ಮೈಸೂರಿನಲ್ಲೊಂದು ಮರಳು ಶಿಲ್ಪಗಳ ಸೌಂದರ್ಯ

ದೇಶದಲ್ಲಿಯೇ ಪ್ರಥಮ ಮರಳು ಶಿಲ್ಪಗಳ ಸಂಗ್ರಹಾಲಯವು ಮೈಸೂರಿನಲ್ಲಿದೆ. ಈ ಮರಳು ಶಿಲ್ಪಗಳಿಗಾಗಿ 115 ಟ್ರಕ್ ಲೋಡ್ ನದಿಯ ಮರಳನ್ನು ಬಳಸಿದ್ದು ಈ ಕಲಾಕೃತಿಯ ಕುರಿತು ಲೇಖಕರಾದ ದೇವರಾಜ ಚಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬೇರೆ ಬೇರೆ ವಿಷಯದ ಕುರಿತು ಶಿಲ್ಪಗಳನ್ನು ರಚಿಸಿರುತ್ತಾರೆ. ಉದಾಹರಣೆಗೆ ಮೈಸೂರಿನ ಸಂಸ್ಕೃತಿ ಬಿಂಬಿಸುವ ಪೌರಾಣಿಕ ಕಥೆಗಳು ಇತ್ಯಾದಿ ರಚಿಸಿದ್ದಾರೆ.

2014 ರಲ್ಲಿ ಪ್ರಾರಂಭವಾಗಿದ್ದು, ಇದಕ್ಕೆ ಮರಳು, ನೀರು ಮತ್ತು ಅಂಟನ್ನು ಸ್ವಲ್ಪ ಪ್ರಮಾಣದಲ್ಲಿ ಉಪಯೋಗಿಸಿದ್ದಾರೆ. ಸುಮಾರು 13 ಸಾವಿರ ಸ್ಕ್ವೇರ್ ಫೀಟ್ ನಲ್ಲಿ ನಿರ್ಮಾಣ ಮಾಡಿರುದ್ದಾರೆ ಮತ್ತು  ನ್ಯಾಚುರಲ್ ಸೂರ್ಯನ ಗಾಳಿ , ಬೆಳಕು ಬರುವಂತೆ ರಚಿಸಿದ್ದಾರೆ. ಛಾವಣಿ ಲೈಟ್ ರೂಫಿಂಗ್ ಇದೆ.

ದೊಡ್ಡ ಗಾತ್ರದ ಶಿಲ್ಪ ಅಂದರೆ 12 ಅಡಿ ಎತ್ತರ, 100 ಅಡಿ ಉದ್ದ ಮತ್ತು 60 ಅಡಿ ಅಗಲವಿರುವ ವಿಗ್ರಹವನ್ನು ಐದು ತಿಂಗಳಲ್ಲಿ ನಿರ್ಮಿಸಿದ್ದಾರೆ. ಮೈಸೂರು ದಸರಾ, ಅಂಬಾರಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಮೆ ಮಹಾಭಾರತದ ಸನ್ನಿವೇಶಗಳಲ್ಲಿ ಕೃಷ್ಣಾರ್ಜುನರು ಉಪಯೋಗಿಸಿದ ರಥದ ಮಾದರಿ, ದುಷ್ಟರನ್ನು ಸಂಹಾರ ಮಾಡಿರುವ ಚಾಮುಂಡೇಶ್ವರಿಯ ಪ್ರತಿಬಿಂಬ. ನೈಸರ್ಗಿಕವಾಗಿ ಶನಿ ವಿಗ್ರಹ ಇತ್ಯಾದಿ ನಿರ್ಮಿಸಿದ್ದಾರೆ.

ರಥದಲ್ಲಿನ ಚಕ್ರಗಳ, ಕುದುರೆಗಳು ಚೆನ್ನಾಗಿ ಮೂಡಿ ಬಂದಿದೆ. ನಗುತ್ತಿರುವ ಬುದ್ಧ ನೋಡಬಹುದು. ಅರ್ಜುನನು ಕೌರವರನ್ನು ಸಂಹಾರ ಮಾಡಲು ಹೊರಟಾಗ ಕುದುರೆಗಳು ಅಣಿ ಯಾಗಿರುವ ರೀತಿ, ಶ್ರೀ ಕೃಷ್ಣ ರಥ ನಡೆಸುವ ಸೂತ್ರಧಾರಿಯಂತೆ ಕಾಣಿಸುವ ರೀತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ಈ ಸಂಗ್ರಹಾಲಯವನ್ನು ಸ್ಥಾಪಿಸಿರುವ ಕಲಾವಿದೆ ಗೌರಿ ಎಂ ಎನ್. ಇವರು ಮೈಸೂರಿನವರು. ಇವರೊಬ್ಬ ಖ್ಯಾತ ಕಲಾವಿದೆ. ಭಾರತದಲ್ಲಿ ಮರಳಿನ ಶಿಲ್ಪ ಕಲೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಈ ಕಲಾವಿದೆ ಹೊಂದಿದ್ದಾರೆ.  ಕರ್ನಾಟಕ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಸ್ನಾತಕೋತ್ತರವನ್ನು ಪಡೆದಿದ್ದಾರೆ. 150 ಕ್ಕೂ ಹೆಚ್ಚು ಮರಳು ಶಿಲ್ಪಗಳನ್ನು ಬಿಡಿಸಿದ್ದಾರೆ.

ಮೈಸೂರಿನ ಮರಳು ಶಿಲ್ಪ ಸಂಗ್ರಹಾಲಯ ಭೇಟಿ ಸಮಯ:

ಬೆಳಿಗ್ಗೆ 8:30 ರಿಂದ ಸಾಯಂಕಾಲ 6:30 ವರೆಗೆ.
ಪ್ರವೇಶ ದರ : ದೊಡ್ಡವರಿಗೆ 40 ರೂ ,
ಮಕ್ಕಳಿಗೆ 20 ರೂ.

ಲೋಹ ಮತ್ತು ಶಿಲೆ ಗಟ್ಟಿಯಾಗಿರುವುದಿಂದ ಶಿಲ್ಪಗಳನ್ನು ಬೇಕಾದ ರೀತಿಯಲ್ಲಿ ತಿದ್ದಬಹುದು. ಜೆಡಿ ಮಣ್ಣು ಅಂಟಿನ ಸ್ವಭಾವ ಹೊಂದಿರುವುದರಿಂದ ಒಂದು ಆಕಾರಕ್ಕೆ ತಂದು ಒಣಗಿಸಿ ಬಣ್ಣ ಹಚ್ಚಬಹುದು. ಆದರೆ ಮರಳು ಜಾರುವುದರಿಂದ ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಈ ನಿಟ್ಟಿನಲ್ಲಿ, ಕಲಾವಿದೆಯನ್ನು ಮೆಚ್ಚಲೇಬೇಕು.ಮೈಸೂರಿಗೆ ಶ್ರೀಯುತ ಮೋದಿ ಅವರು ಬಂದಾಗ ಅವರ ಮರಳು ಶಿಲ್ಪವನ್ನು ರಚಿಸಿ ಸಹಬಾಸ್ ಗಿರಿ ಪಡೆದುಕೊಂಡಿದ್ದಾರೆ.

ಸುತ್ತೂರಿನ ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಮರಳಿನಿಂದ ಮಾಡಿದ ಪರಮೇಶ್ವರ, ಲಿಂಗ ಹಾಗೂ ಹಾವಿನ ಕೃತಿಗಳನ್ನು ರಚಿಸಿದ್ರಂತೆ . ಮಡಿಕೇರಿಯ ದಸರಾದಲ್ಲಿ ಕಲಾ ಕೃತಿ ನಿರ್ಮಿಸಿ ಗೌರವ ಪಡೆದಿದ್ದಾರೆ. A tribute to sri ಅಬ್ದುಲ್ ಕಲಾಂ ಶಿಲ್ಪ ಮೆಚ್ಚುಗೆಗೆ ಪಾತ್ರವಾಗಿತ್ತಂತೆ. ಒಮ್ಮೆ ಭೇಟಿಕೊಟ್ಟು ಮರಳು ಶಿಲ್ಪಗಳನ್ನು ಕಣ್ಣು ತುಂಬಿ ಕೊಳ್ಳಬಹುದು.


  • ದೇವರಾಜ ಚಾರ್ – ಮೈಸೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading