ನಂಬಿ ನಡೆದಾಗ ಬದುಕುಂಟು… ಪರಿಶ್ರಮ ಹೋರಾಟದಲ್ಲಿ ಗೆಲುವುಂಟು… ಅಂಟಿಕೊಂಡಷ್ಟು ಹೆಚ್ಚುವುದು ನಮ್ಮ ನಂಟು… ಕೂಡಿ ಕಳೆದಷ್ಟೂ ತುಂಬುವುದು ಗಂಟು…ಕವಿ ನಾಗರಾಜ ಜಿ.ಎನ್. ಬಾಡ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವಿತೆಗಳನ್ನು ಮುಂದೆ ಓದಿ…
ಈ ಮನಸ್ಸು ತುಂಬಾ ಚುರುಕು
ಹುಡುಕಿ ತೆಗೆಯುವುದು ಹುಳುಕು
ನಡೆಯದು ಇಲ್ಲಿ ನಿನ್ನ ತಳಕು ಬಳಕು
ಮಾಡದಿರು ನೀ ಯಾರಿಗೂ ಕೆಡುಕು
ಮಾಡಬೇಕು ಆದಷ್ಟು ಒಳಿತು
ದ್ವೇಷ ಅಸೂಯೆಯ ಮರೆತು
ಬೆರೆಯಬೇಕು ಎಲ್ಲರೊಡನೆ ಕಲೆತು
ನಲಿಯಬೇಕು ಒಂದಾಗಿ ಬೆರೆತು
ನಂಬಿ ನಡೆದಾಗ ಬದುಕುಂಟು
ಪರಿಶ್ರಮ ಹೋರಾಟದಲ್ಲಿ ಗೆಲುವುಂಟು
ಅಂಟಿಕೊಂಡಷ್ಟು ಹೆಚ್ಚುವುದು ನಮ್ಮ ನಂಟು
ಕೂಡಿ ಕಳೆದಷ್ಟೂ ತುಂಬುವುದು ಗಂಟು
ಬರುವುದಿಲ್ಲ ಇಲ್ಲಿ ಯಾರೂ ಕೊನೆತನಕ
ಒಬ್ಬರಿಗೊಬ್ಬರು ಚೆನ್ನಾಗಿರಬೇಕು ಇರುವತನಕ ಯಾರೂ ಹೊತ್ತುಯುವುದಿಲ್ಲ ಧನ ಕನಕ
ಮಾಡಿಕೊಳ್ಳಬಾರದು ಇಲ್ಲಿ ಜೀವನವ ನರಕ
ಹೂವಂತೆ ಮನವು ಅರಳಬೇಕು
ಎಲ್ಲರೊಡನೆ ನಗು ನಗುತ ಬೆರೆಯಬೇಕು
ಇರುವುದನ್ನು ಹಂಚಿ ನೆಮ್ಮದಿಯಲಿ ತಿನ್ನಬೇಕು ಖುಷಿ ಖುಷಿಯಲಿ ಬದುಕ ಮುನ್ನಡೆಸಬೇಕು
ಮನೆ ಮನದಿ ಮುಸುಕಿದ ಕತ್ತಲ ಕಳೆಯಬೇಕು
ಸಾಗುವ ದಾರಿಯಲ್ಲಿ ಬೆಳಕನ್ನು ಹಚ್ಚಿ ಬೆಳಗಬೇಕು
ಜೊತೆಗೆ ಬಂದವರ ಸಂತಸವ ಹೆಚ್ಚಿಸಬೇಕು ಒಳ್ಳೆಯತನವನ್ನು ಉಳಿಸಿ ಬೆಳೆಸಬೇಕು
- ನಾಗರಾಜ ಜಿ. ಎನ್. ಬಾಡ, ಕುಮಟಾ
