ಥಕವಾಗಿದೆ. ಬೇಸಿಗೆಯ ಈ ರಜೆಯಲ್ಲಿ ಮಕ್ಕಳೊಂದಿಗೆ ಒಮ್ಮೆ ಇಲ್ಲಿಗೆ ಭೇಟಿ ಕೊಡಿ. ಮಕ್ಕಳು ಖುಶಿ ಪಡುವುದು ಪಕ್ಕಾ. ಮಕ್ಕಳಿಗಾಗಿ ಇಲ್ಲಿ ಕುದುರೆ ಸವಾರಿ. ಎತ್ತಿನ ಬಂಡಿ [ಚಕ್ಕಡಿ] ಸವಾರಿ. ಬೋಟಿಂಗ್ ಮೋಜು, ಕುಸ್ತಿ, ಇತ್ಯಾದಿಗಳಿವೆ. ಒಮ್ಮೆ ಮಕ್ಕಳ ಸಮೇತ ಇಲ್ಲಿಗೆ ಹೋಗಿ ಬನ್ನಿ.ನೆನಪು ಯಾವತ್ತೂ ಹಸಿರಾಗಿರುತ್ತದೆ.
#ಕನನಡಗರ