ಮೇಣದಂತೆ ತಾನುರಿದು ಬಡವರ ಪಾಲಿಗೆ ಹಣತೆಯಾದೆ…ಧರ್ಮಕ್ಕೆ ದೀಪವಾದೆ…ಕಾವಿಗೆ ಅದರ್ಶವಾದೆ…ಯುವ ಕವಿಯತ್ರಿ ಗೀತಾoಜಲಿ ಎನ್ ಎಂ ಅವರು ಸಿದ್ದಗಂಗಾ ಶ್ರೀಗಳ ಕುರಿತು ಬರೆದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕಾಯಕವೇ ಕೈಲಾಸವೆಂದೆ
ವಿದ್ಯೆಯೇ ಮಂತ್ರವೆಂದೆ
ಅನ್ನವೇ ದೇವರೆಂದೆ
ದೇವರ ಸ್ವರೂಪವೇ ನೀನಾದೇ..!!
ಬಡವರಿಗೆ ಹೆಗಲಾದೆ
ಕತ್ತಲಿಗೆ ಬೆಳಕಾದೆ
ಅಂಧರಿಗೆ ಕಣ್ಣಾದೆ
ಅರಿವಿಗೆ ಗುರುವಾದೆ ..!!
ವಿದ್ಯೆಗೆ ವಿನಯವಾದೆ
ಅಜ್ಞಾನಕ್ಕೆ ಸುಜ್ಞಾನವಾದೆ
ತ್ಯಾಗದ ಪ್ರತೀಕವಾದೆ
ಸತ್ಯಕ್ಕೆ ನಿಷ್ಠನಾದೆ ..!!
ಧರ್ಮಕ್ಕೆ ದೀಪವಾದೆ
ದೇಶಕ್ಕೆ ಹೆಮ್ಮೆಯಾದೆ
ಕಾವಿಗೆ ಅದರ್ಶವಾದೆ
ಸಮಾಜಕ್ಕೇ ಮಾದರಿಯಾದೆ ..!!
ಕಪಟವಿಲ್ಲ ಮೋಸವಿಲ್ಲ
ಸ್ವಾರ್ಥವಿಲ್ಲ ವಂಚನೆ ಇಲ್ಲ
ನಾನು ನನ್ನಿಂದ ಎನ್ನಲಿಲ್ಲ ||
ಇಷ್ಟಾದರೂ ಪ್ರಚಾರ ಬಯಸದೇ
ಮೇಣದಂತೆ ತಾನುರಿದೆ
ಬಡವರ ಪಾಲಿಗೆ ಹಣತೆಯಾದೆ…
ಹುಟ್ಟು ಸಾರ್ಥಕ ಪಡಿಸಿಕೊಂಡು
ನಡೆದಾಡುವ ದೇವರಾದೆ
ಜಗತ್ತಿಗೇ ಮಾದರಿಯಾದೆ.!!
- ಗೀತಾoಜಲಿ ಎನ್ ಎಂ
